Adani: ಧಾರಾವಿ ಪುನರಾಭಿವೃದ್ಧಿಗೆ ಚಾಲನೆ: ಮುಂಬೈನಲ್ಲಿ 10,432 ಮನೆಗಳ ಟವರ್ ನಿರ್ಮಾಣ ಆರಂಭ

ಮುಂಬೈನ ಧಾರಾವಿ ಪುನರಾಭಿವೃದ್ಧಿ ಯೋಜನೆಯು ಮತ್ತೊಂದು ಪ್ರಮುಖ ಘಟ್ಟ ತಲುಪಿದೆ. ಧಾರಾವಿಯ ಅರ್ಹ ನಿವಾಸಿಗಳಿಗಾಗಿ ಪುನರ್ ವಸತಿ ಮನೆಗಳ ನಿರ್ಮಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇಲ್ಲಿನ ಮಾಟುಂಗಾ ರೈಲ್ವೆ ನಿಲ್ದಾಣದ ಬಳಿಯ 22 ಎಕರೆ ಜಾಗದಲ್ಲಿ 'ಭೂಮಿ ಪೂಜೆ' ಸಮಾರಂಭದೊಂದಿಗೆ ಆರಂಭಿಕ ಕಾರ್ಯವನ್ನು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (AEL) ನಿರ್ದೇಶಕ ಪ್ರಣವ್ ಅದಾನಿ ಅವರು ನೆರವೇರಿಸಿದರು.

ಧಾರಾವಿ ಪುನರ್ ಅಭಿವೃದ್ಧಿ ಯೋಜನೆಯು ಅದಾನಿ ನವಭಾರತ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (ANDPL) ಮೂಲಕ ಅನುಷ್ಠಾನಗೊಳ್ಳುತ್ತಿದೆ. ಒಟ್ಟು 10,432 ಪುನರ್ ವಸತಿ ಅಪಾರ್ಟ್‌ಮೆಂಟ್‌ಗಳು, 1,379 ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳನ್ನು ಒಳಗೊಂಡಿರುವ 10 ಬೃಹತ್ ಗಗನಚುಂಬಿ ಕಟ್ಟಡಗಳ (ಟವರ್‌) ನಿರ್ಮಾಣ ಮಾಡಲಾಗುತ್ತದೆ. ಶಂಕುಸ್ಥಾಪನೆ ನೆರವೇರಿದ ಅದೇ ಸ್ಥಳದಲ್ಲಿ ಅರ್ಹರಿಗೆ 350 ಚದರ ಅಡಿ ವಿಸ್ತೀರ್ಣದ ಮನೆಗಳನ್ನು ನೀಡಲಾಗುತ್ತದೆ.

Dharavi Redevelopment

ಕಾರ್ಯಕ್ರಮದಲ್ಲಿ ಪ್ರಣವ್ ಅದಾನಿ ಅವರು ಮಾತನಾಡಿ, ಮುಂಬೈನ ಮಾಟುಂಗಾ ಪ್ರದೇಶದಲ್ಲಿ ನೂತನ ಗೃಹಗಳು ಮೊದಲಿಗೆ ಸೆಕ್ಟರ್ 6 ಮತ್ತು 1ರ ಅರ್ಹ ನಿವಾಸಿಗಳಿಗೆ ಸಿಗಲಿವೆ. ಬಳಿಕ ಸುಮಾರು 4,500 ಅಪಾರ್ಟ್‌ಮೆಂಟ್‌ಗಳನ್ನು ಆದ್ಯತೆಯ ಆಧಾರದ ಮೇಲೆ ಧಾರಾವಿಯ ಇತರ ಅರ್ಹ ನಿವಾಸಿಗಳಿಗೆ ಹಂಚಲಾಗುವುದು ಎಂದು ಯೋಜನೆಯಲ್ಲಿ ತಿಳಿಸಲಾಗಿದೆ. ಅರ್ಹ ಕುಟುಂಬಗಳಿಗೆ ಅವರ ಭವಿಷ್ಯದ ಅವಕಾಶ ನಿಡುವ ಜೊತೆಗೆ ಸುರಕ್ಷಿತ ಮನೆ ನೀಡುವುದು ಯೋಜನೆಯ ಮುಖ್ಯ ಗುರಿಯಾಗಿದೆ ಎಂದರು.

ಪ್ರತಿ ಕುಟುಂಬವೂ ತಾನು ಸುರಕ್ಷಿತವೆಂದು ಭಾವಿಸುವ, ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುವಂತಹ ಮನೆ ನೀಡಲಾಗುವುದು. ಧಾರಾವಿಯ ಕುಟುಂಬಗಳಿಗೆ ಇಂತಹ ಮನೆಗಳ ಅಗತ್ಯತೆ ಎಷ್ಟಿದೆ ಎಂಬುದು ನಮಗೆ ಗೊತ್ತಿದೆ. ಯೋಜಿತ ವಸತಿ ಮತ್ತು ವಾಣಿಜ್ಯ ಸೌಲಭ್ಯಗಳು, ಕುಟುಂಬಗಳು ತಮ್ಮ ಜೀವನಮಟ್ಟವನ್ನು ಸುಧಾರಿಸಲಿದೆ ಎಂದು ಅವರು ತಿಳಿಸಿದರು.

ಮುಂದಿನ ಮೂರು ವರ್ಷಗಳಲ್ಲಿ (ಮಾರ್ಚ್ 2029) ಅಪಾರ್ಟ್‌ಮೆಂಟ್‌ಗಳು ಇರುವ ಐದು ಟವರ್ ನಿರ್ಮಿಸಿ ಅರ್ಹರಿಗೆ ಹಂಚಿಕೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. 10 ಪುನರ ವಸತಿ ಟವರ್‌ಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಅಡಿಯಲ್ಲಿ ಬರುವ DRP/SRAಗೆ ಮೂರು ಹಂತಗಳಲ್ಲಿ ಹಸ್ತಾಂತರಿಸಲಾಗುತ್ತದೆ. ಮೊದಲ 5 ಟವರ್, ಆಗಸ್ಟ್ 2029ರ ವೇಳೆಗೆ 2 ಟವರ್‌ ನೀಡಲಾಗುವುದು. ಮೂರು ಟವರ್ ಆಗಸ್ಟ್ 2030ರ ವೇಳೆಗೆ ಅರ್ಹರಿಗೆ ಸಿಗಲಿವೆ ಎಂದು ಅವರು ವಿವರಿಸಿದರು.

37-39 ಅಂತಸ್ತಿನ ಒಂದೊಂದು ಟವರ್

ಉದ್ದೇಶಿತ 10 ಟವರ್ ಪೈಕಿ ಒಂದೊಂದು 37-39 ಅಂತಸ್ತುಗಳನ್ನು ಹೊಂದಿರಲಿವೆ. 10 ರಿಂದ 12 ಪ್ರಯಾಣಿಕರ ಲಿಫ್ಟ್‌ಗಳು, ಅಗ್ನಿಶಾಮಕ ತುರ್ತು ಸೇವೆಗಾಗಿ ಮೀಸಲಾದ ಎರಡು ಲಿಫ್ಟ್ ಹಾಗೂ ವಾಣಿಜ್ಯ, ಕೈಗಾರಿಕಾ ಸಂಬಂಧಿ ಬಳಕೆಗಾಗಿ ಹೆಚ್ಚುವರಿ ಎರಡು ಲಿಫ್ಟ್ ವ್ಯವಸ್ಥೆ ಇರುತ್ತದೆ. ಇನ್ನೂ ಶಿಶುವಿಹಾರ (ಕಿಂಡರ್‌ಗಾರ್ಟನ್), ಸಮುದಾಯ ಭವನ, ಪೋಡಿಯಂ ಉದ್ಯಾನವನಗಳು, ಕುಳಿತುಕೊಳ್ಳುವ ಸ್ಥಳಗಳು, ಸೊಸೈಟಿ ಕಚೇರಿಗಳು, ಪ್ರಾರ್ಥನಾ ಸ್ಥಳಗಳಂತ ಎಲ್ಲ ಸೌಕರ್ಯಗಳನ್ನು ಇವು ಒಳಗೊಂಡಿರಲಿವೆ.

ನಿರ್ವಹಣೆ, ವಾಣಿಜ್ಯ ಸ್ಥಳಾವಕಾಶ

ಕಟ್ಟಡಗಳ ಹಂಚಿಕೆ ಮಾಡುವ ಜೊತೆಗೆ ಆ ಎಲ್ಲ ಕಟ್ಟಡಗಳ ನಿರ್ವಹಣೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಸೌಲಭ್ಯಗಳ ನಿರ್ವಹಣೆಗಾಗಿ ಅಲ್ಲಿನ ಆದಾಯ ಶೇಕಡಾ 10 ರಷ್ಟು ಭಾಗವನ್ನು ಮೀಸಲಿಡಲಾಗುತ್ತದೆ. ಹಸ್ತಾಂತರದ ನಂತರದ ಮೊದಲ 10 ವರ್ಷಗಳವರೆಗೆ ANDPL ಸಂಸ್ಥೆಯು ಕಟ್ಟಡಗಳು ಮತ್ತು ಹಂಚಿಕೆಯ ಮೂಲ ಸೌಕರ್ಯಗಳ ನಿರ್ವಹಣೆ ನೋಡಿಕೊಳ್ಳುತ್ತವೆ. ಧಾರಾವಿಯ ಕುಟುಂಬಗಳಿಗೆ ಆಧುನಿಕ ವಸತಿ, ಮೂಲ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಈ ಯೋಜನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಮಹೇಂದ್ರ ಕಲ್ಯಾಣ್ಕರ್ ತಿಳಿಸಿದ್ದಾರೆ.

ಜಾಗತಿಕ ವಿನ್ಯಾಸ, ಪರಿಣಿತ ಎಂಜಿನಿಯರಿಂಗ್ ಬಳಕೆ

ಈ ಯೋಜನೆಯಡಿ ಸುಂದರ ವಾಸ್ತು ಶಿಲ್ಪ, ಜಾಗತಿಕ ಮತ್ತು ಆಕರ್ಷಕ ವಿನ್ಯಾಸಕ್ಕಾಗಿ ಪರಿಣಿತ ಇಂಜಿನಿಯರಿಂಗ್‌ ಸಂಬಂಧ ಕಂಪನಿಗಳು ಕೆಲಸ ಮಾಡಲಿವೆ. ಸಾಕಷ್ಟು ಇಂಜಿನಿಯರಿಂಗ್ ಕಂಪನಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ, ಯುಕೆ ಮೂಲದ ಎಂಜಿನಿಯರಿಂಗ್ ಸಲಹಾ ಸಂಸ್ಥೆ 'ಬ್ಯೂರೋ ಹ್ಯಾಪೋಲ್ಡ್' (Buro Happold) ಕೈ ಜೋಡಿಸಿದೆ. ಅದರೊಂದಿಗೆ ಮುಂಬೈ ಮೂಲದ 'ಸ್ಟುಡಿಯೋಪಿಒಡಿ' (StudioPOD), ವಾಸ್ತುಶಿಲ್ಪಿಗಳಾದ ಹಫೀಜ್ ಕಾಂಟ್ರಾಕ್ಟರ್, ಪಿ ಆಂಡ್ ಟಿ (P&T) ಮತ್ತು ಎಆರ್‌ಸಿ ಸ್ಟುಡಿಯೋ (ARC Studio) ಹಾಗೂ ಸಿಂಗಾಪುರದ ನಗರ ಯೋಜನೆ ತಜ್ಞರು ಯೋಜನೆಯಲ್ಲಿ ಕೆಲಸ ಮಾಡಲಿದ್ದಾರೆ.

ಧಾರಾವಿ ಪುನರಾಭಿವೃದ್ಧಿ ಯೋಜನೆಯಲ್ಲಿ ಕೇವಲ ವಸತಿ ಸಂಕೀರ್ಣಗಳು ಇರದೇ, ಇಲ್ಲಿ ಅಂಗಡಿಗಳು, ಶಾಲೆಗಳು, ಆರೋಗ್ಯ ಕೇಂದ್ರ, ಆಸ್ಪತ್ರೆ, ಪ್ರಾರ್ಥನಾ ಸ್ಥಳಗಳು, ಉದ್ಯಾನವನಗಳು, ಸಾರ್ವಜನಿಕ ಸಾರಿಗೆ ಮತ್ತು ಇತರ ಸಾಮಾಜಿಕ ಮೂಲಸೌಕರ್ಯಗಳನ್ನು ಸ್ಥಾಪಿಸಲಾಗುತ್ತದೆ.

'ಧಾರಾವಿ ಅನುಭವ ಕೇಂದ್ರ'

ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಂದ 'ಧಾರಾವಿ ಅನುಭವ ಕೇಂದ್ರ'ದ ಉದ್ಘಾಟನೆಯಾದ ನಂತರ ಟವರ್ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಧಾರಾವಿಗೆ ಮೀಸಲಾದ ಗೀತೆ ಅನಾವರಣ ಮಾಡಲಾಯಿತು. ಇಲ್ಲಿನ ಜನರು, ಸಂಸ್ಕೃತಿ ಹಾಗೂ ಇತಿಹಾಸವನ್ನು ದಾಖಲಿಸುವ 'ಕಾಫಿ-ಟೇಬಲ್ ಬುಕ್' ಅನ್ನು ಬಿಡುಗಡೆಗೊಳಿಸಲಾಯಿತು.

ಒಟ್ಟು 22,500 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅನುಭವ ಕೇಂದ್ರವು, ವಸತಿ, ಕೆಲಸದ ಸ್ಥಳಗಳು, ಸೌಕರ್ಯಗಳು, ಸಾರಿಗೆ ಮತ್ತು ಮುಕ್ತ ಸ್ಥಳ ಒಳಗೊಂಡಿದೆ. 3ಡಿ ಪ್ರದರ್ಶನಗಳ ಮೂಲಕ ಪುನರಾಭಿವೃದ್ಧಿ ಯೋಜನೆ ಬಗ್ಗೆ ತಿಳಿಯಲು ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಸೀಮ್ ಕುಮಾರ್ ಗುಪ್ತಾ ಅವರು ಗೌರವಾನ್ವಿತ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧಾರಾವಿ ಪುನರಾಭಿವೃದ್ಧಿ ಯೋಜನೆ/ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ (DRP/SRA) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಂದ್ರ ಕಲ್ಯಾಣ್ಕರ್ ಕೂಡ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+