ಬನ್ನಿ ಕನ್ನಡ ವಿರೋಧಿ ಎಫ್‌ಎಮ್‌ ರೇಡಿಯೋಗಳಿಗೆ ಪಾಠ ಕಲಿಸೋಣ...


ರೇಡಿಯೋ ಮಿರ್ಚಿ, ರೇಡಿಯೋ ಸಿಟಿಯಲ್ಲಿ ಕನ್ನಡ ನಿರ್ಲಕ್ಷ್ಯ ನಿರಂತರ. ಬೇರೆ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಒತ್ತುಕೊಡುವ ಈ ಎಫ್‌ಎಮ್‌ ರೇಡಿಯೋ ಕೇಂದ್ರಗಳು, ನಮ್ಮ ನಾಡಿನಲ್ಲಿ ಬಾಲ ಬಿಚ್ಚಿವೆ. ಏನಿದು ದ್ವಿಮುಖ ನೀತಿ. ಬನ್ನಿ ಸಹಿ ಆಂದೋಲನಕ್ಕೆ ಕೈ ಜೋಡಿಸಿ...

  • ಆನಂದ್‌ ಜಿ., ಬನವಾಸಿ ಬಳಗ, ಬೆಂಗಳೂರು

  • [email protected]
    ನಲ್ಮೆಯ ಕನ್ನಡ ಬಂಧುಗಳೇ,

    ಬೆಂಗಳೂರಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರೇಡಿಯೋ ಸಿಟಿ ಮತ್ತು ರೇಡಿಯೋ ಮಿರ್ಚಿ ಎಫ್‌.ಎಮ್‌ ಕೇಂದ್ರಗಳಲ್ಲಿ ಕನ್ನಡ ಕಾರ್ಯಕ್ರಮಗಳು ಅತಿ ಕಡಿಮೆ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ. ಈ ಪ್ರಮಾಣ ರೇಡಿಯೋ ಸಿಟಿಯಲ್ಲಿ ಶೇಕಡಾ 15ಕ್ಕಿಂತ ಕಡಿಮೆಯಿದ್ದರೆ, ರೇಡಿಯೋ ಮಿರ್ಚಿಯಲ್ಲಿ ಇದರ ಪ್ರಮಾಣ ಏಕಾಂಕವನ್ನೂ ದಾಟದು.

    ನೆರೆಯ ರಾಜ್ಯಗಳಲ್ಲಿ ಅಲ್ಲಿನ ರಾಜ್ಯಭಾಷೆಗೆ ಅಗ್ರಸ್ಥಾನ ನೀಡಿ, ಪ್ರತಿಶತ 95ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆಯಾ ರಾಜ್ಯಭಾಷೆಯಲ್ಲಿ ಕಾರ್ಯಕ್ರಮ ನೀಡುತ್ತಿರುವ ಈ ವಾಹಿನಿಗಳು, ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ, ಹಿಂದಿ ಮತ್ತು ಇಂಗ್ಲಿಷ್‌ಗಳಿಗೆ ಪ್ರಾಮುಖ್ಯತೆ ನೀಡುತ್ತಿವೆ. ಆ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿವೆ. ಕನ್ನಡಿಗರೆಲ್ಲಾ ಈ ಪರಭಾಷಾ ಹೇರಿಕೆಯನ್ನು, ಸಾಂಸ್ಕೃತಿಕ ದಾಳಿಯನ್ನೂ ವಿರೋಧಿಸಬೇಕಾದ ಅಗತ್ಯವಿದೆ.

    ಕೆಳಕಂಡ ಕೊಂಡಿಯಲ್ಲಿರುವ ಪಿಟಿಷನ್‌ಗೆ ಸಹಿ ಹಾಕುವ ಮೂಲಕ ತಮ್ಮ ಹಕ್ಕೊತ್ತಾಯ ಮಾಡಬೇಕೆಂದು ಕೋರುತ್ತೇವೆ.

    ನಿಮ್ಮ ಹಕ್ಕೊತ್ತಾಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ... ಸಹಿ ಹಾಕಿ... ಎಚ್ಚರಿಕೆ ರವಾನಿಸಿ!

    ಇನ್ನೊಂದು ಪತ್ರ :

    ಮುಖಪುಟ / ಓದುಗರ ಓಲೆ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+