ಭಯ ಬಿಡಿ: ಕೊರೊನಾದ "ಓಮಿಕ್ರಾನ್ ರೂಪಾಂತರ" ಅಂಟಿದರೂ ಸಾವಿನ ಅಪಾಯವಿಲ್ಲ

ನವದೆಹಲಿ, ನವೆಂಬರ್ 30: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿರುವ ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್ ಜಗತ್ತಿನಾದ್ಯಂತ ಭಯವನ್ನು ಹುಟ್ಟು ಹಾಕಿದೆ. ವಿಶ್ವದಲ್ಲಿ ಎರಡನೇ ಅಲೆಯನ್ನು ಸೃಷ್ಟಿಸಿದ ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಅಪಾಯಕಾರಿ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದೆ.

ಓಮಿಕ್ರಾನ್ ರೂಪಾಂತರ ತಳಿಯು ಅಂಟಿದ ರೋಗಿಯು ತೀವ್ರ ಆಯಾಸದಿಂದ ಬಳಲುತ್ತಾರೆ. ಈ ಸೋಂಕು ಮೊದಲಿನ ರೂಪಾಂತರಿಗಿಂತ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ದಕ್ಷಿಣ ಆಫ್ರಿಕಾದ ತಜ್ಞ ವೈದ್ಯರು ಕಂಡುಕೊಂಡಿದ್ದಾರೆ. ಇದರ ಮಧ್ಯೆ ಕೊಂಚ ಸಮಾಧಾನಪಡುವ ವಿಷಯವೂ ಅಡಗಿದೆ.

ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ತಗುಲಿದ ವ್ಯಕ್ತಿಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಅಂದರೆ ಯಾವುದೇ ರೀತಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೋಂಕಿತರು ಎದುರಿಸಿಲ್ಲ ಎಂಬುದು ಇದುವರೆಗಿನ ಪರಿಸ್ಥಿತಿಯಿಂದ ತಿಳಿದು ಬಂದಿದೆ. ಓಮಿಕ್ರಾನ್ ಕುರಿತು ದಕ್ಷಿಣ ಆಫ್ರಿಕಾದ ತಜ್ಞ ವೈದ್ಯರು ಭಾರತೀಯ ವೈದ್ಯರೊಂದಿಗೆ ಚರ್ಚೆ ನಡೆಸಿದಾಗ ತಿಳಿದು ಬಂದಿರುವ ಪ್ರಮುಖ ವಿಷಯಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ದಕ್ಷಿಣ ಆಫ್ರಿಕಾಗೆ ನೆರವು ನೀಡುವುದಾಗಿ ಭಾರತದ ಭರವಸೆ

ದಕ್ಷಿಣ ಆಫ್ರಿಕಾಗೆ ನೆರವು ನೀಡುವುದಾಗಿ ಭಾರತದ ಭರವಸೆ

ವಿಶ್ವ ಆರೋಗ್ಯ ಸಂಸ್ಥೆ (WHO) ಹೊಸದಾಗಿ ಕಂಡು ಬಂದಿರುವ ಓಮಿಕ್ರಾನ್ ರೂಪಾಂತರದಿಂದ ಜಾಗತಿಕ ಅಪಾಯ "ಅತ್ಯಂತ ಹೆಚ್ಚು" ಎಂದು ನಿರ್ಣಯಿಸಿದೆ. ಇದರ ಮಧ್ಯೆ ದಕ್ಷಿಣ ಆಫ್ರಿಕಾ ಹಾಗೂ ಓಮಿಕ್ರಾನ್‌ನೊಂದಿಗೆ ಹೋರಾಟ ನಡೆಸುತ್ತಿರುವ ದೇಶಗಳಿಗೆ ಭಾರತ ಬೆಂಬಲ ಸೂಚಿಸಿದೆ. ಭಾರತದಲ್ಲಿ ಉತ್ಪಾದಿಸಿದ ಮೇಡ್-ಇನ್-ಇಂಡಿಯಾ ಕೊವಿಡ್-19 ಲಸಿಕೆಗಳನ್ನು ಪೂರೈಕೆ ಮಾಡುವುದಾಗಿ ಭರವಸೆ ನೀಡಿತು.

ಸರ್ಕಾರದ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ದಕ್ಷಿಣ ಆಫ್ರಿಕಾದ ಆರೋಗ್ಯ ಪ್ರಾಧಿಕಾರಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಓಮಿಕ್ರಾನ್ ರೋಗದ ಹರಡುವಿಕೆ ಮತ್ತು ತೀವ್ರತೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ತೀವ್ರತೆ ಹೊಂದಿರುವ ಓಮಿಕ್ರಾನ್ ಹರಡುವ ವೇಗ ಹೆಚ್ಚು

ತೀವ್ರತೆ ಹೊಂದಿರುವ ಓಮಿಕ್ರಾನ್ ಹರಡುವ ವೇಗ ಹೆಚ್ಚು

ದಕ್ಷಿಣ ಆಫ್ರಿಕಾದ ಆರೋಗ್ಯ ತಜ್ಞರ ಪ್ರಕಾರ, ಡೆಲ್ಟಾ ರೂಪಾಂತರ ರೋಗಾಣುವಿಗೆ ಹೋಲಿಸಿದರೆ, ಓಮಿಕ್ರಾನ್ ರೂಪಾಂತರ ವೈರಸ್ ಅತಿಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ. ಈ ಸೋಂಕು ಅಂಟಿಕೊಂಡಿರುವ ರೋಗಿಗಳಲ್ಲಿ ತೀವ್ರ ಆಯಾಸ, ತಲೆನೋವು, ಮೈ-ಕೈ ನೋವು ರೀತಿಯ ಸಹಜ ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಹೀಗೆ ಸೋಂಕು ಹರಡಿದ ರೋಗಿಗಳ ಪೈಕಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆಯಾಗಿದೆ," ಎಂಬುದು ಅಂಕಿ-ಅಂಶಗಳಿಂದ ಗೊತ್ತಾಗುತ್ತಿದೆ.

ಓಮಿಕ್ರಾನ್ ಅಂಟಿದರೂ ಸತ್ತವರ ಸಂಖ್ಯೆ ಶೂನ್ಯ

ಓಮಿಕ್ರಾನ್ ಅಂಟಿದರೂ ಸತ್ತವರ ಸಂಖ್ಯೆ ಶೂನ್ಯ

"ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ತಗುಲಿದ ರೋಗಿಯು ಸಾವನ್ನಪ್ಪಿರುವ ಬಗ್ಗೆ ಈವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ. ಇಲ್ಲಿಯವರೆಗೆ, ಇದು ತೀವ್ರವಾದ ಆಯಾಸ ಮತ್ತು ಗಂಟಲಿನ ಕಿರಿಕಿರಿಯು ಪ್ರಧಾನ ಲಕ್ಷಣವಾಗಿರುವ ಸೌಮ್ಯ ಕಾಯಿಲೆಯ ರೂಪದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ," ಎಂದು ಮೂಲಗಳು ತಿಳಿಸಿವೆ.

ಓಮಿಕ್ರಾನ್ ಸೋಂಕಿನ ಬಗ್ಗೆ ಸದ್ಯ ಆತಂಕಪಡಬೇಕಾಗಿಲ್ಲ

ಓಮಿಕ್ರಾನ್ ಸೋಂಕಿನ ಬಗ್ಗೆ ಸದ್ಯ ಆತಂಕಪಡಬೇಕಾಗಿಲ್ಲ

ದಕ್ಷಿಣ ಆಫ್ರಿಕನ್ನರು ಇತರ ರೂಪಾಂತರಗಳಲ್ಲಿ ವರದಿ ಮಾಡಿದಂತೆ ರೋಗಿಗಳು ಸಂವೇದನೆ, ವಾಸನೆ ಮತ್ತು ರುಚಿಯ ನಷ್ಟವನ್ನು ಅನುಭವಿಸುತ್ತಿಲ್ಲ ಅಥವಾ ಡೆಲ್ಟಾ ರೂಪಾಂತರದಲ್ಲಿ ವರದಿ ಮಾಡಿದಂತೆ ಆಮ್ಲಜನಕದ ಮಟ್ಟದಲ್ಲಿ ಕುಸಿತವನ್ನು ಕಂಡಿಲ್ಲ ಎಂದು ಒತ್ತಿ ಹೇಳಲಾಗುತ್ತಿದೆ. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಎದುರಿಸುತ್ತಿರುವ ಹಾಗೂ ಕಂಡುಕೊಂಡಿರುವ ಅಂಶಗಳನ್ನು ಭಾರತದೊಂದಿಗೆ ಹಂಚಿಕೊಂಡಿದೆ. ಸದ್ಯಕ್ಕೆ ಓಮಿಕ್ರಾನ್ ಬಗ್ಗೆ ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ, ಏಕೆಂದರೆ ರೋಗದಿಂದ ಯಾವ ರೀತಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಂತದಲ್ಲಿ ಯಾವುದೇ ರೀತಿ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಹಾಗೊಂದು ವೇಳೆ ಅಹಿತಕರ ಘಟನೆಗಳು ವರದಿಯಾದರೆ, ಭಾರತದೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ದಕ್ಷಿಣ ಆಫ್ರಿಕಾದ ತಜ್ಞರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಓಮಿಕ್ರಾನ್ ಬಾಧಿತ ದೇಶಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಭಾರತ

ಓಮಿಕ್ರಾನ್ ಬಾಧಿತ ದೇಶಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಭಾರತ

ಅಫ್ರಿಕಾದಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಗೆ ಬೆಂಬಲ ಸೂಚಿಸುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಉತ್ಪಾದಿಸುವ ಲಸಿಕೆ ಪೂರೈಸಿವುದರ ಜೊತೆಗೆ ಅಗತ್ಯ ವೈದ್ಯಕೀಯ ಸಹಕಾರವನ್ನು ಒದಗಿಸಲು ಸರ್ಕಾರ ಸಿದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.

"ಕೋವಾಕ್ಸ್ ಅಥವಾ ದ್ವಿಪಕ್ಷೀಯ ಚರ್ಚೆ ಮೂಲಕ ಲಸಿಕೆ ಸರಬರಾಜು ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ, ಕೋವಿಶೀಲ್ಡ್ ಲಸಿಕೆಗಳ ಪೂರೈಕೆಗಾಗಿ ಕೊವ್ಯಾಕ್ಸ್ ಇದುವರೆಗೆ ನೀಡಿದ ಎಲ್ಲಾ ಆರ್ಡರ್ ಅನ್ನು ಪೂರ್ಣವಾಗಿ ಪೂರೈಸಿದೆ. ಆಫ್ರಿಕನ್ ದೇಶಗಳಾದ ಮಲಾವಿ, ಇಥಿಯೋಪಿಯಾ, ಜಾಂಬಿಯಾ, ಮೊಜಾಂಬಿಕ್, ಗಿನಿಯಾ ಮತ್ತು ಲೆಸೊಥೊ ಸೇರಿದಂತೆ ಬೋಟ್ಸ್ವಾನಾಗೆ ಕೋವಾಕ್ಸಿನ್ ಲಸಿಕೆಯನ್ನು ಸರಬರಾಜು ಮಾಡಿದ್ದೇವೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಅಲ್ಲದೇ "ದ್ವಿಪಕ್ಷೀಯವಾಗಿ ಅಥವಾ ಕೋವಾಕ್ಸ್ ಮೂಲಕ ಯೋಜಿಸಲಾದ ಯಾವುದೇ ಹೊಸ ಅವಶ್ಯಕತೆಗಳನ್ನು ತ್ವರಿತವಾಗಿ ಪರಿಗಣಿಸಲಾಗುತ್ತದೆ" ಎಂದು ಅದು ಹೇಳಿದೆ.

ಭಾರತವು ಇಲ್ಲಿಯವರೆಗೆ, ಆಫ್ರಿಕಾದ 41 ದೇಶಗಳಿಗೆ 25 ಮಿಲಿಯನ್ ಡೋಸ್ ಮೇಡ್-ಇನ್-ಇಂಡಿಯಾ ಲಸಿಕೆಗಳನ್ನು ಪೂರೈಸಿದೆ, ಇದರಲ್ಲಿ ಸುಮಾರು 16 ದೇಶಗಳಿಗೆ ಅನುದಾನದ ರೂಪದಲ್ಲಿ ಸುಮಾರು ಒಂದು ಮಿಲಿಯನ್ ಡೋಸ್‌ಗಳು ಮತ್ತು 33 ದೇಶಗಳಿಗೆ ಕೋವಾಕ್ಸ್ ಸೌಲಭ್ಯದ ಅಡಿಯಲ್ಲಿ 16 ಮಿಲಿಯನ್ ಡೋಸ್‌ಗಳನ್ನು ಸರಬರಾಜು ಮಾಡಿದೆ.

ವೈದ್ಯಕೀಯ ಸೌಲಭ್ಯ ಒದಗಿಸುವ ವಸ್ತುಗಳ ಸರಬರಾಜು

ವೈದ್ಯಕೀಯ ಸೌಲಭ್ಯ ಒದಗಿಸುವ ವಸ್ತುಗಳ ಸರಬರಾಜು

ಕೊರೊನಾವೈರಸ್ ಲಸಿಕೆಗಳ ಜೊತೆಗೆ ವೈದ್ಯಕೀಯ ಸೇವೆ ಒದಗಿಸಲು ಅಗತ್ಯವಾದ ವಸ್ತುಗಳನ್ನು ಸಹ ಸರಬರಾಜು ಮಾಡುವುದಾಗಿ ಸಚಿವಾಲಯ ತಿಳಿಸಿದೆ. ಜೀವರಕ್ಷಕ ಔಷಧಗಳು, ಪರೀಕ್ಷಾ ಕಿಟ್‌ಗಳು, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್‌ಗಳು ಮತ್ತು ವೆಂಟಿಲೇಟರ್‌ಗಳಂತಹ ವೈದ್ಯಕೀಯ ಉಪಕರಣಗಳನ್ನು ಪೂರೈಸಲು ಸಿದ್ಧವಾಗಿದೆ. "ಭಾರತೀಯ ಸಂಸ್ಥೆಗಳು ತಮ್ಮ ಆಫ್ರಿಕನ್ ರಾಷ್ಟ್ರಗಳೊಂದಿಗೆ ಜೀನೋಮಿಕ್ ಕಣ್ಗಾವಲು ಮತ್ತು ವೈರಸ್ ಗುಣಲಕ್ಷಣ-ಸಂಬಂಧಿತ ಸಂಶೋಧನಾ ಕಾರ್ಯದಲ್ಲಿ ಸಹಕಾರವನ್ನು ಅನುಕೂಲಕರವಾಗಿ ಪರಿಗಣಿಸುತ್ತವೆ," ಎಂದು ಹೇಳಿಕೆ ತಿಳಿಸಿದೆ.

ಹೊಸ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದ WHO

ಹೊಸ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದ WHO

ಕಳೆದ ಭಾನುವಾರ ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ತದನಂತರದಲ್ಲಿ ವರದಿಯಾದ ಪ್ರಕರಣಗಳ ಪರಾಮರ್ಶೆ ನಂತರ ಈ ರೂಪಾಂತರವು ಹೆಚ್ಚು ಹರಡುವಿಕೆ ಹಾಗೂ ಅಪಾಯವನ್ನು ಹೊಂದಿರುವ ಸಾಧ್ಯತೆಗಳಿವೆ ಎಂದು ಹೇಳಿದೆ. ಪ್ರತಿರೋಧಕವನ್ನು ದಾಟಿಕೊಂಡು ಹರಡುವ ಸಾಮರ್ಥ್ಯವನ್ನು ಹೊಂದಿರುವ ಓಮಿಕ್ರಾನ್ ರೂಪಾಂತರವು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹರಡುವ ಅಪಾಯವಿದೆ. ಜಾಗತಿಕ ಮಟ್ಟದಲ್ಲಿ ಓಮಿಕ್ರಾನ್ ಅಪಾಯವನ್ನು ಸೃಷ್ಟಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿತು.

ವಿವಿಧ ರಾಷ್ಟ್ರಗಳಲ್ಲಿ ಒಟ್ಟು 150 ಓಮಿಕ್ರಾನ್ ಪ್ರಕರಣ

ವಿವಿಧ ರಾಷ್ಟ್ರಗಳಲ್ಲಿ ಒಟ್ಟು 150 ಓಮಿಕ್ರಾನ್ ಪ್ರಕರಣ

ಒಮಿಕ್ರಾನ್‌ನ ಸೋಂಕಿತ ಪ್ರಕರಣಗಳು ಹೊಸ ದೇಶ ಮತ್ತು ಪ್ರದೇಶಗಳಿಗೆ ಹರಡಿದ ದಿನದಂದು ವಿಶ್ವ ಆರೋಗ್ಯ ಸಂಸ್ಥೆಯು ಈ ಎಚ್ಚರಿಕೆಯನ್ನು ನೀಡಿದೆ. ದಕ್ಷಿಣ ಆಫ್ರಿಕಾದ ಹೊರತಾಗಿ ಸ್ಕಾಟ್ಲೆಂಡ್ ಆರು ಪ್ರಕರಣಗಳನ್ನು ವರದಿ ಮಾಡಿದರೆ, ಪೋರ್ಚುಗಲ್ 13 ಪ್ರಕರಣಗಳನ್ನು ವರದಿ ಮಾಡಿದೆ. ಕೆನಡಾದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದರೆ, ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಪತ್ತೆಯಾದ ಎರಡರ ಜೊತೆಗೆ ಇನ್ನೂ ಎರಡು ಪ್ರಕರಣಗಳು ವರದಿಯಾಗಿವೆ. ಒಮಿಕ್ರಾನ್ ರೂಪಾಂತರ ಸೋಂಕುಗಳ ತಗುಲಿದವರ ಸಂಖ್ಯೆಯು ಈಗ 150ಕ್ಕೆ ಏರಿಕೆಯಾಗಿದ್ದು, ಕನಿಷ್ಠ 15 ದೇಶಗಳು ಅಥವಾ ಪ್ರದೇಶಗಳಲ್ಲಿ ಇದುವರೆಗೆ ಈ ರೂಪಾಂತರ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+