ನಾರಾಯಣಮೂರ್ತಿಯಂಥ ಕನ್ನಡಿಗರು ಜಾಸ್ತಿ!


Narayana Murthyಭೀಮಸೇನರಿಗೆ ನಮಸ್ಕಾರ.

ಕನ್ನಡದವರನ್ನು ಕುಂಭಕರ್ಣರೆನ್ನೋಣವೇ? ಸದಾ ಭಾಷಾಭಿಮಾನವನ್ನು ಗಾಳಿಗೆ ತೂರಿ, ಬೇರೆಯವರ ಕಡೆ ಕೈಮಾಡಿ ಅನ್ಯ ಭಾಷೆಯವರಿಂದ ನಮ್ಮ ಭಾಷೆ ಕೆಡುತ್ತಿದೆ ಅನ್ನುವುದು ಸುಲಭ.

ಇನ್ಫೊಸಿಸ್‌ ನಾರಾಯಣ ಮೂರ್ತಿಗೆ ಕನ್ನಡನಾಡಿನಲ್ಲಿ ತಲೆ ಎತ್ತಿ ನಿಲ್ಲಲು ಜಾಗಬೇಕು. ಅಲ್ಲಿನ ಹಬ್ಬಗಳಿಗೆ ರಜೆ ಕೊಡುವುದು ಬೇಡ. ಊಟದ ಮನೆಯಲ್ಲಿ ಬೆಂಗಳೂರಿನ ಖಾದ್ಯಗಳು ಬೇಡ. ಇಂತಹವರನ್ನು ಕನ್ನಡದ ಮಿತ್ರರೆನ್ನುವುದು ಹೇಗೆ? ಅಲ್ಲದೇ, ಒಂದು ದಿನ ಕೂಡ ಕರ್ನಾಟಕದ ಬಗ್ಗೆ ಮಾತನಾಡದ ಮಾಜಿ ವಿಶ್ವಸುಂದರಿ ಐಶ್ವರ್ಯ ರೈರನ್ನು, ಕನ್ನಡತಿ ಅನ್ನುವುದರಲ್ಲೂ ಸಹಾ ಅರ್ಥವಿಲ್ಲ.

ಕನ್ನಡಿಗರಿಗೆ ಇರುವ ಕೆಲಸದ ಮೀಸಲಾತಿಗಳಾದರೂ ಎಷ್ಟು ಮಹಾ? ನಮ್ಮ ರಾಜ್ಯದ ಜನರೇ ನಮ್ಮ ಜನರನ್ನು ಶೋಷಣೆಗೀಡು ಮಾಡುತ್ತಿರುವುದನ್ನು ನಮ್ಮ ಸರ್ಕಾರವೇ ಕಣ್ಣು ಮುಚ್ಚಿ ತಮಾಷೆ ನೋಡುತ್ತಿದೆ. ಕುಣಿಯಲಾರದ ಸೂಳೆ ನೆಲ ಡೊಂಕು ಅಂದಹಾಗೆ.

ನಮ್ಮ ಜನಕ್ಕೆ ಕೆಲಸಗಳಿಲ್ಲ. ಕನ್ನಡ ಮಾತನಾಡುವುದು ಬೇಡ. ಸುಮ್ಮನಿರಲಾರದೆ ಮೈ ಮೇಲೆ ಇರುವೆ ಬಿಟ್ಟುಕೊಂಡರೆ ಅದು ಕಚ್ಚುವುದಲ್ಲದೆ ಮುತ್ತು ಕೊಡುವುದೆ? ಕನ್ನಡನಾಡಿನಲ್ಲಿ ಕನ್ನಡ ಉಳಿಸಲಾರದವರು ನಾವು ಹೇಡಿಗಳೇ ಸರಿ. ಮಾತೆತ್ತಿದರೆ ಧರಣಿ ಕೂಡುವುದು, ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚುವುದು, ಜನಸಾಮಾನ್ಯರಿಗೆ ಬಂದ್‌ ಅಂತಾ ಸಾರ್ವಜನಿಕ ಸೌಲಭ್ಯಗಳನ್ನು ಸಿಗದಹಾಗೆ ಮಾಡುವುದು.

ಇದೆಲ್ಲಿಯ ರಾಜಕಾರಣ? ಒಬ್ಬರನ್ನೊಬ್ಬರು ವೈಯಕ್ತಿಕ ಟೀಕೆಟಿಪ್ಪಣಿಗಳಿಗೆ ಗುರಿಮಾಡಿಕೊಂಡು ದೇಶವನ್ನು ಹಾಳುಮಾಡುವ, ನೀಚ ಕಾರ್ಯಗಳಿಗೆ ತಡೆಯೊಡ್ಡದೆ ಈಗ ಕೆಟ್ಟಮೇಲೆ ಬುದ್ಧಿ ಬಂತೆಂದು ಎಲ್ಲದರಲ್ಲು ತಪ್ಪು ಹುಡುಕಿಕೊಂಡು ಹೊರಟಿದ್ದೀವಲ್ಲ!! ಕನ್ನಡ ಭಾಷೆಗೆ ಅವಮಾನ ಮಾಡಿದರೆ ತಕ್ಷಣ ಕ್ರಮ ತೆಗೆದುಕೊಂಡು ಮತ್ತೊಮ್ಮೆ ನಡೆಯದ ಹಾಗೆ ನೋಡಿಕೊಳ್ಳುವುದು ಕ್ಷೇಮ.

ಮೊದಲು ನಮ್ಮಲ್ಲಿ ಮಾತೃ ಭಾಷೆಯ ಜಾಗೃತಿ ಅಗತ್ಯ. ಕನ್ನಡ ಬೇಡದಿದ್ದರೆ ನಮ್ಮ ರಾಜ್ಯಬಿಟ್ಟು ತೊಲಗಿ ಚಳವಳಿ ನಡೆಸಬೇಕು. ಅನ್ಯ ಭಾಷಾ ಜನರು ನಮ್ಮನ್ನು ದಬ್ಬಾಳಿಕೆಗೆ ಒಳಪಡಿಸಿದರೆ ಕೈ ಕಟ್ಟಿ ಕುಳಿತುಕೊಂಡರೆ ಗಂಡಸರು ಕೈ ಬಳೆ ತೊಟ್ಟು, ಸೀರೆ ಉಡುವ ಸಮಯ ಬಂದಾತು.

-ಆನುರಾಧ ಅರುಣ್‌, ಬೋಲಿಂಗ್ಬ್ರೂಕ್‌, ಇಲಿನಾಯ್‌ು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+