ಡೇಟಿಂಗ್‌ ಆದ್ರೆ ಓಕೆ ಎಂದು ನಟಿ ತನಿಷಾ ಕುಪ್ಪಂಡಗೆ ಮೆಸೇಜ್‌: ಸ್ಕ್ರೀನ್‌ಶಾಟ್‌ ಹಾಕಿ ಗ್ರಹಚಾರ ಬಿಡಿಸಿದ ಬಿಗ್‌ಬಾಸ್‌ ಬೆಂಕಿ

ಕನ್ನಡ ಕಿರುತೆರೆ ಹಾಗೂ ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ 'ಬೆಂಕಿ' ಎಂದೇ ಖ್ಯಾತಿ ಗಳಿಸಿರುವ ನಟಿ, ನಿರ್ಮಾಪಕಿ ತನಿಷಾ ಕುಪ್ಪಂಡ (Tanisha Kuppanda) ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಯೊಬ್ಬನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಾನೊಬ್ಬ ಸಭ್ಯ ಫೋಟೋಗ್ರಾಫರ್ ಎಂದು ಹೇಳಿಕೊಂಡು, ಬಳಿಕ ಅಸಭ್ಯವಾಗಿ ಮೆಸೇಜ್ ಮಾಡಿದ ವ್ಯಕ್ತಿಯ ಅಸಲಿ ಮುಖವನ್ನು ನಟಿ ಇಡೀ ಜಗತ್ತಿನ ಮುಂದೆ ಬಯಲು ಮಾಡಿದ್ದಾರೆ.

'ಫೋಟೋಗ್ರಾಫರ್' ಎನ್ನುತ್ತಾ ಕೆಟ್ಟ ಮೆಸೇಜ್‌

ಇನ್‌ಸ್ಟಾಗ್ರಾಮ್‌ನಲ್ಲಿ ಅನಿಲ್ ಕುಮಾರ್ ಎಂಬ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿಯೊಬ್ಬ ನಟಿ ತನಿಷಾ ಕುಪ್ಪಂಡ ಅವರಿಗೆ ಮೆಸೇಜ್ ಮಾಡಿದ್ದಾನೆ. ಆರಂಭದಲ್ಲಿ ತಾನೊಬ್ಬ ವೃತ್ತಿಪರ ಫೋಟೋಗ್ರಾಫರ್ ಎಂಬಂತೆ ನಟಿಸಿರುವ ಈತ, ಫೋಟೋಶೂಟ್ ವಿಷಯದ ಬಗ್ಗೆ ಮಾತನಾಡಿದ್ದಾನೆ. ಆದರೆ, ನಟಿ ತನ್ನ ಮೆಸೇಜ್‌ಗಳನ್ನು ಗಮನಿಸುತ್ತಿದ್ದಂತೆ ತನ್ನ ಅಸಲಿ ವಿಕೃತ ರೂಪವನ್ನು ತೋರಿಸಿದ್ದಾನೆ. ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿ, "ನನ್ನೊಂದಿಗೆ ಡೇಟಿಂಗ್ ಬರ್ತೀಯಾ?" ಎಂದೆಲ್ಲ ಅಸಭ್ಯವಾಗಿ ಕೇಳಿದ್ದಾನೆ.

Tanisha Kuppanda

ಇನ್‌ಸ್ಟಾಗ್ರಾಮ್‌ನಲ್ಲೇ ಗ್ರಹಚಾರ ಬಿಡಿಸಿದ ತನಿಷಾ

ಕಿಡಿಗೇಡಿಯ ಅಸಭ್ಯ ಮೆಸೇಜ್ ನೋಡಿ ತೀವ್ರ ಆಕ್ರೋಶಗೊಂಡ ತನಿಷಾ ಕುಪ್ಪಂಡ, ಆತನಿಗೆ ಖಾಸಗಿಯಾಗಿ ಬೈದು ಸುಮ್ಮನಾಗಲಿಲ್ಲ. ಬದಲಿಗೆ ಆತ ಕಳುಹಿಸಿದ ಪ್ರತಿಯೊಂದು ಅಸಭ್ಯ ಚಾಟಿಂಗ್ ಹಾಗೂ ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಸ್ಕ್ರೀನ್‌ಶಾಟ್ ತೆಗೆದು ನೇರವಾಗಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಆತನ ಅಸಲಿ ಯೋಗ್ಯತೆಯನ್ನು ಇಡೀ ಸಾರ್ವಜನಿಕ ವಲಯದ ಮುಂದೆ ತಂದು ನಿಲ್ಲಿಸಿದ್ದಾರೆ.

Dhurandhar OTT: ಒಟಿಟಿಗೆ ಬಂದ ರಣವೀರ್ ಸಿಂಗ್ ನಟನೆಯ 'ಧುರಂಧರ್' ಅನ್‌ಕಟ್ ವರ್ಷನ್; ಥಿಯೇಟರ್‌ಗಿಂತ ಏನೆಲ್ಲ ಬದಲಾವಣೆ?
Dhurandhar OTT: ಒಟಿಟಿಗೆ ಬಂದ ರಣವೀರ್ ಸಿಂಗ್ ನಟನೆಯ 'ಧುರಂಧರ್' ಅನ್‌ಕಟ್ ವರ್ಷನ್; ಥಿಯೇಟರ್‌ಗಿಂತ ಏನೆಲ್ಲ ಬದಲಾವಣೆ?

"ಥೂ ನಿಮ್ಮ ಜನ್ಮಕ್ಕೆ..": ತನಿಷಾ ಆಕ್ರೋಶ

ಆತನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವುದರ ಜೊತೆಗೆ ನಟಿ ತನಿಷಾ ಕಿಡಿಗೇಡಿಯ ವಿರುದ್ಧ ಗುಡುಗಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಕೆಲವು ಕೆಟ್ಟ ಫೋಟೋಗ್ರಾಫರ್‌ಗಳು ಬಂದು ಕಲಾವಿದರ ಬಳಿ ಇಂತಹ ಮೂರ್ಖತನದ ಮಾತುಗಳನ್ನು ಆಡುತ್ತಾರೆ. ಸರಿಯಾಗಿ ಫೋಟೋಶೂಟ್ ಮಾಡುವ ಯೋಗ್ಯತೆ ಇಲ್ಲದಿದ್ದರೆ ಇಂತಹ ವಿಷಯಗಳ ಬಗ್ಗೆ ಮಾತನಾಡಬಾರದು. ನಿಮ್ಮಂತಹ ಥ*ರ್ಡ್‌ ಕ್ಲಾಸ್‌ ಜನರಿಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಒಳ್ಳೆಯ ಫೋಟೋಗ್ರಾಫರ್‌ಗಳಿಗೂ ಅವಮಾನವಾಗುತ್ತದೆ. ಥೂ ನಿಮ್ಮ ಜನ್ಮಕ್ಕೆ" ಎಂದು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಫೋಟೋಗ್ರಾಫರ್ ಹೆಸರಿನಲ್ಲಿ ಇಂತಹ ವಿಕೃತಿ ಮೆರೆಯುವ ಇಡಿಯಟ್‌ಗಳ ಅಕೌಂಟ್‌ಗಳನ್ನು ಯಾರೂ ಬಿಡಬಾರದು ಎಂದು ತನಿಷಾ ಹೇಳಿದ್ದಾರೆ. ತಮ್ಮ ಅಪಾರ ಅಭಿಮಾನಿ ಬಳಗಕ್ಕೆ ಕರೆ ನೀಡಿರುವ ನಟಿ, ಈ ಅನಿಲ್ ಕುಮಾರ್ ಎಂಬಾತನ ಇನ್‌ಸ್ಟಾಗ್ರಾಮ್ ಖಾತೆಯನ್ನು ತಕ್ಷಣವೇ ಮಾಸ್ ರಿಪೋರ್ಟ್ ಮಾಡಿ ಬ್ಲಾಕ್ ಮಾಡಿಸುವಂತೆ ವಿನಂತಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತನಿಷಾ ಅವರ ಈ ಧೈರ್ಯದ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸೆಲೆಬ್ರಿಟಿಗಳ ಖಾಸಗಿತನ ಹಾಗೂ ಗೌರವಕ್ಕೆ ಧಕ್ಕೆ ತರುವ ಇಂತಹ ಸೈಬರ್ ಕಿಡಿಗೇಡಿಗಳಿಗೆ ಇದೇ ರೀತಿ ತಕ್ಕ ಶಾಸ್ತಿ ಮಾಡಬೇಕು ಎಂದು ನೆಟ್ಟಿಗರು ಬೆಂಬಲ ಸೂಚಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+