• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸಮ್ಮೇಳನಕ್ಕೆ ನೊಂದಣಿ ದಿನಾಂಕ ವಿಸ್ತರಣೆ

By * ಶಾಮ್
|

ನ್ಯೂ ಜೆರ್ಸಿಯಲ್ಲಿ ಜರಗುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಆನ್ ಲೈನ್ ಮುಖಾಂತರ ಹೆಸರು ನೊಂದಾಯಿಸಿಕೊಳ್ಳುವ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ. 175 ಡಾಲರುಗಳ ಶುಲ್ಕ ನೀಡಿ ನೊಂದಾವಣೆ ಆಗುವುದಕ್ಕೆ ಕಡೆಯ ಹೊಸ ದಿನಾಂಕ 11 ಜುಲೈ 2010. ಈ ಮುಂಚಿನ ಪ್ರಕಟಣೆಯ ಪ್ರಕಾರ ಕಡೆಯ ದಿನಾಂಕ ಜೂನ್ 30 ಆಗಿತ್ತು.

ಅಕ್ಕ ಟ್ರಸ್ಟೀ ಅಮರನಾಥ್ ಗೌಡ ಮತ್ತು ಸಮ್ಮೇಳನ ಕಾರ್ಯಕಾರಿ ಸಮಿತಿಯ ಸಂಚಾಲಕ ಪ್ರಸನ್ನ ಕುಮಾರ್ ಈ ವಿಷಯವನ್ನು ಗುರುವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು. ಸಮ್ಮೇಳನದಲ್ಲಿ ಭಾಗವಹಿಸಲು ಇಷ್ಟಪಡುವ ಕನ್ನಡಿಗರು ಈ ವಿಸ್ತರಣೆ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. ಕಡೆಯ ದಿನಾಂಕ ಭಾನುವಾರ 11 ಜುಲೈ, ಕಡೆಯ ಕ್ಷಣ ಅದೇ ದಿನ ಮಧ್ಯರಾತ್ರಿ 12 ಗಂಟೆ.(PST)

ದಿನಾಂಕ ವಿಸ್ತರಣೆಗೆ ಎರಡು ಕಾರಣಗಳಿವೆ. ಮುಂಚೆ ಪ್ರಕಟಿಸಲಾಗಿದ್ದ ಜೂನ್ 30 ಬುಧವಾರ ಬೀಳುತ್ತದೆ. ಅದು ಬಿಡುವಿಲ್ಲದ ಕೆಲಸಗಳ ವಾರದ ನಡುವಿನ ಬಿಗುವಿನದಿನ. ಸಾಮಾನ್ಯವಾಗಿ ಅಮೆರಿಕನ್ನಡಿಗರು ಇಂಟರ್ನೆಟ್ ಅನ್ನು ಖಾಸಗಿ ಉದ್ದೇಶಗಳಿಗಾಗಿ ಪುರುಸೊತ್ತಾಗಿ ಬಳಸುವ ಸಮಯ ವಾರಾಂತ್ಯದ ದಿನಗಳಾಗಿರುತ್ತವೆ. ದಿನಾಂಕ ವಿಸ್ತರಣೆ ಸೌಲಭ್ಯದಿಂದಾಗಿ ಜುಲೈ 3-4 ಹಾಗೂ ಜುಲೈ 10-11 ಶನಿವಾರ ಭಾನುವಾರಗಳ ಎರಡು ಹೆಚ್ಚುವರಿ ವಾರಾಂತ್ಯ ಸಮಯಾನುಕಾಲವನ್ನು ಪ್ರತಿನಿಧಿಗಳಿಗೆ ಕಲ್ಪಿಸುವುದು ಸಮ್ಮೇಳನ ಸಮಿತಿಯ ಉದ್ದಿಶ್ಯ.

ಎರಡನೇ ಕಾರಣವೆಂದರೆ ಜುಲೈ 4ರ ದೀರ್ಘ ವಾರಾಂತ್ಯ ಬಂತೆಂದರೆ ಅಮೆರಿಕ ಕನ್ನಡಿಗರ ವಲಯಗಳಿಗೆ ಒಂದು ರೀತಿ ಜಾತ್ರೆಯ ಸೀಸನ್. ಅಮೆರಿಕೆಯಲ್ಲಿ ನೆಲೆಸಿರುವ ಕನ್ನಡ ಜನಾಂಗದ ನಾನಾ ಗುಂಪುಗಳು ತಮ್ಮ ತಮ್ಮ ಗುಂಪುಗಳ ಸಮ್ಮೇಳನ ಮತ್ತು ಅವರವರ ಅಭಿರುಚಿಗೆ ತಕ್ಕುದಾದ ಸಾಂಸೃತಿಕ ಸಮಾವೇಶಗಳನ್ನು ಹಮ್ಮಿಕೊಳ್ಳುವುದಕ್ಕೆ ಸೂಕ್ತ ಸಮಯ. ಶಾಲೆಗಳಿಗೆ ರಜೆ, ಹವಾಮಾನ ವೈಪರೀತ್ಯಗಳ ಹಾವಳಿ ಇರುವುದಿಲ್ಲ. ಹಾಗಾಗಿ ಎಲ್ಲರೂ ಒಂದಿಲ್ಲೊಂದು ಸಮಾವೇಶದಲ್ಲಿ ಮಗ್ನರಾಗಿರುವಾಗ ಅಕ್ಕ ಸಮ್ಮೇಳನಕ್ಕೆ ನೊಂದಾವಣೆ ಮಾಡಿಕೊಳ್ಳುವುದಕ್ಕೆ ಸಮಯ ಸಾಲದೇ ಹೋಗಬಹುದು.

ಈ ಜುಲೈನಲ್ಲಿ ವೀರಶೈವ ಸೊಸೈಟಿ (VSNA), ಉತ್ತರ ಅಮೆರಿಕ ಸಂಕೇತಿ ಅಸೋಸಿಯೇಷನ್ (NASA), ಬಂಟರ ಸಂಘ (BANA), ಒಕ್ಕಲಿಗರ ಪರಿಷತ್ (VPA), ಮಾಧ್ವ ಜನಾಂಗದವರ ಮೆಟ್ಲು ಪೂಜೆ ಮುಂತಾದ ಹಲಕೆಲವು ಬಗೆಯ ಕಾರ್ಯಕ್ರಮಗಳು ಸಜ್ಜಾಗಿದ್ದು ಬಹುತೇಕ ಕನ್ನಡಿಗರು ಆಯಾ ಮೇಳಗಳಲ್ಲಿ ತೊಡಗಿಕೊಂಡಿರುತ್ತಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಅಕ್ಕ ಸಮ್ಮೇಳನ ನೊಂದಾವಣೆ ದಿನಾಂಕ ವಿಸ್ತರಿಸುವುದು ಸಮಂಜಸ ಎಂದು ನಿರ್ಧರಿಸಲಾಗಿದೆ ಎಂದು ಅಮರ್ ನಾಥ್ ಗೌಡ ಮತ್ತು ಪ್ರಸನ್ನ ಕುಮಾರ್ ವಿವರಿಸಿದರು.

ಜುಲೈ 11ರವರೆಗೆ ನೊಂದಾವಣೆ ಶುಲ್ಕ 175 ಡಾಲರು, ಆನಂತರ ಆಗಸ್ಟ್ 31ರವರೆಗಿನ ಶುಲ್ಕ 200 ಡಾಲರುಗಳು ಆಗಿರುತ್ತವೆ. ಆಗಸ್ಟ್ 31ರ ಮಂಗಳವಾರದ ನಂತರ, ಕೊನೆ ಕ್ಷಣದಲ್ಲಿ ಸಮ್ಮೇಳನಕ್ಕೆ ಏಕಾಏಕಿ ಬರಲು ಬಯಸುವವರಿಗೆ ಸಮ್ಮೇಳನ ಸಭಾಂಗಣದಲ್ಲಿ ಸ್ಥಳ ನೊಂದಾವಣೆ ಅಂದರೆ spot registration ಅವಕಾಶ ಇದೆ. ಆದರೆ ಅದರ ಬೆಲೆ 225 ಡಾಲರುಗಳಾಗಿರುತ್ತವೆ ಎಂದು ಪ್ರಸನ್ನ ಹೇಳಿದರು.

ಹೆಸರು ನೊಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more