ಬೆಂಗಳೂರಿನಲ್ಲಿ ಡಿಸೆಂಬರ್16ರಂದು ‘ವೀಸಾ ವಿವಾಹ’
ಸ್ನೇಹಿತರೆ,
‘ಕನ್ನಡದಾಸ’ರಾದ ಅಮೆರಿಕಾ ನಿವಾಸಿ ರಾಘವರೆಡ್ಡಿ ಅವರು ‘ವೀಸಾ ವಿವಾಹ’ ಎಂಬ ಕನ್ನಡ ಚಲನಚಿತ್ರವನ್ನು ನಿರ್ಮಿಸಿರುವುದು ನಿಮಗೆ ಗೊತ್ತಷ್ಟೆ. ಈ ಬಗ್ಗೆ ದಟ್ಸ್ ಕನ್ನಡದಲ್ಲಿ ಬರಹವೊಂದು ಪ್ರಕಟವಾಗಿದೆ.
ಈ ಚಿತ್ರದ ಪ್ರದರ್ಶನವನ್ನು ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ನೋಡುತ್ತೀರಾ? ದಿನಾಂಕ : ಡಿಸೆಂಬರ್ 16, ಶನಿವಾರ ಸಂಜೆ 6.30 ಗಂಟೆ. ಚಿತ್ರ ವೀಕ್ಷಿಸಲು ನಿಮಗೆಲ್ಲ ಸ್ವಾಗತ.
ರಾಘವರೆಡ್ಡಿಯವರು ದಕ್ಷಿಣ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಜೀವಾಣುಶಾಸ್ತ್ರ ಸಂಶೋಧಕರು. ಅವರ ಕನ್ನಡ ಪ್ರೇಮ ಕ್ಕೆ ಒಂದು ಉದಾಹರಣೆ ; ಅವರು ನನಗೆ ಅಮೆರಿಕಾದಿಂದ ರವಾನಿಸಿದ ಕನ್ನಡದಲ್ಲಿ ವಿಳಾಸ ಬರೆದ ಪತ್ರ. ಅದು ನನ್ನ ಬೆಂಗಳೂರು ವಿಳಾಸಕ್ಕೆ ಸುರಕ್ಷಿತವಾಗಿ ತಲುಪಿದೆ. ಕಡೆಯಪಕ್ಷ ನಾವುಗಳೆಲ್ಲ ಬೆಂಗಳೂರಿನಲ್ಲಿರುವ ಬಂಧು ಬಾಂಧವರಿಗಾದರೂ ಕನ್ನಡದಲ್ಲಿ ವಿಳಾಸ ಬರೆದು ಪತ್ರಗಳನ್ನು ಅಂಚೆಡಬ್ಬಿಗೆ ಹಾಕೋಣ.
ನಮಸ್ಕಾರ
-ಕಲ್ಯಾಣರಾಮನ್, ಬೆಂಗಳೂರು











Click it and Unblock the Notifications