SSI ಮಂತ್ರಾ: ದಕ್ಷಿಣ ಏಷ್ಯಾದ ಮೊದಲ ಮೆಡಿಕಲ್ ರೋಬೋಟಿಕ್ಸ್ ಸರ್ಜರಿ ಸಿಸ್ಟಂ
ಬೆಂಗಳೂರು, ಜನವರಿ 20, 2021: ದಶಕಗಳ ಯಶಸ್ವಿ ರೊಬೊಟಿಕ್ ಶಸ್ತ್ರಚಿಕಿತ್ಸೆಗಳು ಜಾಗತಿಕವಾಗಿ ಲಕ್ಷಾಂತರ ರೋಗಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದರೂ, ಇದರ ಪ್ರಯೋಜನ ಪಡೆಯಲಾಗದವರ ಸಂಖ್ಯೆಯೂ ದೊಡ್ಡದಿದೆ.
ಇದನ್ನು ಸವಾಲಾಗಿ ತೆಗೆದುಕೊಂಡು, ಕನಿಷ್ಠ ಆಕ್ರಮಣಶೀಲ ರೊಬೊಟಿಕ್ ಶಸ್ತ್ರಚಿಕಿತ್ಸಾ ಪರಿಹಾರಗಳನ್ನು ನೀಡುವ ದೃಷ್ಟಿಯೊಂದಿಗೆ, ಡಾ. ಸುಧೀರ್ ಪಿ. ಶ್ರೀವಾತ್ಸವ ಮತ್ತುಅವರ ತಂಡ ಎಸ್‍ಎಸ್‍ಐ ಮಂತ್ರ (ಮಲ್ಟಿ-ಆರ್ಮ್ ನೋವೆಲ್‍ಟೆಲಿ ರೋಬೋಟಿಕ್ ಅಸಿಸ್ಟೆನ್ಸ್) ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆ, ನವದೆಹಲಿಯಲ್ಲಿಇಂದು ನೇರಪ್ರಸಾರದ ಪ್ರಾತ್ಯಕ್ಷಿಕೆಯ ಮೂಲಕ ಆರಂಭಿಸಿದ್ದಾರೆ.
ಈ ಉದ್ಘಾಟನಾಕಾರ್ಯಕ್ರಮ ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದ್ದಲ್ಲದೆ, ನೀತಿ ಆಯೋಗದ ಸಿಇಒ ಅಮಿತಾಭ್‍ಕಾಂತ್ ವೆಬ್- ಕಾನ್ಫರೆನ್ಸಿಂಗ್ ಮೂಲಕ ವೀಕ್ಷಿಸಿದರು.

"ರೊಬೊಟಿಕ್ಸ್, ಶಸ್ತ್ರಚಿಕಿತ್ಸೆಯ ಭವಿಷ್ಯವಾಗಿರುತ್ತದೆ, ಮತ್ತು ತಾಂತ್ರಿಕವಾಗಿ ಸುಧಾರಿತ ವ್ಯವಸ್ಥೆಯನ್ನುರಚಿಸುವುದು ನನ್ನಉದ್ದೇಶ. ಅದು ಕಡಿಮೆ ವೆಚ್ಚ, ಬಳಸಲು ಸುಲಭ ಮತ್ತುಎಲ್ಲಾ ವಿಶೇಷ ಶಸ್ತ್ರಚಿಕಿತ್ಸೆಗಳಿಗೂ ಅನ್ವಯಿಸಬಹುದು. ಈ ರೀತಿ ಅದು ವಿಶ್ವಾದ್ಯಂತ ಹೆಚ್ಚಿನ ರೋಗಿಗಳಿಗೆ ಪ್ರಯೋಜನ ನೀಡುವಂತಾಗಬೇಕು. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೊಬೊಟಿಕ್ ಶಸ್ತ್ರಚಿಕಿತ್ಸೆಯಲ್ಲಿಗಾಯದ ಪ್ರಮಾಣಕಡಿಮೆ. ನೋವು, ಗುರುತು ಕಡಿಮೆಯಿರುವುದರಿಂದ ತ್ವರಿತ ಚೇತರಿಸಿಕೊಳ್ಳಲು ಕಾರಣವಾಗುತ್ತದೆ''ಎನ್ನುತ್ತಾರೆ,
ಕನಿಷ್ಠ ಆಕ್ರಮಣಶೀಲ ಮತ್ತು ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆಯ ಪ್ರವರ್ತಕರಾದ ಡಾ. ಶ್ರೀವಾಸ್ತವ. ಅವರು ತಮ್ಮ ವೃತ್ತಿಜೀವನದ ವಿಸ್ತಾರದಲ್ಲಿ 1,400 ಕ್ಕೂ ಹೆಚ್ಚು ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಮಾಡಿದ್ದಾರೆ. ಶಸ್ತ್ರಚಿಕಿತ್ಸಕರಿಗೆ ಬಳಸಲು ಸುಲಭವಾದ ಮತ್ತು ವಿಶ್ವದಾದ್ಯಂತ ರೋಗಿಗಳಿಗೆ ಸುಲಭವಾಗಿ ಕೈಗೆಟುಕುವ ರೊಬೊಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆ ನಿರ್ಮಿಸುವುದು ಗುರಿಯಾಗಿದೆ.
ರಾಜೀವ್‍ಗಾಂಧಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‍ನಲ್ಲಿ ಮೊದಲ ಮಾನವ ಪೈಲಟ್ ಅಧ್ಯಯನಕ್ಕೆ ಮೊದಲ ಬಾರಿಗೆ ಮಂತ್ರ ವ್ಯವಸ್ಥೆಯನ್ನುಇತ್ತೀಚೆಗೆ ಬಳಸಲಾಗಿತ್ತು. ಅಲ್ಲಿ ಶಸ್ತ್ರಚಿಕಿತ್ಸಕರು 18 ಸಂಕೀರ್ಣ ಯುರಾಲಜಿ, ಸ್ತ್ರೀರೋಗ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಂದು ತಿಂಗಳೊಳಗೆ ಯಶಸ್ವಿಯಾಗಿ ಪೂರೈಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ, ಆರ್‍ಜಿಸಿಐ ವೈದ್ಯಕೀಯ ನಿರ್ದೇಶಕಡಾ. ಸುಧೀರ್ ರಾವಲ್,''ಎಸ್‍ಎಸ್‍ಇನ್ನೋವೇಶನ್ಸ್‍ನ ಬದ್ಧತೆಯುಳ್ಳ ಎಂಜಿನಿಯರ್‍ಗಳು ಮತ್ತು ವಿಜ್ಞಾನಿಗಳ ತಂಡ ಕಳೆದ ಕೆಲವು ವರ್ಷಗಳಿಂದ ಡಾ. ಶ್ರೀವಾಸ್ತವ ಅವರ ಮಾರ್ಗದರ್ಶನದಲ್ಲಿ ಶ್ರಮಿಸುತ್ತಿದ್ದು, ಕಡಿಮೆ ವೆಚ್ಚದರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ನಾನು ಅವರನ್ನುಅಭಿನಂದಿಸುತ್ತೇನೆ. ಕ್ಲಿನಿಕಲ್ ಪ್ರಯೋಗಗಳಲ್ಲಿ ನಾನೇ ಖುದ್ದಾಗಿ ತೊಡಗಿಸಿಕೊಂಡಿದ್ದೇನೆ, ಮತ್ತು ಫಲಿತಾಂಶಗಳು ಅದ್ಭುತವಾಗಿವೆ''.
ಯುರಾಲಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಸ್ತ್ರೀರೋಗ ಶಾಸ್ತ್ರ, ಎದೆಗೂಡು, ಹೃದಯ, ಮತ್ತು ತಲೆ ಮತ್ತು ಕುತ್ತಿಗೆ ಸೇರಿದಂತೆ ಎಲ್ಲಾ ಪ್ರಮುಖ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಎಸ್‍ಎಸ್‍ಐ ಮಂತ್ರ ರೊಬೊಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಕೊರೊನರಿ ಬೈಪಾಸ್ ಮತ್ತುಕವಾಟದ ಶಸ್ತ್ರಚಿಕಿತ್ಸೆಗಳಿಗೆ ಎಸ್‍ಎಸ್‍ಐ ಮಂತ್ರ ವ್ಯವಸ್ಥೆ ಹೆಚ್ಚುವರಿಯಾಗಿ ಹೆಚ್ಚು ಶಕ್ತ, ಸ್ವಯಂಚಾಲಿತ ತಂತ್ರಜ್ಞಾನಗಳನ್ನು ಹೊಂದಿರುತ್ತದೆ.(ಪ್ರಕಟಣೆ: SS Innovations)












Click it and Unblock the Notifications