ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಕಿಸ್ ಆಫ್ ಲವ್ ನಾಯಕಿ
ಕೊಚ್ಚಿ, ನವೆಂಬರ್. 18: ಆನ್ ಲೈನ್ ವೇಶ್ಯಾವಾಟಿಕೆ ಜಾಲ ಮತ್ತು ಮಕ್ಕಳ ಮಾರಾಟಕ್ಕೆ ಸಂಬಂಧಿಸಿ ಕೇರಳ ಪೊಲೀಸರು ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ಕಿಸ್ ಆಫ್ ಲವ್ ಅಭಿಯಾನದಲ್ಲಿ ಕಾಣಿಸಿಕೊಂಡಿದ್ದ ರೇಶ್ಮಿ ಆರ್ ನಾಯರ್ ಅವರನ್ನು ಬಂಧಿಸಿದ್ದಾರೆ.
ಆಪರೇಶನ್ ಬಿಗ್ ಡ್ಯಾಡಿ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಡುಂಬಸಿರಿಯ ಯುವ ಜೋಡಿ ಸೇರಿದಂತೆ ಎಂಟು ಜೊಡಿ ಯುವಕ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಕೇರಳವನ್ನು ನಡುಗಿಸಿದ್ದ ಗ್ಯಾಂಗ್ ಸ್ಟರ್ ಕಾಸರಗೋಡು ನಿವಾಸಿ ಅಕ್ಬರ್ ನನ್ನು ಸಹ ಪೊಲೀಸರು ಬಂಧನ ಮಾಡಿದ್ದಾರೆ.[ಕಿಸ್ ಆಫ್ ಲವ್ ಎಂದರೇನು]
ಎರ್ನಾಕುಲಂ ಎಸ್ಪಿ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ. ಫೇಸ್ ಬುಕ್ ನ 'ಕೊಚು ಸುಂದರಿಕಲ್' ಪೇಜ್ ನ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದ ಬರಹಗಳು ಮತ್ತು ಮಕ್ಕಳ ಕುರಿತ ಕೆಲ ಅಶ್ಲೀಲ ಬರಹಗಳನ್ನು ಪತ್ತೆ ಮಾಡಿದ್ದಾರೆ. ನಿಖರ ಮಾಹಿತಿ ಕಲೆ ಹಾಕಿ ಹೊರ ರಾಜ್ಯಗಳಿಂದ ಬಾಲಕಿಯರನ್ನು ಕರೆ ತರುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.[ರಾಸಲೀಲೆಗೆ ಪಲ್ಲಂಗವಾದ ಕೇರಳ ಬೋಟ್ ಹೌಸ್]

ಡಿಲೀಟ್ ಆಗಿದ್ದ ಪೇಜ್!
ಮಾನವ ಹಕ್ಕು ಆಯೋಗ ಮತ್ತು ಕೇರಳ ಮಕ್ಕಳ ಕಲ್ಯಾಣ ಇಲಾಖೆ ಆದೇಶದಂತೆ 'ಕೊಚು ಸುಂದರಿಕಲ್' ಪೇಜ್ ನ್ನು ಒಮ್ಮೆ ಡಿಲೀಟ್ ಮಾಡಲಾಗಿತ್ತು. ಆದರೆ ಕೆಲ ದಿನಗಳ ನಂತರ ಮತ್ತೆ ಪೇಜ್ ತೆರೆದುಕೊಂಡಿತ್ತು.

ಕಣ್ಣಿಟ್ಟ ಪೊಲೀಸರು
ಇದೆಲ್ಲವನ್ನು ಗಮನಿಸುತ್ತಿದ್ದ ಪೊಲೀಸರು ಈ ಪೇಜ್ ನ ಮೂಲಕವೇ ಮಕ್ಕಳ ಮಾರಾಟ ನಡೆಯುತ್ತಿದ್ದು ಅವರನ್ನುನ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲಾಗುತ್ತಿದೆ ಎಂಬ ಸಂಗತಿಯನ್ನು ಪತ್ತೆಹಚ್ಚಿದರು.

ಕಿಸ್ ಆಫ್ ಲವ್ ಲೀಡರ್
ಬಂಧನಕ್ಕೆ ಒಳಗಾದ ಮಾಡೆಲ್ ರೇಶ್ಮಿ ಕಳೆದ 2014 ರಲ್ಲಿ ಸದ್ದು ಮಾಡಿದ್ದ 'ಕಿಸ್ ಆಫ್ ಲವ್' ಅಭಿಯಾನದಲ್ಲಿ ಕಾಣಿಸಿಕೊಂಡಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಲ್ಲಿ ಸಾರ್ವಜನಿಕವಾಗಿ ಸಮುದ್ರ ತೀರದಲ್ಲಿ ಪರಸ್ಪರ ಚುಂಬಿಸಲು ವೇದಿಕೆ ಸಿದ್ಧಮಾಡಲಾಗಿತ್ತು. ಆದರೆ ಪೊಲೀಸರು ಕಾರ್ಯಕ್ರಮಕ್ಕೆ ತಡೆ ಒಡ್ಡಿದ್ದರು.

ಬೆಂಗಳೂರಿಗೂ ಬಂದಿದ್ದ ಕಿಸ್ ಆಫ್ ಲವ್
ನೈತಿಕ ಪೊಲೀಸ್ ಗಿರಿಯನ್ನು ವಿರೋಧ ಮಾಡುವ ಹೆಸರಿನಲ್ಲಿ ಆರಂಭವಾದ ಕಿಸ್ ಆಫ್ ಲವ್ ನಂತರ ವಿವಿಧ ಆಯಾಮ ಪಡೆದುಕೊಂಡಿತು. ಕಿಸ್ ಇನ್ ಸ್ಟ್ರೀಟ್ ಎಂಬ ಹೊಸ ಅಭಿಯಾನವನ್ನು ಶುರುವಿಟ್ಟುಕೊಳ್ಳಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಪೊಲೀಸರು ಆಚರಣೆಗೆ ಅವಕಾಶ ನೀಡಿರಲಿಲ್ಲ. ಅಲ್ಲದೇ ಕೆಲಸ ಸಂಘಟಡನೆಗಳು ಇಂಥ ಆಚರಣೆಯನ್ನು ತೀವ್ರವಾಗಿ ವಿರೋಧ ಮಾಡಿದ್ದರು.












Click it and Unblock the Notifications