18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಪ್ರಮುಖಾಂಶಗಳು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮೇ 1 ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಅತ್ಯಲ್ಪ ಅವಧಿಯಲ್ಲಿಯೇ ಗರಿಷ್ಠ ಸಂಖ್ಯೆಯ ಭಾರತೀಯರಿಗೆ ಲಸಿಕೆ ನೀಡುವುದನ್ನು ಖಾತ್ರಿಪಡಿಸಲು ಕಳೆದ ಒಂದೂವರೆ ವರ್ಷದಿಂದ ಸರ್ಕಾರ ಕಠಿಣ ಶ್ರಮಪಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ, ದಾಖಲೆಯ ವೇಗದಲ್ಲಿ ಜನರಿಗೆ ಲಸಿಕೆಯನ್ನು ಹಾಕುತ್ತಿದೆ ಮತ್ತು ಇನ್ನೂ ಹೆಚ್ಚಿನ ವೇಗದೊಂದಿಗೆ ಈ ಲಸಿಕೆ ನೀಡಿಕೆಯನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಮೂರನೇ ಹಂತದ ರಾಷ್ಟ್ರೀಯ ಲಸಿಕಾ ಕಾರ್ಯತಂತ್ರದಲ್ಲಿ ಉದಾರವಾಗಿ ಲಸಿಕೆ ದರ ನಿಗದಿ ಮತ್ತು ಲಸಿಕೆ ನೀಡಿಕೆ ವ್ಯಾಪ್ತಿಯನ್ನು ವೃದ್ಧಿಸುವ ಗುರಿ ಹೊಂದಲಾಗಿದೆ. ಇದರಿಂದ ಲಸಿಕೆ ಉತ್ಪಾದನೆ ವೃದ್ಧಿಯಾಗುವ ಜೊತೆಗೆ ಅದರ ಲಭ್ಯತೆ ಹೆಚ್ಚಾಗಲಿದೆ.

ಲಸಿಕೆ ಉತ್ಪಾದಕರಿಗೆ ಕ್ಷಿಪ್ರವಾಗಿ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ಸಿಗಲಿದೆ. ಜೊತೆಗೆ ಹೊಸದಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಲಸಿಕೆ ಉತ್ಪಾದಕರನ್ನು ಆಕರ್ಷಿಸಲು ಸಾಧ್ಯವಾಗಲಿದೆ.
ಇದರಿಂದಾಗಿ ಲಸಿಕೆ ಬೆಲೆ ನಿಗದಿ, ಖರೀದಿ, ಅರ್ಹತೆ ಮತ್ತು ಆಡಳಿತ ಮುಕ್ತ ಹಾಗೂ ಸರಳೀಕರಣಗೊಳ್ಳಲಿದ್ದು, ಎಲ್ಲಾ ಭಾಗೀದಾರರು ಉದಾರವಾಗಿ ಸ್ಥಳೀಯ ಅಗತ್ಯತೆಗಳು ಮತ್ತು ಕ್ರಿಯೆಗೆ ಅನುಗುಣವಾಗಿ ನಡೆದುಕೊಳ್ಳಲಿದ್ದಾರೆ.
2021ರ ಮೇ 1 ರಿಂದ ಜಾರಿಗೆ ಬರಲಿರುವ ಮೂರನೇ ಹಂತದ ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯಕ್ರಮದ ಪ್ರಮುಖಾಂಶಗಳು:
ಲಸಿಕಾ ಉತ್ಪಾದಕರು ಕೇಂದ್ರೀಯ ಔಷಧ ಪ್ರಯೋಗಾಲಯ(ಸಿಡಿಎಲ್) ಬಿಡುಗಡೆ ಮಾಡಲಾದ ತಮ್ಮ ತಿಂಗಳ ಉತ್ಪಾದನೆಯ ಶೇ.50ರಷ್ಟು ಡೋಸ್‌ಗಳನ್ನು ಭಾರತ ಸರ್ಕಾರಕ್ಕೆ ಪೂರೈಸಬೇಕು ಮತ್ತು ಉಳಿದ ಶೇ.50ರಷ್ಟು ಡೋಸ್ ಗಳನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡಲು ಸ್ವತಂತ್ರರು (ಇದನ್ನು ಮುಂದೆ ಭಾರತ ಸರ್ಕಾರದ ಮುಖಾಂತರವಲ್ಲದ ಎಂದು ಉಲ್ಲೇಖಿಸಲಾಗುವುದು)

ಲಸಿಕೆ ಉತ್ಪಾದಕರು 2021ರ ಮೇ 1ಕ್ಕೂ ಮುನ್ನ ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಗಳಿಗೆ ಪೂರೈಕೆ ಮಾಡಲಿರುವ ಶೇ.50ರಷ್ಟು ಡೋಸ್ ಗಳ ಬೆಲೆಯನ್ನು ಪಾರದರ್ಶಕವಾಗಿ ಮುಂಚಿತವಾಗಿಯೇ ಘೋಷಿಸಬೇಕು.
ಈ ಬೆಲೆಗಳನ್ನು ಆಧರಿಸಿ ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳು ಇತ್ಯಾದಿ ಉತ್ಪಾದಕರಿಂದ ಲಸಿಕೆ ಡೋಸ್ ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಖಾಸಗಿ ಆಸ್ಪತ್ರೆಗಳು ಭಾರತ ಸರ್ಕಾರದ ಮಾರ್ಗ ಹೊರತುಪಡಿಸಿ, ಶೇ.50ರಷ್ಟು ಪೂರೈಕೆಯಲ್ಲಿ ವಿಶೇಷವಾಗಿ ಕೋವಿಡ್-19 ಲಸಿಕೆಯನ್ನು ಖರೀದಿಸಬಹುದು. ಖಾಸಗಿ ಲಸಿಕೆ ಪೂರೈಕೆದಾರರು ಸ್ವಯಂ ಲಸಿಕೆ ಬೆಲೆಯನ್ನು ಘೋಷಿಸಬೇಕು.
ಈ ಮಾರ್ಗದ ಮೂಲಕ ಅರ್ಹತೆಗೆ ಎಲ್ಲ ವಯಸ್ಕರಿಗೂ ಲಸಿಕೆಗೆ ತೆರೆಯಲಾಗುವುದು ಅಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಅರ್ಹರು. ಲಸಿಕೆ ನೀಡಿಕೆ ಈ ಮೊದಲೇ ವ್ಯಾಖ್ಯಾನಿಸಿರುವಂತೆ ಆರೋಗ್ಯ ರಕ್ಷಣಾ ಕಾರ್ಯಕರ್ತರು(ಎಚ್ ಸಿ ಡಬ್ಲ್ಯೂ), ಮುಂಚೂಣಿ ಕಾರ್ಯಕರ್ತರು(ಎಫ್ ಎಲ್ ಡಬ್ಲ್ಯೂ) ಮತ್ತು 45 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಜನಸಂಖ್ಯೆಗೆ ಉಚಿತ ಲಸಿಕೆ ನೀಡುವುದು ಭಾರತ ಸರ್ಕಾರದ ಲಸಿಕೆ ಕೇಂದ್ರಗಳಲ್ಲಿ ಮುಂದುವರಿಯಲಿದೆ.

ಎಲ್ಲ ಲಸಿಕೀಕರಣ ಪ್ರಕ್ರಿಯೆ(ಭಾರತ ಸರ್ಕಾರದ ಮೂಲಕ ಮತ್ತು ಭಾರತ ಸರ್ಕಾರವನ್ನು ಹೊರತುಪಡಿಸಿದಂತೆ) ರಾಷ್ಟ್ರೀಯ ಲಸಿಕೆ ನೀಡಿಕೆ ಪ್ರಕ್ರಿಯೆಯ ಭಾಗವಾಗಿರಲಿದೆ ಮತ್ತು ಕೋವಿನ್ ವೇದಿಕೆಯಲ್ಲಿ ಮಾಹಿತಿ ಒದಗಿಸುವುದು, ಎಇಎಫ್ಐ ವರದಿ ಸಂಯೋಜನೆ ಮತ್ತು ಇತರೆ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಶಿಷ್ಟಾಚಾರಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಪ್ರತಿ ಲಸಿಕೆಯ ಬೆಲೆ ಮತ್ತು ಲಭ್ಯವಿರುವ ಲಸಿಕೆ ಸಂಗ್ರಹದ ಬಗ್ಗೆ ಕಾಲಕಾಲಕ್ಕೆ ನೈಜ ಮಾಹಿತಿಯನ್ನು ಒದಗಿಸಬೇಕು.
ಭಾರತ ಸರ್ಕಾರಕ್ಕೆ ಶೇ.50ರಷ್ಟು ಲಸಿಕೆ ಪೂರೈಕೆ ಮತ್ತು ಭಾರತ ಸರ್ಕಾರ ಹೊರತುಪಡಿಸಿ ಇತರೆಯವರಿಗೆ ಶೇ.50ರಷ್ಟು ಲಸಿಕೆ ಪೂರೈಕೆ ನಿಯಮ ದೇಶಾದ್ಯಂತ ಎಲ್ಲಾ ಲಸಿಕಾ ಉತ್ಪಾದಕರಿಗೆ ಏಕರೂಪವಾಗಿ ಅನ್ವಯವಾಗಲಿದೆ. ಆದರೆ ಭಾರತ ಸರ್ಕಾರ ಬಳಕೆಗೆ ಸಿದ್ಧವಾಗಿರುವ ಆಮದು ಮಾಡಿಕೊಂಡ ಲಸಿಕೆಯನ್ನು ಭಾರತ ಸರ್ಕಾರದ ಮಾರ್ಗದ ಹೊರತುಪಡಿಸಿ ಇತರೆ ಬಳಕೆಗೆ ಅವಕಾಶವಿದೆ.
ಭಾರತ ಸರ್ಕಾರ ತನ್ನ ಪಾಲಿನಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಸೋಂಕಿನ ತೀವ್ರತೆ (ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ) ಮತ್ತು ಸಾಧನೆ(ಲಸಿಕ ಆಡಳಿತದ ವೇಗ) ಆಧರಿಸಿ ಲಸಿಕೆಯನ್ನು ಹಂಚಿಕೆ ಮಾಡಲಿದೆ. ನಷ್ಟವಾಗುವ ಲಸಿಕೆಗಳನ್ನೂ ಸಹ ಮಾನದಂಡಕ್ಕೆ ಪರಿಗಣಿಸಲಾಗುವುದು ಮತ್ತು ಅದು ಮಾನದಂಡಕ್ಕೆ ನಕಾರಾತ್ಮಕ ಪರಿಣಾಮ ಬೀರಲಿದೆ.
ಈ ಮೇಲಿನ ಮಾನದಂಡದೊಂದಿಗೆ ರಾಜ್ಯವಾರು ಕೋಟಾ ನಿಗದಿಪಡಿಸಲಾಗುವುದು ಮತ್ತು ರಾಜ್ಯಗಳಿಗೆ ಮುಂಚಿತವಾಗಿಯೇ ಅದರ ಮಾಹಿತಿ ನೀಡಲಾಗುವುದು. ಎಲ್ಲಾ ಹಾಲಿ ಆದ್ಯತಾ ಗುಂಪುಗಳು ಅಂದರೆ ಎಚ್ ಸಿಡಬ್ಲ್ಯೂ, ಎಫ್ಎಲ್ ಡಬ್ಲ್ಯೂ ಮತ್ತು 45 ವರ್ಷ ಮೇಲ್ಪಟ್ಟ ಜನಸಂಖ್ಯೆ ಯಾರು ಎರಡನೇ ಡೋಸ್ ಪಡೆಯುವುದು ಬಾಕಿ ಇದೆಯೋ ಅಂತಹವರಿಗೆ ಆದ್ಯತೆ ನೀಡಲಾಗುವುದು. ಅದಕ್ಕೆ ನಿರ್ದಿಷ್ಟ ಮತ್ತು ಕಾರ್ಯತಾಂತ್ರಿಕ ವಿಧಾನವನ್ನು ಎಲ್ಲಾ ಸಂಬಂಧಿಸಿದವರಿಗೆ ತಿಳಿಸಲಾಗುವುದು. ಈ ನೀತಿ 2021ರ ಮೇ 1 ರಿಂದ ಜಾರಿಗೆ ಬರಲಿದೆ ಹಾಗು ಅದನ್ನು ಕಾಲ ಕಾಲಕ್ಕೆ ಪುನರ್ ಪರಿಶೀಲನೆ ಮಾಡಲಾಗುವುದು.(ಮಾಹಿತಿ ಕೃಪೆ: ಆರೋಗ್ಯ ಇಲಾಖೆ)












Click it and Unblock the Notifications