ವಿಶ್ವ ಕನ್ನಡಿಗರ ಜಾತ್ರೆಯಲ್ಲಿ ‘ಗಂಡುಗಲಿ ಕುಮಾರರಾಮ’
ಬೆಂಗಳೂರು : ಬಹುವೆಚ್ಚದ, ಕನ್ನಡದ ಅದ್ಧೂರಿ ಚಿತ್ರ 'ಗಂಡುಗಲಿ ಕುಮಾರರಾಮ" ಅಮೆರಿಕಾಕ್ಕೆ ತೆರಳುತ್ತಿದ್ದಾನೆ. ಅಲ್ಲಿ ವಿಶ್ವಕನ್ನಡಿಗರ ಮುಂದೆ ತನ್ನ ಕತೆಯನ್ನು ತೆರೆದಿಡಲಿದ್ದಾನೆ!
ವಿಶ್ವಕನ್ನಡ ಸಮ್ಮೇಳನದ ಹಿನ್ನೆಲೆ ಸೆ.1ರಂದು ಪ್ರದರ್ಶನ ಆಯೋಜಿಸಲಾಗಿದೆ. ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಚಿತ್ರವನ್ನು ವೀಕ್ಷಿಸುವ ಸಾಧ್ಯತೆಗಳಿವೆ.
ಎಂ.ಎಸ್.ರಾಮಯ್ಯ ಚಿತ್ರಾಲಯ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಶಿವರಾಜಕುಮಾರ್, ಶ್ರೀನಿವಾಸಮೂರ್ತಿ, ಲಯ, ರಂಭಾ, ಅನಿತಾ ಮತ್ತಿತರರು ತಾರಾಗಣದಲ್ಲಿದ್ದು, ಗುರುಕಿರಣ್ ಸಂಗೀತ ನೀಡಿದ್ದಾರೆ. 'ಗಂಡುಗಲಿ ಕುಮಾರರಾಮ", ಭಾರ್ಗವ ನಿರ್ದೇಶನದ 50ನೇ ಚಿತ್ರ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications