ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ಭಲೇ ಅದೃಷ್ಟವೋ ಅದೃಷ್ಟ!
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಸಮ್ಮೇಳನದ ವೇಳೆ ಸಾಕಷ್ಟು ಕಲರವ ಮೂಡಿಸಬಲ್ಲ ಒಂದು ಯೋಜನೆ ರೂಪುಗೊಳ್ಳುತ್ತಿದೆ - ಅದೇ, ಲಕ್ಕಿಡಿಪ್‌ ಅಥವಾ ರ್ಯಾಫೆಲ್‌ ಅಥವಾ ಲಾಟರಿ ಮೂಲಕ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ!

ಒಂದು ಟಿಕೇಟ್‌ನ ಬೆಲೆ ಹತ್ತು ಡಾಲರ್‌. ಬಹುಮಾನ ಗೆಲ್ಲುವ ಚಾನ್ಸ್‌ ಹೆಚ್ಚಿಸಿಕೊಳ್ಳಲು ನೀವು ಒಂದೇಕೆ, ಹತ್ತು ಟಿಕೆಟ್‌ಗಳ ಕಟ್ಟನ್ನೇ ತಗೋಬಹುದು! ಯಾಕೆಂದರೆ ಬಹುಮಾನಗಳ ಪಟ್ಟಿಯನ್ನು ನೋಡಿದರೆ ಈ ಅದೃಷ್ಟದಾಟ ಸಕ್ಕತ್‌ ಟೆಂಪ್ಟಿಂಗ್‌ ಆಗಿಯೇ ಇದೆ. ದೀಪಂ ಸಿಲ್ಕ್ಸ್‌ ಪ್ರಾಯೋಜಿಸಿರುವ ರೇಷ್ಮೆ ಸೀರೆಗಳಿವೆ, ಪ್ರತಿಭಾ ಜ್ಯುವೆಲರ್ಸ್‌ ವತಿಯಿಂದ ಬಂಗಾರದ ಒಡವೆಗಳಿವೆ. ಎಂಪಿತ್ರೀ ಪ್ಲೇಯರ್ಸ್‌ ಇವೆ, ಐಪಾಡ್‌ಗಳಿವೆ, ಡಿಜಿಟಲ್‌ ಕೆಮರಾಗಳೂ ಇವೆ! ಪ್ರಾಯೋಜಕರ ಉಮೇಧಿನಿಂದಾಗಿ ಪಟ್ಟಿಯಲ್ಲಿ ಇನ್ನೂ ಹೊಸ ಬಹುಮಾನಗಳು ಸೇರಿಕೊಳ್ಳುತ್ತಲೇ ಇವೆ - ಇತ್ತೀಚಿನ ಹೊಸ ಸೇರ್ಪಡೆಯೆಂದರೆ ಬಹುಮಾನ ವಿಜೇತರಿಗೆ ‘ಆರ್ಟ್‌ ಆಫ್‌ ಲಿವಿಂಗ್‌’ ಉಚಿತ ಕೋರ್ಸ್‌ಗಳು!

Lottery Lakshmigalu in WKC!

ಅಂದಹಾಗೆ, ಈ ಚಿತ್ರದಲ್ಲಿ ರ್ಯಾಫೆಲ್‌ ಟಿಕೆಟ್‌ ಮಾರ್ತಾ ಇರೋ ಶೈಲಜಾ ಗುಂಡೂರಾವ್‌(ಇವರೇ ಈ ‘ಅದೃಷ್ಟದಾಟ ಯೋಜನೆ’ಯ ಉಸ್ತುವಾರಿ ನೋಡ್ಕೊಳೋರು) ಮತ್ತು ಮೊಟ್ಟಮೊದಲ ಟಿಕೆಟ್‌ ಖರೀದಿಸ್ತಾ ಇರೋ ಸಂಜಯ್‌ು ರಾವ್‌ - ಇಬ್ಬರ ತಲೆಗೂ ಟೋಪಿ ಇದೆಯಲ್ಲ! ಏನ್ಸಮಾಚಾರ? ಹಾಗಂತ ತಪ್ಪಾಗಿ ಅರ್ಥೈಸಬೇಡಿ. ಇದು ಟೋಪಿ ಹಾಕೋ/ ಹಾಕ್ಸಿಕೊಳ್ಳೋ ಆಟವಲ್ಲ. Afterall, ‘‘ಭಾರತದ ಅತ್ಯಂತ ವಿಶ್ವಾಸಪಾತ್ರ ಲಾಟರಿ’’ಯನ್ನು ನಡೆಸುತ್ತಿರುವ ಕೀರ್ತಿ ಕರ್ನಾಟಕದ್ದಾಗಿರುವಾಗ ಈ ಸಮ್ಮೇಳನದಲ್ಲಿನ ಲಾಟರಿಯೂ ಅಷ್ಟೇ ವಿಸ್ವಸನೀಯ ಮತ್ತು ಪಾರದರ್ಶಕ ಆಗಿರುತ್ತದೆ; ಸಮ್ಮೇಳನ ಸಂಭ್ರಮಕ್ಕೊಂದು ಹೊಸ ಆಯಾಮ ಕೊಡುವಂಥದ್ದೂ ಆಗಿರುತ್ತದೆ!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 3 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+