• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ ಪ್ರವೀಣ ಸದಾನಂದ ಮಯ್ಯ ವಿಶೇಷ ಸಂದರ್ಶನ

By Prasad
|

7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ಕನ್ನಡ ಸಂಘ ಸಿಂಗಪುರ ಹಾಗೂ ಹೃದಯವಾಹಿನಿ, ಮಂಗಳೂರು ಅವರ ಜಂಟಿ ಆಯೋಜನೆಯಲಿ ನಡೆದ ಸಮಾರಂಭದಲಿ ವಿಶೇಷ ಅತಿಥಿಯಾಗಿ ವಾಣಿಜ್ಯ ವೇದಿಕೆ ಮತ್ತು ಸಮಾವೇಶದಲ್ಲಿ ಭಾಗವಹಿಸಿದ ಡಾ. ಸದಾನಂದ ಮಯ್ಯ ಅವರೊಡನೆ ನಡೆದ ಸಂದರ್ಶನದ ತುಣುಕುಗಳು......

ನಮಸ್ಕಾರ ಸರ್,

ಭೀಮಪಾಕ, ನಳಪಾಕಗಳು ಹೋಗಿ ಇದೀಗ ಮಯ್ಯ-ಪಾಕ ಕಾಲವಿದು... ಇದಕ್ಕೆ ನಗುತ್ತಾ ಇಲ್ಲ, ಇಲ್ಲ, ಅವರು ತೋರಿದ ಮಾರ್ಗದಲಿ ನಡೆಯುತ್ತಿರುವವ ನಾನು ಎಂದೆನ್ನುತ್ತ ನಮ್ಮ ಕೆಲವೊಂದು ಪ್ರಶ್ನೆಗಳಿಗೆ ಡಾ. ಮಯ್ಯ ಅವರು ಉತ್ತರಿಸಿದ್ದು ಹೀಗೆ....

1. ಮಹಿಳೆ-ಅಡುಗೆ-ತನ್ನಮನೆ ಎಂಬ ಪರಿಧಿಯೊಳಗೆ ಇದ್ದಾಳೆ. ಇಂದು ಎಲ್ಲಾ ಕ್ಷೇತ್ರದಲಿ ಮುಂಬರಬೇಕು ಎಂಬ ಹಂಬಲ ಇರುವ ಮಹಿಳೆ ಉದ್ಯಮ ಪ್ರಾರಂಭಿಸುವಲ್ಲಿ ನಿಮ್ಮ ಸಲಹೆ? ಎಂ.ಟಿ.ಆರ್ ಸಹಕಾರ ಇದಕ್ಕೆ ಇದೆಯಾ?

ಮಯ್ಯ: ಇದರಲ್ಲಿ ಹೆಂಗಸರಿಗೆ ಕನ್ಸಿಸ್ಟೆನ್ಸಿ ಇಲ್ಲ. ಅದನ್ನ ನೀವು ಗೆದ್ದರೆ ಈ ಕ್ಷೇತ್ರದಲ್ಲೂ ಮಿಂಚಬಹುದು. ಈ ನಿಟ್ಟಿನಲ್ಲಿ ಎಂ.ಟಿ.ಆರ್ ಸಹಕಾರ ಇದ್ದೇ ಇದೆ. ಹಿಂದೆಯೂ ಮಾಡ್ತಾ ಇದ್ವಿ, ಮುಂದೆಯೂ ಮಾಡ್ತೀವಿ.

2. ಅಡುಗೆ ಮನೆಯಿಂದ ನ್ಯಾನೋ ಟೆಕ್ನಾಲಜಿ ಬಗ್ಗೆ ಹೇಳಿದ್ರಿ. ಈ ನಾನೋ ಟೆಕ್ನಾಲಜಿಯಿಂದ ಆಹಾರಕ್ಕ್ಕೆ ಮತ್ತು ಆರೊಗ್ಯದ ಮೇಲೆ ಪರಿಣಾಮಗಳೇನು?

ಮಯ್ಯ: ನಾನೋ ಟೆಕ್ನಾಲಜಿ ಎಂದರೆ ಜೆನೆಟಿಕಲಿ ಮಾಡಿಫೈಡ್ ಎಂಬ ನಂಬಿಕೆ ಇದೆ. ಇಲ್ಲಿ ಹಾಗಲ್ಲ. ಜೆನೆಟಿಕಲಿ ಎಂದರೆ ಒಂದು ತೆಗೆದು ಮತ್ತೊಂದು ಹಾಕುವುದು. ನಾವು ಮಾಡಿರುವುದು ಆಹಾರದಲ್ಲಿನ ದೇಹದ ಮೇಲೆ ದುಷ್ಪರಿಣಾಮ ಬೀರುವ ಮಟ್ಟವನ್ನು ಕಡಿಮೆ ಪ್ರಮಾಣಕ್ಕೆ ಇಳಿಸುವ ಒಂದು ವಿಧಾನ.

3. ಆಹಾರವನ್ನು ಔಷಧಿಯ ತರ ಸೇವಿಸಬೇಕು ಎನ್ನುತ್ತಾರೆ? ಎಂ.ಟಿ.ಆರ್ ಪ್ಯಾಕ್ ನೋಡಿದರೆ ಹೊಟ್ಟೆಯ ಎಲ್ಲ ಕಟ್ಟುಪಾಡುಗಳು ಬಿಚ್ಚಿಕೊಳ್ಳುತ್ತದೆ? ಇದಕ್ಕೆ ನಿಮ್ಮ ಉತ್ತರ?

ಮಯ್ಯ: ನನ್ನ ಥಿಯರಿ ಎಂದರೆ input= output. ನಿಮಗೆ ನಿಮ್ಮ ಯೋಗ್ಯತೆ ಚೆನ್ನಾಗಿ ಗೊತ್ತು. ಆ ಯೋಗ್ಯತೆ ಇದ್ದಲ್ಲಿ ತಿನ್ನಿ. ಇಲ್ಲದಿದ್ದರೆ ಬಿಡಿ.

4. ಸೂಪ ಶಾಸ್ತ್ರದ ಬಗ್ಗೆ? ಇದರ ಬಗ್ಗೆ ನಿಮಗೆ ಹೇಗೆ ತಿಳಿಯಿತು?

ಮಯ್ಯ: ಇದು ನೋಡಿ, ನನಗೆ ಸಿಕ್ಕದ್ದು ಶೃಂಗೇರಿ ಮಠದ ತಾಳೆಗರಿಯಲ್ಲಿ, ಸಂಸ್ಕೃತ ಭಾಷೆಯಲ್ಲಿ. SAPತರಬೇತಿಗಾಗಿ ಗೌರಿಶಂಕರ್ ಎಂಬುವರು ಬಂದರು. ಅವರಿಗೆ ತಬೇತಿ ನೀಡಲು ನಾನು ಶೃಂಗೇರಿ ಮಠದ ತಾಳೆಗರಿ ಸಂಗ್ರಹಣ ನೋಡಿದೆ. ಆಗ ಸಿಕ್ಕಿತು ಇದು. ಪೊರ್ವಜರ ತಾಳೆಗರಿಯಲಿ ಅತ್ಯಂತ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಅನೇಕಾನೇಕ ವಿಷಯಗಳು ಆಡಗಿವೆ.

5. ಹಿಂದಿನಿಂದ ನಮ್ಮಲ್ಲಿ ತಿಂಡಿ, ತಿನಿಸುಗಳ ಶುದ್ದತೆಗೆ ಒತ್ತು ಕೊಟ್ಟು -ಪ್ರಿಸವೇಟಿವ್ ಉಪಯೋಗಿಸದೆಯೇ ತಿನಿಸುಗಳ ಸಂರಕ್ಷಣೆ ಮಾಡುತ್ತಿದ್ದರು. ಆ ತರಹದ ತಿಂಡಿಗಳಲಿ ಉಪ್ಪಿನಕಾಯಿ, ತೊಕ್ಕು, ಚಟ್ನಿಗಳನ್ನು ಇದೀಗ ಜನಮನರಿಗೆ ನೀವು ತಲುಪಿಸುತ್ತಿದ್ದೀರಿ? ನೀವು ನಿಮ್ಮ ಆಹಾರಗಳಲ್ಲಿ ಪ್ರಿಸವೇಟಿವ್ ಉಪಯೋಗಿಸುತ್ತೀರ?

ಮಯ್ಯ: ನಮ್ಮ ಯಾವುದೇ ತಿಂಡಿ ತಿನಿಸುಗಳಿಗೆ ಪ್ರಿಸರ‍್ವೇಟಿವ್ ಉಪಯೋಗಿಸುವುದಿಲ್ಲ. ನಾವು ಅಂದಿನ ಕಾಲದ "ಮಡಿ" ಎಂದು ಹೇಳುತ್ತೇವಲ್ಲಾ ಅದನು ಅಳವಡಿಸಿಕೊಂಡಿದ್ದೇವೆ. ಆ ಕಾಲದಲ್ಲಿ ನೋಡಿ, ಉಪ್ಪಿನಕಾಯಿ ಜಾಡಿಯ ಮೇಲೆ ಇಂಗನ್ನು ಇಟ್ಟು, ಮಲ್ ಬಟ್ಟೆಯಲಿ ಕಟ್ಟಿ, ಬಟ್ಟೆಯ ಮೇಲೆ ಎಣ್ಣೆ ಇಡುವ ಪರಿಪಾಠ ಇತ್ತು. ಕಲ್ಲನ್ನು ಇಡುತ್ತಿದ್ದರು. ಯಾಕೆ ಕಲ್ಲು ಇಟ್ಟಿದ್ದಾರೆ ಎಂದು ನನಗೆ ಹೊಳೆಯಲಿಲ್ಲ, ಬೆಂಗಳೂರಿನಲ್ಲಿ ನಾನೂ ಕಲ್ಲು ಇಟ್ಟು ಉಪ್ಪಿನಕಾಯಿ ಜಾಡಿಯಮೇಲೆ. ಇಲ್ಲಿ ಅದರ ಪರಿಣಾಮ ನಡೆಯಲಿಲ್ಲ.

ಹಳ್ಳಿಯಲಿದ್ದ ಕಲ್ಲನ್ನು ಪರೀಕ್ಷಿಸಿದಾಗ ಅದರಲ್ಲಿ ಕಂಡಿತು ಸಿಲಿಕಾನ್ ಡೈ ಆಕ್ಸೈಡ್. ಆಗ ಗೊತ್ತಾಯಿತು ಉಪ್ಪಿನಕಾಯಿ ಕೆಡದ ಮರ್ಮ. ಮಲ್ ಬಟ್ಟೆ ಮೇಏಲೆ ಎಣ್ಣೆ ಹಾಕಿದರೆ ಅದರಲ್ಲಿ ಮೊದಲು ಎಣ್ಣೆ ಹರಡಿ ಉತ್ಕರ್ಷಣಾ ಕ್ರಿಯೆ ಆಗುತ್ತದೆ. ಮತ್ತು ಎಣ್ಣೆಯಿಂದ ಒಂದು ಪದರು ಬರುತ್ತೆ. ಇದು ಉಪ್ಪಿನಕಾಯಿ ಕೆಡದಿರಲು ಕಾರಣ. ಅಂದಿನ ಮಡಿ ಎಂಬುವುದು ವೈಜ್ಞಾನಿಕ ಕಾರಣಗಳಿಗೆ ಎಂಬುದು ಇದೀಗ ಅರಿವು ಮೂಡುತ್ತಿದೆ.

6. ಸರ್ ನೀವು ಇಷ್ಟೋಂದು ತಿಂಡಿ, ತಿನಿಸುಗಳಲ್ಲಿ ನಿಮಗೆ ಇಷ್ಟವಾದ ತಿನಿಸು ಯಾವುದು?

ಮಯ್ಯರವರು ನಗುತ್ತಾ ಉಪ್ಪಿಟ್ಟು...ಅದೂ ಇದೀಗ ನ್ಯಾನೋ ಉಪ್ಪಿಟ್ಟು ಬಲು ಪ್ರಿಯ.

7. ಮ್ಯಾಕ್ ಡೊನಾಲ್ಡ್, ಪಿಜಾ ಹಟ್, ಕೆ.ಎಫ್.ಸಿ ಇವೆಲ್ಲಾ ಇದ್ದೂ ಎಂ.ಟಿ.ಆರ್ ಗೆ ಹಾಗೂ ದರ್ಶಿನಿ ಹೋಟೆಲುಗಳಿಗೆ ಪೆಟ್ಟು ಬಿದ್ದಿಲ್ಲ ಅಲ್ಲವೇ?

ಮಯ್ಯ: ಸದ್ಯಕ್ಕೆ ಬಿದ್ದಿಲ್ಲ, ಮುಂದೆ ಪೆಟ್ಟು ಬೀಳುವ ಸಾಧ್ಯತೆ ಇದೆ. ನಾವು ಅದಕಾಗಿ ಡಿಸೆಂಬರ್ 18 ರಂದು ನಮ್ಮವರನ್ನು ಒಂದುಗೂಡಿಸುವ ಸಮಾವೇಶವಿದೆ. ನಮ್ಮಲ್ಲಿ ಹೊಸತು ಬರಬೇಕು. ನಮ್ಮವರು ಅವರ ದಾಳಿಯನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಸಮಾವೇಶವಿದು. . ನಾವು ಹೊಸತು ಹೊಸತು ಕಲಿಯಬೇಕು, ನಮ್ಮ ತನವನ್ನು ಬಿಟ್ಟುಕೊಡಬಾರದು. ಬೇರೆಯವರನ್ನು ಕಾಪಿ ಮಾಡುವುದು ಬಿಟ್ಟು ಕೊಡಬೇಕು ಈ ಮಂತ್ರ ಪಾಲಿಸಲೇ ಬೇಕು

ಮಯ್ಯ ಅವರ ಬಗ್ಗೆ : ಬೆಂಗಳೂರಿನ ಲಾಲ್‌ಬಾಗ್ ಬಳಿ ಹೋದವರು ಕ್ಯೂ ನಲ್ಲಿ ನಿಂತು ದೋಸೆ ತಿಂದು ಬರುವವರು. ದೋಸೆಗೆ ಕ್ಯೂ ನಾ, ಅದು ಎಂ.ಟಿ.ಆರ್ ದೋಸೆಗೆ ಮಾತ್ರ. ಎಂಟಿಆರ್ ಬಗ್ಗೆ ಗೊತ್ತಿಲ್ಲ ಎಂಬುವವರು ಬಲು ವಿರಳ. ರವೆ ಇಡ್ಲಿ, ಮಸಾಲೆ ದೋಸೆಯನ್ನು ತಿನ್ನಲೆಂದೇ ಬರುವವರೂ ಇದ್ದಾರೆ. ಅದೇ ಅಲ್ಲದೆ ಈ ಹೊಟೆಲ್ ಅತ್ಯಾಧುನಿಕ ಆಹಾರ ಘಟಕವನ್ನೂ ಹೊಂದಿದೆ. ಈ ಉತ್ಪನ್ನಗಳು ವಿಶ್ವದಾದ್ಯಂತ ಮಾರುಕಟ್ಟೆ ಹೊಂದಿದ್ದು ಎಂ.ಟಿ.ಆರ್ ಪರಿಮಳ ವಿಶ್ವದ ಮೂಲೆ ಮೂಲೆಗೂ ಪಸರಿಸಿದ ಕೀರ್ತಿ ಪಿ.ಸದಾನಂದ ಮಯ್ಯ ಅವರದು. ಉಡುಪಿ ತಾಲೂಕಿನ ಪಾರಂಪಳ್ಲಿಯಲ್ಲಿ ಇವರ ಜನನ.

ಅಡುಗೆಗೂ ಎಂಜಿನಿಯರಿಂಗೂ ಎತ್ತಣಿಂದೆತ್ತ ಸಂಬಂಧವಯ್ಯಾ? ಓದಿದ್ದು ಎಲೆಕ್ಟ್ರಾನಿಕ್ ಎಂಜಿನಿಯರ್, ವೃತ್ತಿ ಆಹಾರ ಘಟಕ. ಮಯ್ಯಾಸ್ ಕುರುಕಲು ತಿಂಡಿ ಆಹಾರ ಘಟಕದ ಕಾರ್ಖಾನೆ ಹೊಂದಿದ್ದಾರೆ. ಧಿಡೀರ್ ತಿನಿಸುಗಳ ಕ್ಷೇತ್ರದಲ್ಲಿ ಮಯ್ಯರು ಮಾಡಿರುವ ಅವಿಷ್ಕಾರಗಳು ಐಸ್‌ಕ್ರೀಮ್ ಕ್ರಾಂತಿ ಜನಮನ್ನಣೆ ಪಡೆಯಿತು. ಕೇವಲ ಉದ್ಯಮಿಯಾಗಷ್ಟೇ ತಮ್ಮನ್ನು ಗುರುತಿಸಿಕೊಳ್ಳದ ಮಯ್ಯರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೋತ್ಸವ, ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲೂ ಸಹಾಯ ಹಸ್ತ ನೀಡಿ, ಸೇವೆ ಸಲ್ಲಿಸುತ್ತಿದ್ದಾಎ.

ಸಂದರ್ಶಕರು: ವಾಣಿ ರಾಮದಾಸ್, ವೆಂಕಟ್ ಹಾಗು ಗಿರೀಶ್ ಜಮದಗ್ನಿ - ಸಿಂಗಪುರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Spice King Sadananda Maiya special interview by Singapore Kannada Sangha. MTR fame Maiya is the one of the chief guests at Singara business forum 2010 held on the eve of 7th Singapore Kannada Cultural Convention. Maiya native of Udupi district. He is basically a Electric engineer. Later he ventured into Hotel industry. In this talk he tells about food technology, various competition MTR facing in daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more