ಕನ್ನಡಿಗರ ಕೋಮಲ ಭಾವನೆ ಕೆಣಕದಿರಿ ಎಸ್ಪಿಬಿ
ಅಂದೇಕೆ ಹಾರುವ ಬದಲು ಹಾಡುವ, ಏನನು ಬದಲು ಹೇನನು, ಏತಕೆ ಬದಲು ಹೇತಕೆ ಅಂತ ಹಾಡಿದ ಆಂಧ್ರದಿಂದ ಬಂದ ಆ ಗಾಯಕಿಯನ್ನು ಎಸ್ಪಿ ತಿದ್ದಲಿಲ್ಲ? ಅಲ್ಲಿ ಕುಳಿತಿದ್ದ ಅಚ್ಚ ಕನ್ನಡಿಗರಾದ ತೀರ್ಪುಗಾರರಿಗೇನಾಗಿತ್ತು?
ಅತ್ಯದ್ಭುತ ಗೀತೆಗಳಿಂದ ಮಾಗಿಯ ಚಳಿಯಲ್ಲೂ ಕನ್ನಡ ಚಿತ್ರರಸಿಕರಿಗೆ ಮೈಮನ ಬೆಚ್ಚಗಾಗಿಸಿದ್ದ ಚಿತ್ರ 'ಹೊಂಬಿಸಿಲು". ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗಬಹುದು ಆದರೆ ಜನಮಾನಸದಿಂದ ಈ ಚಿತ್ರದ ಹಾಡುಗಳು ಅಳಿಸಿ ಹೋಗಲು ಸಾಧ್ಯವೇ ಇಲ್ಲ.
ಎಸ್.ಜಾನಕಿಯ ಕಂಠದಿಂದ ಹೊರಹೊಮ್ಮಿದ್ದ 'ಹೂವಿಂದ ಹೂವಿಗೆ ಹಾರುವ ದುಂಬಿ" ಹಾಡು ಕೇಳಿದರೆ ಈಗಲೂ ಕಣ್ಣಂಚಿನಿಂದ ಸಂತಸದ ನೀರು ಜಿನುಗದಿದ್ದರೆ ಕೇಳಿ.
ಆ ಹಾಡಿನ ಪಲ್ಲವಿ ಹೀಗಿದೆ -
ಹೂವಿಂದ ಹೂವಿಗೆ ಹಾರುವ ದುಂಬಿ ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ ಏತಕೆ ಕಾಡುತಿಹೆ
ಇದೇ ಹಾಡನ್ನು ಹೀಗೆ ಹಾಡಿದರೆ ಹೇಗಿರತ್ತೆ -
ಹೂವಿಂದ ಹೂವಿಗೆ ಹಾಡುವ ದುಂಬಿ ಹೇನನು ಹಾಡುತಿಹೆ ನೀ ಹೇನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ ಹೇತಕೆ ಕಾಡುತಿಹೆ
ಕೇಳುಗರ ಭಾವನೆಗಳನ್ನು ಕಲಕಬೇಕಾಗಿದ್ದ ಈ ಹಾಡನ್ನು ಹಾಡಿ ಭಾವನೆಗಳನ್ನು ಕೆಣಕಿದ ಗಾಯಕಿ, ಸಂಗೀತ ಸ್ಪರ್ಧೆಯಲ್ಲಿ ವಿಜೇತೆ. ಕಾರ್ಯಕ್ರಮ - ಕನ್ನಡದ ಪುಟ್ಟ ಕಂದಮ್ಮಗಳು ಎದೆ ತುಂಬಿ ಹಾಡುವ 'ಎದೆ ತುಂಬಿ ಹಾಡುವೆನು". ಹಾಡಿದ್ದು ತೆಲುಗು ನಾಡಿನಿಂದ ಬಂದ ಪುಟ್ಟ ಬಾಲೆ. ಕಾರ್ಯಕ್ರಮದ ರೂವಾರಿ ಒನ್ಸ್ ಅಗೇನ್ ತಮ್ಮ ಕಂಠಮಾಧುರ್ಯದಿಂದ, ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡಿಗರ ಹೃದಯಕ್ಕೆ ಲಗ್ಗೆ ಹಾಕಿರುವ ಎಸ್ಪಿ ಬಾಲಸುಬ್ರಮಣ್ಯಂ!
ಕರ್ನಾಟಕದ ಮೂಲೆ ಮೂಲೆಯಿಂದ ಬರುವ ಪುಟ್ಟ ಬಾಲ ಬಾಲೆಯರು ಹೃದಯತುಂಬಿ ಹಾಡುವ ಈ ಕಾರ್ಯಕ್ರಮವನ್ನು ಕೇಳುವುದೇ ಚೆಂದ.
ಅಚ್ಚ ಕನ್ನಡ ಬರುತ್ತಿದ್ದರೂ ಪುಟಾಣಿಗಳು ಪದಗಳನ್ನು ಬಳಸುವಾಗ ಉಚ್ಛಾರದಲ್ಲಿ ಎಡುವುವುದು ಸಹಜ. ಎಸ್ಪಿ ಸಾಹೇಬರು ಅದನ್ನು ಅಷ್ಟೇ ಆಸ್ಥೆಯಿಂದ ತಿದ್ದಿ ಹೇಳುತ್ತಾರೆ. ಅವರ ಮಾರ್ಗದರ್ಶನದಲ್ಲಿ, ಅವರು ನೀಡುವ ಶಭಾಸ್‌ನಿಂದಾಗಿ ಈ ಮಕ್ಕಳು ಮುಂದೆ ಉತ್ತಮ ಗಾಯಕರಾಗುವುದರಲ್ಲಿ ಸಂದೇಹವೇ ಇಲ್ಲ. ಅವರನ್ನು ಪ್ರೋತ್ಸಾಹಿಸುತ್ತ, ಕಿಚಾಯಿಸುತ್ತ, ಮಕ್ಕಳೊಂದಿಗೆ ಮಕ್ಕಳಾಗುತ್ತ, ನಗುತ್ತ, ಅಳುತ್ತ ಎಲ್ಲರೊಂದಿಗೆ ಒಂದಾಗುವ ಎಸ್ಪಿಯನ್ನು ನೋಡುವುದೇ ಆನಂದ.
ಆದರೆ, ಅಂದೇಕೆ ಹಾರುವ ಬದಲು ಹಾಡುವ, ಏನನು ಬದಲು ಹೇನನು, ಏತಕೆ ಬದಲು ಹೇತಕೆ ಅಂತ ಹಾಡಿದ ಆಂಧ್ರದಿಂದ ಬಂದ ಆ ಗಾಯಕಿಯನ್ನು ಎಸ್ಪಿ ತಿದ್ದಲಿಲ್ಲ? ಆ ಮಗುವಿನ ಬಗ್ಗೆ ಯಾವುದೇ ಮತ್ಸರವಿಲ್ಲ. ಕನ್ನಡೇತರರು ಕನ್ನಡದಲ್ಲಿ ಹಾಡುವುದಕ್ಕೆ ನೀಡಿದ ಪ್ರೋತ್ಸಾಹ ಶ್ಲಾಘನೀಯ. ಆ ಗಾಯಕಿಗೆ ಕನ್ನಡ ಬರುವುದಿಲ್ಲವೆಂಬುದು ವೇದ್ಯವಾಗಿತ್ತು. ಆದರೆ, ಅಲ್ಲಿ ಕುಳಿತಿದ್ದ ಅಚ್ಚ ಕನ್ನಡಿಗರಾದ ತೀರ್ಪುಗಾರರಿಗೇನಾಗಿತ್ತು? ಕನ್ನಡವನ್ನು ಅಷ್ಟೊಂದು ಪ್ರೀತಿಸುವ ಎಸ್ಪಿಗೇನಾಗಿತ್ತು? ಅಥವ ತೀರ್ಪುಗಾರರು ತಮ್ಮ ತೀರ್ಪು ನೀಡಿದರೂ ಅಂತಿಮ ತೀರ್ಪು ಎಸ್ಪಿಯವರದೇನಾ?
ಆ ಗಾಯಕಿಗಿಂತ ಸುಶ್ರಾವ್ಯವಾಗಿ, ಅಚ್ಚ ಕನ್ನಡದಲ್ಲಿ, ಯಾವುದೇ ತಪ್ಪಿಲ್ಲದೇ ಹಾಡಿದ ಬಳ್ಳಾರಿಯಿಂದ ಬಂದ ಮತ್ತೋರ್ವ ಗಾಯಕಿಯ ಕಣ್ಣಂಚಿನಲ್ಲಿ ಜಿನುಗಿದ ನೀರು ಯಾರಿಗೂ ಕಾಣಲಿಲ್ಲ.
ಕನ್ನಡದ ಕಾರ್ಯಕ್ರಮದಲ್ಲಿ ಕನ್ನಡಿಗರನ್ನೇ, ಅದರಲ್ಲೂ ಅರ್ಹರನ್ನೇ ಪ್ರೋತ್ಸಾಹಿಸದಿದ್ದರೆ ಮುಂದೆ ಅವರು ಮತ್ತೊರ್ವ ಎಸ್ಪಿಯೋ, ಜಾನಕಿಯೋ ಆಗುವುದೆಂದು? ಅಥವ ಇಂಥ ಅನುಭವಗಳು, ಅವಮಾನಗಳು ಅವರನ್ನು ಆ ಎತ್ತರಕ್ಕೆ ಕೊಂಡೊಯ್ಯುತ್ತವೆಯೋ?
ಯಾರೂ ಪ್ರಶ್ನಾತೀತರಲ್ಲ. ಅಸಲಿಗೆ ಪ್ರಶ್ನಿಸುವವರೇ ಇಲ್ಲ. ಪ್ರಶ್ನಿಸಿದರೂ 'ಸ್ಟಾಪ್ ಧಿಸ್ ನಾನ್‌ಸೆನ್ಸ್" ಅನ್ನುವ ಮಂದಿಯೇ ಜಾಸ್ತಿ. ಇಂಥ ಪ್ರಶ್ನೆಗಳು ನಮ್ಮ ನಮ್ಮಲ್ಲಿ ಚರ್ಚಿತವಾದರೆ ಪ್ರಯೋಜನವಿಲ್ಲ. ಸಂಬಂಧಿಸಿದವರ ಕಿವಿಗೂ ಬೀಳಬೇಕು. ಅವರ ಶ್ರವಣಶಕ್ತಿ ಕಡಿಮೆಯಾಗಿದ್ದರೆ, ಕೂಗಿ ಕೂಗಿ ಹೇಳಬೇಕು. ನಮ್ಮ ಧ್ವನಿ ಎತ್ತರಿಸದಿದ್ದರೆ ಬೆಳಗಾವಿ ಮಹಾರಾಷ್ಟ್ರದ ಪಾಲಾಗಿರುತ್ತದೆ, ಪ್ರಶಸ್ತಿ ಆಂಧ್ರದ ಪಾಲಾಗಿರುತ್ತದೆ.
ಹೂವಿಂದ ಹೂವಿಗೆ ಹಾಡುವ ದುಂಬಿ ಹೇನನು ಹಾಡುತಿಹೆ ಎನ್ನುವುದೇ ಸರಿ ಎನ್ನುವ ಕನ್ನಡದ ಭಕ್ತರಿದ್ದರೆ ಅವರಲ್ಲಿ ನನ್ನ ಕ್ಷಮೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications