ಸುನೀಲ್ ಕುಮಾರ್ ದೇಸಾಯಿಗೆ ನೊಂದವನ ಪತ್ರ!


Kshana Kshana Desaiಸುನೀಲ್‌ಕುಮಾರ್ ದೇಸಾಯಿಯವರೇ,

ನಿಷ್ಕರ್ಷ, ಸ್ಪರ್ಶದಂತಹ ಸದಬಿರುಚಿಯ, ಒಳ್ಳೆಯ ಸಾಹಿತ್ಯ ಸಂಗೀತ ನೃತ್ಯ ಇರುವ ಕನ್ನಡ ಚಿತ್ರಗಳನ್ನು ನೀಡಿದ ನೀವು, ನಿಮ್ಮ ಇತ್ತೀಚಿನ ಚಿತ್ರವಾದ "ಕ್ಷಣ ಕ್ಷಣ" ಚಿತ್ರದಲ್ಲಿ "ಮದಿರ ಮಧುರ..." ಅನ್ನೊ ಹಾಡನ್ನು ತುಂಬಾ ಅಸಭ್ಯವಾಗಿ ಚಿತ್ರಿಕರಿಸಿರುವಿರಿ. ನಿಮ್ಮಂಥವರು ಹೀಗೆ ಮಾಡಿದ್ದು ಕಂಡು, ಬಹಳ ದುಃಖವಾಗುತ್ತೆ.

ಪ್ರೇಕ್ಷಕರ ಮೇಲೆ ಕೆಟ್ಟ ಪರಿಣಾಮ ಬೀರಬಹುದೇನೊ ಅನ್ನೊ ಭಯದಿಂದ ಸಿನಿಮಾಗಳಲ್ಲಿ ಮದ್ಯಪಾನ, ಧೂಮಪಾನ ತೋರಿಸುವುದು ತಪ್ಪು ಎಂದು ಹಲವು ದೇಶಗಳು ಪ್ರತಿಪಾದಿಸಿದರೆ, ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಗಂಡುಗಳು ಇಷ್ಟೊಂದು ಸ್ವೇಚ್ಛೆಯಾಗಿ, ಮಧುಪಾನ ಮಾಡುತ್ತಾ ಅಸಭ್ಯ ಸಾಹಿತ್ಯಕ್ಕೆ ನೃತ್ಯ ಮಾಡುವುದನ್ನು ತೋರಿಸಿರುವುದನ್ನು ನಾನು ಖಂಡಿಸುತ್ತೇನೆ.

ನೀವೆಲ್ಲ ಜವಾಬ್ದಾರಿಯಿರುವ ಪ್ರಜೆಗಳಾದ್ದರಿಂದ ಈ ರೀತಿಯ ಅಸಭ್ಯವಾದ ಸಾಹಿತ್ಯ, ಸಂಗೀತ, ದೃಶ್ಯಗಳು, ಅದರಲ್ಲೂ ಸಿನಿಮಾ ಮಾಧ್ಯಮದ ಮೂಲಕ ತೋರಿಸಿದರೆ, ಅದು ಜನಗಳ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನುಂಟು ಮಾಡುತ್ತೆ.

ಸಿನಿಮಾ ಯಶಸ್ವಿಯಾಗಲು ಈ ರೀತಿಯ ಅಸಭ್ಯ ಸಾಹಿತ್ಯದ ಹಾಡುಗಳಿಗೆ ಅಸಭ್ಯವಾದ ಕುಣಿತಗಳ ಅಗತ್ಯವಿಲ್ಲ ಅನ್ನುವುದಕ್ಕೆ "ಮುಂಗಾರು ಮಳೆ" ಯಂತಹ ಸೊಗಸಾದ ಸಾಹಿತ್ಯ, ಮನಸೆಳೆಯುವ ನೃತ್ಯ ಇರುವ ಚಿತ್ರಗಳೇ ಸಾಕ್ಷಿ.

ಉತ್ತಮ ಚಿತ್ರಗಳನ್ನು ನೀಡಿರುವ, ನೀಡಬಲ್ಲ ನೀವು, ದಯವಿಟ್ಟು ಇನ್ನು ಮುಂದೆ ನಿಮ್ಮ ಚಿತ್ರಗಳಲ್ಲಿ ಈ ರೀತಿಯ ಅಸಭ್ಯವಾದ ಸಾಹಿತ್ಯ, ನೃತ್ಯಗಳನ್ನು ಸೇರಿಸಬೇಡಿ ಎಂದು ನಿಮ್ಮನ್ನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ತಮ್ಮ ಹಳೆಯ ಚಿತ್ರಗಳನ್ನು ಸದಾ ಪ್ರಶಂಸಿಸುವ ಪ್ರೇಕ್ಷಕ
-ವಿ.ಪ್ರಸನ್ನ ಕುಮಾರ್,ನ್ಯೂಜೆರ್ಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+