ತಕ್ಷಣದ ವೈಯುಕ್ತಿಕ ಸಾಲಕ್ಕೆ ನೀವು ಅರ್ಜಿ ಸಲ್ಲಿಸುವುದಕ್ಕೂ ಮೊದಲು ಪರಿಗಣಿಸಬೇಕಿರುವ 4 ಸಂಗತಿಗಳು
ಇನ್‌ಸ್ಟಂಟ್ ಪರ್ಸನಲ್ ಲೋನ್‌ಗಳು ಉತ್ತಮ ಆಯ್ಕೆಯಾಗಿವೆ. ಏಕೆಂದರೆ, ಅವುಗಳನ್ನು ತಕ್ಷಣ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಸಾಮಾನ್ಯ ಪರ್ಸನಲ್ ಲೋನ್‌ಗಳಿಗಿಂತ ಬೇಗ ಬಟವಾಡೆ ಮಾಡಲಾಗುತ್ತದೆ.
ತುರ್ತು ಹಣದ ಅಗತ್ಯ ಇರುವವರಿಗೆ ಇನ್‌ಸ್ಟಂಟ್ ಪರ್ಸನಲ್ ಲೋನ್ ಅತ್ಯಂತ ತ್ವರಿತ ಮತ್ತು ಅನುಕೂಲದ ಸಾಲ ವಿಧಾನವಾಗಿದೆ. ಈ ಸಾಲಗಳು ವಿವಿಧ ಸನ್ನಿವೇಶಗಳಲ್ಲಿ ಅತ್ಯಂತ ಉಪಯುಕ್ತವಾಗಿವೆ. ಅನಿರೀಕ್ಷಿತ ವೈದ್ಯಕೀಯ ಅಗತ್ಯಗಳಿಗೆ ಹಣ ಬೇಕಾದಾಗ, ನಿಮ್ಮ ಮಗುವಿನ ಕಾಲೇಜು ಟ್ಯೂಶನ್ ಫೀ ಕಟ್ಟಲು ಅಥವಾ ತಕ್ಷಣ ಮನೆಯನ್ನು ರಿಪೇರಿ ಮಾಡಿಸಲು ಮತ್ತು ನವೀಕರಣ ಮಾಡಲು ಈ ಇನ್‌ಸ್ಟಂಟ್ ಸಾಲ ಅನುವು ಮಾಡುತ್ತದೆ.
ಕೆಲವು ಇನ್‌ಸ್ಟಂಟ್ ಪರ್ಸನಲ್ ಲೋನ್‌ಗಳು ಅನ್‌ಸೆಕ್ಯೂರ್ಡ್ ಸಾಲಗಳಾಗಿರುತ್ತವೆ. ಇದರಲ್ಲಿ ಸಾಲದಾತರು ಅಧಿಕ ರಿಸ್ಕ್ ತೆಗೆದುಕೊಳ್ಳುತ್ತಾರೆ. ಇನ್‌ಸ್ಟಂಟ್ ಪರ್ಸನಲ್ ಲೋನ್ ಪಡೆಯುವುದಕ್ಕೆ ನಿಮ್ಮ ಸಾಮರ್ಥ್ಯದ ಮೇಲೆ ಬಾಧಿಸುವ ಕೆಲವು ಪ್ರಮುಖ ಸಂಗತಿಗಳೆಂದರೆ, ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್, ವಯಸ್ಸು ಮತ್ತು ಕೆಲಸದ ಇತಿಹಾಸವಾಗಿದೆ. ಕೆಲವು ಪ್ರಕರಣಗಳಲ್ಲಿ, ಇನ್‌ಸ್ಟಂಟ್ ಲೋನ್‌ಗೆ ನೀವು ಮೊದಲೇ ಅನುಮತಿ ಹೊಂದಿರುತ್ತೀರಿ. ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್ ವಿಷಯದಲ್ಲಿ, ರೂ. 10 ಲಕ್ಷದ ವರೆಗೆ ಕೆಲವು ಗ್ರಾಹಕರಿಗೆ ಈಗಾಗಲೇ ಸಾಲವನ್ನು ಅನುಮೋದನೆ ಮಾಡಲಾಗಿರುತ್ತದೆ. ಹೊಸ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿಯನ್ನು ನಮೂದಿಸಿಕೊಂಡು ಅವರ ಆಫರ್ ಪರಿಶೀಲಿಸಿಕೊಳ್ಳಬಹುದು.
ಇನ್‌ಸ್ಟಂಟ್ ಪರ್ಸನಲ್ ಲೋನ್ ಪಡೆಯುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನೀವು ಮೊದಲು ಪರಿಗಣಿಸಬೇಕಿರುವ ಸಂಗತಿ ಇಲ್ಲಿದೆ:
1. ಅರ್ಹತೆ ಮಾನದಂಡ
ಬಹುತೇಕ ಇನ್‌ಸ್ಟಂಟ್ ಪರ್ಸನಲ್ ಲೋನ್‌ಗಳು ಪ್ರಿ-ಅಪ್ರೂವ್ಡ್ ಆದರೂ, ನೀವು ಪಡೆಯುವ ಆಫರ್ ಅನ್ನು ನಿರ್ಧರಿಸುವುದಕ್ಕೆ ಕೆಲವು ಅರ್ಹತೆ ಅಂಶಗಳು ಇರುತ್ತವೆ. ಈ ಅಗತ್ಯಗಳು ಸಾಲದಾತರಿಂದ ಸಾಲದಾತರಿಗೆ ಬದಲಾಗುತ್ತವೆ. ಅದರಲ್ಲಿ ವಯಸ್ಸು, ಉದ್ಯೋಗ (ನೌಕರರು ಅಥವಾ ಸ್ವಯಂ ಉದ್ಯೋಗಿಗಳು) ಮತ್ತು ಆದಾಯ ಸೇರಿರುತ್ತವೆ. ಬಹುತೇಕ ಸಾಲದಾತರಿಗೆ ತಮ್ಮ ಸಾಲಗಾರರು 21 ವರ್ಷಗಳಿಂದ 67 ವರ್ಷಗಳ ಮಧ್ಯೆ ಇರಬೇಕಾಗುತ್ತದೆ. ಇದರ ಜೊತೆಗೆ, ಸಿಬಿಲ್ ಸ್ಕೋರ್ 750 ಹಾಗೂ ಹೆಚ್ಚು ಇದ್ದಲ್ಲಿ, ನಿಮಗೆ ಉತ್ತಮ ಸಾಲದ ಕೊಡುಗೆ ಸಿಗುತ್ತದೆ.

2. ಒಟ್ಟಾರೆ ಹಣಕಾಸು ಸ್ಥಿತಿ
ನಿಮಗೆ ತಕ್ಷಣಕ್ಕೆ ಹಣ ಬೇಕಾದರೆ ಇನ್‌ಸ್ಟಂಟ್ ಪರ್ಸನಲ್ ಲೋನ್‌ಗಳು ಉತ್ತಮ ಆಯ್ಕೆಯಾಗಿರುತ್ತವೆ. ಆದರೆ, ಇದು ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಹೊಂದುತ್ತದೆಯೇ ಎಂಬುದನ್ನು ತಿಳಿಯುವುದು ಅತ್ಯಂತ ಮುಖ್ಯವಾಗಿದೆ. ಮೊದಲೇ ನಿಗದಿ ಪಡಿಸಿದ ಅವಧಿಯಲ್ಲಿ ಸಮಾನ ಮಾಸಿಕ ಕಂತುಗಳಲ್ಲಿ (ಇಒI) ಸಾಲ ಮೊತ್ತವನ್ನು ನೀವು ಮರುಪಾವತಿ ಮಾಡುತ್ತೀರಿ. ಈ ಇಒIಗಳಲ್ಲಿ ಅಸಲು ಮೊತ್ತ ಮತ್ತು ಬಡ್ಡಿಯೂ ಇರಯತ್ತದೆ. ನಿಮ್ಮ ಮರುಪಾವತಿ ಬಾಧ್ಯತೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುತ್ತೀರಿ ಎಂಬುದನ್ನು ಖಚಿತ ಪಡಿಸಲು ನಿಮ್ಮ ಒಟ್ಟು ಹಣಕಾಸು ಸನ್ನಿವೇಶದ ಬಗ್ಗೆ ಯೋಚಿಸಬೇಕು. ಸಾಲ ನೀಡುವ ಸಂಸ್ಥೆಗಳು ಇಒI ಕ್ಯಾಲಕ್ಯುಲೇಟರ್‌ಗಳನ್ನು ಲಭ್ಯವಾಗಿಸುತ್ತವೆ. ಇದರಲ್ಲಿ ನೀವು ಸಾಲದ ಮೊತ್ತ, ಬಡ್ಡಿ ದರ ಮತ್ತು ಅವಧಿಯನ್ನು ಆಯ್ಕೆ ಮಾಡಿಕೊಂಡು, ಸಂಭಾವ್ಯ ಇಒI ಮೊತ್ತವನ್ನು ನೋಡಿಕೊಳ್ಳಬಹುದು.
3. ಕ್ರೆಡಿಟ್ ಸ್ಕೋರ್
ಸಾಲಕ್ಕೆ ಅರ್ಹತೆಯನ್ನು ನಿರ್ಧರಿಸುವ ಪ್ರಮುಖ ಮಾನದಂಡಗಳಲ್ಲಿ ಕ್ರೆಡಿಟ್ ಸ್ಕೋರ್ ಒಂದಾಗಿದೆ. ನೀವು ಸಾಲಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು, ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ ಮತ್ತು ಸಾಲದಾತರ ಅಗತ್ಯಗಳನ್ನು ಪೂರೈಸುತ್ತೀರಾ ಎಂಬುದನ್ನು ನೋಡಿ. ಇದರಿಂದಾಗಿ ನೀವು ಸಾಲ ಅರ್ಜಿಗೆ ಅನುಮತಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಮೊದಲೇ ಅನುಮೋದಿಸಿದ ಆಫರ್‌ಗಳ ವಿಚಾರದಲ್ಲಿ, ಅಧಿಕ ಕ್ರೆಡಿಟ್ ಸ್ಕೋರ್ ಇದ್ದರೆ ಉತ್ತಮ ಡೀಲ್‌ಗಳು ಸಿಗುತ್ತವೆ.
4. ನಿಯಮಗಳು ಮತ್ತು ಶುಲ್ಕಗಳು
ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಅನಿರೀಕ್ಷಿತ ಫೀ ಮತ್ತು ಶುಲ್ಕಗಳು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಲು ನಿಯಮ ಮತ್ತು ಷರತ್ತುಗಳನ್ನು ನೀವು ಗಮನವಿಟ್ಟು ಓದಬೇಕು. ದಂಡ ಮತ್ತು ಶುಲ್ಕಗಳ ಬಗ್ಗೆಯೂ ಅದರಲ್ಲಿ ಓದಿಕೊಳ್ಳಿ. ಈ ಮೂಲಕ ನೀವು ಸಾಲ ಪಡೆಯುವುದಕ್ಕೂ ಮೊದಲೇ ಸಾಲದ ನಿಯಮ ಮತ್ತು ಷರತ್ತುಗಳ ಬಗ್ಗೆ ತಿಳಿದಿರುತ್ತೀರಿ. ಈ ಸರಳ ಸಲಹೆಗಳು ನಿಮ್ಮ ಅಗತ್ಯಗಳಿಗೆ ಸರಿಯಾದ ಇನ್‌ಸ್ಟಂಟ್ ಪರ್ಸನಲ್ ಲೋನ್ ಅನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. 60 ತಿಂಗಳುಗಳ ವರೆಗೆ ಫ್ಲೆಕ್ಸಿಬಲ್ ಅವಧಿ ಮತ್ತು 30 ನಿಮಿಷಗಳಿಂದ 4 ಗಂಟೆಗಳ ಬಟವಾಡೆ ಸಮಯವನ್ನು ಹೊಂದಿರುವ ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್ ನಿಮ್ಮ ಅನಿರೀಕ್ಷಿತ ವೆಚ್ಚಗಳಿಗೆ ಸೂಕ್ತವಾದ ಆಯ್ಕೆಯಾಗಿದೆ. ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಇಂದೇ ನಿಮ್ಮ ಕೊಡುಗೆಯನ್ನು ಪರಿಶೀಲಿಸಿ.












Click it and Unblock the Notifications