ಯಾರವನು ಗಾಂಧಿ? ಯಾಕೀಗ ಗಾಂಧಿ?
ಯಾರವನು ಗಾಂಧಿ? ಯಾಕೀಗ ಗಾಂಧಿ?
ನಮ್ಮವರ ಮನಸ್ಥಿತಿ ಎಲ್ಲರಿಗೂ ಗೊತ್ತು. ನಮ್ಮವರ ಬಳಿ ಗಾಂಧಿ ಬಗ್ಗೆ ಕೇಳಿ ಕಕ್ಕಾಬಿಕ್ಕಿಯಾದ ಈ ಓದುಗರು ಏನಂತಾರೆ ? ನೀವೇನಂತೀರಾ?
- ಎಸ್. ಮಧುಸೂದನ ಪೆಜತ್ತಾಯ
[email protected]
ಇಂದು ಗಾಂಧಿಯವರ ಪುಣ್ಯ ದಿನ. ಅವರು ಯಾರೆಂದು ನನ್ನ ಪ್ರಾಯದ ಜನರಿಗೆ ಗೊತ್ತು - ಅದೇ ಇಂದಿನ ಬಹು ಸಂತೋಷಕರವಾದ ವಾರ್ತೆ!
ಹೆಚ್ಚಿನ ವಾರ್ತಾ ಪತ್ರಿಕೆಯವರು ಮಹಾತ್ಮಾ ಗಾಂಧಿಯವರನ್ನು ಇಂದು ಸ್ಮರಿಸಿಲ್ಲ. ಆದರೂ, ನಾನು ಅಧಿಕ ಪ್ರಸಂಗಿತನದಿಂದ ಕೆಲವರನ್ನು ಮಹಾತ್ಮಾ ಗಾಂಧಿಯವರ ಬಗ್ಗೆ ಪ್ರಶ್ನಿಸಿದೆ.
ಅದರ ಸಾರಾಂಶ ಕೆಳಗೆ ಬರೆದಿದ್ದೇನೆ.
ಇಂದಿನ ನವಯುವಕ ಒಬ್ಬನನ್ನು ಮಹಾತ್ಮ ಗಾಂಧಿಯ ಬಗ್ಗೆ ಕೇಳಿದೆ. ಆತ ಹೀಗೆ ಹೇಳಿದ - He was a very Romantic Old Man! He was using two girls as crutches even in his old age!
ಪಕ್ಕದ ಮನೆಯ ಪಿ. ಯು. ಸಿ. ವಿದ್ಯಾರ್ಥಿನಿ (ಪಿಯುಸಿ ಅಂದರೆ ಅಲ್‌ಟ್ರಾ ಫ್ಯಾಷನ್ ಮಾಡುವ ಕಾಲೇಜು ಕನ್ಯೆ)ಯನ್ನು ಗಾಂಧಿ ಬಗ್ಗೆ ಕೇಳಿದೆ. ವಾವ್! ದಟ್ ಇಸ್ ಇಂದಿರಾ ಗಾಂಧಿ’ ಸ್ ಫಾದರ್! ಎಂದು ಆಕೆ ತನ್ನ ಸ್ಕೂಟಿ ಹತ್ತಿದಳು.
ನರ್ಸರಿ ಕ್ಲಾಸಿಗೆ ಹೋಗುವ ಚಿಕ್ಕ ಹುಡುಗನೊಬ್ಬನಿಗೆ ಮಹಾತ್ಮಾ ಗಾಂಧಿಯವರ ಫೋಟೋ ತೋರಿಸುತ್ತಾ ‘ಇವರು ಯಾರು ಗೊತ್ತೇ?’ ಎಂದು ಕೇಳಿದೆ. ಆ ಮಗು ‘ಅಜ್ಜಾ! ಅದು.... ಅದು... ಅಮ್ಮಾ ತಾಯೇ! ಎಂತ ಬೇಡುತ್ತಾನಲ್ಲಾ ...... ಅವನ ಫೋಟೋ! ’ ಎಂದುಬಿಟ್ಟಿತು!
ಈ ಉತ್ತರಗಳನ್ನು ಕೇಳಿ ನನಗೆ ಭ್ರಮನಿರಸನವೇ ಆಯಿತು.
ಮನೆಗೆ ಬಂದು ದೇವರ ಕೋಣೆಗೆ ಹೋಗಿ ‘ರಘುಪತಿ ರಾಘವ ರಾಜಾ ರಾಂ... ’ ಗೀತೆಯನ್ನು ಹಾಡಿ, ಮನಸ್ಸಿಗೆ ಸಮಾಧಾನ ತಂದುಕೊಂಡೆ.











Click it and Unblock the Notifications