• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೊರೊಂಟೊದಲ್ಲಿ ಮುಂದಿನ ವಿಶ್ವಕನ್ನಡ ಸಮ್ಮೇಳನ?

By Staff
|

(ದಟ್ಸ್‌ಕನ್ನಡ ಸುದ್ದಿ ಮನೆ)

ಕೆನಡಾ ದೇಶದ ವ್ಯಾಪಾರ ದಟ್ಟಣೆಯ ದೊಡ್ಡ ನಗರ ಟೊರೊಂಟೊದಲ್ಲಿ 2008ರ ವಿಶ್ವಕನ್ನಡ ಸಮ್ಮೇಳನ ! ಭೇಷ್‌ !

‘ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿದರು’ ಎನ್ನುತ್ತೀರೋ ಏನೋ ನೀವು! ಇರಲಿ. ವಾಷಿಂಗ್‌ಟನ್‌ನಲ್ಲಿ ಇನ್ನೇನು ತೆರೆಸರಿಸಲಿರುವ 2006ರ ವಿಶ್ವಕನ್ನಡ ಸಮ್ಮೇಳನಕ್ಕಿಂತ ಮೊದಲೇ ವಿಶ್ವಕನ್ನಡ ಸಮ್ಮೇಳನ-2008ರ ಮುಂದಿನ ಸ್ಥಳ ಹಾಗು ಸಂಚಾಲಕರ ಆಯ್ಕೆ ನಡೆದುಹೋಗಿದೆ. ಟೊರೊಂಟೊ ಕನ್ನಡಿಗರ ಪೂರ್ವ ಸಿದ್ಧತೆ ತುಂಬಾ ಫಾಸ್ಟಪ್ಪಾ !

ಹೌದು, ಇತ್ತೀಚೆಗೆ ನಡೆದ ಟೊರೊಂಟೊ ಕನ್ನಡ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಿಶ್ವಕನ್ನಡ ಸಮ್ಮೇಳನ-2008 ನ್ನು ಕೆನಡಾದ ವಣಿಕರ ನಗರ ಟೊರೊಂಟೊದಲ್ಲಿ ನಡೆಸುವ ನಿರ್ಣಯಕ್ಕೆ ನೆರೆದ ಕನ್ನಡಿಗರೆಲ್ಲರು ಒಕ್ಕೊರಲಿನ ಸಮ್ಮತಿ ಸೂಚಿಸಿದ್ದಾರೆ.

ಅದಕ್ಕೂ ಮೊದಲೆ ವಿಶ್ವಕನ್ನಡ ಸಮ್ಮೇಳನ-2008ರ ಸಾಧ್ಯತೆ/ಭಾಧ್ಯತೆಗಳನ್ನು ಚರ್ಚಿಸಿದ ನಂತರ ಸುಮಾರು 25,000 CAD ಸಂಗ್ರಹಿಸಲಾಗಿತ್ತು. ಸಮಿತಿಯ ಸಂಚಾಲಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾದುದು ಟೊರೊಂಟೊ ಕನ್ನಡಿಗರೆಲ್ಲರ ಒಕ್ಕೊರಲಿನ ಸಮ್ಮತಿಯಿಂದಲೆ. ಅದಾಗಲೆ, ವಿಶ್ವಕನ್ನಡ ಸಮ್ಮೇಳನಕ್ಕೆ ಹೃತ್ಪೂರ್ವಕ ಬೆಂಬಲ ಸೂಚಿಸಿ ನಾಲ್ಕು ಅರ್ಹ ಅಭ್ಯರ್ಥಿಗಳು ಕಣಕಿಳಿದಿದ್ದರು.

ಪ್ರತಿಶತ 90ರಷ್ಟು ಮತದಾನ ! 400ಕ್ಕೂ ಹೆಚ್ಚು ಜನ !

ಚುನಾವಣೆಯ ಬಿರುಸಿನ ಪ್ರಚಾರ ಕರ್ನಾಟಕದ ವಿಧಾನಸಭಾ ಚುನಾವಣೆಗೇನೂ ಕಡಿಮೆ ಇರಲಿಲ್ಲ. ಮೇಲೆ ಉರಿಯುವ ಸೂರ್ಯ, ಎದುರಿಗೆ ಪ್ರೋತ್ಸಾಯದಾಯಕ ಬಿಸಿ-ಬಿಸಿ ಭಾಷಣ. It Was a charged atmosphere in Erin Dale Park, Mississcauga.

ಕಣದಲ್ಲಿ ನಾಲ್ಕು ಅತ್ಯಂತ ಅರ್ಹ ಅಭ್ಯರ್ಥಿಗಳಿದ್ದುದರಿಂದ Confused ಆದಂತೆ ತೋರಿದ ಜನ ಕೊನೆಗೂ ತಮ್ಮ ನಿರ್ಣಯವನ್ನು ಸ್ಪಷ್ಟವಾಗಿ ತಿಳಿಸಿದರು. ಸಾಯಂಕಾಲ 6:00 ಘಂಟೆಯವರೆಗೆ ಮತ ಎಣಿಸಿ ಉಸಿರು ಬಿಟ್ಟಾಗ, ಇಬ್ಬರು ಹೊಸ ನಾಯಕರ ಹೆಸರು ಚಿಮ್ಮಿತು. ಚುನಾವಣಾ ಅಧಿಕಾರಿಯಾದ ಪಪ್ಪುರ ಶಂಕರ ಅವರು ‘ಇವತ್ತು ಫಲಿತಾಂಶ ತಿಳಿಸೋಲ್ಲ, ಮುಂದಿನವಾರ ಅಂದರು’. ಹೌದು, ಮತ್ತೆ Proxy voting allow ಮಾಡಿದ ಮೇಲೆ ಅದನ್ನು ಧೃಡಿಕರಿಸಬೇಡವೆ? ಒಂದು ವಾರದನಂತರ ಇಗೊ! ಇಲ್ಲಿದೆ Official Results.

*ಮ0ಜುನಾಥ ಕುಪ್ಪಾ

*ಪರಮೇಶ್ವರ ಭಟ್‌

ಮುಂದಿನ ಬೆಳವಣಿಗೆಯಾಗಿ ಪರಮೇಶ್ವರ ಭಟ್‌ ಅವರು ಮಂಜುನಾಥ ಅವರನ್ನು ಪೂರ್ಣ ಪ್ರಮಾಣದ ಸಾರಥ್ಯ ವಹಿಸಿ ಕೊಳ್ಳಲು ಅನುಮತಿ ನೀಡಿ, ತಾವು ಮಾತ್ರ ವಿಶ್ವಕನ್ನಡ ಸಮ್ಮೇಳನ-2008ರ ಸಲಹಾಗಾರರಾಗಿ ಕಾರ್ಯ ನಿರ್ವಹಿಸಲು ನಿರ್ಧಾರ ಮಾಡಿದ್ದಾರೆ. ಟೊರೊಂಟೊ ಕನ್ನಡಿಗರ Team Work ಹೀಗಿದೆ.

ಮುಂದೇನು ?

-ಕನ್ನಡದ ಕೀರ್ತಿ ಪತಾಕೆಯನ್ನು ಕೆನಡಾದಲ್ಲಿ ಹಾರಿಸಬೇಕು.

-ಕನ್ನಡಾಂಬೆಯ ತೇರಿಗೆ ನೀವೆಲ್ಲ ಕೈಜೋಡಿಸಬೇಕು.

-ಸಮ್ಮೇಳನ ನಡೆಸುವುದಕ್ಕೆ ಟೊರೆಂಟೊ ಕನ್ನಡಿಗರು ತನು-ಮನ-ಧನ ಅರ್ಪಿಸಲು ತುದಿಗಾಲಲ್ಲಿ ನಿಂತಿದ್ದಾರೆ. ನಿಮ್ಮ ಪ್ರೋತ್ಸಾಹವನ್ನು ಎದುರು ನೋಡುತ್ತಿದ್ದಾರೆ.

-ಓ ಬನ್ನಿ ಕನ್ನಡಿಗರೆ! ಟೊರೊಂಟೊದಲ್ಲಿ ನಡೆಯುವ ಕನ್ನಡದ ಜಾತ್ರೆಗೆ.

ಇದು ಟೊರೊಂಟೊ ಕನ್ನಡಿಗರ ಮಾತಾಯಿತು! ನಿಜವಾಗಿ ಟೊರೊಂಟೊದಲ್ಲಿ ಸಮ್ಮೇಳನ ಏರ್ಪಡಿಸಲು ಅಪ್ಪಣೆ ಸೂಚಿಸಬೇಕಾದವರು ಅಕ್ಕ. ಅಂದರೆ AKKA Board Members and Committee. ಅಕ್ಕನ ಅಪ್ಪಣೆ ಸಿಕ್ಕರೆ, ಎರಡೆ-ಎರಡು ವರುಷದಲ್ಲಿ ಕೆನಾಡಾದಲ್ಲಿ ವಿಶ್ವಕನ್ನಡ ಸಮ್ಮೇಳನ-2008. ನೀವು ಬನ್ನಿ ಮತ್ತೆ!

ಧನ್ಯವಾದಗಳು :

ಚುನಾವಣಾ ಸಮಿತಿ : ಪಪ್ಪುರ ಶ0ಕರ, ವಿಜಯ ಐವಳ್ಳಿ, ಜಯಶ್ರಿ ಜವಳಿ, ಅಖಿಲಾ ಶಂಕರ, ಸುನಿತಾ ಯಜಮಾನ, ಯುವರಾಜ ಪಾಟೀಲ್‌ ಹಾಗು ಕನ್ನಡ ಸಂಘ ಕಾರ್ಯಕಾರಿ ಸಮಿತಿ.

ಹಾಗು ಸಮಸ್ತ ಟೊರೊಂಟೊ ಕನ್ನಡಿಗರು.

(With inputs from Yuvarj Patil patil.yuvaraj@gmail.com in Toronto)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more