ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ನಿನ್ನೊಲುಮೆ ನಮಗಿರಲಿ ತಂದೆ... ಕೈಹಿಡಿದು ನೀನಡೆಸು ಮುಂದೆ...
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

4ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ತೆರೆ ಸರಿಯುವ ಕ್ಷಣಗಳು ಬಂದಿವೆ. ಕಳೆದೆರಡು ವರ್ಷಗಳಿಂದ ನಡೆಸುತ್ತಿರುವ ಪೂರ್ವಸಿದ್ಧತೆಗಳು ಮೂರ್ತಸ್ವರೂಪ ತಾಳುವ ಕ್ಷಣಗಳಿವು. ಕನ್ನಡ ಕಹಳೆಯನ್ನು ಮೊಳಗಿಸುವ, ಕರ್ನಾಟಕ ಕೀರ್ತಿಪತಾಕೆಯನ್ನೇರಿಸುವ ಬಾನೆತ್ತರಕೇರಿಸುವ ರೋಮಾಂಚಕಾರಿ ಕ್ಷಣಗಳು. ವಿಶ್ವ ಕನ್ನಡಿಗರು ಒಂದೆಡೆ ಕಲೆತು ಕನ್ನಡತವವನ್ನು ಮೆರೆಯುವ ದಿವ್ಯ ಕ್ಷಣಗಳು. ಸುವರ್ಣ ಕರ್ನಾಟಕ ಸಂಭ್ರಮವು ಕೆನೆಗಟ್ಟಲಿರುವ ಚೇತೋಹಾರಿ ಕ್ಷಣಗಳು.

ಕ್ಷಣಗಣನೆ ಕೊನೆಗೊಳ್ಳುತ್ತಿದೆ. ಸಮ್ಮೇಳನ ಯಶಸ್ವಿಯಾಗಬೇಕು, ಸಾರ್ಥಕವಾಗಬೇಕು, ಸತ್ವಪೂರ್ಣವಾಗಬೇಕು ಎಂಬ ಧ್ಯೇಯವಿಟ್ಟು ಸ್ವಯಂಸೇವಕರು ಶಕ್ತಿಮೀರಿ ದುಡಿದಿದ್ದಾರೆ. ಸತ್ಕಾರ್ಯಕ್ಕೆ ದೈವಬಲ ಇದ್ದೇ ಇರುತ್ತದೆ;

Ravi, Suresh, Madesh couple seeking blessings of Ganesha

ಮೇರಿಲ್ಯಾಂಡ್‌ನ ಶಿವವಿಷ್ಣು ದೇವಸ್ಥಾನದಲ್ಲಿ ಗಣಪತಿಯ ಪೂಜೆ ಮಾಡಿ ಶುಭ ಹಾರೈಸಿದ ಅರ್ಚಕ ಸತ್ಯನಾರಾಯಣ ಮರಾಠೆ ಸಹ ಕನ್ನಡಿಗರೇ! ಸದುದ್ದೇಶದ ಕೆಲಸ ನಿರ್ವಿಘ್ನವಾಗಿ ಸಾಗುವಂತೆ ವಿಘ್ನೕಶ್ವರನಿಗೆ ನಮಿಸಿ ಪ್ರಸಾದ ಸ್ವೀಕರಿಸುತ್ತಿದ್ದಾರೆ ಸಮ್ಮೇಳನ ಸ್ವಯಂಸೇವಕರ ಪೈಕಿ ಮೂವರು ಅಗ್ರದಂಪತಿಗಳು : ರವಿ ಡಂಕಣಿಕೋಟೆ-ನರ್ಮದಾ, ಸುರೇಶ್‌-ರೋಹಿಣಿ ಮತ್ತು ಮಾದೇಶ್‌-ಜ್ಯೋತಿ. ಜತೆಯಲ್ಲೇ ಸಮ್ಮೇಳನ ಸಜ್ಜುಗೊಳ್ಳುವಿಕೆಯಲ್ಲಿ ಪ್ರತ್ಯಕ್ಷ/ಪರೋಕ್ಷ ತೊಡಗಿಸಿಕೊಂಡ ನೂರಾರು ಸ್ವಯಂಸೇವಕರು.

* * *

ಇದರೊಂದಿಗೆ ಸಮ್ಮೇಳನ ದಿನಗಣನೆಯ ಚಿತ್ರಚಿತ್ತಾರ ಚುಟುಕುವಿಚಾರ ಸರಣಿ ಮುಗಿಯುತ್ತದೆ. ಸರಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು. ನಾಳೆಯಿಂದ ಸಮ್ಮೇಳನದ ಸಚಿತ್ರ ವರದಿಗಳ ನೇರಪ್ರಸಾರ ಪ್ರಾರಂಭ.

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೆಲವು ಗಂಟೆಗಳು ಬಾಕಿ ಉಳಿದಿದೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+