Adani: ಅದಾನಿ ಶಿಕ್ಷಣ ಸಂಸ್ಥೆ ಘಟಿಕೋತ್ಸವದಲ್ಲಿ ಸಿಎಂ ಫಡ್ನವೀಸ್‌ಗೆ D.Litt. ಪದವಿ, 2,320 ಪದವಿಗಳ ವಿತರಣೆ

ಮುಂಬೈ: ಮಹಾರಾಷ್ಟ್ರದ ವಾರ್ಧಾನಲ್ಲಿರುವ 'ಅದಾನಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್' (AIHER) ನ 17ನೇ ಘಟಿಕೋತ್ಸವದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಗೌರವ 'ಡಾಕ್ಟರ್ ಆಫ್ ಲೆಟರ್ಸ್' (D.Litt.) ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಅದಾನಿ ಫೌಂಡೇಶನ್‌ನ ಅಧ್ಯಕ್ಷ ಡಾ. ಪ್ರೀತಿ ಅದಾನಿ ಅವರ ಅಧ್ಯಕ್ಷತೆಯಲ್ಲಿ ಈ ಸಮಾರಂಭ ಜರುಗಿತು. 'ದತ್ತ ಮೇಘೆ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್' ಎಂಬ ಹೆಸರನ್ನು ಬದಲಾವಣೆ ಬಳಿಕ ನಡೆದ ಮೊದಲ ಘಟಿಕೋತ್ಸವ ಇದಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

D Litt at Adani Institute

ಇನ್ನೂ ದೇಶದ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವಾ ಆಡಳಿತ- ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ 'ನ್ಯಾಷನಲ್ ಮೆಡಿಕಲ್ ಕಮಿಷನ್' (NMC) ಅಧ್ಯಕ್ಷರಾದ ಡಾ. ಅಭಿಜಾತ್ ಶೇಠ್ ಅವರಿಗೆ ಗೌರವ 'ಡಾಕ್ಟರ್ ಆಫ್ ಸೈನ್ಸ್' (D.Sc.) ಪದವಿ ನೀಡಿ ಗೌರವಿಸಲಾಯಿತು.

ಘಟಿಕೋತ್ಸವದಲ್ಲಿ ಒಟ್ಟಾರೆ 10 ವಿಭಾಗಗಳಲ್ಲಿ ಬರೋಬ್ಬರಿ 2,320 ಪದವಿಗಳನ್ನು ಪ್ರದಾನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ದತ್ತ ಮೇಘೆ ಮೆಡಿಕಲ್ ಕಾಲೇಜಿನ ಪೂಜಲ್ ದೇವಿದಾಸ್ ಮಾಪಾರಿ ಅವರು ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ 23 ಪದಕಗಳನ್ನು ಪಡೆದರು. ಇನ್ನೂ 123 ಪಿಎಚ್.ಡಿ. (Ph.D.) ಪದವಿಗಳು ಸೇರಿವೆ. ಶೈಕ್ಷಣಿಕ ಸಾಧನೆಗಾಗಿ 83 ಮಂದಿ ಪುರಸ್ಕೃತರಿಗೆ ಒಟ್ಟು 123 ಚಿನ್ನದ ಪದಕಗಳು, ಏಳು ಬೆಳ್ಳಿ ಪದಕಗಳು ಮತ್ತು 13 ಇತರ ಬಹುಮಾನ ವಿತರಿಸಲಾಯಿತು.

ಆರ್ಥಿಕ ಸಾಧನೆಯೇ ಜೀವನದ ಸಕ್ಸಸ್ ಅಲ್ಲ

ಇದೇ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಫಡ್ನವೀಸ್ ಅವರು, ನೀವು ಮುಂದೆ ಭವಿಷ್ಯದಲ್ಲಿ ಸಮಾಜಕ್ಕೆ ಮರಳಿ ಕೊಡುಗೆ ನೀಡಬೇಕು. ಯಶಸ್ಸನ್ನು ಕೇವಲ ಆರ್ಥಿಕ ಸಾಧನೆಗಳಿಂದ ಅಳೆಯಬಾರದು. ನೀವು ಪದವಿ ಪಡೆಯಲು ಕಾರಣವಾದ ಈ ಸಂಸ್ಥೆಯನ್ನು ಸೃಷ್ಟಿಸಿದ್ದು ಸಮಾಜವೇ. ಹಾಗಾಗಿ, ಸಮಾಜಕ್ಕೆ ಮರಳಿ ಏನನ್ನಾದರೂ ನೀಡಬೇಕು. ಹಣ ಗಳಿಕೆಗಿಂತ ನೀವು ಈ ಸಮಾಜಕ್ಕೆ ಏನು ನೀಡುತ್ತೀರಿ ಎಂಬುದು ಮುಖ್ಯ, ಅದೇ ಯಶಸ್ಸು ಎಂದು ತಿಳಿಸಿದರು.

ಡಾಕ್ಟರೇಟ್ ಪದವಿ ಪಡೆಯಲು ಎಷ್ಟು ಶ್ರಮ ಬೇಕಾಗುತ್ತದೆ ಎಂಬುದರ ಕುರಿತು ತಮಾಷೆಯಾಗಿ ಮಾತನಾಡಿದರು. ಪಿಎಚ್.ಡಿ. ಪಡೆಯಲು ಇಷ್ಟೊಂದು ಅಗತ್ಯ ಮತ್ತು ಎಲ್ಲ ಕೆಲಸ ಮಾಡಬೇಕಾಗಿ ಬರಲಿಲ್ಲ ಎಂಬ ಬಗ್ಗೆ ತಮಗೆ ಸಮಾಧಾನವಿದೆ ಎಂದು ನಗೆ ಚಟಾಕಿ ಹಾರಿದರು.

ಇನ್ಣೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಬಗ್ಗೆ ಮಾತನಾಡಿದ ಡಾ. ಪ್ರೀತಿ ಅದಾನಿ ಅವರು, ಪದವೀಧರರು, ಪದಕ ವಿಜೇತರಿಗೆ, ಅವರ ಕುಟುಂಬದವರಿಗೆ ಮತ್ತು ಬೋಧಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಶೈಕ್ಷಣಿಕ ಸಾಧನೆ ಜತೆಗೆ ಜವಾಬ್ದಾರಿಯೂ ಬರುತ್ತದೆ. ಇಂದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಕ್ಷಣ. ವಿದ್ಯಾರ್ಥಿಗಳು, ಅವರ ಕುಟುಂಬಗಳು ಮತ್ತು ಶಿಕ್ಷಕರಿಗೆ, ಇದು ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪರಾಕಾಷ್ಠೆಯ ಸಂಕೇತ ಎಂದು ತಿಳಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ದೇಶದ ಗ್ರಾಮೀಣ, ಹಿಂದುಳಿದ ವರ್ಗದ ಜನರಿಗೂ ಸಿಗುವಂತೆ ಮಾಡಿದ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ದತ್ತ ಮೇಘೆ ಅವರಿಗೆ ಗೌರವ ಸಲ್ಲಿಸಿದರು. ಅದಾನಿ ಸಂಸ್ಥೆಗಳು ಸಾರ್ವಜನಿಕ ಸೇವೆಗೆ ಸಂಸ್ಥೆಯ ಬದ್ಧತೆ ಹೊಂದಿವೆ. ವಿದ್ಯಾರ್ಥಿಗಳನ್ನು ಬೆಂಬಲಿಸುವುದು ಮತ್ತು ರೋಗಿಗಳ ಘನತೆ ಕಾಪಾಡುವುದರಿಂದ ಹಿಡಿದು ಆರೋಗ್ಯ ರಕ್ಷಣೆಯ ಸವಾಲುಗಳ ಪರಿಹರಿಸುವ, ನಮ್ಮ ಸಂಶೋಧನೆ ಅಗತ್ಯವಿರುವವರಿಗೆ ತಲುಪುವವರೆಗೂ ವಿಶ್ವವಿದ್ಯಾಲಯದ ಕೆಲಸ ಎಂದು ವಿವರಿಸಿದರು.

ಆಸ್ಪತ್ರೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು

ವಿಶ್ವವಿದ್ಯಾನಿಲಯದ ಆಸ್ಪತ್ರೆ ಮೂಲ ಸೌಕರ್ಯ ಇನ್ನಷ್ಟು ಅಭಿವೃದ್ಧಿಯಾಗಲಿವೆ. ವಾರ್ಧಾ ಮತ್ತು ನಾಗ್ಪುರ ಕ್ಯಾಂಪಸ್‌ಗಳಲ್ಲಿ ಆಧುನಿಕ ವೈದ್ಯಕೀಯ ಉಪಕರಣಗಳು, ಸುಧಾರಿತ ಕ್ಲಿನಿಕಲ್ ಸಂಶೋಧನಾ ಸೌಲಭ್ಯಗಳು, ಸೂಪರ್-ಸ್ಪೆಷಾಲಿಟಿ ಸೇವೆಗಳ ನೀಡುವಂತೆ ಅಭಿವೃದ್ಧಿಗೊಳಿಸಲಾಗುತ್ತದೆ. ರೋಗ ತಡೆಗಟ್ಟುವಿಕೆ, ಆರಂಭಿಕ ರೋಗನಿರ್ಣಯ, ಕೈಗೆಟುಕುವ ಚಿಕಿತ್ಸೆ, ಸುಧಾರಿತ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸಂಶೋಧನೆಗಳಿಗೆ ವಿವಿಧ ಒತ್ತು ನೀಡಲಿದೆ. ಇವೆಲ್ಲವು ಮುಂದಿನ ಕೆಲವೇ ವರ್ಷಗಳಲ್ಲಿ ಸಾಧ್ಯವಾಗಲಿದೆ ಎಂದು ಡಾ.ಪ್ರೀತಿ ತಿಳಿಸಿದರು.

ದೇಶಾದ್ಯಂತ ವಿಶ್ವವಿದ್ಯಾನಿಲಯ ಅಸ್ತಿತ್ವವನ್ನು ವಿಸ್ತರಣೆ ಮಾಡುವ ಗುರಿ ಇದೆ. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಆಯಾ ಪ್ರದೇಶಗಳ ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ಕೈಗೆಟುಕುವ ಆರೋಗ್ಯ ಸೇವೆ ನೀಡುವುದು ಗುರಿಯಾಗಿದೆ. ಆರೋಗ್ಯ ರಕ್ಷಣೆ, ಶಿಕ್ಷಣ, ಲಿಂಗ ಸಮಾನತೆ ಮತ್ತು ಸೇರ್ಪಡೆಯಲ್ಲಿ ಸಂಸ್ಥೆಯ ಆದ್ಯತೆಗಳಿಗೆ ಮಾರ್ಗದರ್ಶಿ ಚೌಕಟ್ಟಾಗಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವಿವರಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಪ್ರೀತಿ, ಇಂದಿನ ತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಪುರಾವೆಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿ, ನಿಮ್ಮ ವೃತ್ತಿಜೀವನದುದ್ದಕ್ಕೂ ಕಲಿಕೆಯನ್ನು ಮುಂದುವರಿಸಿ ಎಂದು ಉತ್ತೇಜಿಸಿದರು.

ಅದಾನಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್

ಈ ಸಂಸ್ಥೆಯು ನಾಗ್ಪುರದಿಂದ ಸುಮಾರು 80 ಕಿಮೀ ದೂರದಲ್ಲಿರುವ ವಾರ್ಧಾದ ಸವಂಗಿ ಮೇಘೆಯಲ್ಲಿರುವ ಎಐಎಚ್‌ಇಆರ್ ಒಂದು ಬಹುಶಿಸ್ತೀಯ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಎಂಬ ಮನ್ನಣೆಗೆ ಪಾತ್ರವಾಗಿದೆ. 100 ವೈದ್ಯಕೀಯ ವಿದ್ಯಾರ್ಥಿಗಳನ್ನು ಹೊಂದಿರುವ ಸಂಸ್ಥೆಯಿಂದ 260 ಕ್ಕೂ ಹೆಚ್ಚು ಬಹುಶಿಸ್ತೀಯ ಕಾರ್ಯಕ್ರಮಗಳಲ್ಲಿ 14,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿರುವ ವಿಶ್ವವಿದ್ಯಾಲಯವಾಗಿ ಬೆಳೆದಿದೆ.

ಇಲ್ಲಿ ವೈದ್ಯಕೀಯ ವಿಜ್ಞಾನಗಳು, ದಂತ ವಿಜ್ಞಾನಗಳು, ಆಯುರ್ವೇದ ವಿಜ್ಞಾನಗಳು, ಭೌತಚಿಕಿತ್ಸೆ, ನರ್ಸಿಂಗ್ ವಿಜ್ಞಾನಗಳು, ಅಲೈಡ್ ಹೆಲ್ತ್ ಸೈನ್ಸಸ್, ಔಷಧ ವಿಜ್ಞಾನಗಳು, ಎಂಜಿನಿಯರಿಂಗ್ ಮತ್ತು ಅಲೈಡ್ ಸೈನ್ಸಸ್ ವಿಷಯಗಳಲ್ಲಿ ಕಲಿಯಬಹುದಾಗಿದೆ. AIHER ಸಂಸ್ಥೆಯು ನ್ಯಾಕ್ (NAAC) A++ ಮಾನ್ಯತೆ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+