ಸ್ನಾಯುಗಳನ್ನು ಸದೃಢಗೊಳಿಸುವ ಕುರಿತು..
ನಮ್ಮ ಮೂಳೆಗಳು ನಮ್ಮ ಪ್ರಮುಖ ಅಂಗಗಳನ್ನು ರಕ್ಷಿಸುತ್ತವೆ, ಅಂಗಾಂಗಗಳ ರಚನೆಗೆ ಸಹಾಯ ಮಾಡುತ್ತವೆ, ಕ್ಯಾಲ್ಸಿಯಂನ್ನು ಸಂಗ್ರಹಿಸಿ ಹಂಚಿಕೊಳ್ಳುತ್ತವೆ. ಮತ್ತು ನಮ್ಮ ಸ್ನಾಯುಗಳಿಗೆ ಆಧಾರವಾಗಿರುತ್ತವೆ. ಆ ಮೂಲಕ ನಾವು ಬಯಸಿದಂತೆ ನಮ್ಮ ಶರೀರವನ್ನು ಬಾಗಿಸಲು ಅನುವು ಮಾಡಿಕೊಡುತ್ತದೆ. ಮೂಳೆ ನಿರಂತರವಾಗಿ ಬದಲಾಗುತ್ತಿರುತ್ತದೆ ಮತ್ತು ಹಳೆಯ ಮೂಳೆ ಅಂಗಾಂಶವನ್ನು ಒಡೆಯುವ ಸಂದರ್ಭದಲ್ಲಿ ಹೊಸ ಮೂಳೆ ಅಂಗಾಂಶವು ಅಭಿವೃದ್ಧಿಗೊಳ್ಳುತ್ತದೆ.
ಹೀಗೆ ಒಂದಕ್ಕೊಂದು ಬೆಂಬಲವಾಗಿರುವ ಮೂಳೆ ಮತ್ತು ಸ್ನಾಯುಗಳು ನಮ್ಮ ಮಾಂಸಖಂಡಗಳ ಒಟ್ಟಾರೆ ರಚನೆಗೆ ಪೂರಕವಾಗಿವೆ. ಕಸರತ್ತಿನಲ್ಲಿ ತೊಡಗುವ ನಮ್ಮ ದೇಹದ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಹಾಗೂ ಖಾಯಿಲೆಗಳಿಗೆ ಮುನ್ನೆಚ್ಚರಿಕೆಯಂತೆ ನೀವು protein powder supplement ಅನ್ನು ಸೇವಿಸಬಹುದು. ಚಟುವಟಿಕೆಯಿಂದ ಕೂಡಿದ ನಮ್ಮ ದೇಹದ ಒಟ್ಟು ಆರೋಗ್ಯಕ್ಕೆ ಅಗತ್ಯವಾಗಿರುವ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಲೊಡಕು ಪ್ರೋಟೀನ್ ಅನ್ನು ಸೇವಿಸುವುದು ಅಗತ್ಯವಾಗಿದೆ.

ಜೀವನದ ಹಲವಾರು ಒತ್ತಡಗಳ ನಡುವೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾಳಜಿ ವಹಿಸಲೇಬೇಕಾಗುತ್ತದೆ. ನಿಮ್ಮ ಸ್ನಾಯುಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ನಿಮಗೆ ನಡೆಯಲು, ಓಡಲು, ನೆಗೆಯಲು, ವಸ್ತುಗಳನ್ನು ಎತ್ತಲು, ಕ್ರೀಡೆಗಳನ್ನು ಆಡಲು ಮತ್ತು ನೀವು ಮಾಡಲು ಇಷ್ಟಪಡುವ ಎಲ್ಲಾ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ನಿಮ್ಮ ಸ್ನಾಯುಗಳನ್ನು ಜೀವನದುದ್ದಕ್ಕೂ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಅಂತೆಯೇ, ಮೂಳೆಗಳು ಮತ್ತು ಸ್ನಾಯುಗಳ ಸರಿಯಾದ ಆರೈಕೆಯನ್ನು ನಿರ್ವಹಿಸಲು ವ್ಯಾಯಾಮ ಮತ್ತು ಒತ್ತಡರಹಿತ ಜೀವನಶೈಲಿ ಎಷ್ಟು ಮುಖ್ಯವೋ, ಪೌಷ್ಟಿಕಾಂಶಗಳನ್ನೊಳಗೊಂಡ ಆಹಾರ ಶೈಲಿಯೂ ಅಷ್ಟೇ ಮುಖ್ಯವಾಗಿದೆ. ದೇಹದಲ್ಲಿ ಸ್ವಾಭಾವಿಕವಾಗಿ ಕ್ರಿಯಾಟಿನ್ ಪೌಷ್ಟಿಕಾಂಶ ಉತ್ಪತ್ತಿಯಾಗುತ್ತದೆ. ಆದರೆ, ಹೆಚ್ಚಿನ ದೈಹಿಕ ಕೆಲಸದಲ್ಲಿ ತೊಡಗುವ ದೇಹಕ್ಕೆ ಇನ್ನು ಹೆಚ್ಚಿನ ಕ್ರಿಯಾಟಿನ್ ಬೇಕಾದ ಕಾರಣ ಕ್ರಿಯೇಟೈನ್ ಮೊನೊಹೈಡ್ರೇಟ್ ಅನ್ನು ಸೇವಿಸುವುದು ಉತ್ತಮ.
ದಿನ ನಿತ್ಯದ ಜೀವನದಲ್ಲಿ ವ್ಯಾಯಾಮಗಳಲ್ಲಿ ತೊಡಗುವಾಗ ನಾವು ಪೌಷ್ಠಿಕ ಆಹಾರಗಳಿಗೆ ಪೂರಕವಾಗಿ ದೇಹಕ್ಕೆ ಅಗತ್ಯವಾದ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಲು ಮರೆಯುತ್ತೇವೆ. ಅಥವಾ ಅದಕ್ಕೆ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ನಮ್ಮ ದೇಹದಲ್ಲಿ ಆರುನೂರಕ್ಕಿಂತಲೂ ಹೆಚ್ಚಿನ ಸ್ನಾಯುಗಳಿವೆ. ಅವುಗಳು ಆಹಾರವನ್ನು ಜೀರ್ಣಗೊಳಿಸುವುದರಿಂದ ಹಿಡಿದು ನಾವು ಕರಾರುವಕ್ಕಾಗಿ ಚಲಿಸುವವರೆಗೆ ನಮ್ಮ ದೇಹದ ಹಲವಾರು ಕೆಲಸಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ನಮ್ಮ ಸ್ನಾಯುಗಳ ಆರೋಗ್ಯಕ್ಕೆ ಮತ್ತು ಬಲವರ್ಧನೆಗೆ ವ್ಯಾಯಾಮದ ಜೊತೆಗೆ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಕಿದೆ. ಈ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ನಮ್ಮ ಮಾಮೂಲಿ ಆಹಾರ ಸೇವನೆಯಿಂದ ಬೇಕಾದಷ್ಟು ದೊರೆಯದ ಕಾರಣ ನಾವು ಪ್ರೋಟೀನ್‌ಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಪ್ರೋಟೀನ್ ಜೊತೆಗೆ, ಅದಕ್ಕೆ ಪೂರಕವಾದ ಸಪ್ಲಿಮೆಂಟ್‌ಗಳನ್ನು ತೆಗೆದಕೊಳ್ಳಬೇಕಾದ ಅವಶ್ಯಕತೆಯೂ ಇದೆ.
ವ್ಯಾಯಾಮದಿಂದ ಸ್ನಾಯುಗಳಲ್ಲಿ ಆಗುವ ಬದಲಾವಣೆಗಳೇನು?
ವ್ಯಾಯಾಮವು ದೇಹದ ಸಮತೋಲನವನ್ನು ಹಲವು ರೀತಿಯಲ್ಲಿ ಏರುಪೇರಾಗಿಸುತ್ತದೆ. ಈ ಹಲವು ಬದಲಾವಣೆಗಳನ್ನು ನಾವು ತಾಲೀಮಿನ ಸಮಯದಲ್ಲಿ ಅನುಭವಿಸಿರಬಹುದು. ಮೆದುಳು 'ಸಿರೊಟೋನಿನ್', 'ಡೋಪಮೈನ್' ಮತ್ತು 'ಗಾಬಾ'ನಂತಹ ನ್ಯೂರೋಟ್ರಾನ್ಸ್ಮಿಟರ್ಸ್‌ಗಳನ್ನು ಉತ್ಪಾದಿಸುತ್ತದೆ. ವ್ಯಾಯಾಮದ ಸಮಯದಲ್ಲಿ ಮೆದುಳು ಹೆಚ್ಚು ಶಕ್ತಿಯನ್ನು ಬಳಸುವುದಕ್ಕೆ ಇದೂ ಒಂದು ಕಾರಣವಾಗಿದೆ.
ವ್ಯಾಯಾಮವು ನಮ್ಮ ಲಿವರ್ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿರುವ ರಕ್ತವನ್ನು ನಿಮ್ಮ ಅಸ್ಥಿಪಂಜರದ ಸ್ನಾಯುಗಳಿಗೆ ಹೋಗುವಂತೆ ಮಾಡುತ್ತದೆ. ಕೊಬ್ಬನ್ನು ಗ್ಲೂಕೋಸ್ ಆಗಿ ಪರಿವರ್ತಿಸಲು, ನೀವು ಅನುಭವಿಸುವ ನೋವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಹಾರ್ಮೋನುಗಳು ದೇಹಕ್ಕೆ ಹೇಳುತ್ತವೆ. ತೀವ್ರವಾದ ವ್ಯಾಯಾಮದ ಉಪ-ಉತ್ಪನ್ನವಾಗಿ ಸ್ನಾಯುಗಳು ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತವೆ. ಮತ್ತು ಇದು ಸ್ನಾಯುಗಳನ್ನು ಮತ್ತಷ್ಟು ಸಂಕುಚಿತಗೊಳಿಸುವುದನ್ನು ತಡೆಯುತ್ತದೆ.
ನೀವು ವ್ಯಾಯಾಮ ಮಾಡುವಾಗ, ನಿಮ್ಮ ತೋಳುಗಳು ಮತ್ತು ಕಾಲುಗಳಲ್ಲಿರುವ ದೊಡ್ಡ ಸ್ನಾಯುಗಳು ರಕ್ತವನ್ನು ಪುನಃ ಹೃದಯಕ್ಕೆ ಪಂಪ್ ಮಾಡುವಾಗ ಅವು ಹಾದುಹೋಗುವ ನರಗಳನ್ನು ಹಿಂಡುತ್ತವೆ. ವ್ಯಾಯಾಮದ ಸಮಯದಲ್ಲಿ ನಮ್ಮ ಸ್ನಾಯುಗಳ ಸೂಕ್ಷ್ಮ ಪದರಗಳನ್ನು ಪದೇ ಪದೇ ಸಂಕುಚಿತಗೊಳಿಸಲು ಮತ್ತು ಹಿಗ್ಗಿಸಲು ಒತ್ತಾಯಿಸುತ್ತದೆ. ಇದು ಸ್ನಾಯುವಿನ ಸವೆತ ಮತ್ತು ನೋವಿಗೆ ಕಾರಣವಾಗುತ್ತದೆ. ಈ ಸವೆತ ಮತ್ತು ನೋವು ವ್ಯಾಯಾಮದ ತೀವ್ರತೆಯನ್ನು ಅವಲಂಬಿಸಿರುತ್ತದೆ. ಇದು ವ್ಯಾಯಾಮದ ನಂತರದ ದಿನದಲ್ಲಿ ನಿಮಗೆ ತಿಳಿದಿರಬಹುದಾದ ಸ್ನಾಯು ನೋವಿನ ಭಾವನೆಯನ್ನು ಉಂಟುಮಾಡುತ್ತದೆ.
ಈ ಪ್ರಕ್ರಿಯೆ ಸ್ನಾಯುಗಳನ್ನು ನಿರ್ಮಿಸುವ ಕ್ರಿಯೆಗೆ ಸಾಮಾನ್ಯ ಮತ್ತು ಅಗತ್ಯವಾಗಿದ್ದರೂ, ಅತಿಯಾದ ತರಬೇತಿಯು ಹೆಚ್ಚಿನ ಸವೆತ, ಉರಿ ಮತ್ತು ಸ್ನಾಯುವಿನ ತಳಿಗಳ ಗಾಯಗಳಿಗೆ ಕಾರಣವಾಗಬಹುದು. ನಿಮ್ಮ ತರಬೇತಿಯ ಗುರಿಯನ್ನು ತಲುಪಲು ದೇಹದ ಸಮತೋಲನವನ್ನು ಸರಿಯಾಗಿ ಪಡೆಯುವುದು ಮುಖ್ಯವಾಗಿದೆ. ನಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸಲು, ಆರೋಗ್ಯವಾಗಿಡಲು ನಾವು ಪೌಷ್ಠಿಕಾಂಶಗಳುಳ್ಳ ಆಹಾರಗಳನ್ನು ಸೇವಿಸಬೇಕು.
ನಾವು ಈ ಜೀವಿಸುತ್ತಿರುವ ಈ ಆಧುನಿಕ ಯುಗದಲ್ಲಿ ಆಹಾರದ ಜೊತೆಗೆ ಅದಕ್ಕೆ ಪೂರಕವಾಗಿ ಸಪ್ಲಿಮೆಂಟ್ಗಳನ್ನು ಸೇವಿಸದರಷ್ಟೇ ನಮಗೆ ಹೆಚ್ಚಿನ ಪೌಷ್ಠಿಕಾಂಶ ಸಿಗಲು ಸಾಧ್ಯ. Whey protein concentrate ಸೇವಿಸುವುದರಿಂದಾಗಿ ದೇಹವು ಸಧೃಡವಾಗಿದ್ದೂ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಸ್ನಾಯುಗಳ ಆರೋಗ್ಯದ ಕಡೆ ಗಮನ ಕೊಡದಿದ್ದರೆ ಏನಾಗುತ್ತದೆ?
ವ್ಯಾಯಾಮ ಮಾಡದಿರುವುದು ನಿಮ್ಮ ದೇಹದ ಮೇಲೆ ಹಲವಾರು ಋಣಾತ್ಮಕ ಪರಿಣಾಮಗಳನ್ನು ಬೀರಬಹುದು. ಈ ಬದಲಾವಣೆಗಳು ನೀವು ಅಂದಕೊಂಡದ್ದಕ್ಕಿಂತಲೂ ವೇಗವಾಗಿ ಸಂಭವಿಸುತ್ತವೆ. ನಿಮ್ಮ ದೇಹ, ನೀವು ದೈಹಿಕವಾಗಿ ಕ್ರಿಯಾಶೀಲರಾಗಿರಬೇಕೆಂದೇ ಬಯಸುತ್ತದೆ. ಕ್ರಿಯಾಶೀಲವಾಗಿಲ್ಲದೇ ಇರುವುದರಿಂದ ನಿಮ್ಮ ಹಾರ್ಮೋನ್ ಗಳು, ನಿಮ್ಮ ಮಾಂಸಖಂಡಗಳ ರಚನೆ ಮತ್ತು ನಿಮ್ಮ ಹೃದಯದ ರಕ್ತನಾಳದ ವ್ಯವಸ್ಥೆಯಲ್ಲಿ ಹಲವಾರು ದೀರ್ಘಕಾಲೀನ ಪರಿಣಾಮಗಳನ್ನು ಬೀರಬಹುದು.
ನಮ್ಮ ಸ್ನಾಯುಗಳು, ನಮ್ಮ ಇತರ ದೇಹದ ಅಂಗಾಗಗಳಿಗೆ ಪೂರಕವಾಗಿ ಬೆಸೆದುಕೊಂಡಿದೆ. ಅದೇ ರೀತಿ ನಮ್ಮ ದೇಹ ಎಲ್ಲಾ ರೀತಿಯ ಚಲನೆಗೆ ಬೆಂಬಲವಾಗಿ ನಿಂತಿದೆ. ನಿಮ್ಮ ಮಾಂಸಖಂಡಗಳ ಬಗ್ಗೆ ನೀವು ಗಮನ ಕೊಡದೇ ಇದ್ದಲ್ಲಿ, ಅವುಗಳ ಶಕ್ತಿ ಮತ್ತು ಗಾತ್ರ ಕುಂಠಿತಗೊಳ್ಳುವುದಕ್ಕೆ ಕಾರಣರಾಗುತ್ತೀರಿ. ಶಕ್ತಿಶಾಲಿ ಸ್ನಾಯುಗಳಿಂದಾಗಿ ನಿಮಗೆ ಆಗುವ ಗಾಯಗಳನ್ನು ಪ್ರತಿರೋಧಿಸುವ ಶಕ್ತಿಯೂ ಹೆಚ್ಚಾಗುತ್ತದೆ. ಸ್ನಾಯುಗಳ ಬಲವರ್ಧನೆ ನಿಮಗೆ ಉಂಟಾಗುವ ಬಸವಳಿಕೆಯನ್ನೂ ತಡೆಯುತ್ತದೆ.
ವ್ಯಾಯಾಮ ಮಾಡದೇ ಇರುವುದರ ಫಲವಾಗಿ ಉಸಿರಾಟಕ್ಕೆ ಅಗತ್ಯವಿರುವ ಸ್ನಾಯುಗಳು ಮತ್ತು ನಿಮ್ಮ ಕಾಲು ಹಾಗೂ ತೋಳುಗಳಲ್ಲಿನ ಸ್ನಾಯುಗಳು ದೊಡ್ಡ ಪ್ರಮಾಣದಲ್ಲಿ ದುರ್ಬಲಗೊಳ್ಳುತ್ತವೆ. ಸ್ನಾಯುಗಳು ದುರ್ವಲವಾಗದೇ ಇರಲು ಪ್ರೋಟೀನ್ ಪುಡಿ ಪೂರಕಗಳನ್ನು ಸೇವಿಸಿರಿ.
ಸ್ನಾಯುಗಳನ್ನು ಸುಸ್ಥಿತಿಯಲ್ಲಿಡುವ ವಿಧಾನಗಳು
ನಮ್ಮ ಪ್ರತಿದಿನದ ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಮುಖ್ಯ. ಆದರೆ ಇವಿಷ್ಟರಿಂದಲೇ ನಮ್ಮ ಸ್ನಾಯುಗಳು ಆರೋಗ್ಯಕರವಾಗಿಯೂ, ಬಲಿಷ್ಠವಾಗಿಯು ರೂಪುಗೊಳ್ಳುವುದು ಕಷ್ಟಸಾಧ್ಯ. ಆದ್ದರಿಂದ ನಿಮ್ಮ ಮಾಂಸಖಂಡಗಳ ಬಲವರ್ಧನೆಗೆ ಪ್ರೋಟೀನ್‌ಗಳನ್ನು ಸೇವಿಸುವುದು ಅತ್ಯಂತ ಅಗತ್ಯ. ಪೌಷ್ಠಿಕಾಂಶಯುಕ್ತ ಆಹಾರದ ಜೊತೆಗೆ ಅವುಗಳಿಗೆ ಪೂರಕವಾದ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವ ಮೂಲಕ ನಮ್ಮ ಸ್ನಾಯುಗಳನ್ನು ಶಕ್ತಿಯುತವಾಗಿಯೂ, ಸುಸ್ಥಿತಿಯಲ್ಲಿಯೂ ಇಡಬಹುದು. ಅದಕ್ಕಾಗಿ ಕ್ರಿಯೇಟೈನ್ ಮೊನೊಹೈಡ್ರೇಟ್‌ನಂತಹ ಗುಣಮಟ್ಟದ ಉತ್ಪನ್ನಗಳನ್ನು ಸೇವಿಸಬೇಕು.
ನೀವು ತಿಳಿಯಬೇಕಾದ ಅಂಶಗಳು
1. ಹಾಲೊಡಕು ಪ್ರೋಟೀನ್ ಸಾಂದ್ರತೆ : ಪ್ರೋಟೀನ್ ಸಪ್ಲಿಮೆಂಟ್‌ಗಳ ವಿಷಯಕ್ಕೆ ಬಂದಾಗ ಪ್ರೋಟೀನ್ ಕಾನ್ಸಂಟ್ರೇಟ್ ತುಂಬಾ ಮುಖ್ಯವಾದದ್ದು. 'ಹಾಲೊಡಕು ಪ್ರೋಟೀನ್ ಸಾಂದ್ರತೆ' ದೇಶದಲ್ಲಿಯೇ ಅತ್ಯಂತ ಉತ್ತಮವಾದ ಉತ್ಪನ್ನವಾಗಿದೆ. ಹಾಲಿನಿಂದ ಬೆಣ್ಣೆ ತೆಗೆಯುವ ವಿಧಾನದ ನಡುವೆ ಸಿಗುವ ಈ ಹಾಲೊಡಕು ಪ್ರೋಟೀನ್ ಸಾಂದ್ರತೆ ಪ್ರತಿದಿನ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಪೂರೈಸುತ್ತದೆ. ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಹಾಲೊಡಕು ಪ್ರೋಟೀನ್ ಸಾಂದ್ರತೆ ಅತೀ ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿದೆ. ಹಾಲೊಡಕು ಪ್ರೋಟೀನ್ ಸಾಂದ್ರತೆ ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ ಹಾಗೂ ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿರುತ್ತದೆ.
2. ಕ್ರಿಯೇಟೈನ್ ಮೊನೊಹೈಡ್ರೇಟ್: ಕ್ರಿಯಾಟಿನ್ ಮೂಲಭೂತವಾಗಿ ನಿಮ್ಮ ಸ್ನಾಯುವಿನ ಅಂಗಾಂಶದಲ್ಲಿ ನೈಸರ್ಗಿಕವಾಗಿ ಕಂಡುಬರುವ ವಸ್ತುವಾಗಿದೆ. ಕೆಲವು ಆಹಾರ ಪದಾರ್ಥಗಳ ಸೇವನೆಯ ಮೂಲಕ ನಮ್ಮ ದೇಹದ ಕೆಲವು ಅಂಗಾಂಗಗಳು ನೈಸರ್ಗಿಕವಾಗಿ ಕ್ರಿಯಾಟಿನ್ ಅನ್ನು ಉತ್ಪಾದಿಸುತ್ತವೆ. ನಮ್ಮ ಸ್ನಾಯುಗಳ ಹೆಚ್ಚಿನ ಬಲವರ್ಧನೆಗೆ ಮತ್ತು ಆರೋಗ್ಯಕ್ಕೆ ಈ ಕ್ರಿಯಾಟಿನ್ ಸಾಲುವುದಿಲ್ಲ. ನಾವು ವ್ಯಾಯಾಮ ಮಾಡುವುದರೊಂದಿಗೆ ಹೆಚ್ಚಿನ ಶಕ್ತಿಗಾಗಿ ಮತ್ತು ದೇಹವನ್ನು ಶೀಘ್ರವಾಗಿ ಸಧೃಡಗೊಳಿಸಲು Creatine monohydrate'ಅನ್ನು ಸೇವಿಸಬೇಕು.
ಕ್ರಿಯೇಟಿನೈನ್ ಮೊನೊಹೈಡ್ರೇಟ್ ಸೇವನೆ ಸ್ನಾಯುಗಳನ್ನು ಬಲಪಡಿಸಿ, ಇನ್ನೂ ಹೆಚ್ಚು ದೈಹಿಕ ಕೆಲಸಗಳನ್ನು ಮಾಡಲು ಸಹಾಯಕವಾಗಿರುತ್ತದೆ. ದೀರ್ಘಕಾಲ ಸುಸ್ತಾಗದಂತೆ ದೈಹಿಕವಾಗಿ ಸಕ್ರಿಯವಾಗಿರಲು ಕೂಡಾಕ್ರಿಯೇಟಿನೈನ್ ಮೊನೊಹೈಡ್ರೇಟ್ ಸೇವನೆಯಿಂದ ಸಾಧ್ಯವಾಗುತ್ತದೆ. ನಮ್ಮ ಮಾಂಸಖಂಡಗಳ ಬೆಳವಣಿಗೆ ಸಹಾಯಕವಾಗಿ, ದೇಹದ ಜೀವಕೋಶಗಳನ್ನು ಆರೋಗ್ಯಕರವಾಗಿಸುವಕ್ರಿಯೇಟಿನೈನ್ ಮೊನೊಹೈಡ್ರೇಟ್ ಸೇವಿಸುವುದರೊಂದಿಗೆ ದೈಹಿಕ ಚಟುವಟಿಕೆಗಳಿಗೆ ಚುರುಕು ಮುಟ್ಟಿಸುತ್ತದೆ.
3. ಪ್ರೋಟೀನ್ ಪುಡಿ: ಪ್ರತಿದಿನ ವ್ಯಾಯಾಮ ಮಾಡುವುದರ ಜೊತೆಗೆ, ಪ್ರೋಟೀನ್ ಪುಡಿ ಪೂರಕ ಸೇವನೆ ದೇಹದ ತೂಕವನ್ನು ಇಳಿಸಲು ಮತ್ತು ಕೊಬ್ಬನ್ನು ಕರಗಿಸಲು ಸಹಕಾರಿಯಾಗುತ್ತದೆ. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಅಸ್ತಮಾ ರೋಗವನ್ನು ಪ್ರತಿರೋಧಿಸುವಲ್ಲಿಯೂಪ್ರೋಟೀನ್ ಪುಡಿ ಪೂರಕ ಸಹಕಾರಿಯಾಗಬಲ್ಲುದೆಂದು ಸಂಶೋದನೆಗಳು ವ್ಯಕ್ತಪಡಿಸುತ್ತವೆ. ವ್ಯಾಯಾಮ ಮಾಡುವಾಗ ಅಥವ ದೈಹಿಕ ಶಕ್ತಿಯನ್ನು ಉಪಯೋಗಿಸಿ ಮಾಡುವ ಕೆಲಸಗಳಿಂದ ಹೆಚ್ಚಾಗುವ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಪ್ರೋಟೀನ್ ಪುಡಿ ಪೂರಕ ಸಹಾಯ ಮಾಡುತ್ತದೆ.
ಸಪ್ಲಿಮೆಂಟ್‌ಗಳ ಅತಿಯಾದ ಸೇವನೆಯಿಂದ ಏನಾಗುತ್ತದೆ?
ನಿಮ್ಮ ನಿತ್ಯದ ಆಹಾರದೊಂದಿಗೆ ಪೂರಕವಾಗಿ ಈ ಸಪ್ಲಿಮೆಂಟ್‌ಗಳನ್ನು ಸೇವಿಸಬೇಕಾದ ಅಗತ್ಯವಿದೆ. ಮತ್ತು ಇವು ದೇಹವನ್ನು ಸುಸ್ಥಿತಿಯಲ್ಲಿಡುವುದರಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತವೆ. ಆದರೆ, ನೀವು ಅತ್ಯುತ್ಸಾಹಿಗಳಾಗಿ ಈ ಸಪ್ಲಿಮೆಂಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಹೋಗಬಾರದು. ಇದರಿಂದ ನಿಮ್ಮ ದೇಹಕ್ಕೆ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ.
ಅತಿಯಾದರೆ ಅಮೃತವೂ ವಿಷ ಅನ್ನುವಂತೆಯೇ, ನಮ್ಮ ದೇಹಕ್ಕಿರುವ ಮಿತಿಯನ್ನು ಮೀರಿ ಹೋದರೆ ಯಾವುದೇ ಆಹಾರವಾದರೂ ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಪ್ರಮಾನದಲ್ಲಿ ಸಪ್ಲಿಮೆಂಟ್‌ಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು, ವಾಕರಿಕೆ, ತಲೆನೋವು, ಅಜೀರ್ಣ ಇತ್ಯಾದಿಗಳು ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಒಳ್ಳೆಯ ಗುಣಮಟ್ಟದ ಹಾಲೊಡಕು ಪ್ರೋಟೀನ್ ಸಾಂದ್ರತೆ ಗಳನ್ನು ನಮ್ಮ ಶರೀರಕ್ಕೆ ಅಗತ್ಯವಾದಷ್ಟು ಉಪಯೋಗಿಸಬೇಕು.
ಅಲರ್ಜಿ ಇರುವವರು ಇವುಗಳನ್ನು ಉಪಯೋಗಿಸುವಾಗ ಜಾಗರೂಕರಾಗಿರಬೇಕು. ಸಪ್ಲಿಮೆಂಟ್‌ಗಳು ಪೌಷ್ಠಿಕಾಂಶಗಳನ್ನು ಹೊಂದಿದ್ದು, ಇದು ದೇಹಕ್ಕೆ ಅಗತ್ಯವಾದುದ್ದೇ ಆಗಿದೆ. ಆದರೆ ಅತ್ಯಧಿಕ ಪೌಷ್ಠಿಕಾಂಶಗಳನ್ನು ಹೊಂದಿರುವ ಕಾರಣದಿಂದಾಗಿಯೇ ಇವುಗಳನ್ನು ಹಿತಮಿತವಾಗಿ ತೆಗೆದುಕೊಳ್ಳಬೇಕಾದ ಅಗತ್ಯವೂ ಇದೆ. ಖಾಯಿಲೆಗಳಿಂದ ನರಳುತ್ತಿರುವವರು, ಗರ್ಭಿಣಿಯರು, ಹೆಚ್ಚು ವಯಸ್ಸಾದವರು, ತೀರ ಸಣ್ಣ ಮಕ್ಕಳು ತಜ್ಞರ ಸಲಹೆ ಪಡೆಯದೆ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಲು ಹೊಗಬಾರದು.
ಸ್ಪರ್ಧೆಗಳಲ್ಲಿ ಭಾಗವಹಿಸುವವರು ಹೆಚ್ಚಿನ ದೈಹಿಕ ಕಸರತ್ತುಗಳನ್ನು ಮಾಡಬೇಕಾಗಿರುವುದರಿಂದ ಅವರು ಸೇವಿಸುವ ಸಪ್ಲಿಮೆಂಟ್‌ಗಳ ಪ್ರಮಾಣವು ಅಧಿಕವಿರಬಹುದು. ಹೆಚ್ಚು ವ್ಯಾಯಾಮಗಳನ್ನು ಮಾಡುವವರ ಆಹಾರಕ್ರಮಗಳಲ್ಲಿ ವ್ಯತ್ಯಾಸವಿರುವಂತೆಯೇ, ಅವರು ತೆಗೆದುಕೊಳ್ಳುವ ಸಪ್ಲಿಮೆಂಟಿನ ಪ್ರಮಾಣವು ಬೇರೆಯೇ ಆಗಿರುತ್ತದೆ. ನಿಮ್ಮ ದೇಹವನ್ನು ಗೌರವಿಸಿ. ದೇಹಕ್ಕೆ ಖಾಯಿಲೆಗಳನ್ನು ತಂದುಕೊಳ್ಳದೇ, ನಿಮ್ಮ ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ಸಪ್ಲಿಮೆಂಟ್‌ಗಳನ್ನು ಮರೆಯದೇ ಸೇವಿಸಿರಿ.
ಕೊನೆಯದಾಗಿ ಕಿವಿ ಮಾತು
ಸಪ್ಲಿಮೆಂಟ್‌ಗಳು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಅತ್ಯುತ್ತಮ ಪ್ರಮಾಣದಲ್ಲಿ ಒದಗಿಸುತ್ತವೆ. ದೈಹಿಕ ಪರಿಶ್ರಮದಿಂದಾಗಿ ನಮ್ಮ ದೇಹದಾರ್ಢ್ಯವನ್ನು ಹೆಚ್ಚಿಸಿಕೊಳ್ಳುವಾಗ, ಪೋಷಕಾಂಶಯುಕ್ತ ಆಹಾರದ ಜೊತೆಗೆ ಹಾಲೊಡಕು ಪ್ರೋಟೀನ್ ಸಾಂದ್ರತೆ ಗಳಂತಹ ಗುಣಮಟ್ಟದ ಸಪ್ಲಿಮೆಂಟ್‌ಗಳನ್ನು ಸೇವಿಸಬೇಕು.
ಪ್ರೋಟೀನ್ ಪುಡಿ ಪೂರಕನಿಮ್ಮ ಆಹಾರದಲ್ಲಿ ಸೇರಿಸಬೇಕು. ಕ್ರಿಯೇಟೈನ್ ಮೊನೊಹೈಡ್ರೇಟ್ ಮತ್ತೊಂದು ಪ್ರಮುಖ ಸೇರ್ಪಡೆಯಾಗಿದೆ. ಅವು ನಮ್ಮನ್ನು ಹೆಚ್ಚು ಬಲಾಢ್ಯರನ್ನಾಗಿ, ಆರೋಗ್ಯವಂತರನ್ನಾಗಿಯೂ ಮಾಡುತ್ತದೆ. ದೇಹವನ್ನು ಸಧೃಡವಾಗಿಡುವುದಲ್ಲದೇ, ಚುರುಕಾಗಿಸಿ ಪರೋಕ್ಷವಾಗಿ ಮನಸ್ಸಿನ ಉಲ್ಲಾಸಕ್ಕು ಕಾರಣವಾಗುತ್ತದೆ. ನಮ್ನ ದೇಹದ ಎಲ್ಲಾ ಭಾಗಗಳನ್ನು ಜೋಡಿಸಿಡುವ ಸ್ನಾಯುಗಳು ರಕ್ತಚಲನೆಯಿಂದ ಹಿಡಿದು ಎಲುಬುಗಳ ಸಧೃಡತೆಯನ್ನು ಪೋಷಿಸುವವರೆಗೂ ಅತೀ ಮುಖ್ಯವಾದ ಅವಯವ.
ಸ್ನಾಯುಗಳನ್ನು ಆರೋಗ್ಯವಾಗಿ, ಶಕ್ತಿಯುತವಾಗಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ನಿಮ್ಮ ದೇಹವನ್ನು ಪ್ರೀತಿಸಿ. ಅದಕ್ಕೆ ಕೆಲಸ ಕೊಡಿ. ಅದನ್ನು ಆರೈಕೆ ಮಾಡಿ. ಅದಕ್ಕಾಗಿ ಪೌಷ್ಠಿಕಾಂಶಗಳಿರುವ ಆಹಾರ, ಸರಿಯಾದ ವ್ಯಾಯಾಮದ ಜೊತೆಗೆ ಉತ್ತಮ ಗುಣಮಟ್ಟದ ಸಪ್ಲಿಮೆಂಟ್‌ಗಳನ್ನು ಸೇವಿಸಿ ಆರೋಗ್ಯವಂತರಾಗಿ ಬಾಳಿ.












Click it and Unblock the Notifications