Gautam Adani: DoJ ಪ್ರಕರಣದಿಂದ ವಿಕಸಿತ ಭಾರತವರೆಗೆ: ನಂಬಿಕೆ, ನಾಯಕತ್ವ, ರಾಷ್ಟ್ರ ನಿರ್ಮಾಣದ ಬಗ್ಗೆ ಅದಾನಿ ಮಾತು

ಅಮೆರಿಕದ ನ್ಯಾಯಾಲಯವು ಅದಾನಿ ಅವರ ವಿರುದ್ಧದ ಅಮೆರಿಕ ನ್ಯಾಯಾಂಗದ ಇಲಾಖೆಯ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿದ ಕೆಲವೇ ದಿನಗಳ ನಂತರ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಕಂಪನಿಯ 3ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಂಪನಿಯ ಇತಿಹಾಸದಲ್ಲೇ ಅತ್ಯಂತ ಕಠಿಣ ಸಮಯವನ್ನು ಎದುರಿಸಲು ನೆರವಾದ ಮೌಲ್ಯಗಳು ಮತ್ತು ತತ್ವಗಳ ಬಗ್ಗೆ ಅವರು ಉದ್ಯೋಗಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ "ಅಪ್ನಿ ಬಾತ್, ಅಪ್ನೋ ಕೆ ಸಾಥ್" ಎನ್ನುವ ಎರಡನೇ ಆವೃತ್ತಿಯಲ್ಲಿ ಅವರು ಮಾತನಾಡಿದ್ದಾರೆ. ಕಾನೂನು ಫಲಿತಾಂಶವು ತನಗೆ ಸಮರ್ಥನೆಯ ಭಾವನೆಗಿಂತ ನಮ್ರತೆಯನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ನ್ಯೂಯಾರ್ಕ್‌ನ ಯುಎಸ್ ಜಿಲ್ಲಾ ನ್ಯಾಯಾಲಯವು ಆಗಸ್ಟ್ 10, 2026 ರಂದು ತಮ್ಮ ವಿರುದ್ಧದ DoJ ಪ್ರಕರಣವನ್ನು ವಜಾಗೊಳಿಸಿತ್ತು.

Gautam Adani

ಯುಎಸ್ DoJ ಪ್ರಕರಣವನ್ನು ವಜಾಗೊಳಿಸಿದ ನಂತರ ನಮ್ರತೆ, ನಂಬಿಕೆ ಮತ್ತು ತಾಳ್ಮೆಯು ಗ್ರೂಪ್‌ನ ಕಠಿಣ ಅವಧಿಯಲ್ಲಿ ಮುನ್ನಡೆಸಿತು ಎಂದು ಗೌತಮ್ ಅದಾನಿ ಅದಾನಿ ಸಮುದಾಯದೊಂದಿಗೆ ಹಂಚಿಕೊಂಡಿದ್ದಾರೆ. ಮುಂದುವರಿದು ಗೌತಮ್ ಅದಾನಿ ಅವರು, ಉದ್ಯೋಗಿಗಳು, ಪೂರೈಕೆದಾರರು ಮತ್ತು ಪಾಲುದಾರರ ಸ್ಥೈರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ತೀರ್ಪು ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕಿಂತ, ಮೌಲ್ಯಗಳು ಮತ್ತು ಸರಿಯಾದ ಕಾನೂನು ಪ್ರಕ್ರಿಯೆಯ ಮಹತ್ವವನ್ನು ತೋರಿಸುವ ಅವಕಾಶವಾಗಿ ಎಂದೂ ಅವರು ವಿವರಿಸಿದ್ದಾರೆ.

"ಈ ಅಧ್ಯಾಯ ಮುಗಿಯುವುದರೊಂದಿಗೆ ಇಂದು ನ್ಯಾಯ ವ್ಯವಸ್ಥೆಯ ಮೇಲಿರುವ ನಂಬಿಕೆ ನನಗೆ ಮೊದಲಿಗಿಂತ ಬಲವಾಗಿದೆ" ಎಂದು ಅದಾನಿ ಹೇಳಿದ್ದಾರೆ. ಫಲಿತಾಂಶವನ್ನು ತಮ್ಮ "ನಿಲುವು ಸಮರ್ಥಿಸಲ್ಪಟ್ಟಿದೆ" ಎಂದು ಹೇಳುವುದಿಲ್ಲ. ಆದರೆ, ಇದರ ಬದಲಿಗೆ ಕಠಿಣ ಪ್ರಯಾಣವನ್ನು ನಮ್ರತೆಯಿಂದ ಹಿಂತಿರುಗಿ ನೋಡುವ ಅವಕಾಶ ಕಲ್ಪಿಸಿದೆ ಎಂದೂ ಅವರು ಹೇಳಿದ್ದಾರೆ.

2023 ರಲ್ಲಿ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯು ಅದರ ಫಾಲೋ-ಆನ್ ಪಬ್ಲಿಕ್ ಆಫರ್ (FPO) ನಡೆಯುತ್ತಿರುವಾಗಲೂ ಗ್ರೂಪ್‌ನ ಷೇರು ಬೆಲೆಗಳಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿತ್ತು. ಇದು ಸುಮಾರು ₹20,000 ಕೋಟಿ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ನಷ್ಟವನ್ನುಂಟುಮಾಡಿತು ಎಂದು ಅದಾನಿ ಅವರು ನೆನಪಿಸಿಕೊಂಡರು. FPO ಯೊಂದಿಗೆ ಮುಂದುವರಿಯಲು ಕಾನೂನುಬದ್ಧವಾಗಿ ಅರ್ಹತೆ ಹೊಂದಿದ್ದರೂ, ಗ್ರೂಪ್‌ ಸಂಪೂರ್ಣ ಮೊತ್ತವನ್ನು ಹೂಡಿಕೆದಾರರಿಗೆ ಹಿಂದಿರುಗಿಸುವ ನಿರ್ಧಾರವನ್ನು ಆಯ್ಕೆ ಮಾಡಿಕೊಂಡಿತು.

"ಯಾವುದೇ ಕಾನೂನುಬದ್ಧ ಹಕ್ಕಿಗಿಂತಲೂ ನಂಬಿಕೆ ದೊಡ್ಡದು" ಎಂದು ಅದಾನಿ ಹೇಳಿದರು, ಕಾನೂನು ಹಕ್ಕುಗಳನ್ನು ನೀಡುತ್ತದೆಯಾದರೂ, ಆ ಹಕ್ಕುಗಳನ್ನು ಯಾವಾಗ ಚಲಾಯಿಸಬೇಕು ಎಂಬುದನ್ನು ಮೌಲ್ಯಗಳು ನಿರ್ಧರಿಸುತ್ತವೆ ಎಂದರು.

700 ಕ್ಕೂ ಹೆಚ್ಚು ಸ್ಥಳಗಳಲ್ಲಿರುವ ಅದಾನಿ ಸಮುದಾಯದ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕದ ಬೆಳವಣಿಗೆಯ ನಂತರದ ಕಾನೂನು ಕ್ರಮಗಳು ಗ್ರೂಪ್ ಅನ್ನು ಮತ್ತಷ್ಟು ಪರೀಕ್ಷಿಸಿದವು. ಆದರೆ ಅದು ಗದ್ದಲಕ್ಕಿಂತ ತಾಳ್ಮೆಯನ್ನು ಮತ್ತು ಆತುರದ ಪ್ರತಿಕ್ರಿಯೆಗಳಿಗಿಂತ ಸರಿಯಾದ ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುವ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿತು ಎಂದು ಹೇಳಿದರು. "ಸತ್ಯಕ್ಕೆ ಶಬ್ದ ಬೇಕಾಗಿಲ್ಲ. ಅದಕ್ಕೆ ಸಮಯ ಮಾತ್ರ ಬೇಕು" ಎಂದು ಅವರು ಹೇಳಿದರು.

ಪರಿಶೀಲನೆಯ ಅವಧಿಯಲ್ಲಿ ವ್ಯವಹಾರವನ್ನು ಸದ್ದಿಲ್ಲದೆ ಮುಂದುವರಿಸಿದ್ದಕ್ಕಾಗಿ ಅವರು ಗ್ರೂಪ್‌ನ ಉದ್ಯೋಗಿಗಳು, ಕಾರ್ಮಿಕರು, ಪೂರೈಕೆದಾರರು ಮತ್ತು ಪಾಲುದಾರರಿಗೆ ಮೆಚ್ಚುಗೆ ಸೂಚಿಸಿದರು. ಈ ಸಾಮೂಹಿಕ ಪ್ರಯತ್ನದಿಂದಾಗಿ ಮುಂದ್ರಾ ಬಂದರು, ಖಾವ್ಡಾ ನವೀಕರಿಸಬಹುದಾದ ಎನರ್ಜಿ ಪಾರ್ಕ್ ಮತ್ತು ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಹೆಗ್ಗುರುತು ಯೋಜನೆಗಳೊಂದಿಗೆ ಗ್ರೂಪ್ ಶ್ರೇಷ್ಠ ಸಾಧನೆ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಸ್ವಂತ ಪ್ರಯಾಣವನ್ನು ನೆನಪಿಸಿಕೊಂಡ ಅದಾನಿ ಅವರು, 16ನೇ ವಯಸ್ಸಿನಲ್ಲಿ ಅಹಮದಾಬಾದ್‌ ನಲ್ಲಿರುವ ತಮ್ಮ ಮನೆಯನ್ನು ತೊರೆದ ಬಗ್ಗೆ ಮತ್ತು ಅವರ ತಂದೆ ಶಾಂತಿಲಾಲ್ ಅದಾನಿಯಿಂದ ಪ್ರಾಮಾಣಿಕತೆ ಮತ್ತು ಮಾತನ್ನು ಉಳಿಸಿಕೊಳ್ಳುವ ಬಗ್ಗೆ ಮತ್ತು ಅವರ ತಾಯಿಯಿಂದ ತ್ಯಾಗ ಮತ್ತು ಸರಳತೆಯ ಬಗ್ಗೆ ಕಲಿತ ಪಾಠಗಳನ್ನು ಹಂಚಿಕೊಂಡರು. ಬಿಹಾರದ ಹಳ್ಳಿಯ ಖಾವ್ಡಾ ನವೀಕರಿಸಬಹುದಾದ ಎನರ್ಜಿ ಪಾರ್ಕ್‌ನಲ್ಲಿ ಯುವ ಎಂಜಿನಿಯರ್ ಅಮಿತ್ ಕುಮಾರ್ ಅವರನ್ನು ಭೇಟಿಯಾದ ಬಗ್ಗೆ ಮಾತನಾಡಿದರು. ಅಭಿವೃದ್ಧಿಯನ್ನು ಕೇವಲ ಮೂಲಸೌಕರ್ಯದಿಂದ ಅಳೆಯಬಾರದು; ಅದು ಜನರ ಜೀವನದಲ್ಲಿ ಮೂಡಿಸುವ ಭರವಸೆ ಮತ್ತು ಗೌರವದಿಂದಲೂ ಅಳೆಯಬೇಕು ಎಂಬ ಅವರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿತು ಎಂದೂ ಹೇಳಿದರು.

ಮುಂದುವರಿದು 2047ರಲ್ಲಿ ಭಾರತದ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಎದುರು ನೋಡುತ್ತಾ, ಇತಿಹಾಸವು ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವುದನ್ನು ಮಾತ್ರವಲ್ಲ, ಬದಲಾದ ಜೀವನ ಮತ್ತು ನನಸಾದ ಕನಸುಗಳನ್ನು ನೆನಪಿಸಿಕೊಳ್ಳುತ್ತದೆ ಎಂದು ಅದಾನಿ ಹೇಳಿದರು. ಕಳೆದ ಎರಡು ವರ್ಷಗಳ ಪಾಠಗಳನ್ನು ನಮ್ರತೆ, ಸಮಗ್ರತೆ ಮತ್ತು ನವೀಕೃತ ಉದ್ದೇಶದಿಂದ ಮುಂದುವರಿಸಲು ಅವರು ಅದಾನಿ ಗ್ರೂಪ್‌ಗೆ ಅವರು ಕರೆ ನೀಡಿದರು. ವ್ಯಕ್ತಿಗಳನ್ನು ಮೀರಿಸುವ ನಂಬಿಕೆಯಲ್ಲಿ ಬೇರೂರಿರುವ ಸಂಸ್ಥೆಗಳನ್ನು ನಿರ್ಮಿಸುವಂತೆ ಅವರಿಗೆ ಕರೆ ನೀಡಿದರು.

ಈ ಭಾಷಣವು ಈ ವರ್ಷದ ಮೇ 1ರಂದು ಕಾರ್ಮಿಕ ದಿನಾಚರಣೆಯಂದು ಬಿಡುಗಡೆಯಾದ "ಅಪ್ನಿ ಬಾತ್, ಅಪ್ನೋ ಕೆ ಸಾಥ್"** ಕಾರ್ಯಕ್ರಮದ ಮೊದಲ ಆವೃತ್ತಿಯನ್ನು ಆಧರಿಸಿದೆ. ಅದರಲ್ಲಿ ಅದಾನಿ ಅವರು ಕಾರ್ಮಿಕರ ಘನತೆ ಮತ್ತು ಪ್ರತಿಯೊಂದು ಸಂಸ್ಥೆಯಲ್ಲೂ ಜನರೇ ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನುವ ವಿಷಯವನ್ನು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+