ಭಾರತದಿಂದ ವಿಶ್ವಕ್ಕೆ: ವರ್ಸ್‌ ಇನ್ನೋವೇಶನ್‌ನಿಂದ ಜಾಗತಿಕ ಎಐ ಪ್ಲಾಟ್‌ಫಾರ್ಮ್ 'ಸ್ಪಾರ್ಕ್ ಸ್ಟೇಷನ್' ಬಿಡುಗಡೆ

ನವದೆಹಲಿ, ಆಗಸ್ಟ್ 29, 2026: ಭಾರತದ ಅತಿದೊಡ್ಡ ಸ್ಥಳೀಯ ಭಾಷಾ ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಹಾಗೂ ಡೈಲಿಹಂಟ್ ಮತ್ತು ಜೋಶ್ ಆ್ಯಪ್‌ಗಳ ಮಾತೃಸಂಸ್ಥೆಯಾದ ವರ್ಸ್‌ ಇನ್ನೋವೇಶನ್, ಇಂದು ಫಿಲ್ಮ್ ಎಕ್ಸ್‌ಪೋ 2026 ರಲ್ಲಿ 'ಸ್ಪಾರ್ಕ್ ಸ್ಟೇಷನ್' ಅನ್ನು ಬಿಡುಗಡೆ ಮಾಡಿದೆ. ಇದು ಕಂಟೆಂಟ್ ಕ್ರಿಯೇಟ್ ಮಾಡುವ ಆರಂಭದಿಂದ ಹಿಡಿದು ಅಂತಿಮ ಹಂತದವರೆಗಿನ ಕೆಲಸಗಳನ್ನು ಒಂದೇ ಕಡೆ ನಿರ್ವಹಿಸುವ 'AI ಕಂಟೆಂಟ್ ಆಪರೇಟಿಂಗ್ ಸಿಸ್ಟಮ್' ಆಗಿದೆ. ಇದು ವರ್ಸ್‌ ಸಂಸ್ಥೆಯ ಮೊದಲ ಜಾಗತಿಕ ಕೊಡುಗೆಯಾಗಿದ್ದು, ಕಂಪನಿಯು ಕೈಗೊಂಡಿರುವ ಅತಿದೊಡ್ಡ ಪ್ರಾಡಕ್ಟ್ ಯೋಜನೆಗಳಲ್ಲಿ ಒಂದಾಗಿದೆ.

'ಸ್ಪಾರ್ಕ್ ಸ್ಟೇಷನ್' ಕಂಟೆಂಟ್ ಕ್ರಿಯೇಟ್ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನ ಒಂದೇ ಕಡೆ ನಿರ್ವಹಿಸುವ ಎಐ ವೇದಿಕೆಯಾಗಿದೆ. ಸ್ಕ್ರಿಪ್ಟ್ ಬರೆಯುವುದರಿಂದ ಹಿಡಿದು ಕಾಸ್ಟಿಂಗ್, ಮ್ಯೂಸಿಕ್, ಎಡಿಟಿಂಗ್, ಸ್ಥಳಗಳ ಆಯ್ಕೆ, ವಸ್ತ್ರವಿನ್ಯಾಸ, ಸಂಗೀತ ಮತ್ತು ಸಂಭಾಷಣೆ, ಎಡಿಟಿಂಗ್, ಕ್ಯಾಪ್ಷನಿಂಗ್, ರೆಂಡರಿಂಗ್, ಜಾಹೀರಾತು ಫಾರ್ಮ್ಯಾಟ್‌ಗಳು ಹಾಗೂ ವಿತರಣೆಯವರೆಗಿನ ಎಲ್ಲ ಕೆಲಸಗಳನ್ನು ಇದು ಸುಲಭಗೊಳಿಸುತ್ತದೆ. ಇದು ಪ್ರತಿಯೊಂದು ಕೆಲಸಕ್ಕೂ ಸೂಕ್ತವಾದ ಎಐ ತಂತ್ರಜ್ಞಾನವನ್ನ ಬಳಸಿ ಗುಣಮಟ್ಟ ಕಾಯ್ದುಕೊಳ್ಳುತ್ತದೆ. ಇದು ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ: ಸ್ಪಾರ್ಕ್ ಸ್ಟೇಷನ್ 60-ಸೆಕೆಂಡುಗಳ ಬ್ರ್ಯಾಂಡ್ ಫಿಲ್ಮ್ ನಿರ್ಮಾಣ ವೆಚ್ಚವನ್ನು ₹10-25 ಲಕ್ಷದಿಂದ ₹50,000-₹75,000 ಕ್ಕೆ (ಶೇಕಡಾ 90 ರಷ್ಟು) ಇಳಿಸುತ್ತದೆ. ಹಾಗೆಯೇ, ವಾರಗಳ ಕಾಲ ತೆಗೆದುಕೊಳ್ಳುತ್ತಿದ್ದ ನಿರ್ಮಾಣದ ಸಮಯವನ್ನು ಕೇವಲ 24 ಗಂಟೆಗಳಿಗೆ ಇಳಿಸುತ್ತದೆ.

VerSe Innovation Launches Spark Station A Global AI Platform For Studios Brands And Creators

ಸ್ಪಾರ್ಕ್ ಸ್ಟೇಷನ್ ಪ್ರಮುಖವಾಗಿ ಮೂರು ಕ್ಷೇತ್ರಗಳಿಗಾಗಿ ನಿರ್ಮಿಸಲಾದ ಏಕೈಕ ಪ್ಲಾಟ್‌ಫಾರ್ಮ್‌:

* ಚಲನಚಿತ್ರ ನಿರ್ಮಾಪಕರು ಮತ್ತು ಪ್ರೊಡಕ್ಷನ್ ಹೌಸ್‌ಗಳಿಗೆ: ಇದು ಕಥೆ, ಸ್ಕ್ರಿಪ್ಟ್, ಕಾಸ್ಟಿಂಗ್, ಸ್ಥಳಗಳ ಆಯ್ಕೆ, ಸ್ಟೋರಿಬೋರ್ಡ್, ಸಂಗೀತ, ಎಡಿಟಿಂಗ್ ಮತ್ತು ರೆಂಡರಿಂಗ್‌ಗೆ ಸಹಾಯ ಮಾಡುತ್ತದೆ. ಜೊತೆಗೆ, ವೃತ್ತಿಪರ ಎಡಿಟಿಂಗ್ ತಂತ್ರಾಂಶಗಳಿಗೆ (NLE) ಸುಲಭವಾಗಿ ಎಕ್ಸ್‌ಪೋರ್ಟ್ ಮಾಡಲು ಅವಕಾಶ ನೀಡುವುದರಿಂದ, ಚಲನಚಿತ್ರ ನಿರ್ಮಾಪಕರು ಸಂಪೂರ್ಣ ನಿಯಂತ್ರಣವನ್ನ ತಮ್ಮಲ್ಲೇ ಉಳಿಸಿಕೊಳ್ಳಬಹುದು.

* ಬ್ರ್ಯಾಂಡ್‌ಗಳು, ವ್ಯಾಪಾರಗಳು, ಇ-ಕಾಮರ್ಸ್ ಮತ್ತು ಏಜೆನ್ಸಿಗಳಿಗೆ: ಇದು ಇಮೇಜ್, ವಿಡಿಯೋ, ಯುಜಿಸಿ ಹಾಗೂ ಜಾಹೀರಾತುಗಳನ್ನ ಸುಲಭವಾಗಿ ಕ್ರಿಯೇಟ್‌ ಮಾಡಲು ಸಹಾಯ ಮಾಡುತ್ತದೆ. ಉತ್ಪನ್ನಗಳ ಬೃಹತ್ ಕ್ಯಾಟಲಾಗ್ ಕ್ರಿಯೇಟಿವ್‌ಗಳನ್ನ ಹಾಗೂ ನೂರಾರು ಸ್ಥಳೀಯ ಮತ್ತು ಪ್ಲಾಟ್‌ಫಾರ್ಮ್‌ಗೆ ತಕ್ಕ ರೂಪಾಂತರಗಳನ್ನ ವಾರಗಳ ಬದಲಿಗೆ ಕೆಲವೇ ಗಂಟೆಗಳಲ್ಲಿ ತಯಾರಿಸಬಹುದು.

* ಕ್ರಿಯೇಟರ್‌ಗಳು ಮತ್ತು ಇನ್‌ಫ್ಲುಯೆನ್ಸರ್‌ಗಳಿಗೆ: ಇದು ಕ್ರೆಡಿಟ್‌ಗಳ ಆಧಾರದಲ್ಲಿ ಅತ್ಯುತ್ತಮ ಟೆಂಪ್ಲೇಟ್‌ಗಳನ್ನು ನೀಡುತ್ತದೆ ಹಾಗೂ ಪ್ರೊಡಕ್ಷನ್ ಸ್ಟುಡಿಯೋ ಮಟ್ಟದ ಉತ್ತಮ ಗುಣಮಟ್ಟದ ಕಂಟೆಂಟ್ ತಯಾರಿಸಲು ನೆರವಾಗುತ್ತದೆ.

ಸ್ಪಾರ್ಕ್ ಸ್ಟೇಷನ್ ಐದು ಪ್ರಮುಖ ವೈಶಿಷ್ಟ್ಯಗಳನ್ನ ಹೊಂದಿದೆ:

1. ಇದು ಬರಿ ಟೂಲ್ ಅಲ್ಲ, ಆಪರೇಟಿಂಗ್ ಸಿಸ್ಟಮ್: ಇದು ಕಂಟೆಂಟ್ ಕ್ರಿಯೇಟ್‌ ಮಾಡುವ ಪ್ರತಿಯೊಂದು ಹಂತವನ್ನೂ ಒಂದೇ ವ್ಯವಸ್ಥೆಯೊಳಗೆ ತರುತ್ತದೆ. ಕೇವಲ ಸಣ್ಣ ಸಣ್ಣ ತುಣುಕುಗಳನ್ನು ಮಾಡುವ ಇತರ ಪ್ಲಾಟ್‌ಫಾರ್ಮ್‌ಗಳಿಗಿಂತ ಭಿನ್ನವಾಗಿ, 'ಸ್ಪಾರ್ಕ್ ಸ್ಟೇಷನ್' ಸಂಪೂರ್ಣ ಮತ್ತು ಸ್ಥಿರವಾದ ಉತ್ತಮ ಗುಣಮಟ್ಟದ ಔಟ್‌ಪುಟ್‌ಗಳನ್ನು ನೀಡುತ್ತದೆ.

2. 5 ಅಂಶಗಳಲ್ಲಿ ನಿಖರವಾದ ಮುಂದುವರಿಕೆ: ಮುಖ, ಅಭಿವ್ಯಕ್ತಿ, ಉಡುಪು, ಸ್ಥಳ ಮತ್ತು ಪರಿಕರಗಳು ಇವುಗಳನ್ನು ಕೇವಲ ಒಂದು ಶಾಟ್‌ಗೆ ಸೀಮಿತಗೊಳಿಸದೆ, ಸಂಪೂರ್ಣ ಪ್ರೊಡಕ್ಷನ್‌ನಾದ್ಯಂತ ಒಂದೇ ರೀತಿ ಕಾಯ್ದುಕೊಳ್ಳಲಾಗುತ್ತದೆ. ಎಐ ವಿಡಿಯೋಗಳು ಇದುವರೆಗೆ ವೃತ್ತಿಪರ ಕೆಲಸಗಳಲ್ಲಿ ಹೆಚ್ಚಾಗಿ ಬಳಕೆಯಾಗದಿರಲು ಈ 'ಕಂಟಿನ್ಯುಯಿಟಿ' ಕೊರತೆಯೇ ಮುಖ್ಯ ಕಾರಣವಾಗಿತ್ತು. ಸ್ಪಾರ್ಕ್ ಸ್ಟೇಷನ್ ಈ ಐದೂ ಅಂಶಗಳಿಗೆ ಸರಿಯಾದ ಪರಿಹಾರ ಒದಗಿಸುತ್ತದೆ.

3. ಮಾಡಲ್-ಅಗ್ನೋಸ್ಟಿಕ್‌ ತಂತ್ರಜ್ಞಾನ: ಸ್ಪಾರ್ಕ್ ಸ್ಟೇಷನ್ ಪ್ರತಿಯೊಂದು ಕೆಲಸವನ್ನು ಮುಖ, ಜನಸಂದಣಿ, ಕ್ಯಾಮೆರಾ ಮೂವ್‌ಮೆಂಟ್, ಧ್ವನಿ ಅಥವಾ ಭಾಷೆಗೆ ಅದರಲ್ಲಿ ಉತ್ತಮವಾಗಿರುವ ಎಐ ಮಾಡೆಲ್‌ಗೆ ತಲುಪಿಸುತ್ತದೆ. ಪ್ರಮುಖ ಸಂಸ್ಥೆಗಳ ಹಲವು ಎಐ ಮಾಡೆಲ್‌ಗಳು ಒಂದೇ ವೇದಿಕೆಯಲ್ಲಿದ್ದು, ಪ್ರತಿಯೊಂದು ಕೆಲಸವೂ ಸೂಕ್ತವಾದ ಅತ್ಯುತ್ತಮ ಎಐ ಮಾಡೆಲ್ ಮೂಲಕವೇ ನೆರವೇರುತ್ತದೆ.

4. 60ಕ್ಕೂ ಹೆಚ್ಚು ಭಾಷೆಗಳಲ್ಲಿ ಉತ್ತಮ ಗುಣಮಟ್ಟ: ಇಲ್ಲಿ ಕೇವಲ ಪದಗಳು ಮಾತ್ರವಲ್ಲದೆ, ತುಟಿಗಳ ಚಲನೆ (lip-sync), ಭಾವನೆಗಳು ಮತ್ತು ಸ್ಥಳೀಯ ಆಡುಭಾಷೆಯ ಶೈಲಿಯೂ ಸಹಜವಾಗಿ ಮೂಡಿಬರುತ್ತವೆ. ಇದರಿಂದ ಆರು ವಾರಗಳ ಕಾಲ ಹಿಡಿಯುತ್ತಿದ್ದ ಸ್ಥಳೀಯ ಭಾಷಾಂತರದ ಕೆಲಸ ಈಗ ಕೇವಲ ಒಂದೇ ದಿನದಲ್ಲಿ ಮುಗಿಯುತ್ತದೆ.

5. ಕ್ರಿಯೇಟರ್‌ಗಳಿಂದ, ಕ್ರಿಯೇಟರ್‌ಗಳಿಗಾಗಿಯೇ ನಿರ್ಮಾಣ: ಚಲನಚಿತ್ರ, VFX, ಗೇಮಿಂಗ್ ಮತ್ತು AI ಸಂಶೋಧನಾ ಕ್ಷೇತ್ರದ ಪರಿಣಿತರ ತಂಡದಿಂದ ಇದು ವಿನ್ಯಾಸಗೊಂಡಿದೆ. ಪ್ರೀಮಿಯರ್, ಫೈನಲ್ ಕಟ್ ಮತ್ತು ಡಾವಿಂಚಿ ರಿಸಾಲ್ವ್ ಸಾಫ್ಟ್‌ವೇರ್‌ಗಳಿಗೆ ನೇರ ಎಕ್ಸ್‌ಪೋರ್ಟ್ ಮಾಡಲು ಅವಕಾಶ ನೀಡುತ್ತದೆ. ಸ್ಟುಡಿಯೋಗಳು ಬಹುಭಾಷಾ ಸಿನಿಮಾಗಳಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳುತ್ತಲೇ ವೃತ್ತಿಪರ ಎಡಿಟಿಂಗ್ ತಂತ್ರಾಂಶಗಳ ಜೊತೆ ಸುಲಭವಾಗಿ ಬಳಸಬಹುದು. ಬ್ರ್ಯಾಂಡ್‌ಗಳು ಕಡಿಮೆ ಸಮಯದಲ್ಲಿ ಅತ್ಯಂತ ವೇಗವಾಗಿ ಅಪರಿಮಿತ ಜಾಹೀರಾತುಗಳನ್ನು ನಿರ್ಮಿಸಬಹುದು. ಮತ್ತು ಏಜೆನ್ಸಿಗಳು ತಮ್ಮ ಕೆಲಸಗಳನ್ನು ವೇಗವಾಗಿ ಪೂರೈಸಬಹುದು. ಕ್ರಿಯೇಟರ್‌ಗಳು ಯಾವುದೇ ದುಬಾರಿ ಉಪಕರಣಗಳ ಹೂಡಿಕೆಯಿಲ್ಲದೆ ಸಂಪೂರ್ಣ ಸ್ಟುಡಿಯೋ ಸೌಲಭ್ಯವನ್ನು ಪಡೆಯಬಹುದು.

"ಸ್ಪಾರ್ಕ್ ಸ್ಟೇಷನ್ 'ವರ್ಸ್' ಸಂಸ್ಥೆಯ ಮೊದಲ ಜಾಗತಿಕ ಕೊಡುಗೆಯಾಗಿದ್ದು, ನಾವು ಕೈಗೊಂಡಿರುವ ಅತ್ಯಂತ ದೊಡ್ಡ ಪ್ರಾಡಕ್ಟ್ ಯೋಜನೆಯಾಗಿದೆ. ಈವರೆಗೆ ಹೆಚ್ಚಿನ ನಿರ್ಮಾಣ ವೆಚ್ಚದಿಂದಾಗಿ ಅನೇಕ ಕಥೆಗಳು ಸಿನಿಮಾವಾಗಲು ಸಾಧ್ಯವಾಗುತ್ತಿರಲಿಲ್ಲ. ಆ ಸಮಸ್ಯೆಯನ್ನು ನಾವೀಗ ನಿವಾರಿಸಿದ್ದೇವೆ. ಇದರಿಂದ ಕಂಟೆಂಟ್ ನಿರ್ಮಾಣ ಅಗ್ಗವಾಗುವುದು ಮಾತ್ರವಲ್ಲ, ಹಿಂದೆ ಮಾಡಲು ಸಾಧ್ಯವಿಲ್ಲದ ಕಂಟೆಂಟ್‌ಗಳನ್ನು ಕೂಡ ಸೃಷ್ಟಿಸಬಹುದು. ಕಳೆದ 6 ತಿಂಗಳುಗಳಿಂದ ಸ್ಪಾರ್ಕ್ ಸ್ಟೇಷನ್ ಅನ್ನು ಸಂಸ್ಥೆಯೊಳಗೆ ವ್ಯಾಪಕವಾಗಿ ಬಳಸಲಾಗಿದ್ದು, ಇದು ಅತ್ಯಂತ ವೇಗ ಹಾಗೂ ಹಣದ ಉಳಿತಾಯವನ್ನು ತಂದಿದೆ. ಇದು ಬರಿ ಪ್ರಯೋಗ ಹಂತದ ಪ್ಲಾಟ್‌ಫಾರ್ಮ್ ಅಲ್ಲ, ಈಗಾಗಲೇ ಬಳಕೆಯಲ್ಲಿದ್ದು ಆದಾಯ ತರುತ್ತಿದೆ," ಎಂದು ವರ್ಸ್ ಇನ್ನೋವೇಶನ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಉಮಂಗ್ ಬೇಡಿ ತಿಳಿಸಿದ್ದಾರೆ.

ಸ್ಪಾರ್ಕ್ ಸ್ಟೇಷನ್ ಮೂರು ಹಂತಗಳಲ್ಲಿ ಲಭ್ಯವಾಗಲಿದೆ: ಬೀಟಾ ಆಕ್ಸೆಸ್ (ಆಗಸ್ಟ್ 29), ಸಾರ್ವಜನಿಕ ಲಭ್ಯತೆ (ಅಕ್ಟೋಬರ್ 1), ಮತ್ತು ಎಂಟರ್‌ಪ್ರೈಸ್ API ಹಂತ (ನವೆಂಬರ್ 1). ಈ ಪ್ಲಾಟ್‌ಫಾರ್ಮ್ ಮುಂದಿನ 24 ತಿಂಗಳುಗಳಲ್ಲಿ $30+ ಮಿಲಿಯನ್‌ಗೂ ಅಧಿಕ ಹೂಡಿಕೆಯ ಬೆಂಬಲವನ್ನು ಹೊಂದಿದೆ. ಇದು GPU ಮೂಲಸೌಕರ್ಯ, ಸ್ವಾಮ್ಯದ AI ಆರ್ಕೆಸ್ಟ್ರೇಶನ್ ಮತ್ತು ಜಾಗತಿಕವಾಗಿ 100+ ಸ್ಟುಡಿಯೋಗಳು, 1,000+ ಬ್ರ್ಯಾಂಡ್‌ಗಳು ಹಾಗೂ ಸಾವಿರಾರು ಕ್ರಿಯೇಟರ್‌ಗಳಿಗೆ ಸೇವೆ ನೀಡುವ ಗುರಿಯನ್ನು ಹೊಂದಿದೆ. ಕ್ರಿಯೇಟರ್‌ಗಳಿಗಾಗಿ ಕ್ರೆಡಿಟ್ಸ್ ಮಾದರಿ, ಸ್ಟುಡಿಯೋಗಳು ಮತ್ತು ಬ್ರ್ಯಾಂಡ್‌ಗಳಿಗೆ ಸೀಟ್-ಆಧಾರಿತ SaaS ಮಾದರಿ ಹಾಗೂ ಎಂಟರ್‌ಪ್ರೈಸ್ ಲೈಸೆನ್ಸಿಂಗ್ ಜೊತೆಗೆ API ಸೌಲಭ್ಯಗಳನ್ನು ಇದು ಒಳಗೊಂಡಿದೆ.

ವರ್ಸ್ ಇನ್ನೋವೇಶನ್ ಕುರಿತು

ಡಿಜಿಟಲ್ ಅಸಮಾನತೆಯನ್ನು ತಂತ್ರಜ್ಞಾನದ ಮೂಲಕ ನಿವಾರಿಸುವುದೇ ವರ್ಸ್ ಇನ್ನೋವೇಶನ್ ಸಂಸ್ಥೆಯ ಮೂಲ ಉದ್ದೇಶ. ಪ್ರಾರಂಭದಿಂದಲೂ, ಇದು ಲಕ್ಷಾಂತರ ಜನರ ಕಂಟೆಂಟ್ ಅಗತ್ಯಗಳನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ತನ್ನ ವಿಶಿಷ್ಟ ಎಐ (AI) ಹಾಗೂ ಮಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಬಳಸಿ, ಪ್ರತಿಯೊಬ್ಬ ಬಳಕೆದಾರರ ಆಸಕ್ತಿಗೆ ತಕ್ಕಂತೆ ವೈಯಕ್ತಿಕಗೊಳಿಸಿದ (personalized) ಕಂಟೆಂಟ್ ಅನ್ನು ತಲುಪಿಸುತ್ತಿದೆ.

ವರ್ಸ್ ಇನ್ನೋವೇಶನ್ ಸಂಸ್ಥೆಯ ತಂತ್ರಜ್ಞಾನದಿಂದಾಗಿ ಇಂದು ಭಾರತದಾದ್ಯಂತ ಕೋಟ್ಯಂತರ ಜನರು 'ಡೈಲಿಹಂಟ್' ಮೂಲಕ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಕಂಟೆಂಟ್ ವೀಕ್ಷಿಸುತ್ತಿದ್ದಾರೆ. ದೇಶದ ಜನಪ್ರಿಯ ಕ್ರಿಯೇಟರ್ಸ್ ಆ್ಯಪ್ 'ಜೋಶ್' ಕೂಡ ಇದೇ ತಂತ್ರಜ್ಞಾನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಸಂಸ್ಥೆಯು NexVerse.ai, ಡೈಲಿಹಂಟ್ ಪ್ರೀಮಿಯಂ ಮತ್ತು ವರ್ಸ್ ಕೊಲ್ಯಾಬ್‌ನಂತಹ ಎಐ ಆಧಾರಿತ ಉತ್ಪನ್ನಗಳನ್ನು ಹೊಂದಿದೆ. ಇವೆಲ್ಲವೂ ಸೇರಿ ಭಾರತದ ಡಿಜಿಟಲ್ ರಂಗದಲ್ಲಿ ಕಂಟೆಂಟ್ ಮತ್ತು ಬ್ರ್ಯಾಂಡ್‌ಗಳ ಸಂವಹನ ಶೈಲಿಯನ್ನು ಬದಲಾಯಿಸುತ್ತಿವೆ.

ಭಾರತೀಯ ಕೇಂದ್ರಿತ ಆ್ಯಪ್‌ಗಳನ್ನು ಹೊಂದಿರು ಹೊಂದಿರುವ ವರ್ಸ್ ಇನ್ನೋವೇಶನ್, ಸ್ಥಳೀಯ ಭಾಷೆಗಳ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಮೊದಲ ಯುನಿಕಾರ್ನ್ (Unicorn) ಕಂಪನಿಯಾಗಿ ಹೊರಹೊಮ್ಮಿದೆ. ಸಿಪಿಪಿ ಇನ್ವೆಸ್ಟ್‌ಮೆಂಟ್ಸ್, ಒಂಟಾರಿಯೊ ಟೀಚರ್ಸ್ ಪೆನ್ಷನ್ ಪ್ಲಾನ್ (OTPP), ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿ (QIA), ಸಿಗುಲರ್ ಗಫ್, ಕಾರ್ಲೈಲ್ ಗ್ರೂಪ್, ಬೈಲಿ ಗಿಫೋರ್ಡ್, ಗೋಲ್ಡ್‌ಮನ್ ಸ್ಯಾಚ್ಸ್, ಗ್ಲೇಡ್‌ಬ್ರೂಕ್, ಫಾಲ್ಕನ್ ಎಡ್ಜ್ ಕ್ಯಾಪಿಟಲ್, ಆಲ್ಫಾವೇವ್, ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ, ಮ್ಯಾಟ್ರಿಕ್ಸ್ ಪಾರ್ಟ್‌ನರ್ಸ್ ಇಂಡಿಯಾ, ಗೂಗಲ್, ಮೈಕ್ರೋಸಾಫ್ಟ್, ಲೂಪಾ ಸಿಸ್ಟಮ್ಸ್, ಲಕ್ಸರ್ ಗ್ರೂಪ್, ಸೋಫಿನಾ, ಬಿ ಕ್ಯಾಪಿಟಲ್ ಗ್ರೂಪ್, IIFL, ಕೋಟಕ್, ಕ್ಯಾಟಮರನ್, ಬೇ ಕ್ಯಾಪಿಟಲ್, ಎಡೆಲ್ವೀಸ್ ಮತ್ತು ಒಮಿಡ್ಯಾರ್ ನೆಟ್‌ವರ್ಕ್ ಮುಂತಾದ ಪ್ರಮುಖ ಸಂಸ್ಥೆಗಳು ಇದರ ಹೂಡಿಕೆದಾರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+