• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸ್ಮರಣ ಸಂಚಿಕೆಗೆ ಬರಹ ಆಹ್ವಾನ

By Shami
|
ಆತ್ಮೀಯ ಕನ್ನಡಿಗರೇ,

ನಿಮಗೆ ತಿಳಿದಿರುವಂತೆ 2010ನೇ ಇಸವಿಯ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ನಿರ್ವಹಣೆಗೆ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆಯು ನ್ಯೂ ಜೆರ್ಸಿಯಲ್ಲಿರುವ ಬೃಂದಾವನ ಕನ್ನಡ ಕೂಟವನ್ನು ಆಯ್ಕೆಮಾಡಿದೆ. ಈ ಸಮ್ಮೇಳನವನ್ನು ಎಡಿಸನ್, ನ್ಯೂ ಜೆರ್ಸಿಯಲ್ಲಿರುವ ರಾರಿಟನ್ ಸೆಂಟರರ್ನಲ್ಲಿ ಸೆಪ್ಟೆಂಬರ್ 3ರಿಂದ 5ರವರೆಗೆ ಆಚರಿಸಲು ಏರ್ಪಾಡುಮಾಡಿದೆ.

ಈ ಸಮ್ಮೇಳನದ ಸವಿನೆನಪಿಗೋಸ್ಕರ ಒಂದು ಸ್ಮರಣ ಸಂಚಿಕೆಯನ್ನು ಪ್ರಕಟಿಸಿ ಅದನ್ನು ಸಮ್ಮೇಳನಕ್ಕೆ ಬಂದವರಿಗೆಲ್ಲಾ ವಿತರಿಸಲಾಗುವುದು. ಗಣ್ಯ ಮಹನೀಯರ ಸಂದೇಶಗಳು, ಹೆಸರಾಂತ ಕವಿಗಳ ಮತ್ತು ಲೇಖಕರ ಕವನಗಳು, ಲೇಖನಗಳು, ಸಣ್ಣಕಥೆಗಳು, ಮತ್ತು ಮಕ್ಕಳ ಬರವಣಿಗೆಗಳನ್ನು ಈ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಅದಕ್ಕೋಸ್ಕರ ಅಕ್ಕ 2010 ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆ ಸಮಿತಿ ಈ ಮೂಲಕ ನಿಮ್ಮ ಬರವಣಿಗೆಗಳಿಗೆ ಆಹ್ವಾನ ನೀಡುತ್ತಿದೆ.

ಅಕ್ಕ 2010 ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸುವ ಲೇಖನ, ಕವನ, ಕಥೆ, ಇತ್ಯಾದಿ ಬರಹಗಳನ್ನು ಆಯ್ಕೆ ಮಾಡುವಾಗ ಈ ಕೆಳಗಿನ ನಿಯಮಗಳು ಅನ್ವಯವಾಗುತ್ತವೆ:

* ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲು ಕಳುಹಿಸಿದ ಬರಹಗಳು ಬೇರೆಲ್ಲೂ ಪ್ರಕಟವಾಗಿರಬಾರದು.

* ಬರಹಗಳು 8ಪುಟಗಳಿಗಿಂತ ಹೆಚ್ಚಾಗಿರಬಾರದು (ಫಾಂಟ್ ಸೈಜ್: 12 (ಕನ್ನಡ), 11 (ಆಂಗ್ಲ), single line spaced) ಬರಹಗಳ ಗುಣಮಟ್ಟ ಹಾಗೂ ವಿಶಿಷ್ಟತೆಗಳಿಗೆ ಅನುಗುಣವಾಗಿ ಕೆಲವು ರಿಯಾಯಿತಿಗಳು ಅನ್ವಯವಾಗುತ್ತವೆ.

* ಕನ್ನಡ ಬರಹಗಳು “ಬರಹ“ದಲ್ಲಿರಬೇಕು, ಮತ್ತು ಆಂಗ್ಲ ಬರಹಗಳು “ಮೈಕ್ರೋಸಾಫ್ಟ್ ವರ್ಡ್“ನಲ್ಲಿರಬೇಕು.

* ಬರಹಗಳನ್ನು ಅಕ್ಕ 2010 ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಣೆಗೆಂದು ಆಯ್ಕೆಮಾಡುವಾಗ ಸ್ಮರಣ ಸಂಚಿಕೆ ಸಮಿತಿಯ ತೀರ್ಮಾನವೇ ಅಂತಿಮ.

* ನಿಮ್ಮ ಬರಹಗಳ ಜೊತೆಗೆ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ನಿಮ್ಮ ಬಗ್ಗೆ ಸಂಕ್ಷಿಪ್ತ ವಿವರಣೆ (ಮಕ್ಕಳ ಲೇಖನಗಳಾದರೆ ಅವರ ವಯಸ್ಸು) ಮತ್ತು ನಿಮ್ಮ ಛಾಯಾಚಿತ್ರವನ್ನು ಸೇರಿಸಿ ದಯವಿಟ್ಟು ಮಾರ್ಚ್ 31,2010 ರೊಳಗೆ AKKA2010.Souvenir@gmail.com ಗೆ ಈ-ಮೈಲ್ ಮಾಡಿ.

ದಯವಿಟ್ಟು ಈ ಕೆಳಗಿನ ವಿವರಗಳನ್ನು ಗಮನಿಸಿ:

1) ಮಕ್ಕಳ ಲೇಖನಗಳು : ಸ್ಮರಣ ಸಂಚಿಕೆಗೆ ಕಳುಹಿಸಿಕೊಟ್ಟ ಮಕ್ಕಳ ಕೃತಿಗಳನ್ನು ಅವರ ವಯಸ್ಸಿನ ಪ್ರಕಾರ ಎರಡು ವಿಭಾಗ ಮಾಡಲಾಗುವುದು. ಅ) 12 ವರ್ಷ ಮತ್ತು ಅದಕ್ಕಿಂತ ಕಡಿಮೆ, ಆ) 13ರಿಂದ 18 ವರ್ಷದವರೆಗೆ. ಎರಡು ವಿಭಾಗದಿಂದಲೂ ತಲಾ 5 ಕೃತಿಗಳನ್ನು ಆಯ್ಕೆ ಮಾಡಿ ನಗದು ಬಹುಮಾನಗಳನ್ನು ಕೊಡಲಾಗುವುದು.

2) ಮಕ್ಕಳ ಪೇಂಟಿಂಗ್ ಗಳು : ಈ ಬಾರಿ ಮಕ್ಕಳ ಪೇಂಟಿಂಗ್ ಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಇದಕ್ಕೆ ವಯಸ್ಸಿನ ವಿಭಾಗ ಮೇಲಿನಂತೆಯೇ ಇರುತ್ತದೆ. ಎರಡು ವಿಭಾಗದಿಂದಲೂ ತಲಾ 5 ಕೃತಿಗಳನ್ನು ಆಯ್ಕೆ ಮಾಡಿ ನಗದು ಬಹುಮಾನಗಳನ್ನು ಕೊಡಲಾಗುವುದು

ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿ ನಿಮ್ಮ ಬರಹಗಳನ್ನು ಆದಷ್ಟು ಬೇಗ ಸ್ವೀಕರಿಸುವ ನಿರೀಕ್ಷೆಯಲ್ಲಿದೆ ಹಾಗೂ ತಾವೆಲ್ಲರೂ ಈ ಸಮ್ಮೇಳನಕ್ಕೆ ಆಗಮಿಸಿ ಈ ಸಮ್ಮೇಳನದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ನಿಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ. ಸಮ್ಮೇಳನಕ್ಕೆ ಸಂಬಂಧಪಟ್ಟಂತಹ ಎಲ್ಲಾ ಮಾಹಿತಿಗಳಿಗೆ ಅಕ್ಕ ಅಂತರ್ಜಾಲ ತಾಣಕ್ಕೆ (www.akkaonline.org) ಭೇಟಿಕೊಡಿ. ವಂದನೆಗಳು.

ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010 ಸ್ಮರಣ ಸಂಚಿಕೆ ಸಮಿತಿ : ಸತೀಶ್ ಹೊಸನಗರ, ಮೀರಾ ಪಿ. ಆರ್, ಲಕ್ಷ್ಮೀಶ್ ಸೀಗೇಹಳ್ಳಿ, ಅಶೋಕ್ ಕಟ್ಟೀಮನಿ, ದಾಶರಥಿ ಗಟ್ಟು, ಶೈಲಾ ಪಾಟಂಕರ್, ರುದ್ರ ಕುಮಾರ್.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more