ಎಲಾನ್ ಮಸ್ಕ್ ಹೇಳಿಕೆಗೆ ರಿಲಯನ್ಸ್ ಶೇರ್ 2.6% ಕುಸಿತ; ನಿಫ್ಟಿ 50 ಕೂಡ 384 ಪಾಯಿಂಟ್ ಡೌನ್

ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಷೇರುಗಳು ಇಂದು ಗುರುವಾರ (ಅ.8) ಸುಮಾರು ಶೇ. 2.6 ರಷ್ಟು ಕುಸಿತಗೊಂಡವು. ಷೇರುಪೇಟೆಯಲ್ಲಿ ಕಂಪನಿಯ ಮೌಲ್ಯದಲ್ಲಿ ಸುಮಾರು 5 ಬಿಲಿಯನ್ ಡಾಲರ್ ನಷ್ಟವಾಯಿತು. ಇದರಿಂದಾಗಿ 'ನಿಫ್ಟಿ 50' (Nifty 50) ಸೂಚ್ಯಂಕವು ಇಳಿಕೆಯಾಗಿದೆ. ಭಾರತದಲ್ಲಿ ಹೆಸರಿಸದ ಕೆಲವು "ಪ್ರಭಾವಿ ಉದ್ಯಮಿಗಳು" (oligarchs) ಸ್ಟಾರ್‌ಲಿಂಕ್ (Starlink) ಸೇವೆ ತಡೆಯುತ್ತಿದ್ದಾರೆ ಎಂದು ಎಲೋನ್ ಮಸ್ಕ್ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಷೇರು ಮಾರಾಟದ ಭರಾಟೆ ಚಟುವಟಿಕೆಗಳು ಗರಿಗೆದರಿದವು.

ಇನ್ನೂ ಬುಧವಾರದ ಷೇರು ಮಾರುಕಟ್ಟೆ ಮುಕ್ತಾಯ ಬಳಿಕ 22,603 ​​ಅಂಕಗಳಿಂದ ಪ್ರಮುಖ ಸೂಚ್ಯಂಕವು ಶೇ. 1.7 ರಷ್ಟು ಅಥವಾ ಸುಮಾರು 384 ಅಂಕಗಳಷ್ಟು ಇಳಿಕೆ ಆಯಿತು. ನಿಫ್ಟಿ 50 ಸೂಚ್ಯಂಕದಲ್ಲಿ ರಿಲಯನ್ಸ್ ಕಂಪನಿ ಷೇರುಗಳೇ ಶೇಕಡಾ 9% ಪಾಲು ಹೊಂದಿವೆ. ಈ ಕಾರಣದಿಂದಲೇ ಅಲ್ಪ ಇಳಿಕೆಯು ಭಾರಿ ಪ್ರಮಾಣದ ಕುಸಿತದಂತೆ ಭಾಸವಾಗಿದೆ. ಸುಮಾರು 53 ಅಂಕ ಕಡಿತಗೊಂಡಿದೆ. ಕಡಿತಗೊಳಿಸಿತು. ಅಂದರೆ ಗುರುವಾರದ ಒಟ್ಟು ಇಳಿಕೆಯ ಸುಮಾರು ಏಳನೇ ಒಂದು ಭಾಗದಷ್ಟಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಭಾರ್ತಿ ಏರ್‌ಟೆಲ್ ಕೂಡ ಇಳಿಮುಖದಲ್ಲೇ ವಹಿವಾಟು ನಡೆಸಿತು ಸೂಚ್ಯಂಕದಿಂದ ಸುಮಾರು 9 ಅಂಕ ಕಡಿತಗೊಳಿಸಿತು.ಎಲಾನ್ ಮಸ್ಕ್ ಹೇಳಿದ್ದೇನು?

Reliance Shares

ಸ್ಟಾರ್ ಲಿಂಕ್ ಅನ್ನು ಭಾರತದಲ್ಲಿ ತರಲು ಚಿಂತಿಸಿರುವ ಟೆಸ್ಲಾ ಕಂಪನಿ ಮಾಲೀಕ, ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು 'ಎಕ್ಸ್' (X) ನಲ್ಲಿ ಮಾಡಿದ್ದ ಪೋಸ್ಟ್ ಹೆಚ್ಚು ಚರ್ಚೆ ಆಗಿದೆ. "ಭಾರತೀಯ ಜನರ ಮೇಲೆ ತಮ್ಮ ಏಕಸ್ವಾಮ್ಯದ ಪ್ರಭಾವ ಮುಂದುವರಿಸುವ ಸಲುವಾಗಿ ಕೆಲವು ಪ್ರಭಾವಿ ಉದ್ಯಮಿಗಳು ಸ್ಟಾರ್‌ಲಿಂಕ್ ಇಂಟರ್ ನೆಟ್ ಸಂಪರ್ಕ ಆರಂಭಕ್ಕೆ ಅಡ್ಡಿ ಉಂಟು ಪಡಿಸುತ್ತಿದ್ದಾರೆ. "ಅವರು ಯಾರೆಂದು ನೀವು ಊಹಿಸಬಹುದು" ಎಂದು ಪರೋಕ್ಷವಾಗಿ ಕೆಲವರನ್ನು ಕುರಿತು ಹೇಳಿದರು. ಅವರಿಗೆ ಎದುರಾದ ಅಡ್ಡಿಯನ್ನು "ಭಾರತದ ಜನರ ವಿರುದ್ಧದ ಅಪರಾಧ" ಎಂದು ಬಣ್ಣಿಸಿದ್ದಾರೆ. ಆದರೆ ಅವರು ಹೆಸರು ಹೇಳುವ ಧೈರ್ಯ ಮಾಡಿಲ್ಲ.

ಮಸ್ಕ್ ಆರೋಪ ಬೆನ್ನಲ್ಲೆ ದೇಶದ ಸಂವಹನ ಸಚಿವಾಲಯವು ತಾರತಮ್ಯದ ವ್ಯವಸ್ಥೆಯ ಹೇಳಿಕೆ ನಿರಾಕರಿಸಿದೆ. "ಆಧಾರರಹಿತ ಮತ್ತು ತಪ್ಪು ತಿಳುವಳಿಕೆಯಿಂದ ಕೂಡಿದೆ" ಈ ರೀತಿ ಆರೋಪ ಮಾಡಲಾಗಿದೆ ಎಂದು ತಿಳಿಸಿದೆ. ಸ್ಟಾರ್‌ಲಿಂಕ್, ಜಿಯೋ ಸ್ಯಾಟಲೈಟ್ ಮತ್ತು ಭಾರ್ತಿ ಬೆಂಬಲಿತ ಒನ್‌ವೆಬ್ (OneWeb) ಎಲ್ಲವೂ ಪರವಾನಗಿಗಳನ್ನು ಹೊಂದಿವೆ. ಯಾವುದೇ ನೆಟ್ ವರ್ಕ್ ಭದ್ರತೆಗೆ ಸಂಬಂಧಿಸಿದಂತೆ ದೇಶದ ಸರ್ಕಾರದ, ಸಂಬಂಧಿಸಿದ ಇಲಾಖೆಯಿಂದ ಅನುಮೋದನೆ ಪಡೆಯಬೇಕಿದೆ. ಸುನಿಲ್ ಭಾರ್ತಿ ಮಿತ್ತಲ್ ಅವರು ಒನ್‌ವೆಬ್ ತನ್ನದೇ ಆದ ಅನುಮೋದನೆಗಳಿಗಾಗಿ ಕಾಯುತ್ತಿದೆ ಎಂದು ತಿಳಿಸಿದೆ. ಇತ್ತ ಈ ಬಗ್ಗೆ ಆಕಾಶ್ ಅಂಬಾನಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಜಿಯೋ: ಷೇರುಪೇಟೆ ಪ್ರವೇಶ ಮುನ್ನ ಈ ಬೆಳವಣಿಗೆ

ಜಿಯೋ ಪ್ಲಾಟ್‌ಫಾರ್ಮ್ಸ್‌ನ ಷೇರು ಪೇಟೆಗೆ ಕಾಲಿಡುವ (ಲಿಸ್ಟಿಂಗ್) ಮೊದಲೇ ನೆಟ್ ವರ್ಕ್ ಸಂಬಂಧಿ ಈ ಬೆಳವಣಿಗೆ ನಡೆದಿದೆ. ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್ಸ್ ಅನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲು ಸಿದ್ಧತೆ ನಡೆಸುತ್ತಿದೆ. ಇನ್ನೂ ಎಲಾನ್ ಮಸ್ಕ್ ಕುರಿತು ಕೆಲವರು ಪ್ರತಿಕ್ರಿಯಿಸಿದ್ದು, ಬ್ಲೂಮ್‌ಬರ್ಗ್ ವರದಿಯಂತೆ, ಕಂಪನಿಯು ಸುಮಾರು 114 ಬಿಲಿಯನ್ ಡಾಲರ್ ಮೌಲ್ಯ ನಿರೀಕ್ಷಿಸುತ್ತಿದೆ. ಜೂನ್‌ನಲ್ಲಿ ಕರಡು ಪ್ರಸ್ಪೆಕ್ಟಸ್ (ಮಾಹಿತಿ ಪತ್ರ) ಸಲ್ಲಿಸಿದಾಗ ಚರ್ಚಿಸಲಾದ 130 ಬಿಲಿಯನ್ ಡಾಲರ್‌ನಿಂದ 170 ಬಿಲಿಯನ್ ಡಾಲರ್ ವ್ಯಾಪ್ತಿಗಿಂತ ಇದು ಕಡಿಮೆ ಎನ್ನಲಾಗಿದೆ. ಜಿಯೋ ಮತ್ತು ಏರ್‌ಟೆಲ್ ಒಟ್ಟಾಗಿ ಭಾರತದ ಶೇ. 80 ಕ್ಕೂ ಹೆಚ್ಚು ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಸೇವೆ ಒದಗಿಸುತ್ತವೆ ಎಂಬುದು ವಿಶೇಷ.

ನೆಟ್‌ ವರ್ಕ್ ಗೆ ಸಂಬಂಧಿಸಿದ ಈ ಹೇಳಿಕೆಗಳು, ಹೊಸ ಬೆಳವಣಿಗೆಗಳಿಂದ ಷೇರುಪೇಟೆಯಲ್ಲಿ ಶೇ. 50.07 ರಷ್ಟು ಪ್ರವರ್ತಕರ (promoter) ಪಾಲು ಒಳಗೊಂಡಂತೆ ಅಂಬಾನಿ ಕುಟುಂಬದ ಷೇರುಗಳ ಮೌಲ್ಯವು ಅಂದಾಜು 21,200 ಕೋಟಿಯಷ್ಟು ಇಳಿಕೆ ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ದರ ಏರಿಕೆ, ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 104 ರ ಆಸುಪಾಸಿದೆ. ವಿದೇಶಿ ಹೂಡಿಕೆದಾರರ ಮಾರಾಟದಿಂದಾಗಿ ವ್ಯಾಪಕ ವಹಿವಾಟು ಮುಮದುವರಿದೆ ಎಂದು ಡೀಲರ್‌ಗಳು ತಿಳಿಸಿದರು.

ಐಟಿಸಿ, ಟೈಟಾನ್, ಪವರ್‌ಗ್ರಿಡ್, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಇಂಡಿಗೊ ಸೇರಿದಂತೆ ವಿವಿಧ ಖ್ಯಾತ ಕಂಪನಿಗಳ ಷೇರುಗಳು ಸೆನ್ಸೆಕ್ಸ್‌ನಲ್ಲಿ ಶೇಕಡಾವಾರು ರಿಲಯನ್ಸ್ ಗಿಂತ ಹೆಚ್ಚು ಕುಸಿತ ಕಂಡಿವೆ ಎಂಬುದನ್ನು ಮರೆಯುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+