ಲಾಲ್‌ಬಾಗ್‌ನ ಡೇರೆ ಹೂವು ಮತ್ತು ಸವಿಸವಿ ನೆನಪುಗಳು!


ಅ ಕೆಂಪು ಡೇರೆ ಹೂವು (dahlias) ನನ್ನನ್ನು 30 ವರ್ಷದ ಹಿಂದಿನ ನೆನಪಿನ ಲೋಕಕ್ಕೆ ಕರೆದೊಯ್ಯಿತು ಎಂದರೆ ನಿಮಗೆ ಅಚ್ಚರಿಯೆನಿಸಬಹುದು. ಆದರದು ನಿಜ!

ಮಾನ್ಯ ಸಂಪಾದಕರೇ,

ಲಾಲ್‌ಬಾಗ್‌(ಕೆಂಪು ತೋಟ)ನ ಪುಷ್ಪ ಪ್ರದರ್ಶನದ ಚಿತ್ರ-ಮಕರಂದವನ್ನು ನೀಡಿದ್ದಕ್ಕೆ ಅನಂತ ವಂದನೆಗಳು. ಗ್ಯಾಲರಿಯಲ್ಲಿ ಕಂಡ ಹೂವಿನ ಚಿತ್ರಗಳು ಕಣ್ಮನ ಸೆಳೆದವು. ಅದರಲ್ಲೂ ಆ ಕೆಂಪು ಡೇರೆ ಹೂವು (dahlias) ನನ್ನನ್ನು 30 ವರ್ಷದ ಹಿಂದಿನ ನೆನಪಿನ ಲೋಕಕ್ಕೆ ಕರೆದೊಯ್ಯಿತು.

ಮೂವತ್ತು ವರ್ಷವಾದರೂ ಮರೆಯದೇ ಉಳಿಸಿಕೊಂಡಿರುವ ಆ ಹೂವಿನ ಹಿಂದಿನ ಕಥೆ ಏನು ಅಂತಾ ನಿಮಗೆ ಕುತೂಹಲ ಮೂಡಿರಬಹುದು. ಹೇಳುತ್ತೇನೆ ...

ನಾನು ಬೆಂಗಳೂರಿನ ಸ್ಟೆಲ್ಲಾ ಮೇರಿ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯ ಹೆಸರು ಇಂಗ್ಲಿಷ್‌ನಲ್ಲಿ ಇದೋಯಾದರೂ ನಾನು ಓದುತ್ತಿದ್ದದ್ದು ಕನ್ನಡ ಮಾಧ್ಯಮದಲ್ಲಿ. ನಮ್ಮ ಶಾಲೆಯಲ್ಲಿ ಹೂವುಗಳ ಪುಟ್ಟ ಕೈತೋಟ ಇತ್ತು. ನಮ್ಮ ಹಿರಿಯ ಸಹಪಾಠಿ ಆ ಹೂವಿನ ತೋಟವನ್ನು ನೋಡಿಕೊಂಡ ರೀತಿ, ತಾಯಿ ತನ್ನ ಮಗುವನ್ನು ಅಕ್ಕರೆಯಿಂದ ಪಾಲಿಸಿದಂತಿತ್ತು. ನಮ್ಮಲ್ಲಿ ಪರಿಸರ ಪ್ರಜ್ಞೆ ಅಂತಾ ಏನಾದ್ರೂ ಬೆಳೆದಿದ್ದೂ ಅಂದರೆ ಅದೂ ಈ ಕಾಲದಲ್ಲೇ. ಹೂವಿನ ತೋಟವನ್ನು ಬೆಳೆಸುವುದನ್ನು ಹೇಳಿಕೊಡುವುದರ ಜತೆಗೆ ನಮ್ಮ ನಮ್ಮಲ್ಲಿ ಪ್ರೀತಿಯ ಬೆಸುಗೆಯನ್ನು ಅಕೆ ಬೆಸೆದಿದ್ದಳು.

ವಾರಕ್ಕೆ ಒಮ್ಮೆ ಅಥವಾ ಎರಡು ಸಾರಿ ತೋಟಗಾರಿಕೆ ಪಿರಿಯಡ್‌ ಇರುತ್ತಿತ್ತು. ಮೊದಲೆಲ್ಲಾ ತೋಟಗಾರಿಕೆ ಪಿರಿಯಡ್‌ ಅಂದರೆ, ಬರೀ ಕಳೆ ಕೀಳುವ ಬೋರು ಕೆಲಸವೆಂದೇ ತಿಳಿದಿದ್ದೆವು. ಕಳೆ ಕಿತ್ತರೆ ತಾನೇ ಉತ್ತಮ ಬೆಳೆ ಬೆಳೆಯಲು ಸಾಧ್ಯ ಎಂದು ನಂತರ ತಿಳಿಯಿತು.

ಆ ಹೂದೋಟದಲ್ಲಿ ಏನಿರಲಿಲ್ಲ ಕೇಳಿ? ಮಲ್ಲಿಗೆ, ವಿವಿಧ ಬಗೆಯ ರೋಸ್‌ ಗಿಡಗಳು, ಆ್ಯಸ್ಟರ್‌ ಹೂ ಹಾಗೂ ನನ್ನ ಮೆಚ್ಚಿನ ಡೇರೆ ಹೂ ಹೀಗೆ ಎಲ್ಲಾ ಬಗೆಯ ಹೂಗಳಿಂದ ಕಂಗೊಳಿಸುತ್ತಿತ್ತು. ಅರಳಿದ ಡೇರೆ ಹೂ ನೋಡಲಂತೂ ಅದ್ಭುತವಾಗಿರುತ್ತೆ. ನಾನು ಅಗ ಚಿಕ್ಕವಳಾಗಿದ್ದರಿಂದಲೋ ಏನೋ ನನಗೆ ಹೂದೋಟದ ಕೆಲಸ ಅಗ ಬರೀ ಖುಷಿ ಕೊಡುತ್ತಿತ್ತು. ಅದರೆ ಈಗ ನನ್ನ ನೆನಪಿನಾಳದಲ್ಲಿ ಶಾಶ್ವತವಾಗಿ ಉಳಿದು ಆಗಾಗ ಕಾಡುತ್ತಿರುತ್ತದೆ. ನನ್ನ ಕಾಡುವಿಕೆಯನ್ನು ನಿಮ್ಮ ಚಿತ್ರ ಗ್ಯಾಲರಿ ನಿಜಕ್ಕೂ ತಣಿಸಿತು. ಆಗಿನ ಹುಡುಗಾಟ, ಗಿಡಗಳಿಗೆ ನೀರುಣಿಸಲು ಬಳಸುತ್ತಿದ್ದ ಅಲ್ಯುಮಿನಿಯಂ ಕ್ಯಾನ್‌ಗಳು, ಇತರ ಗೆಳತಿಯರು ಕೆಲಸ ಮಾಡಿದರೊ ಇಲ್ಲವೋ ಎಂದೋ ಗುಪ್ತವಾಗಿ ನಡೆಸಿದ್ದ ಹುಡುಕಾಟ, ಹೂದೋಟದ ನಡುವೆ ಮೆಚ್ಚಿನ ಗೀತೆಯನ್ನು ಹಾಡುತ್ತ ಸಂಚರಿಸುವಾಗ ಕಾಣ ಸಿಕ್ಕ ನಲಿವಿನ ನೋಟ ಎಲ್ಲವನ್ನೂ ನೆನೆದಾಗ ನಗೆ ಉಕ್ಕದೇ ಬಿಡದು. ಸವಿನೆನಪಿನ ಸವಿಯನ್ನು ನೀಡಿ, ಗತಕಾಲದ ಘಟನೆಗಳನ್ನು ನೆನಪಿಸುವಂತಹ ಇನ್ನಷ್ಟು ಚಿತ್ರಗಳ ನಿರೀಕ್ಷೆಯಿಂದ ಈ ಪತ್ರವನ್ನು ಮುಗಿಸುತ್ತಿದ್ದೇನೆ.

ಇನ್ನೊಂದು ವಿಷಯ -ಪರಿಸರದ ಜತೆಗೆ ಹೀಗೆ ಸಂಬಂಧ ಬೆಸೆಯುವ ಅವಕಾಶ ಸಿಕ್ಕಿದ್ದು ನಮ್ಮ ಶಾಲೆಯ ಕನ್ನಡ ಮಾಧ್ಯಮ ಹುಡುಗಿಯರಿಗೆ ಮಾತ್ರ! ಅದೇ ಅಂಗ್ಲ ಮಾಧ್ಯಮದ ಸ್ನೇಹಿತೆಯರಿಗೆ ಈ ಅವಕಾಶ ಸಿಕ್ಕಿರಲಿಲ್ಲ. ಪಾಪ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+