ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ

By Staff
|
Google Oneindia Kannada News

Do not forget to wish on Ugadi
ಪ್ರಿಯ ಸಂಪಾದಕರೆ,

ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two thousand nine ಎಂದು ಬರಲಾರದ ಭಾಷೆಯಲ್ಲಿ ಉಚ್ಚರಿಸುವುದು ಸರಿಯೇ?

ಒಬ್ಬರನ್ನೊಬ್ಬರು ತಬ್ಬಾಡುವುದು ಅಪ್ಪಾಡುವುದು ಎಷ್ಟರ ಮಟ್ಟಿಗೆ ಸರಿ! ಹೌದು ನಾವು ಕೂಡ ಪಾಶ್ಚಾತ್ಯರ ಸಂಸ್ಕೃತಿಗೆ ಮಾರುಹೋಗಿದ್ದೇವೆ. ಒಳ್ಳೆಯದನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವುದನ್ನು ಯಾರು ಬೇಡವೆನ್ನುವುದಿಲ್ಲ. ಆದರೆ, ಅದರ ಸೋಗಿನಲ್ಲಿ ನಮ್ಮತನವನ್ನು ಗಾಳಿಗೆ ತೂರುವುದು ಯಾವ ನ್ಯಾಯ?

On this issue through i'll request you to make a stanza to create the awareness of our new year will start on the day of ಯುಗಾದಿ.

By that atleast we can just wake for saving our own wonderfull culture! so that let's see how many people will accept the new year on YUGAADI.

Hope you will do the needful.

ಸಮಸ್ತ ದಟ್ಸ್ ಕನ್ನಡ ಓದುಗರಿಗೆ ಸಿಬ್ಬಂದಿವರ್ಗದವರಿಗೆ ಈ ಮೂಲಕ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!

ಇಂತಿ.
ನಿಮ್ಮ ಪ್ರಿಯ ಓದುಗ.
ರಮೇಶ್, ಊರು?

(ಹೊಸ ವರ್ಷಕ್ಕೆ ಶುಭಾಶಯ ಹೇಳುವುದು ತಪ್ಪಲ್ಲ. ಆದರೆ, ಅದನ್ನು ಅತಿರೇಕದಿಂದ, ಪಾಶ್ಚಾತ್ಯ ಸಂಸ್ಕೃತಿ ಅನುಸರಿಸುವ ಮುಖಾಂತರ ಆಚರಿಸುವುದು ಖಂಡಿತ ತಪ್ಪು. ಇದು ಅನೇಕ ಅನಾಹುತಗಳಿಗೆ ಕಾರಣವಾಗುತ್ತಿವೆ. ಹೊಸವರ್ಷಾಚರಣೆಯ ದಿನ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ರಾತ್ರಿ ಹೆಂಗಳೆಯರಿಗೆ ಪೊಲೀಸರು ಅನುಮತಿ ನಿರಾಕರಿದ್ದು, ಯುವಕರು ದಿಕ್ಕು ತಪ್ಪುತ್ತಿರುವುದಕ್ಕೆ ಜ್ವಲಂತ ಉದಾಹರಣೆ. ಪಾಶ್ಚಾತ್ಯ ಸಂಸ್ಕೃತಿಯ Free Hug ಎಂಬ ಆಚರಣೆ ಇತ್ತೀಚೆಗೆ ಬೆಂಗಳೂರಿಗೂ ವಕ್ಕರಿಸಿತು. ಇದೇ ಬೆಂಗಳೂರಿನ ಇದೇ ಎಂಜಿ ರಸ್ತೆಯಲ್ಲಿ ಯುವಕ ಯುವತಿಯರು Free Hug ಆಚರಿಸಿಕೊಂಡರು. ಇವರು, ನಮ್ಮ ಹಿಂದೂ ಸಂಸ್ಕೃತಿಯ ದ್ಯೋತಕವಾಗಿರುವ ಯುಗಾದಿಯಂದೂ ಇದೇ ರೀತಿ ಜನರಿಗೆ ಅಭಿನಂದಿಸುತ್ತಾರಾ? ಇನ್ನೇನು ಕೆಲವೇ ದಿನಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಬರುತ್ತಿದೆ. ನಂತರ ಶಿವರಾತ್ರಿ, ಹೋಳಿ, ಯುಗಾದಿ... ಹಬ್ಬಗಳ ಸಾಲೋಸಾಲು. ನೀವೂ ನಿಮ್ಮ ಪ್ರೀತಿಪಾತ್ರರನ್ನು, ಸ್ನೇಹಿತರನ್ನು ಅಭಿನಂದಿಸಲು ಸಜ್ಜಾಗಿ. - ಸಂಪಾದಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X