Film Expo India 2026: ಚಿತ್ರರಂಗದ ಹೊಸ ಭವಿಷ್ಯಕ್ಕೆ ವೇದಿಕೆ: 'ಫಿಲ್ಮ್ ಎಕ್ಸ್‌ಪೋ ಇಂಡಿಯಾ' ಶುಭಾರಂಭ
ನವದೆಹಲಿ: ಸಿನಿಮಾ, ಮಾಧ್ಯಮ, ತಂತ್ರಜ್ಞಾನ, ಎಐ, ಉದ್ಯಮಶೀಲತೆ, ಹೂಡಿಕೆ, ಕಲೆ ಮತ್ತು ಸಂಸ್ಕೃತಿಯನ್ನು ಒಂದುಗೂಡಿಸುವ 'ಫಿಲ್ಮ್ ಎಕ್ಸ್‌ಪೋ ಇಂಡಿಯಾ 2026' ಸಮಾರಂಭವು ರಾಷ್ಟ್ರ ರಾಜಧಾನಿ ದೆಹಲಿಯ ಭಾರತ್ ಮಂಟಪದಲ್ಲಿ ನೆನ್ನೆ ಆಗಸ್ಟ್ 26 ಉದ್ಘಾಟನೆಯಾಗಿದೆ. ಒಟ್ಟು ಐದು ದಿನಗಳ (ಆಗಸ್ಟ್ 30) ರವರೆಗೆ ನಡೆಯುವ ಈ ಎಕ್ಸ್‌ಪೋ ಚಲನಚಿತ್ರ ನಿರ್ಮಾಪಕರು, ಸೃಷ್ಟಿಕರ್ತರು, ನವೋದ್ಯಮಿಗಳು, ಹೂಡಿಕೆದಾರರು, ಕಲಾವಿದರು ಮತ್ತು ಉದ್ಯಮದ ನಾಯಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಿದ್ದಾರೆ.
ಎಬಿಪಿ ನ್ಯೂಸ್‌ನ ಆಶಿಶ್ ಸಿಂಗ್ ಅವರು ನಿರ್ವಹಿಸಿದ "ದಿ ನೆಕ್ಸ್ಟ್ 5000 ಸ್ಕ್ರೀನ್ಸ್" ಪ್ರದರ್ಶನದಲ್ಲಿ ಚಂದ್ರನ್ ರತ್ನಂ, ನಂದಿತಾ ದಾಸ್, ಪಂಕಜ್ ಪರಾಶರ್, ರಾಹುಲ್ ರಾವೈಲ್ ಮತ್ತು ರಾಹುಲ್ ನೆಹ್ರಾ ಪಾಲ್ಗೊಂಡಿದ್ದರು. ಈ ಸಮಿತಿಯು ಇಂದಿನ ಸಿನಿಮಾ ಮಾರುಕಟ್ಟೆ, ಸಿನಿಮಾಗಳ ಭವಿಷ್ಯ, ಬದಲಾಗುತ್ತಿರುವ ಪ್ರೇಕ್ಷಕರ ಅಭಿರುಚಿ, ಉದಯೋನ್ಮುಖ ಪರದೆಗಳು ಮತ್ತು ವಿಭಿನ್ನ ರುಚಿಯ ಕಥೆ, ಕಥೆ ಹೇಳುವ ಸ್ವರೂಪಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ಮಹತ್ವ ವಿಷಯಗಳ ಮೇಲೆ ರಾಜೇಶ್ ತೈಲಾಂಗ್ ನೇತೃತ್ವದಲ್ಲಿ ವಿಂದು ದಾರಾ ಸಿಂಗ್, ಗುರುಚರಣ್ ಸಿಂಗ್ ಸೋಧಿ, ಬ್ರಿಜೇಂದ್ರ ಕಲಾ ಮತ್ತು ಜೀತ್ ವಾಘ್ ಅವರೊಂದಿಗೆ ಸಂವಾದ ಜರುಗಿತು. "ಕಥೆ ಹೇಳುವಿಕೆಯಿಂದ ಯಶಸ್ಸಿನವರೆಗೆ: ಮನರಂಜನೆಯಲ್ಲಿ ಮಾರುಕಟ್ಟೆಯ ಪಾತ್ರ" ಮನರಂಜನಾ ವ್ಯವಹಾರದಲ್ಲಿ ಮಾರ್ಕೆಟಿಂಗ್‌ನ ಬೆಳೆವಣಿಗೆ ಕುರಿತು ಸಂವಾದದಲ್ಲಿ ಬೆಳಕು ಚೆಲ್ಲಲಾಯಿತು. ಅನೇಕರು ತಮ್ಮದೇ ಆದ ಸ್ವಂತ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪ್ರಮುಖರ ಜೊತೆ ಮಹತ್ವದ ಸಂವಾದ
ಈ ಸಮಾರಂಭದಲ್ಲಿ 'ಐಡಿಯಾಬಾಜ್ ಪೆವಿಲಿಯನ್' ಸ್ಟಾರ್ಟ್‌ಅಪ್ ಮತ್ತು ಹೂಡಿಕೆ ಪರಿಸರ ವ್ಯವಸ್ಥೆಗೆ ಪ್ರಮುಖ ಆಕರ್ಷಣೆ ಆಗಿತ್ತು. ಅಡಿಸನ್ ಅಪ್ಪು, ಕರಣ್ ಮಿತ್ತಲ್, ಪ್ರಣವ್ ಒಭ್ರಾಯ್, ಅಮಿತ್ ಸಿಂಗಲ್ ಮತ್ತು ಡಾ. ವಿಭೂತಿ ಅಗರ್ವಾಲ್ ಜೊತೆಗೆ ಮುದಿತ್ ಕುಮಾರ್, ಜೀತ್ ವಾಘ್ ಮತ್ತು ಜೀವರಾಜ್ ಸಿಂಗ್ ಸಾಚಾರ್ ಅವರ ಉತ್ಸಾಹಭರಿತ ಸಂಭಾಷಣೆಗಳು ನೆರೆದವರನ್ನು ಆಕರ್ಷಿಸಿದವು. ಕಾರ್ಯಕ್ರಮದಲ್ಲಿ ಪಂಜಾಬ್ ಕೇಸರಿ ಸಂಸ್ಥೆಯ ಕಿರಣ್ ಚೋಪ್ರಾ ಮತ್ತು ಸ್ವಾತಿ ಮುಂಜಾಲ್ ಅವರ ಸಂವಾದಗಳು ಪ್ರಮುಖವಾಗಿದ್ದವು.
"ಕ್ಲೀನ್ ಟೆಕ್ ಆಂಡ್ ಸರ್ಕ್ಯುಲರ್ ಎಕಾನಮಿ: ಲಾಭದಾಯಕತೆ ಪ್ರಭಾವವನ್ನು ಪೂರೈಸುತ್ತದೆ" ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ದಿಗ್ಗಜರಾದ ದಿಯಾ ಮಿರ್ಜಾ, ಪವನ್ ರಾಜ್‌ಕುಮಾರ್, ಡಾ. ಲಲಿತ್ ಸಿಂಗ್ ಮತ್ತು ಯುಎನ್‌ಇಪಿಯ ಕೌಶಿಕ್ ಚಂದ್ರಶೇಖರ್ ಭಾಗವಹಿಸಿ ಪ್ರಮುಖ ವಿಷಯಗಳನ್ನು ಚರ್ಚಿಸಿದರು.
"ಬಿಯಾಂಡ್ ದಿ ಕ್ಯಾನ್ವಾಸ್" ಸಮಾರಂಭ
ಅಂತಾರರಾಷ್ಟ್ರೀಯ ಕಲಾ ಪ್ರದರ್ಶನ 'ಫಿಲ್ಮ್ ಎಕ್ಸ್‌ಪೋ ಇಂಡಿಯಾ'ಗೆ ಸಮಾನಾಂತರವಾಗಿ ಜರುಗುವ "ಬಿಯಾಂಡ್ ದಿ ಕ್ಯಾನ್ವಾಸ್" ಸಮಾರಂಭವು ಸುಮಾರು 10,000 ಚದರ ಮೀಟರ್‌ಗಳಲ್ಲಿ 12+ ಗ್ಯಾಲರಿಗಳನ್ನು ಒಟ್ಟುಗೂಡಿಸುತ್ತದೆ. ಅದರಲ್ಲಿ ಇಂದಿನ ಸಮಕಾಲೀನ, ಬುಡಕಟ್ಟು, ಸಾಂಪ್ರದಾಯಿಕ, ಡಿಜಿಟಲ್ ಮತ್ತು ಪ್ರಾಯೋಗಿಕ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ.
ಇಲ್ಲಿ ಚಲನಚಿತ್ರ ನಿರ್ಮಾಣ, ಸೃಜನಾತ್ಮಕ ತಂತ್ರಜ್ಞಾನ ಪರಿಸರ ವ್ಯವಸ್ಥೆ ಬಲಗೊಳಿಸುವುದು, ಕ್ಯಾಮೆರಾಗಳು, ನವೀನ ತಂತ್ರಜ್ಞಾನ, ಹೊಸ ಸಲಕರಣೆಗಳೊಂದಿಗೆ ಸೋನಿ ಮತ್ತು ಡಿಜೆಐ ಸೇರಿದಂತೆ ಇತರ ಬ್ರ್ಯಾಂಡ್‌ಗಳು ಭಾಗವಹಿಸುತ್ತವೆ. ಅದು ಕಲಾವಿದರಿಗೆ, ತಂತ್ರಜ್ಞರಿಗೆ ಪೂರಕೆ ವೇದಿಕೆ ಆಗಿರಲಿದೆ.
ಪ್ರಸ್ತುತ ಫಿಲ್ಮ್ ಎಕ್ಸ್‌ಪೋ ಇಂಡಿಯಾ ಮುಂದಿನ ನಾಲ್ಕು ದಿನಗಳ ವರೆಗೆ ನಡೆಯಲಿದೆ. ಉದ್ಯಮಕ್ಕೆ ಅಗತ್ಯವಾದ ಸಂಭಾಷಣೆ, ಚರ್ಚೆ, ಸಂವಾದ, ಮಾಸ್ಟರ್‌ಕ್ಲಾಸ್‌ಗಳು, ಪ್ರದರ್ಶನಗಳು, ಎಐ ಮತ್ತು ತಂತ್ರಜ್ಞಾನ ಪ್ರದರ್ಶನಗಳು, ನವೋದ್ಯಮ ಮತ್ತು ಹೂಡಿಕೆದಾರರ ಸಂವಹನಗಳು ಜರುಗಲಿದ್ದು, ಅಗತ್ಯವುಳ್ಳವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಇನ್ನೂ ಉದ್ಘಾಟನೆ ವೇಳೆ ಫಿಲ್ಮ್ ಎಕ್ಸ್‌ಪೋ ಇಂಡಿಯಾದ ಮಾರ್ಗದರ್ಶಕ ಮತ್ತು ಕ್ಯುರೇಟರ್ ವಿಂದು ದಾರಾ ಸಿಂಗ್, ಐಸಿಎಂಇಐ ಅಧ್ಯಕ್ಷ ಮತ್ತು ಎಎಎಫ್‌ಟಿ ವಿಶ್ವವಿದ್ಯಾಲಯದ ಕುಲಪತಿ ಸಂದೀಪ್ ಮಾರ್ವಾ, ನಂದಿತಾ ದಾಸ್, ಪಂಕಜ್ ಪರಾಶರ್, ವಿವೇಕ್ ವಾಸ್ವಾನಿ, ಗಾಂಧಿನಗರದ ಮಾಜಿ ಮೇಯರ್ ಗೌತಮ್ ಶಾ, ಬಲ್ಬೀರ್ ಸಿಂಗ್ ರಾಂಧವ, ಐಟಿಪಿಒ ಡಿಜಿಎಂ ಕ್ರಿಶನ್ ಕುಮಾರ್, ಐಡಿಯಾಬಾಜ್‌ನ ಸಗೂನ್ ವಾಘ್ ಮತ್ತು ಜೀತ್ ವಾಘ್, ರಾಹುಲ್ ನೆಹ್ರಾ ಮತ್ತು ಎಕ್ಸೋಬಜ್‌ನ ಮುಖೇಶ್ ಕುಮಾರ್, ಜ್ಯೋತಿ ಯಾದವ್ ಮತ್ತು ಮಾಧುರಿ ಯಾದವ್ ನೇತೃತ್ವದ ಸಂಘಟನಾ ತಂಡದವರು ಉಪಸ್ಥಿತರಿದ್ದರು.


Click it and Unblock the Notifications
