Adani: ಅದಾನಿ ಪೋರ್ಟ್ಸ್‌ಗೆ ಶ್ರೀಲಂಕಾದಲ್ಲಿ ಬಿಗ್ ಎಕ್ಸ್‌ಪ್ಯಾನ್ಷನ್! ₹6,500 ಕೋಟಿಯ ಯೋಜನೆಗೆ ಚಾಲನೆ

ಭಾರತದ ಪ್ರತಿಷ್ಠಿತ ಉದ್ಯಮ ಸಮೂಹವಾದ 'ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್' (APSEZ) ನಿರ್ವಹಣೆಯ 'ಕೊಲಂಬೊ ವೆಸ್ಟ್ ಇಂಟರ್ನ್ಯಾಷನಲ್ ಟರ್ಮಿನಲ್' ವಿಸ್ತರಣೆಗೆ ಶ್ರೀಲಂಕ ದೇಶದ ಪ್ರಧಾನಿ ಡಾ. ಹರಿಣಿ ಅಮರಸೂರ್ಯ ಅವರು ಗುರುವಾರ ಅಧಿಕೃತ ಚಾಲನೆ ಕೊಟ್ಟರು.

ಈ 'ಕೊಲಂಬೊ ವೆಸ್ಟ್ ಇಂಟರ್ನ್ಯಾಷನಲ್ ಟರ್ಮಿನಲ್'ನ (CWIT) ಬಂದರು 750 ದಶಲಕ್ಷ ಡಾಲರ್ ಮೌಲ್ಯದ ಹೂಡಿಕೆಯಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುತ್ತಿದೆ. ಇದರಿಂದ ಹಾಲಿ ಟರ್ಮಿನಲ್ ಸಾಮರ್ಥ್ಯವು 1.6 ದಶ ಲಕ್ಷದಿಂದ 3.2 ದಶಲಕ್ಷ ಕಂಟೈನರ್ ಅಳತೆಯ ಮಾನದಂಡ (TEU) ಹೆಚ್ಚಾಗಲಿದೆ ಎಂದು ಕಂಪನಿ ತಿಳಿಸಿದೆ. ಮುಂದಿನ ಮೂರು ವರ್ಷಗಳಲ್ಲಿ (2028) ವೇಳೆಗೆ ಕೊಲಂಬೊ ಬಂದರಿನ ಒಟ್ಟು 13 ದಶಲಕ್ಷ ಟಿಇಯು ಸಾಮರ್ಥ್ಯದ ಗುರಿಯಲ್ಲಿ ಸುಮಾರು ಶೇಕಡಾ 25 ನಿರ್ವಹಿಸುವ ಗುರಿ ಹಾಕಿಕೊಳ್ಳಲಾಗಿದೆ.

Adani Ports

2024ರಲ್ಲಿ CWIT ಸಂಸ್ಥೆ ತನ್ನ ಆರಂಭಿಕ ವರ್ಷದಲ್ಲೇ 1 ದಶಲಕ್ಷ ಟಿಇಯು ನಿರ್ವಹಿಸಿದ ಅತ್ಯಂತ ವೇಗದ ಟರ್ಮಿನಲ್ ಎಂಬ ಹೆಗ್ಗಳಿಕೆ ಪಡೆದಿತ್ತು. ಸದ್ಯ ಕಾರ್ಯಾಚರಣೆಯ ಮೊದಲ 18 ತಿಂಗಳುಗಳಲ್ಲೇ 2 ದಶಲಕ್ಷ ನಿರ್ವಹಣೆ ಮಾಡಿದ್ದು, ಇದು ಕೊಲಂಬೊ ಬಂದರಿನ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಸ್ಥಾಪಿಸಿದೆ.

ಈ ಬಂದರುವಿನ ಟರ್ಮಿನಲ್‌ನಲ್ಲಿ ಏಕಕಾಲದಲ್ಲಿ 3 ಬೃಹತ್ ಕಂಟೈನರ್ ಹಡಗುಗಳನ್ನು ನಿಲ್ಲಿಸಲು (ಬರ್ತ್ ಮಾಡಲು) ಸಾಧ್ಯವಾಗುತ್ತದೆ. ಇದು ಪೂರ್ವ-ಪಶ್ಚಿಮ ವ್ಯಾಪಾರ ಮಾರ್ಗದಲ್ಲಿ ಪ್ರಮುಖ 'ಟ್ರಾನ್ಸ್‌ಶಿಪ್‌ಮೆಂಟ್ ಹಬ್' (ಸರಕು ವರ್ಗಾವಣೆ ಕೇಂದ್ರ) ಆಗಿ ಕೊಲಂಬೊದ ಸ್ಥಾನ ಮತ್ತಷ್ಟು ಗಟ್ಟಿಗೊಳಿಸಲಿದ್ದು, ಭಾರತೀಯ ಭವಿಷ್ಯಕ್ಕೂ ಉತ್ತಮ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಹರಿಣಿ ಅಮರಸೂರ್ಯ, ಅತ್ಯಂತ ವಿಶ್ವಾಸನೀಯ ಪಾಲುದಾರಿ, ಅತ್ಯಾಧುನಿಕ ಮೂಲಸೌಕರ್ಯಗಳು ಹಾಗೂ ಧೈರ್ಯಶಾಲಿ ದೃಷ್ಟಿಕೋನ ಮೇಳೈಸಿದಾಗ ಶ್ರೀಲಂಕಾ ಏನನ್ನು ಸಾಧಿಸಬಲ್ಲದು ಎಂಬುದನ್ನು ಈ ಟರ್ಮಿನಲ್‌ನ ಸಾಕ್ಷಿ ಎಂದು ತಿಳಿಸಿದರು.

ಈ ಬಂದರು ನಿರ್ದಿಷ್ಟ TEU ಗುರಿ ತಲುಪುವ ಜೊತೆಗೆ ಎರಡನೇ ಹಂತ ವಿಸ್ತರಣೆಯು ಈ ಕೊಲಂಬೊ ಬಂದರಿನ ಮಟ್ಟಿಗೆ ಅದ್ಭುತ ಸಾಧನೆಯಾಗಲಿದೆ. ಇಂದಿನ ವಿಸ್ತರಣೆ ಗುರಿ ಹಾಗೂ CWIT ಯಂತಹ ಹೂಡಿಕೆಗಳಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತವೆ. ವಿಶ್ವ ಮಟ್ಟದಲ್ಲಿ ವಾಣಿಜ್ಯ ಚುಟುವಟಿಕೆಗಳನ್ನು ಆಕರ್ಷಿಸಬಹುದಾಗಿದೆ. ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತೆ ಹೆಚ್ಚಾಗುತ್ತದೆ. ಹಿಂದೂ ಮಹಾಸಾಗರದ ಪ್ರಮುಖ ಕಡಲ ಹಾಗೂ ಲಾಜಿಸ್ಟಿಕ್ಸ್ ಕೇಂದ್ರವಾಗುವ ಶ್ರೀಲಂಕಾದ ಮಹತ್ವಾಕಾಂಕ್ಷೆ ಮತ್ತಷ್ಟು ವೃದ್ಧಿಸಲಿದೆ ಎಂದು ವಿವರಿಸಿದರು.

'ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್' (APSEZ) ನಿರ್ದೇಶಕ ಮತ್ತು ಸಿಇಒ ಆಗಿರುವ ಅಶ್ವನಿ ಗುಪ್ತಾ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಜಾಗತಿಕ ಶಿಪ್ಪಿಂಗ್ ಕಂಪನಿಗಳ ವಿಶ್ವಾಸದ ಮತ್ತಷ್ಟು ಹೆಚ್ಚಾಗಲಿದೆ. ಕಂಪನಿಯು ಎರಡನೇ ಹಂತವು ಕಂಪನಿಯ ವಿಶ್ವಮಟ್ಟದ ಕಾರ್ಯಾಚರಣೆಗಳ ವ್ಯಾಪ್ತಿಯಲ್ಲಿಗೆ ಒಳಗೊಳ್ಳಲಿದೆ. ಹಿಂದೂ ಮಹಾಸಾಗರದ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬೇರೂರಲಿದೆ ಎಂದು ಅವರು ಬಣ್ಣಿಸಿದರು.

ಶ್ರೀಲಂಕಾದ ರಫ್ತು-ಆಮದು ಸರಕಿಗೆ ಕೊಡುಗೆ

ಅಧಿಕ ಸಾಮರ್ಥ್ಯ, ಪೂರ್ತಿ ಸ್ವಯಂಚಾಲಿತ ವ್ಯವಸ್ಥೆ ಹಾಗೂ ಆಳವಾದ ನೀರಿನ ಬಂದರು ಮೂಲಸೌಕರ್ಯದೊಂದಿಗೆ, CWIT ಕೊಲಂಬೊದ ಪ್ರಮುಖ 'ಟ್ರಾನ್ಸ್‌ಶಿಪ್‌ಮೆಂಟ್' (ಸರಕು ವರ್ಗಾವಣೆ) ಕೇಂದ್ರವಾಗಿದೆ. ಅಲ್ಲದೇ ಶ್ರೀಲಂಕಾದ ರಫ್ತು-ಆಮದು ಸರಕು ಸಾಗಣೆಗೆ ಕೊಡುಗೆ ನೀಡಲಿದೆ ಎಂದು ತಿಳಿಸಿದರು.

ಜಾನ್ ಕೀಲ್ಸ್ ಗ್ರೂಪ್‌ನ ಅಧ್ಯಕ್ಷರಾದ ಕೃಷನ್ ಬಲೇಂದ್ರ ಅವರು, ಪ್ರಸ್ತುತ ಪಾಲುದಾರಿಕೆಯು ಮುಂದಿನ ಒಂದೂವರೆ ವರ್ಷದಲ್ಲಿ 2 ಮಿಲಿಯನ್ TEU ಗುರಿ ತಲುಪುವುದಾಗಿದೆ. ಕಂಪನಿಯು ಬಂದರು ವಿಸ್ತರಣೆಯಿಂದ ಕೊಲಂಬೊ ಪ್ರಮುಖ ಟ್ರಾನ್ಸ್‌ಶಿಪ್‌ಮೆಂಟ್ ಕೇಂದ್ರವಾಗಿ ಸುಧಾರಿಸಲಿದೆ. ಈ ಪ್ರದೇಶದಲ್ಲಿ ವ್ಯಾಪಾರದ ಪ್ರಮುಖ ಕೇಂದ್ರವಾಗಿ ಶ್ರೀಲಂಕಾದ ಬೆಳವಣಿಗೆಯನ್ನು ಬೆಂಬಲಿಸಲು ಹೆಚ್ಚಿನ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.

ಮೊದಲ ಸ್ವಯಂಚಾಲಿತ, ಆಳ ನೀರಿನ ಟರ್ಮಿನಲ್

CWIT ಶ್ರೀಲಂಕಾದ ಮೊದಲ ಸಂಪೂರ್ಣ ಸ್ವಯಂಚಾಲಿತ, ಆಳವಾದ ನೀರಿನ ಕಂಟೈನರ್ ಟರ್ಮಿನಲ್ ಆಗಿದೆ. ಇದನ್ನು APSEZ, ಜಾನ್ ಕೀಲ್ಸ್ ಹೋಲ್ಡಿಂಗ್ಸ್ ಮತ್ತು ಶ್ರೀಲಂಕಾ ಬಂದರು ಪ್ರಾಧಿಕಾರವು 35 ವರ್ಷಗಳ 'ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್' ನಿರ್ಮಿಸಿ ಹಸ್ತಾಂತರ ಮಾಡಿದೆ. ಇದರಿಂದ 3000ಕ್ಕೂ ಅಧಿಕ ಪ್ರತ್ಯೆಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಿವೆ. ಇಲ್ಲಿನ ವಿದ್ಯುತ್ ಚಾಲಿತ ನಿರ್ವಹಣೆಯ ಪರಿಣಾಮ ಪರಿಸರ ಹಾನಿ ಕಡಿಮೆ ಆಗುತ್ತದೆ. ವಿಶ್ವದ ಅತಿದೊಡ್ಡ ಕಂಟೈನರ್ ಹಡಗುಗಳಿಗೂ ಈ ಟರ್ಮಿನಲ್‌ ನಲ್ಲಿ ಸೇವೆ ನೀಡಬಹುದಾದಷ್ಟು ಮೂಲಸೌಕರ್ಯ ಇಲ್ಲಿವೆ ಎಂದರು.

ಕಂಪನಿ ಕುರಿತು ನೋಡುವುದಾದರೆ, APSEZ ಜಾಗತಿಕ ಮಟ್ಟದಲ್ಲಿ ಅನೇಕ ವ್ಯವಹಾರ, ಪಾಲುದಾರಿಗೆ ಹೊಂದಿರುವ 'ಅದಾನಿ ಸಮೂದಹ' ಒಂದು ಭಾಗವಾಗಿವೆ. ಸಾರಿಗೆ ನಿರ್ವಾಹಕ ಸಂಸ್ಥೆಯಾಗಿದೆ. ಡಿಜಿಟಲ್ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ (AI) ಆಧಾರಿತ ಕಾರ್ಯಕ್ಷಮತೆ ಸುಧಾರಣಾ ವ್ಯವಸ್ಥೆಗಳೊಂದಿಗೆ "ಶೋರ್-ಟು-ಡೋರ್" (ಬಂದರಿನಿಂದ ಗ್ರಾಹಕರ ಬಾಗಿಲವರೆಗೆ) ಸೇವೆಯು ರೈಲು ಸಾರಿಗೆ, ಬಹು-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಗೋದಾಮು ನಿರ್ವಹಣೆ ಮತ್ತು ರಸ್ತೆ ಮೂಲಕ ಅಂತಿಮ ಸರಕು ವಿತರಣೆ ಒಳಗೊಂಡಿದೆ.

ಈ ಕಂಪನಿಯು ಭಾರತದ ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಕರಾವಳಿಗಳಲ್ಲಿ 16 ಬಂದರುಗಳು ಮತ್ತು ಟರ್ಮಿನಲ್‌ಗಳನ್ನು ಹಾಗೂ 136 ಹಡಗುಗಳ ನೌಕಾ ಪಡೆಯನ್ನು ನಿರ್ವಹಿಸುತ್ತಿದೆ. ಬೃಹದಾಕಾರದ ಲಾಜಿಸ್ಟಿಕ್ಸ್ ಜಾಲ ಹೊಂದಿದ್ದು, 3.1 ದಶಲಕ್ಷ ಚದರ ಅಡಿ ವಿಸ್ತೀರ್ಣದ ಗೋದಾಮು ಹೊಂದಿದೆ. ಸಾವಿರಾರು ಟ್ರಕ್‌ಗಳನ್ನು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂದುತ್ತಿರುವ ಕಂಪನಿಯಾಗಿ ಅಚ್ಚೊತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+