ಅಕ್ಕ ಕನ್ನಡ ಸಮ್ಮೇಳನಕ್ಕೆ 'ಫೆಸ್ಟ್ ಫಾರ್ ಬೆಸ್ಟ್'

Posted By:
Subscribe to Oneindia Kannada
Amarnath Gowda
ಬೆಂಗಳೂರು, ಆ. 27: ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕರ್ನಾಟಕದಿಂದ ತೆರಳುವ ಕವಿ, ಕಲಾವಿದ, ಪತ್ರಕರ್ತ, ರಂಗ ಕರ್ಮಿ, ಯಕ್ಷ ಕಲಾವಿದ, ನೃತ್ಯಗಾತಿಯರನ್ನೊಳಗೊಂಡ ಅಂತಿಮ ಪಟ್ಟಿ ಸಿದ್ಧವಾಗಿದೆ. "ಫೆಸ್ಟ್ ಫಾರ್ ಬೆಸ್ಟ್" ಘೋಷವಾಕ್ಯದ ಈ ತಂಡದಲ್ಲಿ 42 ಮಂದಿ ಇದ್ದಾರೆ.

ಗುಡ್ ನ್ಯೂಸ್ ಎಂದರೆ, ಅರ್ಚನಾ ಉಡುಪ ಮತ್ತು ಮಧು ನಟರಾಜ್ ತಂಡದ ತಲಾ 15 ಕಲಾವಿದರಿಗೆ ಕಳೆದ ಗುರುವಾರ ವೀಸಾ ಸಿಕ್ತು. ಇವರಲ್ಲದೆ ಇತರ 50 ಮಂದಿಗೆ ಚೆನ್ನೈನ ಅಮೆರಿಕಾ ರಾಯಭಾರಿ ಕಚೇರಿಯಿಂದ P3 ವೀಸಾ ದೊರೆತಿದೆ ಎಂದು ಅಕ್ಕ ಟ್ರಸ್ಟೀ ಅಮರ್ ನಾಥ್ ಗೌಡ ಒನ್ ಇಂಡಿಯಾಗೆ ತಿಳಿಸಿದರು.

ಇದಲ್ಲದೆ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನೇತೃತ್ವದ ಇನ್ನೊಂದು ತಂಡಕ್ಕೂ ವೀಸಾ ಪ್ರಾಪ್ತವಾಗಿದ್ದು ಎಲ್ಲರೂ ಅಮೆರಿಕಾ ಪ್ರಯಾಣಕ್ಕೆ ಸಿದ್ಧರಾಗಿದ್ದಾರೆ ಎಂದು ಗೌಡರು ಹೇಳಿದರು. 3 ದಿನಗಳ ಸಮ್ಮೇಳನ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ಅಮೆರಿಕಾ ಪೂರ್ವ ಕರಾವಳಿಯ ಅಟ್ಲಾಂಟ ನಗರದಲ್ಲಿ ಮೇಳೈಸುತ್ತದೆ.

"ಫೆಸ್ಟ್ ಫಾರ್ ಬೆಸ್ಟ್" ತಂಡದ ಕಲ್ಪನೆ ಮತ್ತು ನಿರ್ಮಾಣ ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ಮತ್ತು ಐಎಎಸ್ ಅಧಿಕಾರಿ ಐ.ಎಂ. ವಿಠಲಮೂರ್ತಿ ಅವರ ಜೋಡಿ ಪ್ರಯತ್ನ. ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ವಿಶಿಷ್ಟವಾದ ಕನ್ನಡ ಸಂಸ್ಕೃತಿ ಸೌರಭ ಬೀರುವ ಉದ್ದೇಶ ಇವರಿಬ್ಬರದ್ದು.

ಸಮ್ಮೇಳನದ ಮೂರು ದಿನಗಳ ಉದ್ದಕ್ಕೂ ಮನರಂಜನೆಯ ಮಹಾಪೂರವೇ ಇರುತ್ತದೆ. ಗೋಷ್ಠಿ, ಭಾಷಣ, ಉಪನ್ಯಾಸ, ವಸ್ತು ಪ್ರದರ್ಶನ ಹಾಗೂ ಮಾರಾಟದ ಜತೆಗೆ ಅಮೆರಿಕಾದ ಮೂಲೆಮೂಲೆಗಳಿಂದ ಆಗಮಿಸುವ ಕನ್ನಡ ಕುಟುಂಬಗಳು ಪರಸ್ಪರ ಕಲೆಯುವುದಕ್ಕೆ ಸಮ್ಮೇಳನ ವಿರಳ ಅವಕಾಶ ಒದಗಿಸುತ್ತದೆ.

ಬಂಧುಮಿತ್ರರನ್ನು ಮುದ್ದಾಂ ಕಂಡು ಉಭಯಕುಶಲೋಪರಿ ಮಾಡುವುದು, ಮಧುರ ನೆನಪುಗಳ ಬುತ್ತಿ ಬಿಚ್ಚಿ ಮೆಲುಕುಹಾಕುವುದು ಹಿತವಾಗಿರತ್ತೆ. ಎಲ್ಲದಕ್ಕಿಂತ ಮುಖ್ಯ ಮೆನು, ಸಮ್ಮೇಳನ ಸಭಾಂಗಣದಲ್ಲಿ, ಹೋಟೆಲ್ ಲಾಬಿಗಳಲ್ಲಿ, ಸ್ಟಾರ್ ಬಕ್ಸ್ ಕಾಫಿ ಶಾಪುಗಳಲ್ಲಿ ಸಾಂಪ್ರದಾಯಿಕ ಕರ್ನಾಟಕ ಉಡುಗೆತೊಡುಗೆ ಧರಿಸಿ ಜತೆಗಾರ ಕನ್ನಡಿಗರೊಂದಿಗೆ ಪುಷ್ಕಳವಾಗಿ ಕನ್ನಡದಲ್ಲಿ ಹರಟೆ ಕೊಚ್ಚುವುದು.

ಕಪ್ಪಣ್ಣ ಮತ್ತು ವಿಠಲಮೂರ್ತಿ ಅವರ ಮುಂದಾಳತ್ವದ ಫೆಸ್ಟ್ ಫಾರ್ ಬೆಸ್ಟ್ ತಂಡದಲ್ಲಿರುವವರ 42 ಮಂದಿ ಸಾಂಸ್ಕೃತಿಕ ರಾಯಭಾರಿಗಳ ಹೆಸರುಗಳು ಇಂತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Final list of artists participating in AKKA world Kannada Convention, Atlanta 2012. 42 member team 'Fest for the Best' consisting of singers, dancers, writers, Journalists and poets set to fly Atlanta, on P3 Visa.
Please Wait while comments are loading...