ಕೂ ನಿಂದ ತಾಯಂದಿರ ದಿನ: #ಮುದ್ದುಅಮ್ಮಾ ಅಭಿಯಾನ

ಬೆಂಗಳೂರು, ಮೇ 8: ಕೂ ತಾಯಂದಿರ ದಿನವನ್ನು ಆಚರಿಸುವ ಮೂಲಕ #ಮುದ್ದುಅಮ್ಮಾ ಅಭಿಯಾನವನ್ನು ಪ್ರಾರಂಭಿಸಿದೆ.

ತಾಯಂದಿರ ಅಪರಿಮಿತ ಪ್ರೀತಿ, ವಾತ್ಸಲ್ಯ ಮತ್ತು ಆದರಗಳಿಗೆ ವಂದಿಸುತ್ತಾ, ಈ ತಾಯಂದಿರ ದಿನದಂದು ಕೂ ವೇದಿಕೆಯ ಮೂಲಕ ಈ ಹೊಸ ಅಭಿಯಾನವು ತಮ್ಮ ತಾಯಂದಿರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಳಕೆದಾರರನ್ನು ಪ್ರೇರೇಪಿಸುತ್ತದೆ - #ಮುದ್ದುಅಮ್ಮಾ.

ಅಭಿಯಾನವು (link to video) ತಾಯಂದಿರ ಸಮರ್ಪಣಾ ಭಾವ ಹಾಗು ಸಂಕಲ್ಪದ ಶಕ್ತಿಯನ್ನು ಸಾಕ್ಷೀಕರಿಸುತ್ತದೆ, ಏಕೆಂದರೆ ಅವರು ನಿರಂತರವಾಗಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮವನ್ನು ಉತ್ಸಾಹದಿಂದ ಸ್ವೀಕರಿಸುತ್ತಾರೆ, ಅವರ ಆಯ್ಕೆಯ ಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸುತ್ತಾರೆ ಮತ್ತು ಈ ಡಿಜಿಟಲ್ ಯುಗದಲ್ಲಿ ಸಮಾನ ಮನಸ್ಕ ಬಳಕೆದಾರರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಇದು ತಾಯಂದಿರನ್ನು ತಮ್ಮ ಮಕ್ಕಳು ಮತ್ತು ಅವರ ಸುತ್ತಲಿರುವವರ ಜೀವನಶೈಲಿಯನ್ನು ಅಭಿವೃದ್ಧಿಪಡಿಸುವ ಮೂಲಕ ಯೋಚಿಸಲೂ ಸಾಧ್ಯವಾಗದ್ದನ್ನು ಸಾಧಿಸಲು ಶ್ರಮಿಸುವ ಘನ ಶಕ್ತಿಯಾಗಿ ರೂಪುಗೊಳ್ಳುತ್ತದೆ.

ಭಾವುಕ ವೀಡಿಯೊದ ಜೊತೆಗೆ, ಕೂ ತಮ್ಮ ತಾಯಂದಿರ ಸಾಮಾಜಿಕ ಮಾಧ್ಯಮ ಪಯಣದ ಅನುಭವಗಳನ್ನು ಹಂಚಿಕೊಳ್ಳಲು ಬಳಕೆದಾರರನ್ನು ಆಹ್ವಾನಿಸುವ "ಮುದ್ದುಅಮ್ಮ" ಎಂಬ ಒಲವಿನ ಭಾವವನ್ನು ಉದ್ಗರಿಸಬಲ್ಲ ಆಕರ್ಷಕ ಸ್ಪರ್ಧೆಯನ್ನು ಸಹ ಘೋಷಿಸಿದೆ, ಬಳಕೆದಾರರು ಈಗಾಗಲೇ ತಮ್ಮ #ಮುದ್ದುಅಮ್ಮ ಹ್ಯಾಶ್ಟ್ಯಾಗ್ ಮೂಲಕ ಅವರ ಪ್ರೀತಿಯ ಕ್ಷಣಗಳನ್ನು ಮೀಮ್‌ಗಳು, ವೀಡಿಯೊಗಳು ಮತ್ತು ಪೋಸ್ಟ್‌ಗಳ ಮೂಲಕ ಸೃಜನಾತ್ಮಕವಾಗಿ ಕೂ ಮಾಡುತ್ತಿದ್ದಾರೆ. ಜನಪ್ರಿಯ ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು ತಮ್ಮ #ಮುದ್ದುಅಮ್ಮ ಭಾವವನ್ನು ಪ್ರದರ್ಶಿಸುವ ಮೂಲಕ ಈ ವಿಶಿಷ್ಟ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ, ಇದನ್ನು ಬಳಕೆದಾರರು ಕೂ ನಲ್ಲಿ ಪರಿಪೂರ್ಣವಾಗಿ ಆನಂದಿಸುತ್ತಿದ್ದಾರೆ. ಮೇ 9, 2022 ರವರೆಗೆ ನಡೆಯಲಿರುವ ಈ ಸ್ಪರ್ಧೆಯ ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳನ್ನೂ ನೀಡಲಾಗುತ್ತದೆ.

Koo Celebrates Mother’s Day, Launches #MummyYaar Campaign

ಕೂ ವಕ್ತಾರರು ಹೇಳುವಂತೆ, "ತಾಯಂದಿರ ದಿನವು ನಮ್ಮ ಪ್ರೀತಿಯ ತಾಯಂದಿರಿಗೆ ನಮ್ಮ ಅಪಾರ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಸುಸಂದರ್ಭವಾಗಿದೆ. ಸಾಮಾಜಿಕ ಮಾಧ್ಯಮವು ತಾಯಂದಿರ ಕಡೆಗೆ ಎಂದಿಗೂ ಹೆಚ್ಚು ಸ್ನೇಹಪರವಾಗಿಲ್ಲ ಎಂದು ನಾವು ಭಾವಿಸುತ್ತೇವೆ ಮತ್ತು ಕೂ ನಂತಹ ಸುರಕ್ಷಿತ ಮತ್ತು ಮೊದಲ ಬಳಕೆದಾರ ಸ್ನೇಹಿ ವೇದಿಕೆಯು ಅವರ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಅವರ ಆರಾಮದಾಯಕವೆನಿಸುವ ಭಾಷೆಯಲ್ಲಿ ಮತ್ತು ಅವರ ಆಯ್ಕೆಯ ವಿಷಯದ ಮೇಲೆ ಮುಕ್ತವಾಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ಲಕ್ಷಾಂತರ ತಾಯಂದಿರ ಮುಗ್ಧತೆ, ವಾತ್ಸಲ್ಯ, ಅಪರಿಮಿತ ಪ್ರೀತಿ ಮತ್ತು ಕೋಪವನ್ನು ಸಂಭ್ರಮಿಸುವ #ಮುದ್ದುಅಮ್ಮಾ ಅಭಿಯಾನದ ಮೂಲಕ ತಾಯ್ತನವೆಂಬ ಮೇರು ವ್ಯಕ್ತಿತ್ವಕ್ಕೆ ನಮಸ್ಕರಿಸಲು ನಾವು ಯೋಚಿಸಿದ್ದೇವೆ. ಈ ಅಭಿಯಾನದ ಮೂಲಕ, ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುತ್ತಿರುವ, ಸಾಮಾಜಿಕ ಮಾಧ್ಯಮವನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವ, ಹೊಸ ಕಾರಣಗಳಿಗಾಗಿ ಮತ್ತು ತಮ್ಮ ಸುತ್ತಮುತ್ತಲಿನವರನ್ನು ಸಾರ್ವಜನಿಕ ಒಳಿತಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪ್ರೇರೇಪಿಸುತ್ತಿರುವ ಎಲ್ಲ ತಾಯಂದಿರಿಗೆ ನಾವು ಹೃತ್ಪೂರ್ವಕ 'ಧನ್ಯವಾದ'ಗಳನ್ನು ಸಲ್ಲಿಸುತ್ತೇವೆ. ತಾಯ್ತನದ ಹಾದಿಯಲ್ಲಿರುವವರಿಗೆ ಹಾಗು ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು."

Koo Celebrates Mother’s Day, Launches #MummyYaar Campaign

ಕೂ ಬಗ್ಗೆ

ಕೂ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆಯನ್ನು ಮಾರ್ಚ್ 2020 ರಲ್ಲಿ ಭಾರತೀಯರು ತಮ್ಮ ಮಾತೃಭಾಷೆಯಲ್ಲಿಯೇ ಆನ್‌ಲೈನ್‌ನಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರಾರಂಭಿಸಲಾಯಿತು. ಕೂ ಭಾಷಾ ಆಧಾರಿತ ಮೈಕ್ರೋ-ಬ್ಲಾಗಿಂಗ್‌ನ ಆವಿಷ್ಕಾರಕವಾಗಿದ್ದು ಕೂ ಅಪ್ಲಿಕೇಶನ್‌ನ ಸ್ಮಾರ್ಟ್ ವೈಶಿಷ್ಟ್ಯಗಳು ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ - ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಕೂ ಅಪ್ಲಿಕೇಶನ್ ಭಾರತೀಯರ ಧ್ವನಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ ತಮ್ಮ ಆಲೋಚನೆಗಳನ್ನು ತಮ್ಮ ಆಯ್ಕೆಯ ಭಾಷೆಯಲ್ಲಿಯೇ ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುತ್ತದೆ.

ಕೂ ನಲ್ಲಿನ ನವೀನ ವೈಶಿಷ್ಟ್ಯಗಳಲ್ಲಿ, ವೇದಿಕೆಯ ಅನುವಾದ ವೈಶಿಷ್ಟ್ಯವು ಮೂಲ ಪಠ್ಯದ ಭಾವನೆ ಮತ್ತು ಸಂದರ್ಭಕ್ಕೆ ಧಕ್ಕೆ ಬಾರದಂತೆ ಮೂಲ ಅರ್ಥವನ್ನು ಉಳಿಸಿಕೊಂಡು ಭಾರತೀಯ ಭಾಷೆಗಳಾದ್ಯಂತ ಪೋಸ್ಟ್‌ನ ನೈಜ-ಸಮಯದ ಅನುವಾದಕ್ಕೆ ಅನುಕೂಲಕರವಾಗಿದೆ. ಇದು ಭಾಷೆಗಳಾದ್ಯಂತ ಜನರ ತಲುಪುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರಿಗೆ ಹೆಚ್ಚಿನ ಆಕರ್ಷಣೆಯನ್ನು ಒದಗಿಸುತ್ತದೆ. ಕೂ ಅಪ್ಲಿಕೇಶನ್ 30 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದಿದೆ, ರಾಜಕೀಯ, ಕ್ರೀಡೆ, ಮಾಧ್ಯಮ, ಮನರಂಜನೆ, ಆಧ್ಯಾತ್ಮಿಕತೆ ಮತ್ತು ಕಲೆ ಮತ್ತು ಸಂಸ್ಕೃತಿ ಸೇರಿದಂತೆ 7000 ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಭಾಷೆಯಲ್ಲಿ ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ವೇದಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+