Adani: ಅದಾನಿ ಕಂಪನಿ ದಾಖಲೆಯ ಅರ್ಧವಾರ್ಷಿಕ EBITDA; ₹11,958 ಕೋಟಿ ಆದಾಯ, ಶೇ.56ರಷ್ಟು ಏರಿಕೆ

Adani: ಅದಾನಿ ಸಮೂಹದ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) 2026 ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಮತ್ತು ಅರ್ಧ ವರ್ಷದ ಆರ್ಥಿಕ ವರ್ಷದಲ್ಲಿ ಕಂಪನಿಯು 11,958 ಕೋಟಿ ರೂಪಾಯಿಗಳಷ್ಟು ಸಾರ್ವಕಾಲಿಕ ಗರಿಷ್ಠ EBITDA (ಇಬಿಐಟಿಡಿಎ) ದಾಖಲಿಸಿರುವುದಾಗಿ ಬುಧವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಂಪನಿಯು 2026-27ರಲ್ಲಿ ಶೇ. 56ಗೂ ಅಧಿಕ ಲಾಭ ಗಳಿಕೆ ಮಾಡಿದೆ.

AEL ಕಂಪನಿಯು FY27 ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಏಕೀಕೃತ ಆದಾಯವು ವಾರ್ಷಿಕ ಆಧಾರದ ಮೇಲೆ ಶೇಕಡಾ 62 ರಷ್ಟು ಹೆಚ್ಚಾಗಿದೆ. 71,569 ಕೋಟಿ ರೂಪಾಯಿಗಳಿಗೆ ತಲುಪಿದೆ. 11,958 ಕೋಟಿ ರೂಪಾಯಿ (56%) ಗಳಿಕೆ ಮೂಲಕ ಬಡ್ಡಿ, ತೆರಿಗೆ ಮತ್ತು ಇತರ ವೆಚ್ಚಗಳಿಗೆ ಮುಂಚೆಯ ಕಾರ್ಯಾಚರಣಾ ಲಾಭದಲ್ಲಿ (EBITDA) ಪ್ರಗತಿ ಸಾಧಿಸಿದೆ. 2026-27ರ ಮೊದಲ ಮೂರು ತಿಂಗಳಲ್ಲಿ (Q1) 2,644 ಕೋಟಿ ರೂ. ಲಾಭ ದಾಖಲಾಗಿತ್ತು. ತೆರಿಗೆ ಪೂರ್ವ ಲಾಭವು ಶೇ.45 ರಷ್ಟು ಹೆಚ್ಚಾಗುವ ಮೂಲಕ 3,297 ಕೋಟಿ ರೂ.ಗೆ ಹೆಚ್ಚಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

Adani Enterprises Q2 Results FY27

332 ಕೋಟಿ ರೂ. ತೆರಿಗೆ ನಂತರದ ಲಾಭವು (PAT) ದಾಖಲಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿದ್ದ 4,189 ಕೋಟಿ ರೂ.ಗಿಂತಲೂ ಕಡಿಮೆ ಎನ್ನಲಾಗಿದೆ. ಮೊದಲ ತ್ರೈಮಾಸಿಕದ ಇತ್ಯರ್ಥ ಮತ್ತು ಹಿಂದಿನ ಅವಧಿಯಲ್ಲಿದ್ದ 3,583 ಕೋಟಿ ರೂ. ಅಸಾಧಾರಣ ಅಂಶದಿಂದ ಬದಲಾವಣೆ ಆಗಿದೆ. ಇನ್ನೂ ತಾಮ್ರ (Copper) ವ್ಯವಹಾರದಲ್ಲಿ ಸಾಮರ್ಥ್ಯ ವಿಸ್ತರಣೆಯು EBITDA ಮತ್ತು PBT ಹೆಚ್ಚಳಕ್ಕೆ ಕಾರಣವಾಯಿತು ಎಂದು ಕಂಪನಿ ತಿಳಿಸಿದೆ. ಇನ್ನೂ 'ಕೇರ್ ರೇಟಿಂಗ್ಸ್' ಸಂಸ್ಥೆಯು AEL ನ ದೀರ್ಘಕಾಲೀನ ಕ್ರೆಡಿಟ್ ರೇಟಿಂಗ್ ಅನ್ನು 'ಎಎ/ಸ್ಥಿರ' (AA/Stable) ಮಟ್ಟಕ್ಕೆ ಹೆಚ್ಚಿಸುವ ಮೂಲಕ ಇತಿಹಾಸದಲ್ಲಿ ಅತ್ಯಧಿಕ ರೇಟಿಂಗ್ ಪಡೆದಂತಾಗಿದೆ.

2026-27ರ ಎರಡನೇ ತ್ರೈಮಾಸಿಕದ (Q2) ವಹೀವಾಟು ವಿವರ

ಇದೇ ಆರ್ಥಿಕ ವರ್ಷದಲ್ಲಿ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ (Q2) ಕಂಪನಿಯ ಆದಾಯವು ಶೇ. 74 ರಷ್ಟು ಏರಿಕೆಯಾಗಿ 38,023 ಕೋಟಿ ರೂ. ತಲುಪಿತ್ತು. ಆಗ EBITDA ಶೇ.62 ರಷ್ಟು ಹೆಚ್ಚಾಗಿ 6,316 ಕೋಟಿ ರೂ. ದಾಖಲಿಸಿತ್ತು. ಇನ್ನೂ ತೆರಿಗೆ ಪೂರ್ವ ಲಾಭವು (PBT) ಶೇಕಡಾ 146 ರಷ್ಟು ಜಿಗಿದು 2,002 ಕೋಟಿ ರೂ. ಮುಟ್ಟಿದೆ. ಮಾಲೀಕರಿಗೆ ಸೇರಬಹುದಾದ ತೆರಿಗೆ ನಂತರದ ಲಾಭವು (PAT) 1,492 ಕೋಟಿ ರೂ.ನಷ್ಟಿದೆ. ಇದೆಲ್ಲವು ಕಳೆದ ವರ್ಷಕ್ಕಿಂತ ಹೋಲಿಕೆ ಮಾಡಿದರೆ ಶೇ.55 ಕುಸಿತ (ಅಂದಿನ 3,304 ಕೋಟಿ ರೂ) ಕಂಡಾಗಿದೆ.

ವ್ಯಾಪಾರದ ಪ್ರಮುಖಾಂಶಗಳು ಹೀಗಿವೆ

ಹೊಸ ಇಂಧನ ಪರಿಸರ ವ್ಯವಸ್ಥೆ (ANIL) ಕಳೆದ ಸೆಪ್ಟೆಂಬರ್ ನಲ್ಲಿ 4.3 GW ಸಾಮರ್ಥ್ಯದ 'TOPCon' ಘಟಕ ಆರಂಭಿಸಿತು. ಹೀಗಾಗಿ 'ಅದಾನಿ ನ್ಯೂ ಇಂಡಸ್ಟ್ರೀಸ್' ತನ್ನ ಸೋಲಾರ್ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ10 GW ಗೆ ವಿಸ್ತರಿಸಿತು. ಎರಡನೇ ತ್ರೈಮಾಸಿಕದಲ್ಲಿ (Q2), ಮಾಡ್ಯೂಲ್ ಮಾರಾಟವು ಶೇ.35 ರಷ್ಟು ಏರಿಕೆಯಾಗಿ 1,478 MW ಮುಟ್ಟಿದ್ದು, ವಿಂಡ್ ಟರ್ಬೈನ್ ಜನರೇಟರ್‌ಗಳ (WTG) ಮಾರಾಟವು ಶೇ.25 ರಷ್ಟು ಏರಿಕೆಯಾಗಿ 35 ಸೆಟ್‌ಗಳನ್ನು ತಲುಪಿದೆ. ಆದಾಗ್ಯೂ ANIL ಪರಿಸರ ವ್ಯವಸ್ಥೆಯ ಎರಡನೇ ತ್ರೈಮಾಸಿಕದ EBITDA (ಬಡ್ಡಿ, ತೆರಿಗೆ, ಸವಕಳಿ ಮತ್ತು ಅಮೋರ್ಟೈಸೇಶನ್ ಪೂರ್ವ ಗಳಿಕೆ) ಶೇ. 7 ರಷ್ಟು ಕುಸಿದು ರೂ. 1,094 ಕೋಟಿಗೆ ತಲುಪುವ ಮೂಲಕ ಕಳೆದ ವರ್ಷಕ್ಕಿಂತ ಕಡಿಮೆ ಲಾಭ ಮಾಡಿತು.

ಡೇಟಾ ಸೆಂಟರ್‌ಗಳು:

'ಅದಾನಿ ಕನೆಕ್ಸ್' ತನ್ನ ನವಿ ಮುಂಬೈ ಡೇಟಾ ಸೆಂಟರ್‌ಗಾಗಿ 240 MW ಸಾಮರ್ಥ್ಯದ ಹೊಸ 'ಹೈಪರ್‌ಸ್ಕೇಲ್'ಆರ್ಡರ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಒಟ್ಟು ಒಪ್ಪಂದ ಮಾಡಿಕೊಂಡ ಸಾಮರ್ಥ್ಯವು 1.2 GW ಗಿಂತ ಹೆಚ್ಚಾಗಿದೆ. ಈ ತ್ರೈಮಾಸಿಕದಲ್ಲಿ ಕಾರ್ಯಾಚರಣಾ ಸಾಮರ್ಥ್ಯವು 94.6 MW ಗೆ ಏರಿಕೆಯಾಗಿದೆ; ನೋಯ್ಡಾದಲ್ಲಿ 10 MW ಮತ್ತು ಪುಣೆಯಲ್ಲಿ 19.2 MW ಸಾಮರ್ಥ್ಯ ಉತ್ಪಾದನೆಯನ್ನು ಗ್ರಾಹಕರಿಗೆ ನೀಡಲಾಗಿದೆ.

ವಿಮಾನ ನಿಲ್ದಾಣಗಳು:

ಎರಡನೇ ತ್ರೈಮಾಸಿಕದಲ್ಲಿ ಒಟ್ಟು ಆದಾಯವು ಶೇ.20 ರಷ್ಟು ಹೆಚ್ಚಾಗಿ 3,786 ಕೋಟಿ ರೂ.ಗೆ ತಲುಪಿತ್ತು. ಇದರಿಂದ EBITDA ಶೇ.55 ರಷ್ಟು ಹೆಚ್ಚಾಗಿ 1,641 ಕೋಟಿ ರೂ. ದಾಖಲಿಸಿತ್ತು. ಈ ವಿಭಾಗವು ಎರಡನೇ ತ್ರೈಮಾಸಿಕದಲ್ಲಿ ರೂ. 290 ಕೋಟಿಯಷ್ಟು PBT (ತೆರಿಗೆ ಪೂರ್ವ ಲಾಭ) ನಷ್ಟ ಕಂಡಿದ್ದು, ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ನವಿ ಮುಂಬೈ ವಿಮಾನ ನಿಲ್ದಾಣದ ಬಂಡವಾಳೀಕರಣದ ನಂತರ ಸವಕಳಿ ವೆಚ್ಚ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಕಂಪನಿ ತಿಳಿಸಿದೆ.

ಎರಡನೇ ತ್ರೈಮಾಸಿಕದಲ್ಲಿ ಪ್ರಯಾಣಿಕರ ಸಂಖ್ಯೆ ಶೇ.6 ರಷ್ಟು ಇಳಿಕೆಯಾಗಿ 21.2 ದಶಲಕ್ಷಕ್ಕೆ ತಲುಪಿದೆ, ಆದರೆ ಸರಕು ಸಾಗಣೆ (cargo) ಪ್ರಮಾಣವು ಶೇ.11 ರಷ್ಟು ಏರಿಕೆಯಾಗಿ 3.2 ಲಕ್ಷ ಟನ್‌ಗಳಿಗೆ ತಲುಪಿದೆ. ಗಣಿಗಾರಿಕೆ ಸೇವೆಗಳು ಮತ್ತು ಐಆರ್ ಎಂ ಎರಡನೇ ತ್ರೈಮಾಸಿಕದಲ್ಲಿ ಗಣಿಗಾರಿಕೆ ಸೇವೆಗಳ ಅಡಿಯಲ್ಲಿ ರವಾನೆಯಾದ ಪ್ರಮಾಣವು ಶೇ.10.7 ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟಿದೆ. ಇದು ಶೇ.2 ರಷ್ಟು ಹೆಚ್ಚಳವಾಗಿದೆ. ಇಂಟಿಗ್ರೇಟೆಡ್ ರಿಸೋರ್ಸ್ ಮ್ಯಾನೇಜ್‌ಮೆಂಟ್ (IRM) ನಲ್ಲಿ, ಮಾರಾಟ ಪ್ರಮಾಣವು ಶೇ.34 ರಷ್ಟು ಕಡಿಮೆ ಆಗಿದೆ.

ಈ ಎಲ್ಲ ಬೆಳವಣಿಗೆ, ಆದಾಯ, ವಹೀವಾಟು ಕುರಿತು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಪ್ರತಿಕ್ರಿಯಿಸಿದ್ದು, 'ಆದಾಯ, ಲಾಭ, ಅಧಿಕ ವಹೀವಾಟನ್ನು ನಿರಂತರವಾಗಿ ಹೆಚ್ಚಿಸಬೇಕಾದುದರ ಮಧ್ಯೆ ತೀವ್ರ ಅಡಚಣೆಗಳ ಸನ್ನಿವೇಶದಲ್ಲಿದ್ದೇವೆ. ನಮ್ಮ ವ್ಯವಹಾರಗಳಲ್ಲಿ ಹೆಚ್ಚು ಹೆಚ್ಚು ದೊಡ್ಡ ಮತ್ತು ಸಂಕೀರ್ಣ ಬದ್ಧತೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ' ಎಂದು ಹೇಳಿದರು.

ಸಮಗ್ರ ಇಂಧನ, ವಿಮಾನ ನಿಲ್ದಾಣಗಳು ಮತ್ತು ಕೃತಕ ಬುದ್ಧಿಮತ್ತೆ (AI) ಗೆ ಸಂಬಂಧಿಸಿದಂತೆ ಕಂಪನಿಯ ಹೂಡಿಕೆಗಳು ಹೆಚ್ಚಾಗಿವೆ. ಅದಾನಿ ಕಂಪನಿಯ ಅನುಷ್ಠಾನ ಸಾಮರ್ಥ್ಯಗಳನ್ನು ದೇಶೀಯ ಮತ್ತು ಜಾಗತಿಕ ಹೂಡಿಕೆದಾರರು ನಂಬಿದ್ದಾರೆ. ಅದೇ ನಂಬಿಕಯೊಂದಿಗೆ ನಮ್ಮೊಂದಿಗೆ ಪಾಲುದಾರರಾಗಿದ್ದಾರೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

"ದೇಶವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಅವಕಾಶಗಳು ಇವೆ. ಅದೆಲ್ಲವನ್ನು ಸಾಧಿಸಲು ಕಂಪನಿ ಸದಾ ಉತ್ಸುಕವಾಗಿರುತ್ತದೆ. ಭಾರತದ ಭವಿಷ್ಯದ ಬಗ್ಗೆ ನಾವು ಭರವಸೆ ಹೊಂದಿದ್ದೇವೆ ಮತ್ತು ಆದ್ದರಿಂದ, ನಮ್ಮ ಸ್ವಂತ ಬೆಳವಣಿಗೆಯ ಕಥೆಯಲ್ಲಿ ವಿಶ್ವಾಸ ಹೊಂದಿದ್ದೇವೆ" ಎಂದು ಹೇಳಿದರು.

ಅದಾನಿ ಎಂಟರ್‌ಪ್ರೈಸಸ್ ಕುರಿತು..

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾಗಿದೆ. ಇದು ಉದಯೋನ್ಮುಖ ಮೂಲಸೌಕರ್ಯ ವ್ಯವಹಾರ ನಡೆಸುತ್ತಿದ್ದು, ಅದಾನಿ ಬಂದರುಗಳು ಮತ್ತು ಎಸ್‌ಇಝಡ್, ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ವಿಲ್ಮಾರ್ ಸೇರಿದಂತೆ ಪ್ರತ್ಯೇಕ ಪಟ್ಟಿ ಮಾಡಲಾದ ಘಟಕಗಳಾಗಿ ವಿಲೀನಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+