ಬಂದ್ ದಿನ ನೀವೇನ್ ಮಾಡಿದಿರಿ?
;?
ಅಂತೂ ಈ ಬಂದ್‌ನಿಂದ ಒಳ್ಳೆಯದೇ ಆಯ್ತು ಅನ್ನಿ. ಕನ್ನಡ ಹೋರಾಟದ ಒಂದು ಭಾಗವಾದ ಬುಧವಾರದ ಬಂದ್ ನಾನು ಮಾಡಲಾಗದೇ ಇದ್ದ ಕೆಲಸಗಳನ್ನು ಮಾಡಿ ಮುಗಿಸಲು ಅನುವು ಮಾಡಿಕೊಟ್ಟಿತು. ಇಂಥ ಬಂದ್‌ಗಳು ವರ್ಷಕ್ಕೊಮ್ಮೆ ಬರಬಾರದಾ ಸಾರ್!
- ವೀಣಾ ಶಿವಣ್ಣ, ಬೆಂಗಳೂರು
[email protected]
ನಿಮಗೆ ಹೇಗನ್ನಿಸಿತು ಬುಧವಾರದ ಕರ್ನಾಟಕ ಬಂದ್? ಈ ಬಾರಿ ಬೆಂಗಳೂರು ಬಂದ್ ತುಂಬಾ ಶಾಂತಿಯುತವಾಗಿತ್ತಲ್ಲ. ಕೆಲವರಿಗೆ ನೀರವ ಎನಿಸಿದರೆ ನನಗೆ ತಣ್ಣನೆಯ ಭಾವ ಉಕ್ಕಿಸಿತು. ಇಂಥ ಬೆಂಗಳೂರನ್ನು ನಾನು ನೋಡಿದ್ದು, ಅನುಭವಿಸಿದ್ದು ಇದೇ ಮೊದಲ ಬಾರಿ. ಅಪೂರ್ವ ಅನುಭವ ನೀಡಿದ ಕನ್ನಡ ಪ್ರಜ್ಞೆಗೆ ಅನಂತ ಧನ್ಯವಾದಗಳು.
ಬಂದ್ ಸಂದರ್ಭಗಳಲ್ಲಿ ತಲೆ ಎತ್ತುವ ಗಲಾಟೆ, ಲಾಠಿ ಪ್ರಹಾರ, ಸಾವು-ನೋವುಗಳ ಸುದ್ದಿ ಈ ಬಾರಿ ಇರಲಿಲ್ಲ. ಹಾಗೆ ನೋಡಿದರೆ ಇದು ಕೇವಲ ಬಂದ್ ಅಲ್ಲ ಶಾಮ್, ಗಾಂಧೀಜಿಯವರು ಹೇಳಿಕೊಟ್ಟಂತೆ ಸತ್ಯಾಗ್ರಹ!
ಈ ಬಗೆಯ ಸಾಮಾಜಿಕ ಚಳವಳಿಗಳಲ್ಲಿ ಕೆಲವು ಅನಿವಾರ್ಯ ನೋವುಗಳು ಇದ್ದೇ ಇರುತ್ತವೆ. ಕೊಡು-ಕೊಳ್ಳುವುದನ್ನೇ ನಂಬಿಕೊಂಡ ಆರ್ಥಿಕ ವ್ಯವಸ್ಥೆ ಒಂದು ದಿನ ಗಕ್ಕನೆ ನಿಂತುಬಿಟ್ಟರೆ ಉಂಟಾಗುವ ನಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ಕೂಲಿನಾಲಿ ಮಾಡಿಕೊಂಡು, ಆ ದಿನದ ಸಂಪಾದನೆಯನ್ನೇ ನಂಬಿಕೊಂಡು ಬದುಕುವವರ ಪಾಡನ್ನು ನಾನು ಬಣ್ಣಿಸಲಾರೆ. ಹೋಗಲಿ ಬಿಡಿ. ಬೆಳಗಾವಿಗೋಸ್ಕರ ಒಂದು ದಿವಸ ಕಷ್ಟಪಟ್ಟರೆ ಅದೇ ನಾವು-ನೀವು-ಅವರು ಮಾಡುವ ತ್ಯಾಗ. ಬೆಳಗಾವಿ ಕೂಡ ಇನ್ನೊಂದು ಬೆಂಗಳೂರು ತಾನೆ?
ನಿಜ ಹೇಳ್ತೀನಿ. ಬಂದ್ ದಿನ ಮನೆಯಲ್ಲಿ ನಾನು ಆರಾಮಾಗಿದ್ದೆ. ಸ್ನೇಹಿತರು ಮತ್ತು ನೆಂಟರ ಮನೆಗೆ ಹೋಗಿ ಬರಲು ಸಾಧ್ಯವಾದದ್ದು ಖುಷಿಕೊಟ್ಟಿತು. ಒಬ್ಬರು ಸಂಬಂಧಿಕರ ಮನೆಗೆ ಭೇಟಿಕೊಡುವುದು ನಾಲ್ಕು ವರ್ಷದಿಂದ ಬಾಕಿ ಉಳಿದಿತ್ತು. ಇವತ್ತು ಹೋಗೋಣ, ನಾಳೆ ಹೋಗೋಣ ಅಂದುಕೊಳ್ಳುತ್ತಲೇ ವರ್ಷಗಳು ಉರುಳಿದ್ದವು. ಏನಾದರೂ ಒಂದು ಅಡ್ಡ ಬಂದೇ ಬರುತ್ತದೆ ನೋಡಿ. ಸಿನಿಮಾ, ನಾಟಕ, ಹೋಟಲ್ ಊಟ, ತುರ್ತು ಕೆಲಸ, ಮನೆ ಕೆಲಸ ಒಂದಲ್ಲ ಒಂದು ಒತ್ತಡದಲ್ಲಿ ಸಿಲುಕಿ ನೋಡಲೇ ಬೇಕಾದವರನ್ನು ನೋಡಲಾಗುವುದಿಲ್ಲ, ಮಾಡಲೇ ಬೇಕಾದುದನ್ನು ಮಾಡಲಾಗುವುದಿಲ್ಲ.
ಅಂತೂ ಈ ಬಂದ್‌ನಿಂದ ಒಳ್ಳೆಯದೇ ಆಯ್ತು ಅನ್ನಿ. ಕನ್ನಡ ಹೋರಾಟದ ಒಂದು ಭಾಗವಾದ ಬುಧವಾರದ ಬಂದ್ ನಾನು ಮಾಡಲಾಗದೇ ಇದ್ದ ಕೆಲಸಗಳನ್ನು ಮಾಡಿ ಮುಗಿಸಲು ಅನುವು ಮಾಡಿಕೊಟ್ಟಿತು. ಇಂಥ ಬಂದ್‌ಗಳು ವರ್ಷಕ್ಕೊಮ್ಮೆ ಬರಬಾರದಾ ಸಾರ್!
ಹೊಸೂರು ರಸ್ತೆಯ ಟ್ರಾಫಿಕ್ ಯಾತನೆಗಳನ್ನು ಮರೆತು ನಾಲ್ಕುದಿನ ಹಾಯಾಗಿದ್ದೆ. ಮತ್ತೆ ಇವತ್ತು ಈ ರಸ್ತೆಗೆ ಧುಮುಕಿದ್ದೇನೆ. ಮನೆಯಲ್ಲಿ ಕುಳಿತು ಓದುವ, ಬರೆಯುವ , ಮನೆ ಸ್ವಚ್ಛ ಮಾಡುವ ಕೆಲಸಗಳು ಎಷ್ಟು ಹಿತವಾಗಿರುತ್ತೆ ಅಂತ ಅನಿಸಿ ಒಮ್ಮೊಮ್ಮೆ ಬೇಜಾರಾಗತ್ತೆ. ಆದರೇನು ಮಾಡಲಿ? ಬದುಕು ಎಲ್ಲೋ ಇದೆಯಲ್ಲ. ನಿಮಗೂ ಹೀಗೆ ಅನಿಸುತ್ತದಾ? ಏಕೆಂದರೆ, ನೀವೂ ಓದುವವರು, ಬರೆಯುವವರು, ಮನೆಗೆಲಸ ಮಾಡುವವರು ಮತ್ತು ಹೊಸೂರು ರಸ್ತೆಯಲ್ಲಿ ನೌಕರಿ ಮಾಡುವವರು!
ಸಮಗ್ರ ಚಿತ್ರ :
ಬೆಳಗಾವಿ ಗಡಿ-ಬಿಡಿ











Click it and Unblock the Notifications