ಗೆಳೆತನದ ಸುವಿಶಾಲ ಆಲದ ಮರದಡಿ ಕೂತು ಒಂದಷ್ಟು ಮಾತು..


ನಮ್ಮ ಕಂದಮ್ಮಗಳು ಈ ಗೆಳೆತನದ ನಿಜವಾದ ಅರ್ಥವನ್ನು ಅರಿಯಬೇಕು. ಮಿತ್ರರೇ ನೆನಪಿರಲಿ.. ಈ ಭಾರ ನಮ್ಮ ಹೆಗಲ ಮೇಲಿದೆ!

  • ಸುಪ್ರೀತಾ ಶ್ರೀಕಂಠರಾವ್‌, ಫೀನಿಕ್ಸ್‌
    [email protected]
‘ಗೆಳೆತನ’ ದ ಅರ್ಥ, ಅಪಾರ...ಈಗೀಗ ಅಪಾರ್ಥ! ಇದರ ನಿಗೂಢತೆಗೆ, ಅಮೂಲ್ಯತೆಗೆ ಸಿಕ್ಕ ಪುರಸ್ಕಾರಗಳು ಹತ್ತಾರು!

ಎಂದಿಗೂ ಸಾಯದ, ಸತ್ತರೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಈ ಗೆಳೆತನದ ಪ್ರಾರಂಭಕ್ಕೆ, ಸಣ್ಣದೊಂದು ಭೇಟಿ ಸಾಕು. ಆ ಗೆಳೆತನ ಸದಾ ಹಸಿರಾಗಿರುವಂತಾದರೆ...ಅದೇ ನಮ್ಮ ಪಾಲಿಗೆ ಅಮೃತಘಳಿಗೆ! ಇಲ್ಲಿ ಪರಸ್ಪರ ನಂಬಿಕೆ, ಆತ್ಮೀಯತೆ, ವಿಶ್ವಾಸ, ಸ್ಪಂದನೆ, ಹಂಚುವಿಕೆ, ಪ್ರೀತಿ ಎಲ್ಲವೂ ಮೇಳೈಸಿವೆ.

ತಮ್ಮ ಮನದಾಳದ ಸುಖ ದುಃಖ, ದುಮ್ಮಾನಗಳನ್ನು ಪರಸ್ಪರ ಹೇಳಲೆತ್ನಿಸುವ, ಅದಕ್ಕೆ ಪ್ರತಿಯಾಗಿ ಕೇಳುವ ಕಿವಿ, ನೋಡುವ ಮತ್ತು ನೀರ್‌ ಸುರಿಸುವ ಕಣ್ಣು, ಆ ಕಣ್ಣೊರೆಸುವ ಕೈ, ಭಾರಹೊರುವ ಭುಜ... ಇವೆಲ್ಲವೂ ಗೆಳೆತನದಲ್ಲಿ ಮಾತ್ರ ಸಾಧ್ಯ! ಏಕೆಂದರೆ ಇಲ್ಲಿ ಇರುವುದು ನಿಮ್ಮ ಆಸಂಬಂಧದಲ್ಲಿರುವ ನಿಬಂಧನೆಗಳಾವುದೂ ಇಲ್ಲದ ಸಂಬಂಧ.

ಸ್ನೇಹ ಎಂಬುದು ತೆರೆದಿಟ್ಟ ಬಿಳಿಹಾಳೆ! ಸದಾ ಬರೆಯುತ್ತಿರುವ ಸಂಗತಿ! ಅದನ್ನು ನಿಲ್ಲಿಸಿದರದು ಅಪೂರ್ಣ. ಮುಗಿಸಿದರೆ ಸಂಪೂರ್ಣ. ಆದರೆ ಅದು ಕಥೆ. ಕಥೆ ಎನ್ನುವುದು.....ಇತಿಹಾಸವಾಯ್ತು. ಓದುಗ ಕಾಯುತ್ತಿರಬೇಕು, ಓದುಗನ ಕಾತರತೆಯನ್ನು ನೀಗಿಸುವ ತವಕದಲ್ಲಿ ಗೆಳೆತನ ಕಥೆಯಾಗುವುದು ಬೇಡ! ಏ ಓದುಗ, ನೀ ಸದಾ ಕಾಯುತ್ತಿರು... ಕಾಯುವಿಕೆಯಲ್ಲೂ ಒಂದು ರೀತಿ ಮಜವಿದೆ!!! ಈ ಮಜ ತಂದದ್ದೂ ಗೆಳತನ.

ಇಲ್ಲಿ ಪರಸ್ಪರ ವಾದವಿದೆ, ವಿವಾದವಿದೆ, ವಾಗ್ವಾದವಿದೆ. ಹಾಗೆ ಸಹಮತವೂ ಇದೆ. ಅದಕ್ಕೂ ಮಿಗಿಲಾಗಿ ಒಬ್ಬರಿಗೊಬ್ಬರ ಮೇಲೆ ಗೌರವವಿದೆ! ಇದೊಂದು ಅಸಾಮಾನ್ಯ ಕ್ರಿಯೆ! ಬದುಕಿನ ವಿವಿಧ ಮುಖಗಳು ಅಲೆ ಅಲೆಯಾಗಿ ಬೀಸಿ ಬರುವಾಗ ಅದನ್ನ ದಾಟಿ ಸಾಗಿಸುವ ಶಕ್ತಿ ಇದಕ್ಕಿದೆ. ಇಂತಹ ಅಮೂಲ್ಯವಾದ ಘಣಿ ನನ್ನ ಬಳಿಯೂ ಇದೆ. ತಪಸ್ಸಿನ ಫಲ. ಅಷ್ಟು ಸುಲಭವಾಗಿ ಕೈ ಜಾರಲು ಬಿಡುತ್ತೇನೆಯೇ?

ಈ ಮೋಸ, ವಂಚನೆ ಕ್ರೌರ್ಯಗಳೇ ತಾಂಡವವಾಡುತ್ತಿರುವ ಈ ಪ್ರಪಂಚದಲ್ಲಿ ಬ್ರೂಟಸ್‌ ನಂತವರಿಗೇನು ಕೊರತೆಯಿಲ್ಲ. ಆದರೆ ನಾವು ನೆನಪಿಟ್ಟುಕೊಳ್ಳಬೇಕಾದ್ದು ಗೆಳೆತನದ ಹೆಸರಿಗೆ ಮಸಿಬಳಿಯುವಂಥಹ ಈ ವ್ಯಕ್ತಿಗಳು ಎಂದೆಂದಿಗೂ ಗೆಳೆತನಕ್ಕೆ ಉದಾಹರಣೆಯಾಗಲಾರರು.

ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳು ಸಂಕೀರ್ಣಗೊಳ್ಳುತ್ತಿರುವ, ಮೇಲಾಗಿ ಕ್ಷೀಣಿಸುತ್ತಿರುವ ಈ ಸಮಯದಲ್ಲಿ ಸರಪಳಿಯ0ತೆ ಒಬ್ಬರಿಂದೊಂಬ್ಬರು ಪರಿಚಯವಾಗುತ್ತ ಆಗುಹೋಗುಗಳಿಗೆ ಪರಸ್ಪರರಾಗುತ್ತ ಸಾಗಿದರೆ ಎಷ್ಟು ಚೆನ್ನ?

ನಾಳೆ ನಳನಳಿಸುತ್ತ ಬದುಕ ಸಾಗಿಸಬೇಕಾದ ಈಗಿನ್ನು ಅರಳುತ್ತಿರುವ ನಮ್ಮ ಕಂದಮ್ಮಗಳು ಈ ಗೆಳೆತನದ ನಿಜವಾದ ಅರ್ಥವನ್ನು ಅರಿಯಬೇಕು. ಮಿತ್ರರೇ ನೆನಪಿರಲಿ.....ಈ ಭಾರ ನಮ್ಮ ಹೆಗಲ ಮೇಲೇ ಇದೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+