Adani: ಅಲ್ಪಾವಧಿ ನೆರವಲ್ಲ, ದೀರ್ಘಕಾಲೀನ ಬದಲಾವಣೆ ಅಗತ್ಯ; ಡಾ. ಪ್ರೀತಿ ಅದಾನಿ ಕರೆ
ಪ್ರಸ್ತುತ ವರ್ಷ ಎವಿಪಿಎನ್ ಜಾಗತಿಕ ಸಮ್ಮೇಳನ 2026 ಸಮ್ಮೇಳನ ಜರುಗಿತು. ಈ ವೇಳೆ ಅದಾನಿ ಫೌಂಡೇಶನ್‌ನ ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಅವರು ತಮ್ಮ ಅಲ್ಪ ಅವಧಿಯ ಮಧ್ಯಸ್ಥಿಕೆಗಳಿಂದ ಜನೋಪಕಾರಿ ನಿಧಿಯಲ್ಲಿ ಬದಲಾವಣೆ ತಂದಿದ್ದಾರೆ. ಅದರಿಂದ ದೀರ್ಘಕಾಲೀನ ಪರಿಣಾಮವನ್ನು ಸೃಷ್ಟಿಸಲು ಸಮುದಾಯಗಳು ಮತ್ತು ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ಕರೆ ನೀಡಿದರು.
ಎವಿಪಿಎನ್ ಜಾಗತಿಕ ಸಮ್ಮೇಳನ 2026 ರಲ್ಲಿ ಭಾಗವಹಿಸಿದ್ದ ಸುಮಾರು 2,000 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರತಿನಿಧಿಗಳಿಗಾಗಿ ಭಾರತ್ ಮಂಟಪದಲ್ಲಿ ಅದಾನಿ ಫೌಂಡೇಶನ್ ಭೋಜನ ಕೂಟ ಆಯೋಜಿಸಿತ್ತು. ಇದರಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಪ್ರೀತಿ ಅದಾನಿ ಅವರು, ಭಾರತದಲ್ಲಿ ಮೊದಲ ಬಾರಿಗೆ 13 ನೇ ಎವಿಪಿಎನ್ ಜಾಗತಿಕ ಸಮ್ಮೇಳನ ನಡೆಸಲಾಗಿದೆ. ಇದು ಯುವ ಸಮೂಹ, ವೃತ್ತಿಪರರು, ಕಾರ್ಪೊರೇಟ್ ಮುಖ್ಯಸ್ಥರನ್ನು ನೀತಿ ನಿರೂಪಕರನ್ನು ಒಂದೇ ವೇದಿಕೆಗೆ ಕರೆ ತರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಭಾರತದ ಅಭಿವೃದ್ಧಿಯ ವೇಗವನ್ನು ಅದರ ರೂಪಾಂತರದಲ್ಲಿ, ಜನರ ಶಕ್ತಿ, ಸಾಮರ್ಥ್ಯ ಮೂಲಕ ಅಳೆಯಬಹುದಾಗಿದೆ. ದೇಶದಲ್ಲಿ ಆಗಾಧವಾಗಿ ತಂತ್ರಜ್ಞಾನದ ಬೆಳೆಯುತ್ತಿದೆ. ತಳಮಟ್ಟದ ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ ಮತ್ತು ಸ್ಥಳೀಯ ನಾವೀನ್ಯತೆಗೆ ಒತ್ತು ಕೊಡುತ್ತಿರುವ ದೇಶವು 'ವಿಕ್ಷಿತ್ ಭಾರತ್ 2047' ದೂರದೃಷ್ಟಿ ಹೊಂದಿದೆ ಎಂದರು.
ಭಾರತದ ವಾರ್ಷಿಕ ಸಾಮಾಜಿಕ ವಲಯದ ನಿಧಿ 310 ಬಿಲಿಯನ್ ದಾಟಿದೆ. ವಾರ್ಷಿಕ ಬೆಳವಣಿಗೆಯ ದರ ಶೇ.13. ಭಾರತವು ಈಗ 200,000 ಕ್ಕೂ ಹೆಚ್ಚು ಮಾನ್ಯತೆ ಪಡೆದ ನವೋದ್ಯಮಗಳು ಇಲ್ಲಿವೆ. ಪ್ರಮುಖ ನಗರ ಕೇಂದ್ರಗಳಲ್ಲಿ ಮಾತ್ರ ಕೇಂದ್ರೀಕೃತವಾದ ಹೆಚ್ಚಾಗಿ ಸಣ್ಣ ಪಟ್ಟಣಗಳು ಹಾಗೂ ಹಳ್ಳಿಗಳಿಂದ ನವೋದ್ಯಮಗಳು ಉದಯಿಸುತ್ತಿವೆ ಎಂದು ಹೇಳಿದರು.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಆರಂಭಿಸಿದ ವಂದೇ ಭಾರತಂ ಉಪಕ್ರಮದ ಉದಾಹರಣೆಯನ್ನು ಪ್ರೀತಿ ಅದಾನಿ ಅವರು ಹೆಸರಿಸಿದರು. ಸಾಮಾಜಿಕ ಮತ್ತು ಪರಿಸರೀಯ ಪರಿಣಾಮದ ಕುರಿತು ಸ್ಪಷ್ಟ ಕಲ್ಪನೆಯನ್ನು ಅವರು ಅಭಿವ್ಯಕ್ತಗೊಳಿಸಿದರು. ಜಗತ್ತಿನ ಸವಾಲುಗಳ ನಡುವೆ ಎದುರಾದ ಹವಾಮಾನ ಬದಲಾವಣೆ, ಕೃತಕ ಬುದ್ಧಿಮತ್ತೆಯ ತ್ವರಿತ ಅಭಿವೃದ್ಧಿ ಮತ್ತು ಸೋಷಿಯಲ್ ಮೀಡಿಯಾಗಳು ಮತ್ತು ತಂತ್ರಜ್ಞಾನ ಬಳಕೆಯ ದುಷ್ಪರಿಣಾಮಗಳ ಮೇಲೆ ಬೆಳಕಿ ಚೆಲ್ಲಿದರು. ತಂತ್ರಜ್ಞಾನ, ಬದಲಾವಣೆಗೆ ಸಂಬಂಧಿಸಿದಂತೆ ಏಷ್ಯಾದಾದ್ಯಂತ ಅಗತ್ಯ ಸಹಕಾರ ನೀಡುವಂತೆ ಕರೆ ನೀಡಿದರು. ಹೂಡಿಕೆ ಜೊತೆಗೆ ಜ್ಞಾನ, ಅನುಭವ ಮತ್ತು ಯಶಸ್ವಿ ಮಾದರಿ ಅನುಷ್ಠಾನಕ್ಕೆ ಒತ್ತು ನೀಡುವಂತೆ ಹೇಳಿದರು.
ಇದೇ AVPN ಜಾಗತಿಕ ಸಮ್ಮೇಳನವು ಕಳೆದ ವರ್ಷ 2025ರಲ್ಲಿ ಹಾಂಗ್ ಕಾಂಗ್‌ನಲ್ಲಿ ನಡೆದಿತ್ತು. ಅಂದು ಸಹ ಡಾ.ಪ್ರೀತಿ ಅವರು ಏಷ್ಯಾದಾದ್ಯಂತ ಲೋಕೋಪಕಾರಿ ಅನುಭವ ಮತ್ತು ಜ್ಞಾನ ಕುರಿತು ವೇದಿಕೆ ರಚನೆ ಕುರಿತು ಪ್ರಸ್ತಾಪಿಸಿದ್ದರು. ಇನ್ನೂ 1996 ರಲ್ಲಿ ಸ್ಥಾಪನೆಯಾದ ಅದಾನಿ ಫೌಂಡೇಶನ್‌ನ ಶಿಕ್ಷಣ, ಆರೋಗ್ಯ ರಕ್ಷಣೆ, ಕೌಶಲ್ಯ, ಜೀವನೋಪಾಯ, ಅಂಗವೈಕಲ್ಯ ಸೇರ್ಪಡೆ, ಸಮುದಾಯ ಮೂಲಸೌಕರ್ಯ, ಕ್ರೀಡೆ ಸೇರಿದಂತೆ ಅನೇಕ ವಲಯಗಳ ತಳಮಟ್ಟದ ಅಭಿವೃದ್ಧಿ ಕಾರ್ಯದ 30 ವರ್ಷ ಪ್ಲ್ಯಾನ್ ಮಾಡಿಕೊಂಡಿದೆ. ಅದಾನಿ ಕಾಯ್ವು ಈಗಾಗಲೇ ದೇಶದ 22 ರಾಜ್ಯಗಳಲ್ಲಿ 7,200 ಕ್ಕೂ ಹೆಚ್ಚು ಹಳ್ಳಿಗಳನ್ನು ತಲುಪಿದೆ.
ಸಮುದಾಯಗಳ ಸಬಲೀಕರಣವಾದರೆ ಬಡವರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುತ್ತಾರೆ. ಫೌಂಡೇಶನ್‌ನ ಜಾನುವಾರು ಅಭಿವೃದ್ಧಿ ಉಪಕ್ರಮದಿಂದ ಪ್ರಯೋಜನ ಪಡೆದ ಮಹಾರಾಷ್ಟ್ರದ ಚುರ್ಡಿ ಗ್ರಾಮದ ಕಿರಣ್ ಹರಿಂಖೆಡೆ ಅವರ ಕುರಿತು ಉದಾಹರಣೆ ಸಹಿತ ವಿವರಿಸಲಾಯಿತು. ಸುಧಾರಿತ ಜಾನುವಾರು ತಳಿಗಳು ಮತ್ತು ಪ್ರಾಣಿಗಳ ಆರೋಗ್ಯ ರಕ್ಷಣೆಯು ಹಾಲು ಉತ್ಪಾದನೆ ಹೆಚ್ಚಿಸಲು ಮತ್ತು ಮಹಿಳೆಯರು ನಡೆಸುವ ಡೈರಿ ಉದ್ಯಮದಲ್ಲಿ ಭಾಗವಹಿಸಲು ಅವರಿಗೆ ಅವಕಾಶ ಮಾಡಿಕೊಟ್ಟಿತು ಎಂದು ಅವರು ತಿಳಿಸಿದರು.
ಎವಿಪಿಎನ್ ಜಾಗತಿಕ ಸಮ್ಮೇಳನ 2026 ಏಷ್ಯಾ ಮತ್ತು ಅದರಾಚೆಗಿನ ಸಾಮಾಜಿಕ ಪರಿಣಾಮ ಸಂಸ್ಥೆಗಳು ಮತ್ತು ಸಂಪನ್ಮೂಲ ಪೂರೈಕೆದಾರರಿಗೆ ವಿಚಾರ ವಿನಿಮಯಕ್ಕೆ, ಬಂಡವಾಳ ಹೂಡಿಕೆಗೆ ಸವಾಲು ಎದುರಿಲು ಒಂದು ವೇದಿಕೆಯನ್ನು ಒದಗಿಸಿದೆ.


Click it and Unblock the Notifications
