ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿಥಿಗಳ ಆದರಾತಿಥ್ಯಕ್ಕೆ 'ಅಕ್ಕ' ಆತಿಥ್ಯ ತಂಡ ಸಜ್ಜು

By ಸಂದರ್ಶನ - ಕೇಶವ ಪ್ರಶಾಂತ್
|
Google Oneindia Kannada News

9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇನ್ನು 3 ವಾರಗಳಲ್ಲಿ ಅಟ್ಲಾಂಟಿಕ್ ಸಿಟಿಯಲ್ಲಿ ಕನ್ನಡಮ್ಮನ ಜಾತ್ರೆ ಭರ್ಜರಿಯಾಗಿ ನೆರವೇರಲಿದೆ. ಕಾರ್ಯಕ್ರಮದ ವಿವಿಧ ತಯಾರಿಗಳ ಬಿರುಸಿನ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಆತಿಥ್ಯ ವ್ಯವಸ್ಥೆಗಳ ಉಸ್ತುವಾರಿ ವಹಿಸಿರುವ ಆತಿಥ್ಯ ತಂಡದ ಪ್ರಮುಖರಾದ ಪುನೀತ್ ವೆಂಕಟೇಶ್ ಅವರು ನಮ್ಮೊಂದಿಗೆ ಹಂಚಿಕೊಂಡ ಒಂದಷ್ಟು ವಿವರಗಳು.

ಆತಿಥ್ಯ ತಂಡದ ಬಗ್ಗೆ :
ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016ರ ಆತಿಥ್ಯ ತಂಡದಲ್ಲಿ 50ಕ್ಕಿಂತಲೂ ಹೆಚ್ಚು ಸ್ವಯಂಸೇವಕರಿದ್ದಾರೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅತಿಥಿಗಳನ್ನು, ಕಲಾವಿದರನ್ನು, ಗಣ್ಯರನ್ನು ಹಾಗೂ ಸರ್ವರನ್ನೂ ಪ್ರೀತ್ಯಾದರಗಳಿಂದ ನಡೆಸಿಕೊಂಡು ಅವರ ಅಗತ್ಯಗಳಿಗೆ ಓಗೊಡುವ ಉದ್ದೇಶ ಈ ತಂಡದ್ದು. ಅತಿಥಿಗಳ ಈ ಭೇಟಿಯ ಸಮಯವನ್ನು ಆದಷ್ಟು ಸ್ಮರಣೀಯಗೊಳಿಸುವ ಬಯಕೆ ನಮ್ಮದು.

ಅತಿಥಿಗಳು ಹಾಗೂ ಗಣ್ಯರಿಗೆ ವಸತಿ ಮತ್ತು ಸಂಚಾರ ವ್ಯವಸ್ಥೆ, ಸಮ್ಮೇಳನದ ಸ್ಥಳದಲ್ಲಿ ಮಾಹಿತಿ ಕೇಂದ್ರ, ಪ್ರಥಮ ಚಿಕಿತ್ಸಾ ವ್ಯವಸ್ಥೆಗಳು, ಸಮೀಪದ ಆಸ್ಪತ್ರೆ ಹಾಗೂ ಔಷಧಾಲಯಗಳ ಬಗ್ಗೆ ಮಾಹಿತಿ, ರಸ್ತೆಗಳ ಬಗ್ಗೆ ಮಾಹಿತಿ, ಎಲ್ಲಾದರೂ ಸಂಚಾರದ ಅಡಚಣೆ ಇದ್ದಲ್ಲಿ ಸಮ್ಮೇಳನದ ಸ್ಥಳಕ್ಕೆ ತಲುಪಲು ಪರ್ಯಾಯ ಮಾರ್ಗಗಳ ವಿವರ, ಪ್ರಾಕೃತಿಕ ವಿಕೋಪಗಳೇನಾದರೂ ಸಂಭವಿಸಿದ ಪಕ್ಷದಲ್ಲಿ ನೋಂದಾವಣಿ ತಂಡದ ಜೊತೆಗೂಡಿ ಸಂಪರ್ಕ ವ್ಯವಸ್ಥೆಗಳ ಉಸ್ತುವಾರಿಯನ್ನು ಸದಸ್ಯರು ನೋಡಿಕೊಳ್ಳಲಿದ್ದಾರೆ. [ಅಟ್ಲಾಂಟಿಕ್ ಸಿಟಿ ಅಕ್ಕ ಕನ್ನಡ ಸಮ್ಮೇಳನದಲ್ಲಿ ಹಲವಾರು ವಿಶೇಷತೆ]

AKKA WKC Atlantic City : Hospitality Committee interview

ಅಲ್ಲದೆ, ಪಾರ್ಕಿಂಗ್ ಹಾಗೂ ವಸತಿ ವ್ಯವಸ್ಥೆಗಳಲ್ಲಿ ಸಹಕಾರ, ಸ್ಥಳೀಯ ಪ್ರೇಕ್ಷಣೀಯ ವಿಷಯಗಳ ಬಗ್ಗೆ ಮಾಹಿತಿ, ವಿಮಾನ ನಿಲ್ದಾಣ ಹಾಗೂ ಪ್ರಮುಖ ಹೋಟೆಲ್ ಗಳಿಂದ ಸಮ್ಮೇಳನದ ಸ್ಥಳಕ್ಕೆ ಸೀಮಿತ ಸಾರಿಗೆ ವ್ಯವಸ್ಥೆ ಮುಂತಾದ ವಿಷಯಗಳ ನಿರ್ವಹಣೆಗೆ ಆತಿಥ್ಯ ತಂಡದ ಸ್ವಯಂಸೇವಕರು ಸಿದ್ಧವಾಗುತ್ತಿದ್ದಾರೆ. ಒಟ್ಟಿನಲ್ಲಿ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡಲು ತಂಡದ ಪ್ರತಿಯೊಬ್ಬ ಸದಸ್ಯರೂ ಹುರುಪಿನಿಂದ ಒಂದಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅತಿಥಿಗಳು ಸಮ್ಮೇಳನ ಸ್ಥಳಕ್ಕೆ ತಲುಪುವ ಬಗ್ಗೆ:
ಅಕ್ಕ ಕನ್ನಡ ಸಮ್ಮೇಳನ ನಡೆಯುವ ಅಟ್ಲಾಂಟಿಕ್ ಸಿಟಿಗೆ ಫಿಲಡೆಲ್ಫಿಯಾ ಹಾಗೂ ನೆವಾರ್ಕ್ ವಿಮಾನ ನಿಲ್ದಾಣಗಳಿಂದ 2 ಘಂಟೆಗಳ ದಾರಿ. ಅತಿಥಿಗಳು ಅಟ್ಲಾಂಟಿಕ್ ಸಿಟಿ, ಫಿಲಡೆಲ್ಫಿಯಾ ಅಥವಾ ನೆವಾರ್ಕ್ ವಿಮಾನ ನಿಲ್ದಾಣಗಳ ಮುಖೇನ ಸಮ್ಮೇಳನದ ಸ್ಥಳಕ್ಕೆ ತಲುಪಬಹುದು. ಅಂತಾರಾಷ್ಟ್ರೀಯ ಸ್ಥಳಗಳಿಂದ ಬರುವ ಗಣ್ಯರಿಗೆ ನೆವಾರ್ಕ್ ಹಾಗೂ ಫಿಲಡೆಲ್ಫಿಯಾ ವಿಮಾನ ನಿಲ್ದಾಣಗಳಿನಿಂದ ಸೀಮಿತ ಸಾರಿಗೆ ವ್ಯವಸ್ಥೆಗಳಿರುತ್ತವೆ. [ಅಕ್ಕ ಸಮ್ಮೇಳನದಲ್ಲಿ ಬಾಯಲ್ಲಿ ನೀರೂರಿಸುವ ಭಕ್ಷ್ಯಭೋಜ್ಯ]

ಸಾರಿಗೆ ವ್ವವಸ್ಥೆಯನ್ನು ಬಳಸ ಬಯಸುವ ಗಣ್ಯರು [email protected] ಇಮೇಲ್ ಮುಖೇನ ಆತಿಥ್ಯ ತಂಡವನ್ನು ಸಂಪರ್ಕಿಸಬಹುದು. ಸ್ಥಳೀಯ ಅತಿಥಿಗಳಿಗೆ ಅನುಕೂಲವಾಗಲೆಂದು ವಿಮಾನ ನಿಲ್ದಾಣ ಹಾಗೂ ಸಾರಿಗೆ ವ್ಯವಸ್ಥೆಗಳ ಸಂಪೂರ್ಣ ವಿವರಗಳನ್ನು ಜಾಲ ತಾಣದಲ್ಲಿ ವಿವರಿಸಲಾಗಿದೆ.

ಸ್ಥಳೀಯ ಪ್ರೇಕ್ಷಣೀಯ ಜಾಗಗಳ ಭೇಟಿ:
ಅಮೆರಿಕಾದ ಪೂರ್ವ ಕರಾವಳಿಯಲ್ಲಿ ಅಟ್ಲಾಂಟಿಕ್ ಸಿಟಿ ಒಂದು ಬಹು ದೊಡ್ಡ ಪ್ರವಾಸೀ ತಾಣ. ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳ ಭೇಟಿ ಮಾಡುವ ಸದಾವಕಾಶವಿದೆ. ಸಮ್ಮೇಳನದ ಸ್ಥಳದಲ್ಲಿ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ಆತಿಥ್ಯ ತಂಡದ ಮಾಹಿತಿ ಕೇಂದ್ರವಿರುತ್ತದೆ. ಸ್ಥಳೀಯ ಪ್ರವಾಸ ಮತ್ತು ಆಕರ್ಷಣೆಗಳ ಬಗ್ಗೆ ಎಲ್ಲಾ ಮಾಹಿತಿ ಲಭ್ಯವಿರಲಿದೆ.

AKKA WKC Atlantic City : Hospitality Committee interview

ಹೋಟೆಲ್ ವಸತಿ ವ್ಯವಸ್ಥೆ:

ಆತಿಥ್ಯ ತಂಡ ಸ್ಥಳೀಯ ಹೋಟೆಲ್ ಗಳ ಜೊತೆ ಒಪ್ಪಂದ ನಡೆಸಿ ಯೋಗ್ಯ ದರದ ವಸತಿಯ ವ್ಯವಸ್ಥೆ ಮಾಡಿದೆ. ಶೆರಟಾನ್, ಟ್ರಂಪ್, ತಾಜ್, ಹಾಲಿಡೇ ಇನ್, ಶೋ ಬೋಟ್ ಮುಂತಾದ ಹೋಟೆಲ್ ಗಳಲ್ಲಿ ಸಾವಿರಕ್ಕೂ ಹೆಚ್ಚು ಕೊಠಡಿಗಳನ್ನು ಅಕ್ಕಕ್ಕಾಗಿ ಕಾದಿರಿಸಿದ್ದೇವೆ. $93ರಿಂದ $309ರವರೆಗೆ ಪ್ರತಿ ದಿನದ ಬೆಲೆಯ ವಿವಿಧ ಸ್ಥರಗಳ ಕೊಠಡಿಗಳಿವೆ. ಹೋಟೆಲ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ವಿವರಗಳು ಜಾಲ ತಾಣದಲ್ಲಿ ಲಭ್ಯವಿವೆ.

ಹೋಟೆಲ್ ಸಾರಿಗೆ ವ್ಯವಸ್ಥೆ:
ವಿವಿಧ ಹೋಟೆಲ್ ಗಳಿಂದ ಸಮ್ಮೇಳನದ ಸ್ಥಳಕ್ಕೆ ಹಾಗು ಪುನಃ ಹೋಟೆಲ್ ತಲುಪಲು ಸೀಮಿತ ಪ್ರಮಾಣದ ಸಾರಿಗೆಯ ವ್ಯವಸ್ಥೆ ಮಾಡಿದ್ದೇವೆ. ಸಾರಿಗೆ ವ್ಯವಸ್ಥೆಯ ಬಗ್ಗೆ ಹೆಚ್ಚಿನ ವಿವರಗಳು ಜಾಲ ತಾಣದಲ್ಲಿ ಲಭ್ಯವಿವೆ.

ತಂಡದ ಕಾರ್ಯನಿರ್ವಹಣೆಯ ಬಗ್ಗೆ:
ಆತಿಥ್ಯ ತಂಡದಲ್ಲಿ ಅಮೆರಿಕದಾದ್ಯಂತ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿರುವ ಸದಸ್ಯರಿದ್ದಾರೆ. ಸದಸ್ಯರೆಲ್ಲರೂ ಪ್ರತಿ ವಾರ ಕಾನ್ಫರೆನ್ಸ್ ಕರೆಯ ಮುಖೇನ ಸೇರಿ ಹೊಸ ಬೆಳವಣಿಗೆಗಳ ಚರ್ಚೆ ನಡೆಸುತ್ತೇವೆ. ವಾಟ್ಸ್ ಆಪ್ ಗ್ರೂಪ್ ತಂಡದ ಇನ್ನೊಂದು ಪ್ರಮುಖ ಸಂಪರ್ಕ ಮಾಧ್ಯಮ.

ಈ ಎಲ್ಲಾ ತಯಾರಿ ಕೆಲಸಗಳು ನಮ್ಮ ಆತಿಥ್ಯ ತಂಡದ ಸ್ವಯಂಸೇವಕರ ಅವಿರತ ಶ್ರಮದ ಫಲ. ತಂಡದ ಸದಸ್ಯರು ತಮ್ಮ ಕೆಲಸ ಕಾರ್ಯಗಳ ಮಧ್ಯೆ ಬಿಡುವು ಮಾಡಿಕೊಂಡು ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ನಮ್ಮ ತಂಡದ ಎಲ್ಲಾ ಸದಸ್ಯರ ವಿವರಗಳು ನಲ್ಲಿ ಲಭ್ಯವಿವೆ. ಎಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು.

9ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ನಿಮ್ಮೆಲ್ಲರನ್ನು ಆತಿಥ್ಯ ತಂಡದ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ. ಬನ್ನಿ 3 ದಿನಗಳ ಕನ್ನಡ ಹಬ್ಬವನ್ನು ಮನೆ ಮಂದಿಯ ಜೊತೆ, ಮಿತ್ರರ ಜೊತೆ ಮನಸಾರೆ ಆನಂದಿಸಿ.

English summary
Count down has begun for 9th AKKA World Kannada Conference to be held at Atlantic City, New Jersey, USA from September 2-4. Hospitality Committee is completely geared up to take care of Kannada lovers coming from all over the world. Here is an interview of hospitality committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X