AdWorld Showdown 2023: ಸೃಜನಶೀಲತೆ ಮತ್ತು ಹೊಸತನದ ಸಮಾಗಮ

ಗ್ಲೋಬಲ್ ಟ್ರೆಂಡ್ಸ್ ಫೋರಮ್‌ನ ಸಹಯೋಗದೊಂದಿಗೆ ಇಂಕ್‌ಸ್ಪೆಲ್ ಪ್ರಸ್ತುತಪಡಿಸುತ್ತಿರುವ ಆಡ್‌ವರ್ಲ್ಡ್ ಶೋಡೌನ್ 2023, ಮಾರ್ಕೆಟಿಂಗ್ ಜಗತ್ತಿನ ಅತ್ಯಂತ ನಿರೀಕ್ಷಿತ ಕಾರ್ಯಕ್ರಮಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿದೆ. ಈ ವೇದಿಕೆಯಲ್ಲಿ ಸೃಜನಶೀಲತೆ ಮತ್ತು ಹೊಸತನದ ಸಮಾಗಮವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಆಡ್‌ವರ್ಲ್ಡ್ ಶೋಡೌನ್ (AdWorld Showdown) 2023 ಇದು ಮಾರ್ಕೆಟಿಂಗ್ ಕಾರ್ಯಕ್ರಮವಲ್ಲ. ಉದ್ಯಮದಲ್ಲಿರುವ ಪ್ರತಿಭಾವಂತ ಮನಸ್ಸುಗಳು ಸೇರುವ ವೇದಿಕೆಯಾಘಿದೆ. ಮಾರ್ಕೆಟಿಂಗ್‌ನಲ್ಲಿ ಅನುಭವಿ ಪರಿಣತರಿಂದ ಉದಯೋನ್ಮುಖ ಪ್ರತಿಭೆಗಳವರೆಗೆ, ಈವೆಂಟ್ ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ಜಾಹೀರಾತಿನ ಬಗ್ಗೆ ಆಸಕ್ತಿಹೊಂದಿರುವವರ ಸಭೆಯ ವೇದಿಕೆಯಾಗಿ ಕೆಲಸ ಮಾಡಲಿದೆ. ಅತ್ಯುತ್ತಮ ಸಂಪರ್ಕ, ಸಹಯೋಗ ಮತ್ತು ಕಲಿಕೆಗೆ ಒಂದು ಉತ್ತಮ ಅವಕಾಶವಾಗಿದೆ.

 AdWorld Showdown 2023: A Platform Where Creativity and Innovation Converge

ಇಂಕ್‌ಸ್ಪೆಲ್‌ನ ಆಡ್‌ವರ್ಲ್ಡ್ ಶೋಡೌನ್‌ ಶ್ರೇಷ್ಠತೆಯನ್ನು ಗುರಿಯ ಬದಲಾಗಿ ಮಾನದಂಡವೆಂದು ನಿರ್ಧರಿಸಲಾಗಿದೆ. ಬ್ರ್ಯಾಂಡಿಂಗ್, ಸೃಜನಶೀಲ ಸಂವಹನ ಮತ್ತು ಜಾಹೀರಾತುಗಳ ಪರಿಣಾಮಕಾರಿ ಬಳಕೆಯನ್ನು ಗುರುತಿಸಲು ಮತ್ತು ಆಚರಿಸಲು ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಜಾಹೀರಾತು ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಬ್ರ್ಯಾಂಡ್ ಜಾಹೀರಾತಿನಿಂದ ಉತ್ಕೃಷ್ಟವಾದ ಬ್ರಾಂಡ್ ಅನುಭವ ಮತ್ತು ತಂತ್ರ, ವಿನ್ಯಾಸ, ಪಿಆರ್, ಮಾಧ್ಯಮ ಯೋಜನೆ ಮತ್ತು ಸಾಂಪ್ರದಾಯಿಕ ಮತ್ತು ಡಿಜಿಟಲ್ ವಿಭಾಗಗಳ ಅಡಿಯಲ್ಲಿ ಬ್ರ್ಯಾಂಡ್ ಐಡೆಂಟಿಟಿ ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದು ಪರಿಣಾಮಕಾರಿ ಮಾರ್ಕೆಟಿಂಗ್ ಪ್ರಚಾರ ಮಾಡುವಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಕಾರ್ಯತಂತ್ರದ ಚಿಂತನೆಯ ಶಕ್ತಿಯನ್ನು ಆಚರಿಸುತ್ತದೆ.

ಆಡ್‌ವರ್ಲ್ಡ್‌ ಶೋಡೌನ್ 2023 ಕಾರ್ಯಕ್ರಮಕ್ಕಿಂತ ಹೆಚ್ಚಿನದಾಗಿದೆ. ಇದು ಮಾರ್ಕೆಟಿಂಗ್ ಪ್ರಯಾಣವನ್ನು ಪರಿವರ್ತಿಸುವ ಅನುಭವ ನೀಡಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಇತ್ತೀಚಿನ ಉದ್ಯಮದ ಸ್ಥತಿಗತಿಗಳನ್ನಿ ತಿಳಿಯಲು, ಉದ್ಯಮದ ಪ್ರಮುಖರಿಂದ ಅಮೂಲ್ಯವಾದ ಒಳನೋಟಗಳನ್ನು ಪಡೆಯಲು ಮತ್ತು ತಮ್ಮ ಮಾರ್ಕೆಟಿಂಗ್ ಪ್ರಯತ್ನಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಕೃತಕ ಬುದ್ಧಿಮತ್ತೆಯ (AI) ಶಕ್ತಿಯನ್ನು ಬಳಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ವ್ಯಾಪಾರೋದ್ಯಮಿಗಳು, ಫಾರ್ವರ್ಡ್-ಥಿಂಕಿಂಗ್ ವ್ಯಕ್ತಿಗಳು ಮತ್ತು ಮಾರ್ಕೆಟಿಂಗ್ ಬಗ್ಗೆ ಉತ್ಸುಕರಾಗಿರುವ ಯಾರಾದರೂ ಕಾರ್ಯಕ್ರಮದ ಭಾಗವಾಗಲು ಆಹ್ವಾನ ನೀಡಲಾಗಿದೆ. ಗ್ಲೋಬಲ್ ಟ್ರೆಂಡ್ಸ್ ಫೋರಮ್, ಇಂಡಿಯಾ ಕ್ರಿಯೇಟಿವ್ ಇಂಡಸ್ಟ್ರೀಸ್ ಕೌನ್ಸಿಲ್, ಜೋಶ್ ಆಪ್, ಒನ್ ಇಂಡಿಯಾ, ಕೆನ್ಸಿಯೊ, ForPressRelease.com, ಇಡಿ ಟೈಮ್ಸ್, ದಿ ಪ್ರಿವಲೆಂಟ್ ಇಂಡಿಯಾ ಮತ್ತು 24 ಫ್ರೇಮ್ಸ್ ಡಿಜಿಟಲ್ ಸೇರಿದಂತೆ ಪ್ರಮುಖ ಪಾಲುದಾರರು ಈ ಕಾರ್ಯಕ್ರಮ ಪ್ರಾಯೋಜಕರಾಗಿದ್ದಾರೆ.

ಕಾರ್ಯಕ್ರಮದ ಪೂರ್ಣ ವೇಳಾಪಟ್ಟಿ, ಗೌರವಾನ್ವಿತ ಸ್ಪೀಕರ್‌ಗಳು ಮತ್ತು ತೀರ್ಪುಗಾರರು ಮತ್ತು ನೋಂದಣಿ ವಿವರಗಳ ನವೀಕರಣಗಳಿಗಾಗಿ, ದಯವಿಟ್ಟು ಈವೆಂಟ್ ವೆಬ್‌ಸೈಟ್‌ಗೆ ಭೇಟಿ ನೀಡಲು ಕೋರಲಾಗಿದೆ. ಹೆಚ್ಚಿನ ವಿವರಗಳು ಮತ್ತು ನೋಂದಣಿಗಾಗಿ https://theadworld.in ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+