Get Updates
Get notified of breaking news, exclusive insights, and must-see stories!

ಅಕ್ಕ ಸಮ್ಮೇಳನದಲ್ಲಿ ಎರಡು ಕನ್ನಡ ಚಿತ್ರಗಳ ಪ್ರದರ್ಶನ

Diganth and Janu
ನೃಪತುಂಗ ಕನ್ನಡ ಕೂಟದ ಆಶ್ರಯದಲ್ಲಿ ಅಟ್ಲಾಂಟಾದಲ್ಲಿ ನಡೆಯುತ್ತಿರುವ ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡಿಗ ಸಂದೀಪ್ ಮಲಾನಿ ನಿರ್ದೇಶನದ ಎರಡು ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. "ಸೆಪ್ಟೆಂಬರ್ 1 ಮತ್ತು 2ರಂದು 'ಎಸ್.ಎಂ.ಎಸ್. 6260 ' ಮತ್ತು 'ಜೋ ಜೋ ಲಾಲಿ' ಎಂಬ ಎರಡು ಸಿನೆಮಾಗಳು ಅಟ್ಲಾಂಟದಲ್ಲಿರುವ 'ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್'ನಲ್ಲಿ ಪ್ರದರ್ಶನಗೊಳ್ಳಲಿವೆ.

ಅನೇಕ ಕನ್ನಡಿಗರ ವೀಕ್ಷಣೆಗೆ ಅಕ್ಕ ಸಮ್ಮೇಳನದಲ್ಲಿ ಈ ರೀತಿಯ ಒಂದು ಅವಕಾಶ ಸಿಕ್ಕಿರುವುದು ನನಗೆ ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ವಿಚಾರ ಎಂದು ಸಂದೀಪ್ ಮಲಾನಿಯವರು ತಿಳಿಸಿದ್ದಾರೆ.

ನಟರಾದ ದಿಗಂತ್ ಮತ್ತು ಕಿರಣ್ ಮುಖ್ಯಪಾತ್ರದಲ್ಲಿರುವ 'ಎಸ್.ಎಂ.ಎಸ್. 6260 ' ಚಲನಚಿತ್ರವು 2006ರಲ್ಲಿ ನಿರ್ಮಿಸಿದ್ದ ಚಿತ್ರವಾಗಿದ್ದು, ಇದು ಇಂದಿನ ಯುವ ಪೀಳಿಗೆ ಮತ್ತು ಮೊಬೈಲ್ ಫೋನ್ ದುರ್ಬಳಕೆಗೆ ಸಂಬಂಧಿಸಿದ ಕಥೆಯನ್ನು ಹೊಂದಿದೆ. ಕಂಗ್ಲೀಷ್ (ಕನ್ನಡ + ಇಂಗ್ಲಿಷ್) ಭಾಷೆಯ ಈ ಚಿತ್ರದ ನಿರ್ಮಾಪಕರು ಜಾನು.

ಕಲ್ಪನಾ ಪಂಡಿತ್ ಮತ್ತು ಆಕಾಶ್ ಹೋರಾ ಮುಖ್ಯಪಾತ್ರದಲ್ಲಿರುವ "ಜೋ ಜೋ ಲಾಲಿ" ಕಿರು ಚಿತ್ರವು, ಗಂಡನಿಂದ ಡೈವೋರ್ಸ್ ಪಡೆದು ತನ್ನ ಮಗುವಿನೊಂದಿಗೆ ಜೀವಿಸುತ್ತಿರುವ ನಾಟ್ಯ ಕಲಾವಿದೆಯೊಬ್ಬಳ ಜೀವನದ ಕಥೆಯಾಗಿದೆ. ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಂದೇಶವನ್ನು ಹೊಂದಿರುವ 'ಹೌಸ್ ಆಫ್ ಪಂಡಿತ್' ನಿರ್ಮಾಣದ ಈ ಚಿತ್ರಕ್ಕೆ ರಿಕ್ಕಿ ಕೇಜ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರವು ಕಳೆದ ಜುಲೈ 22ರಂದು ಅಮೆರಿಕಾದಲ್ಲಿ ಜರುಗಿದ ಏಡ್ಸ್ ಕುರಿತ ವಿಶ್ವ ಸಮ್ಮೇಳನದಲ್ಲೂ ಪ್ರದರ್ಶನಗೊಂಡಿತ್ತು.

ಹಿಂದಿ ನಟಿ ಶ್ರೀದೇವಿಯ ಪರಮ ಅಭಿಮಾನಿಯಾಗಿರುವ ಸಂದೀಪ್ ಮಲಾನಿಯವರ ಕುರಿತ ಲೇಖನವನ್ನು ("ತಾರೆ ಶ್ರೀದೇವಿಗೆ ಕನ್ನಡಿಗನ ಒಲವಿನ ಉಡುಗೊರೆ") ಒನ್ಇಂಡಿಯಾ ಕನ್ನಡ ಸ್ವಲ್ಪ ದಿನಗಳ ಹಿಂದೆ ಪ್ರಕಟಿಸಿತ್ತು. ಕನ್ನಡದ 'ಮಿಸ್ ಕ್ಯಾಲಿಫೋರ್ನಿಯ' ಮತ್ತು 'ಒನ್ ಟು ತ್ರೀ' ಸಿನೆಮಾಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಇವರ ನಿರ್ದೇಶನದ 'ಜಾನ್ ಲೇವ 555 ' ಹಿಂದಿ ಚಲನಚಿತ್ರವು ಮುಂದಿನ ಅಕ್ಟೋಬರ್ 16ರಂದು ಬಿಡುಗಡೆಗೊಳ್ಳಲಿದ್ದು ಇದರಲ್ಲಿ ಕನ್ನಡದ ಖ್ಯಾತ ಹಿರಿಯ ನಟ ಅನಂತ್-ನಾಗ್ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+