ಕರವೇ ಅಕ್ಷೋಹಿಣಿ ಸೈನ್ಯ ನಿಶ್ಯಬ್ದ

ಮಹಾರಾಷ್ಟದಲ್ಲಿ ಹೊಸಹೊಸ ರೂಪ ಪಡೆದುಕೊಳ್ಳುತ್ತಿರುವ ಸ್ಥಳೀಯರ ಚಳವಳಿ ಸುದ್ದಿಗಳನ್ನು ಓದುತ್ತಿರುವಾಗ ಕರವೇ ನೆನಪಾಯಿತು. ಪ್ರತಿದಿವಸ ರಾಜ್ಯದ ಯಾವುದಾದರೂ ಒಂದು ಜಿಲ್ಲೆಯಲ್ಲಿ ನಮ್ಮ ವೇದಿಕೆಯ ಕಾರ್ಯಕರ್ತರು ಏನಾದರೂ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. ಕನ್ನಡಕ್ಕೆ ಅನ್ಯಾಯ ಆಗುತ್ತಿದೆ ಎಂಬ ಸುಳಿವು ಸಿಕ್ಕರೆ ಸಾಕು ಅಲ್ಲಿಗೆ ಧಾವಿಸಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿದ್ದರು. ನಾನು ಗಮನಿಸಿದ ಹಾಗೆ ಲೈವ್ ಬ್ಯಾಂಡ್ ವಿರುದ್ಧ ವೇದಿಕೆಯ ಕಾರ್ಯಕರ್ತರು ಈಚೆಗೆ ನಡೆಸಿದ ಒಂದು ಹೋರಾಟ ಹೊರತುಪಡಿಸಿದರೆ ವೇದಿಕೆ ಕಳೆದ ಮೂರು ತಿಂಗಳ ಸಮಯದಲ್ಲಿ ಅಷ್ಟೇನೂ ಚಲನಶೀಲವಾಗಿಲ್ಲ ಎನಿಸುತ್ತದೆ.
ಕನ್ನಡದ ಸಮಸ್ಯೆಗಳೆಲ್ಲ ಬಗೆಹರೆದವಾ, ಅಥವಾ ಟಿ.ಎ. ನಾರಾಯಣಗೌಡರಿಗೆ ಬಿಡುವಿಲ್ಲವಾ ಅಥವಾ ಭಾಜಪ ಸರಕಾರ ಆಡಳಿತಕ್ಕೆ ಬಂದನಂತರದ ದಿನಗಳಲ್ಲಿ ವೇದಿಕೆಯ ಕಾರ್ಯಪಡೆಗೆ ಹಿನ್ನಡೆ ಏನಾದರೂ ಉಂಟಾಯಿತಾ? ವೇದಿಕೆ ಅಧ್ಯಕ್ಷರಾಗಲೀ ಅಥವಾ ಯಾರಾದರೂ ಕಾರ್ಯಕರ್ತರಾಗಲೀ ಸ್ಪಷ್ಟಪಡಿಸಬೇಕೆಂದು ಕಳಕಳಿಯಿಂದ ಕೋರುತ್ತೇನೆ.
ದಿನೇಶ್ ಕುಮಾರ್, ನೀಲಸಂದ್ರ
ಪೂರಕ ಓದಿಗೆ:












Click it and Unblock the Notifications