ಇಂಗ್ಲಿಷ್‌ : ಯಾವುದು ತಪ್ಪು? ಯಾವುದು ಸರಿ?


ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಅವುಗಳ ವಿಶೇಷತೆಯ ಪ್ರಭಾವಗಳಿಂದ, ಆಯಾಜನಗಳ ಇಂಗ್ಲೀಷ್‌ ಪದಗಳ ಉಚ್ಚಾರಣೆ ವಿಶಿಷ್ಟವಾಗಿರುವುವು. ಈ ಬಗ್ಗೆ ಒಂದಿಷ್ಟು ಮಾಹಿತಿ.

ಮಾನ್ಯ ಸಂಪಾದಕರೆ,

ಸ್ವಲ್ಪ ದಿನಗಳ ಹಿಂದೆ, ಚಿಕನ್ಗುನ್ಯ ವೈರಾಣುವಿನ ಹೆಸರನ್ನು ಹೇಗೆ ಉಚ್ಚರಿಸಬೇಕು ಎಂದು ಡಾ।। ಮುರಳೀಧರ ಹತ್ವಾರ ಅವರ ಲೇಖನವನ್ನು ಓದಿ ಅದನ್ನು ಅನುಮೋದಿಸುತ್ತಾ ಇನ್ನಷ್ಟು ಮಾಹಿತಿಯನ್ನು ಕೊಡಲು ಅಪೇಕ್ಷಿಸುತ್ತೇನೆ.

ಸ್ವಲ್ಪದಿನಗಳ ನಂತರ ತಮ್ಮ ಅಂತರಜಾಲ ಪತ್ರಿಕೆಯಲಿ ಹೆಸರಾಂತ ನಟ ಅಮಿತಾಬ್‌ ಬಚನ್‌ಗೆ ಬ್ರಿಟನ್ನಿನ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್‌ ನೀಡಿದೆ ಎಂಬ ಸುದ್ದಿಯನ್ನು ಪ್ರಕಟಿಸಿದ್ದೀರಿ.‘ಲೆಸೆಸ್ಟರಿನ’ ಡಿ ಮೋಟ್‌ ಫ‚ೋರ್ಡ್‌ ವಿಶ್ವವಿದ್ಯಾಲಯವು ಈ ಪದವಿ ನೀಡಿ ಗೌರವಿಸಿದೆ ಎಂದು ಹೇಳಿದ್ದೀರಿ. ಆದರೆ, ಲೆಸೆಸ್ಟರ್‌ ಎಂಬ ಉಚ್ಚಾರಣೆಯು ಸರಿಯಲ್ಲ. ಅಂದರೆ ತಾವು ಬರೆದಿರುವುದು ಸರಿಯಲ್ಲವೆಂದಲ್ಲ. ಅದು ಈ ಆಂಗ್ಲನಾಡಿನ ಆಂಗ್ಲಪದಗಳ ಉಚ್ಚಾರಣೆಯ ವಿಚಿತ್ರ ಪರಂಪರೆಯನ್ನು ತೋರಿಸುತ್ತದೆ.

ಆ ಊರಿನ ಹೆಸರನ್ನು ಇಂಗ್ಲೀಷಿನಲ್ಲಿ Leicester ಎಂದು ಬರೆದರೂ ಅದನ್ನು ಇಲ್ಲಿನ ಪರಂಪರೆಯ ಪ್ರಕಾರ ‘ಲೆಸ್ಟರ್‌’ ಎಂದೇ ಉಚ್ಚರಿಸಬೇಕು. ಬಹುಶಃ ಇಂಗ್ಲೀಷಿನಲ್ಲಿ ಬರೆದ ವೃತ್ತಾಂತವನ್ನು ಓದಿ, ಆ ಪದಗಳ ಸ್ಪೆಲ್ಲಿಂಗ್‌ನಲ್ಲಿ ಕಾಣಿಸಿದ ವರ್ಣಗಳನ್ನೆಲ್ಲಾ ಉಚ್ಚರಿಸಿಅದನ್ನು ಕನ್ನಡದಲ್ಲಿ ತಾವು ಬರೆದಿರಬಹುದು. ಇದೇರೀತಿಯಲ್ಲಿ Gloucester ಎಂಬ ಊರಿನ ಹೆಸರನ್ನು ‘ಗ್ಲಾಸ್ಟರ್‌’ ಎಂದೂ, Worcester ಅನ್ನು ‘ವೂಸ್ಟರ್‌’ ಎಂದೂ, Warwick ಎಂಬ ಊರಿನ ಹೆಸರನ್ನು ‘ವಾರಿಕ್‌’ ಎಂದೇ ಉಚ್ಚರಿಸಬೇಕು. ಆದರೆ ಅಮೆರಿಕನ್ನರು ಅದನ್ನು ‘ವಾರ್‌ ವಿಕ್‌’ ಎಂದು ಉಚ್ಚರಿಸುತ್ತಾರೆ.

ಕನ್ನಡ ವರ್ಣಗಳು ಶಬ್ದದ ಆಧಾರಿತವಾಗಿವೆ. ಅವುಗಳನ್ನು Phonetic Alphabets ಎಂದು ಕರೆಯುತ್ತಾರೆ. ಇಂಗ್ಲೀಷಿನ ವರ್ಣಗಳು ಒಂದು ಪದವನ್ನು ಭಿನ್ನ ಭಿನ್ನವಾಗಿ ಮಾಡಿದ ಶಬ್ದಗಳನ್ನು ಸೂಚಿಸುವ ಚಿಹ್ನೆಗಳಾಗಿರುವುವು. ಇವುಗಳನ್ನು ಸ್ಪೆಲ್ಲಿಂಗ್‌ ಎಂದು ಕರೆಯಲಾಗುವುದು. ಕನ್ನಡದ ವರ್ಣಗಳಿಗೂ ಇಂಗ್ಲಿಷಿನ ಸ್ಪೆಲ್ಲಿಂಗ್‌ಗಳಿಗೂ ಇರುವ ಮುಖ್ಯ ವ್ಯತ್ಯಾಸವೇನೆಂದರೆ, ಕನ್ನಡದ ವರ್ಣವು ಪದದ ಯಾವಭಾಗದಲ್ಲೂ ಬಂದರೂ ಅದು ಒಂದೇ ಶಬ್ದವನ್ನು ಸೂಚಿಸುವುದು. ಆದರೆ ಇಂಗ್ಲಿಷಿನ ವರ್ಣಗಳು ಸನ್ನಿವೇಶಕ್ಕೆ ತಕ್ಕಂತೆ ಶಬ್ದಗಳನ್ನು ಸೂಚಿಸುವುವು. ಅಲ್ಲದೆ ಅವು ಭಿನ್ನ ವರ್ಣವಾಗಿರುವುದರಿಂದ, ಅವುಗಳು ಸೂಚಿಸುವ ಶಬ್ದಗಳು ಪಕ್ಕದಲ್ಲಿ ಬರುವ ಇತರ ವರ್ಣಗಳಮೇಲೂ ಆಧಾರಿತವಾಗಿರುವುವು.

ಉದಾಹರಣೆಗೆ, ‘ಸಿ’ ಎಂಬ ವರ್ಣವು Context ಎಂಬ ಪದದಲ್ಲಿ ‘ಕ’ ಎಂಬ ಶಬ್ದವನ್ನೂ, Change ಎಂಬ ಪದದಲ್ಲಿ ‘ಚ’ ಎಂಬ ಶಬ್ದವನ್ನು ಸೂಚಿಸುವುದು. ಎಲ್ಲಕ್ಕಿಂತಲೂ ಆಶ್ಚರ್ಯವೇನೆಂದರೆ, ಈ ಇಂಗ್ಲಿಷಿನ ವರ್ಣಗಳು ಕೆಲವು ಸನ್ನಿವೇಶಗಳಲ್ಲಿ ಸಂಪೂರ್ಣವಾಗಿ ಮಾಯವಾಗುವುದು. ಇದೇ ಆಗಿರುವುದು Leicester ಎಂಬ ಪದದಲ್ಲಿ I C E ಗಳು ಮಾಯವಾಗಿರುವುದು. ಇವುಗಳಿಗೆ ಸೈಲೆಂಟ್‌ ಲೆಟರ್ಸ್‌ ಎನ್ನುತ್ತಾರೆ.

ಆದುದರಿಂದಲೇ ಅಮೆರಿಕನ್ನರು ತಮ್ಮ ಇಂಗ್ಲೀಷಿನ ಸ್ಪೆಲ್ಲಿಂಗನ್ನು ಸ್ವಲ್ಪಮಟ್ಟಿಗಾದರೂ ಸುಲಭಮಾಡಲು ಯತ್ನಿಸಿರುವುದು. ಎಲ್ಲರಿಗೂ ತಿಳಿದಿರುವಹಾಗೆ ಉದಾಹರಣೆಗೆ, Color (Colour), Program (Programme) ಎಂದು ಬರೆಯುವರು. ಆದರೆ ಮಲೇಷಿಯಾದವರು ಇಂಗ್ಲಿಷನ್ನು ಸುಲಭೀಕರಿಸಿರುವುದು ಈ ಉಚ್ಚಾರಣೆ ತೊಡಕನ್ನು ಬಹಳವಾಗಿ ನಿವಾರಿಸಿರುವುದೆಂದು ನನಗೆ ಕಾಣಿಸುತ್ತದೆ. ಆವರು Taxi ಯನ್ನು Texie ಯಂತಲೂ, Restaurant ಎಂಬ ಪದವನ್ನು Restura ಎಂತಲೂ ಬರೆಯುತ್ತಾರೆ. ಇದು ಆಂಗ್ಲಪದಗಳನ್ನು ಫ‚ೊನೆಟಿಕ್‌ಕರಿಸುವ ಯತ್ನವಲ್ಲವೇ?

ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಅವುಗಳ ವಿಶೇಷತೆಯ ಪ್ರಭಾವಗಳಿಂದ ಆಯಾಜನಗಳ ಇಂಗ್ಲೀಷ್‌ ಪದಗಳ ಉಚ್ಚಾರಣೆ ವಿಶಿಷ್ಟವಾಗಿರುವುವು. ಬಂಗಾಲೀ ಭಾಷೆಯಲ್ಲಿ ‘ವ’ ಅನ್ನುವ ಉಚ್ಚರಣೆ ಸಾಧಾರಣವಾಗಿ ಇಲ್ಲ. ಅದರ ಬದಲು ‘ಬ’ ಎಂಬ ಉಚ್ಚರಣೆಯಿರುವುದು. ನಾನು ಮೆಡಿಕಲ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಒಂದು ಅಖಿಲಭಾರತ ವೈದ್ಯಕೀಯ ಕಾನ್ಫರೆನ್ಸ್‌ ನಡೆಯಿತು. ಆ ಸಂದರ್ಭದಲ್ಲಿ ಭಾರತದ ಎಲ್ಲಾ ಪ್ರಾಂತ್ಯದ ತಜ್ಞರು ಬಂದಿದ್ದರು. ಬಂಗಾಲದ ಒಬ್ಬ ಹೃದಯ ಶಸ್ತ್ರತಜ್ಞರು ಮೈಟ್ರಲ್‌ ವಾಲ್‌ ವಾಟಮಿ ಎಂಬ ಪದವನ್ನು ಮೈಟ್ರಲ್‌ ಭಾಲ್‌ ಭಾಟಮಿ ಎಂದು ಉಚ್ಚರಿಸುತ್ತಿದ್ದರು.

ಅರಬ್ಬೀ ಭಾಷೆಯಲ್ಲಿ ‘ಪಿ’ ಎಂಬ ಉಚ್ಚರಣೆ ಇಲ್ಲವೇ ಇಲ್ಲ. ಎಷ್ಟೇ ಹೇಳಿಕೊಟ್ಟರೂ, ಎಲ್ಲೆಲ್ಲಿ ‘ಪಿ’ ಎಂಬ ಉಚ್ಚರಣೆ ಬರುವುದೋ,ಅವರು ಅಲ್ಲಲ್ಲಿ ‘ಬಿ’ ಎಂದೇ ಉಚ್ಚರಿಸುವರು. ಉದಾಹರಣೆಗೆ, ಪೆಪ್ಸಿ ಎಂಬುವುದಕ್ಕೆ ಬೆಬ್ಸಿ ಎಂದೂ, ಪೀಪಲ್‌ ಎಂಬುವುದಕ್ಕೆ ಬೀಬಲ್‌, ಪೆನ್‌ ಎಂಬುವುದಕ್ಕೆ ಬೆನ್‌’ ಎಂದೂ ಹೇಳುವರು.

ಕೊನೆಯದಾಗಿ ಅರಬ್ಬೀ ಜನಗಳೇ ಹೇಳುವ ಒಂದು ಜೋಕು ಹೇಳುತ್ತೇನೆ.

ಇಂಡಿಯಾದಿಂದ ಸೌದೀದೇಶಕ್ಕೆ ಹೊಸದಾಗಿ ಬಂದಿದ್ದ ಒಬ್ಬ ಡಾಕ್ಟರು ತಮ್ಮ ಕಾರನ್ನು ಒಂದು ಮಸೀದಿಯ ಪಕ್ಕದಲ್ಲಿ ನಿಲ್ಲಿಸಿದರಂತೆ. ತಕ್ಷಣ ಒಬ್ಬ ಸೌದೀ ಪೊಲೀಸಿನವನು ಬಂದು ಅವರಿಗೆ ‘ಯು ಕೆನ್ನಾಟ್‌ ಬಾರ್ಕ್‌ ಹಿಯರ್‌’ ಎಂದನಂತೆ. ಅದಕ್ಕೆ ಅವರು ‘ವೈ’ ಎಂದು ಕೇಳಿದಾಗ ಆ ಪೊಲೀಸಿನವನು, ‘ಕಿಂಗ್‌ ಈಸ್‌ ಬ್ರೇಯಿಂಗ್‌ ಇನ್‌ ಸೈಡ್‌’ ಎಂದನಂತೆ. ಅದಕ್ಕೆ ಅವರು, ‘ಇಫ್‌ ದ ಕಿಂಗ್‌ ಕ್ಯನ್‌ ಬ್ರೇ ಇನ್‌ ಸೈಡ್‌, ಐ ಕ್ಯನ್‌ ಬಾರ್ಕ್‌ ಔಟ್‌ ಸೈಡ್‌ ಹಿಯರ್‌’ ಎಂದರಂತೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+