ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಸೋದರಿಯರ ಮನೆಯಲ್ಲಿ ತೊಟ್ಟಿಲು ತೂಗಲಿ

By Staff
|
Google Oneindia Kannada News

Hoovondu beku ballige, maguvondu beku hennigeಕುಲಕರ್ಣಿ ಅವರಿಗೆ ನಮಸ್ಕಾರ.

ತಮ್ಮ ಲೇಖನಗಳನ್ನು ತಪ್ಪದೇ ಓದುತ್ತಿರುತ್ತೇನೆ. ಡಾ|ಬಿ.ಟಿ.ರುದ್ರೇಶ್ ಅವರ ಬಗ್ಗೆ ನೀವು ದಟ್ಸ್‌ಕನ್ನಡ ಡಾಟ್‌ಕಾಮ್‌ನಲ್ಲಿ ಬರೆದ ಬಂಜೆತನದ ಬಗೆಗಿನ ಲೇಖನ ಓದಿ ಮನಸ್ಸು ಹಿಗ್ಗಿತು. ಬಹಳ ಉಪಯುಕ್ತ ಮಾಹಿತಿಯೊಂದಿಗೆ ಪ್ರತಿ ಶನಿವಾರವೂ ಬರೆದು ಮನಸ್ಸಿಗೆ ಆನಂದ ನೀಡುತ್ತಿದ್ದೀರಿ. ಹೀಗೇ ಸಾಗಲಿ ನಿಮ್ಮ ಸಮಾಜ ಸೇವೆ.

ನಾನು ಬಂಜೆತನ ಪಟ್ಟಕಟ್ಟಿಕೊಂಡು ಓಡಾಡುತ್ತಿದ್ದಾಗ (15 ವರುಷಗಳ ಹಿಂದೆ) ಇಂತಹ ಲೇಖನ ಬಹಳ ಉಪಕಾರಿಯಾಗುತ್ತಿತ್ತು. ಎಲೆ ಮರೆಯ ಕಾಯಿಯಂತಿರುವ ಈ ವೈದ್ಯರ ಹೆಸರನ್ನು ನನಗೆ ಆಗ ಯಾರೂ ಸೂಚಿಸಲಿಲ್ಲ.

ಇಷ್ಟು ಪ್ರಾಮಾಣಿಕತೆಯಿಂದ ದುಡಿಯುತ್ತಿರುವ ಒಬ್ಬ ನಿಪುಣ ವೈದ್ಯರನ್ನು ಈಗಲಾದರೂ ತಮ್ಮ ಮೂಲಕ ಪರಿಚಯ ಮಾಡಿಕೊಂಡೆವಲ್ಲಾ ಅನ್ನುವ ಸಂತೋಷ. ಹೀಗೆ ಇನ್ನೆಷ್ಟು ಮಂದಿಯಿದ್ದಾರೋ ತಿಳಿಯದು.

ನಮಸ್ಕಾರ, ಮಂಗಳ (ಹೆಸರು ಬದಲಾಯಿಸಲಾಗದೆ)

ಲೇಖಕರ ಉತ್ತರ:

16-12-2007
ಸೋದರಿಗೆ ಶುಭ ಚಿಂತನೆಗಳು,

ನನಗೂ ಡಾ| ರುದ್ರೇಶರ ಪರಿಚಯವಿರಲಿಲ್ಲ. ಅವರ ಬಗ್ಗೆ ಒಂದಿಷ್ಟು ಓದಿದ್ದೆ. ಅವರನ್ನು ಕಂಡಾಗ ಅವರೆಂತಹ ಅದ್ಭುತ ವ್ಯಕ್ತಿ ಎಂಬುದನ್ನು ಅರಿತೆ. ನೀವು ಯಾವ ಶಹರದಲ್ಲಿದ್ದೀರಿ ನನಗೆ ಗೊತ್ತಿಲ್ಲ. ಬೆಂಗಳೂರಿನಲ್ಲಿದ್ದ ಅಸಂಖ್ಯ ಜನರಿಗೆ ಡಾ| ರುದ್ರೇಶ್ ಅವರ ಬಗ್ಗೆ ಗೊತ್ತಿಲ್ಲ. ಹೆಚ್ಚಾಗಿ ದೊಡ್ಡ ಡಾಕ್ಟರರು ದೊಡ್ಡ ಮೊತ್ತ ಫೀ ಅಪೇಕ್ಷಿಸುತ್ತಾರೆ. ಆದರೆ ಡಾ| ರುದ್ರೇಶರು ಬಡವರ ಬಂಧು ಆಗಿದ್ದಾರೆ. ಅವರ ಬಗ್ಗೆ, ಅವರ ಸಾಧನೆಯ ಬಗ್ಗೆ ಕನ್ನಡಿಗರೆಲ್ಲ ಅಭಿಮಾನಪಡಬೇಕು.

ತಮ್ಮ ವಿಶ್ವಾಸಿ,

ಡಾ| 'ಜೀವಿ" ಕುಲ್ಕರ್ಣಿ, ಮುಂಬಯಿ

ಪೂರಕ ಓದಿಗೆ

ಮಕ್ಕಳಿಲ್ಲದವರ ಪಾಲಿನ 'ಅಶ್ವಿನಿ' ದೇವತೆ
ಹೋಮಿಯೋಪಥಿ ಲೇಖನ ಮಾಲಿಕೆಗೆ ಪತ್ರಗಳ ಮಹಾಪೂರ
ಹೋಮಿಯೋಪತಿ ಸಾಧಕ ಡಾ| ಎಂ.ಬಿ.ರಹಾಳಕರ್
ಶಸ್ತ್ರಚಿಕಿತ್ಸೆ ಬೇಡವೆಂದರೆ ಹೋಮಿಯೋಪಥಿಗೆ ಶರಣಾಗಿ
ಪರ್ಯಾಯ ಚಿಕಿತ್ಸೆ ಮತ್ತು ಹೋಮಿಯೋಪತಿ(1)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X