ತುತ್ತು ಖರ್ಚು ವೆಚ್ಚಗಳನ್ನು ನಿರ್ವಹಿಸಲು ನಿಮಗೆ ಇನ್‌ಸ್ಟಂಟ್ ಸಾಲಗಳು ನೆರವಾಗುವ ಬಗೆ
ತುರ್ತು ಪರಿಸ್ಥಿತಿಗಳು ನಿಮಗೆ ಹೇಳದೇ ಕೇಳದೇ ಎದುರಾಗುತ್ತವೆ. ಅಂತಹ ಸನ್ನಿವೇಶವನ್ನು ಇನ್‌ಸ್ಟಂಟ್ ಸಾಲ ಬಳಸಿಕೊಂಡು ನಿಭಾಯಿಸುವುದು ಹೇಗೆ ಎಂಬ ವಿವರ ಇಲ್ಲಿದೆ.
ಹಣಕಾಸಿನ ತುರ್ತು ಪರಿಸ್ಥಿತಿ ಅಥವಾ ಅನಿರೀಕ್ಷಿತ ವೆಚ್ಚಗಳು ಎದುರಾದಾಗ, ಆ ಸಂದರ್ಭಕ್ಕೆ ಸಣ್ಣ ಇನ್‌ಸ್ಟಂಟ್ ಸಾಲವನ್ನು ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬ ಗೊಂದಲ ಹಲವರಿಗೆ ಎದುರಾಗುತ್ತದೆ. ಇಂತಹ ಸಾಲಗಳನ್ನು ತೆಗೆದುಕೊಳ್ಳುವ ಅನುಕೂಲ ಮತ್ತು ವೇಗ ಆಕರ್ಷಕವಾಗಿ ಕಂಡರೂ, ಆ ನಿರ್ಧಾರ ಮಾಡುವುದಕ್ಕೂ ಮೊದಲು ಅದರ ಅನುಕೂಲ ಮತ್ತು ಅನಾನುಕೂಲಗಳನ್ನು ನಾವು ಎಚ್ಚರಿಕೆಯಿಂದ ನೋಡಬೇಕಾಗುತ್ತದೆ.

ಸುಲಭ ಲಭ್ಯತೆ
ಸಣ್ಣ ಇನ್‌ಸ್ಟಂಟ್ ಸಾಲದ ಪ್ರಮುಖ ಅನುಕೂಲವೆಂದರೆ, ಅದು ಸುಲಭವಾಗಿ ಸಿಗುತ್ತದೆ. ಸಾಂಪ್ರದಾಯಿಕ ಸಾಲ ಪ್ರಕ್ರಿಯೆಗಳಿಗೆ ಸಾಮಾನ್ಯವಾಗಿ ದೀರ್ಘಕಾಲದವರೆಗೆ ಕಾಗದಪತ್ರವನ್ನು ನಿರ್ವಹಿಸಬೇಕಾಗುತ್ತದೆ ಮತ್ತು ಅನುಮತಿ ಸಿಗುವ ಸಮಯವೂ ಹೆಚ್ಚಿರುತ್ತದೆ. ಇದರಿಂದ ತುರ್ತು ಹಣಕಾಸಿನ ಅಗತ್ಯಗಳನ್ನು ಅವು ಪೂರೈಸುವುದಿಲ್ಲ. ಇದಕ್ಕೆ ವಿರುದ್ದವಾಗಿ, ಸಣ್ಣ ತಕ್ಷಣದ ಸಾಲಗಳು ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ಸುಲಭವಾಗಿ ಸಿಗುತ್ತವೆ. ಕೆಲವೇ ಗಂಟೆಗಳಲ್ಲಿ ಇದಕ್ಕೆ ಅನುಮತಿ ಸಿಗುತ್ತದೆ ಮತ್ತು ಹಣವೂ ಕೈಗೆ ಸಿಗುತ್ತದೆ. ಈ ವೇಗದ ಪ್ರಕ್ರಿಯೆಯು ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸುವಂಥದ್ದಾಗಿದ್ದು, ಹಣಕಾಸಿನ ಸಮಸ್ಯೆಗಳನ್ನು ತಪ್ಪಿಸುತ್ತದೆ. ಉದಾಹರಣೆಗೆ, ಬಜಾಜ್ ಫೈನಾನ್ಸ್‌ನ ಇನ್‌ಸ್ಟಾ ಪರ್ಸನಲ್ ಲೋನ್‌ನಲ್ಲಿ ಪ್ರೀ ಅಪ್ರೂವ್ಡ್ ಆಫರ್ ಇರುತ್ತದೆ. ಅಂದರೆ, ಅಪ್ಲಿಕೇಶನ್ ಪ್ರಕ್ರಿಯೆ ವೇಗವಾಗಿರುತ್ತದೆ ಮತ್ತು ವೇಗವಾಗಿ ಬಟವಾಡೆಯೂ ಆಗುತ್ತದೆ. ನಿಮ್ಮ ಲೋನ್ ಆಫರ್ ಚೆಕ್ ಮಾಡಲು ಮೊಬೈಲ್ ನಂಬರ್ ಮತ್ತು ಒಟಿಪಿ ಇದ್ದರೆ ಸಾಕು. ಆಯ್ದ ಗ್ರಾಹಕರಿಗೆ ಕೇವಲ 30 ನಿಮಿಷಗಳಲ್ಲೇ ಹಣ ಖಾತೆಗೆ ಬರುತ್ತದೆ.
ಅರ್ಹತೆ
ಇದರ ಜೊತೆಗೆ, ಸಣ್ಣ ಸಾಲಗಳಿಗೆ ಸಾಮಾನ್ಯವಾಗಿ ಕನಿಷ್ಠ ಅರ್ಹತೆ ಮಾನದಂಡ ಇರುತ್ತದೆ. ಇದರಿಂದ ಹೆಚ್ಚಿನ ಜನರಿಗೆ ಇದು ಅನುಕೂಲವಾಗುತ್ತದೆ. ಬೇರೆ ಬೇರೆ ರೀತಿಯ ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವವರೂ ಸಣ್ಣ ಇನ್‌ಸ್ಟಂಟ್ ಲೋನ್ ಪಡೆಯಬಹುದು. ಸಾಂಪ್ರದಾಯಿಕ ವಿಧಾನಗಳಲ್ಲಿ ಸಾಲ ಪಡೆಯುವುದು ಕಷ್ಟವಾಗಿರುವವರಿಗೆ ಇದು ಇನ್ನೊಂದು ಅನುಕೂಲಕರ ವಿಧಾನವಾಗಿ ಪರಿಣಮಿಸುತ್ತದೆ. ಆದರೆ, ಅರ್ಹತೆ ಮಾನದಂಡ ಮತ್ತು ನಿಯಮಗಳು ಒಂದೊಂದು ಸಾಲದಾತರಿಗೂ ವಿಭಿನ್ನವಾಗಿರುತ್ತದೆ ಎಂಬುದನ್ನು ನಾವು ಗಮನಿಸಬೇಕು. ಸಾಲದಾತರ ಜೊತೆಗೆ ಈಗಾಗಲೇ ನೀವು ವ್ಯವಹಾರ ಹೊಂದಿದ್ದರೆ, ಅವರಲ್ಲಿ ನಿಮಗೆ ಇರುವ ಪ್ರೀ ಅಪ್ರೂವ್ಡ್ ಆಫರ್‌ಗಳನ್ನು ಚೆಕ್ ಮಾಡಿಕೊಳ್ಳಬಹುದು. ತಮ್ಮ ಇನ್‌ಸ್ಟಾ ಪರ್ಸನಲ್ ಲೋನ್ ಮೂಲಕ ಬಜಾಜ್ ಫೈನಾನ್ಸ್ ತನ್ನ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ಸಾಲ ನೀಡುತ್ತದೆ. ಹೊಸ ಗ್ರಾಹಕರು ಕೂಡಾ ಪ್ರೀ ಅಸೈನ್ಡ್ ಲಿಮಿಟ್ ಅನ್ನು ಜನರೇಟ್ ಮಾಡಿಕೊಳ್ಳಬಹುದು.
ಬಡ್ಡಿ ದರಗಳು ಮತ್ತು ಶುಲ್ಕಗಳು
ಸಣ್ಣ ಇನ್‌ಸ್ಟಂಟ್ ಸಾಲದ ಅನುಕೂಲದ ಜೊತೆಗೆ ವೆಚ್ಚವೂ ಆಗುತ್ತದೆ. ಈಂತಹ ಸಾಲಗಳ ಬಡ್ಡಿ ದರವು ಸಾಮಾನ್ಯವಾಗಿ ಸಾಂಪ್ರದಾಯಿಕ ಸಾಲಗಳಿಗೆ ಹೋಲಿಸಿದರೆ ಹೆಚ್ಚಿರುತ್ತದೆ. ಅಸಲಿಗಿಂತ ಅತಿ ಹೆಚ್ಚಿನ ಮೊತ್ತವನ್ನು ಸಾಲಗಾರರು ಇದರಲ್ಲಿ ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ, ಬಡ್ಡಿ ದರ, ಮರುಪಾವತಿ ವೇಳಾಪಟ್ಟಿ, ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ ಅರ್ಥ ಮಾಡಿಕೊಂಡು, ನಂತರವೇ ಸಾಲ ಪಡೆಯವುದು ಅತ್ಯಂತ ಮುಖ್ಯವಾಗಿದೆ.
ಒಟ್ಟಾರೆಯಾಗಿ, ಸಣ್ಣ ತುರ್ತು ಸಾಲವನ್ನು ಪಡೆದು ತುರ್ತು ಹಣಕಾಸಿನ ಅಗತ್ಯವನ್ನು ಪೂರೈಸಿಕೊಳ್ಳುವುದು ತುರ್ತು ಪರಿಸ್ಥಿತಿಗಳಲ್ಲಿ ಅತ್ಯಂತ ಅನುಕೂಲಕರ ವಿಧಾನವಾಗಿರುತ್ತದೆ. ಅಂತಹ ತುರ್ತು ಸ್ಥಿತಿ ನಿಮಗೆ ಎದುರಾದರೆ, ಅಂತಹ ಸಮಯದಲ್ಲಿ ಪ್ರಮುಖ ಆಧಾರವಾಗಿ ಇನ್‌ಸ್ಟಾ ಪರ್ಸನಲ್ ಲೋನ್ ನೆರವಾಗಬಹುದು. ಇದು ತ್ವರಿತ ಅನುಮೋದನೆ, ಅನ್ವಯ ಮತ್ತು ಸುಲಭ ಪ್ರವೇಶವನ್ನು ಒದಗಿಸುತ್ತದೆ. ಹೀಗಾಗಿ, ಅನಿರೀಕ್ಷಿತ ಸನ್ನಿವೇಶಗಳಲ್ಲಿ ತಕ್ಷಣದ ನಿವಾರಣೆ ಹುಡುಕುತ್ತಿರುವವರಿಗೆ ಅನುಕೂಲಕರವಾಗಿ ಕಾಣಿಸುತ್ತದೆ. ಜವಾಬ್ದಾರಿಯುತ ಹಣಕಾಸು ನಿರ್ಧಾರ ಮಾಡುವಿಕೆಯು ದೀರ್ಘಕಾಲೀನ ಹಣಕಾಸು ಸ್ಥಿರತೆ ಮತ್ತು ಯೋಗಕ್ಷೇಮವನ್ನು ನಿರ್ವಹಿಸಲು ಅಗತ್ಯದ್ದಾಗಿದೆ.












Click it and Unblock the Notifications