ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ಭಾರ ಹೊರಬಲ್ಲ ಭಾರತಿ!
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ವಿಶ್ವಕನ್ನಡ ಸಮ್ಮೇಳನವೆಂಬ ಕನ್ನಡತೇರು ಸುಸೂತ್ರವಾಗಿ ಮುನ್ನಡೆಯುವಂತೆ ನೋಡಿಕೊಳ್ಳಲು ‘ಸಂಚಾಲನಾ ಸಮಿತಿ’ ಅಥವಾ steering committee ಅಂತೊಂದಿದೆ. ‘ನವಶಕ್ತಿ’ (ಈ ಪದವನ್ನು ಇಲ್ಲಿ ಹೊಸ ಚೈತನ್ಯವೆಂದಾದರೂ ಅರ್ಥೈಸಬಹುದು, ಒಂಬತ್ತು ಜನರ ಸಮೂಹಬಲ ಎಂದಾದರೂ ಅರ್ಥೈಸಬಹುದು) ಎನ್ನಬಹುದಾದ ಈ ಸಮಿತಿಯು ಅಕ್ಷರಶಃ ‘ಡ್ರೈವಿಂಗ್‌ ಸೀಟ್‌’ನಲ್ಲಿದ್ದು ಸಮ್ಮೇಳನದ ಪೂರ್ವಸಿದ್ಧತೆಗಳು ಸಮರ್ಪಕವಾಗಿ ಸಾಗುವಂತೆ ಮಾಡುವ ಗುರುತರ ಜವಾಬ್ದಾರಿಯುಳ್ಳದ್ದು.

ಈ ‘ನವಶಕ್ತಿ’ಯಲ್ಲೊಂದು ನಾರಿಶಕ್ತಿ. ಸಮ್ಮೇಳನ ಸಂಚಾಲನೆಯ ಭಾರವನ್ನು ಹೊರಲು ಹೆಗಲುಕೊಟ್ಟಿರುವ ಭಾರಿಶಕ್ತಿ. ತನು-ಮನ-ಧನ ಎಲ್ಲರೀತಿಯ ಸಹಾಯವನ್ನೂ ಹೇಗೆ ಮಾಡಬಹುದು ಎಂಬುದರ ಆದರ್ಶರೂಪದ ‘ಭಾರತಿ’ಶಕ್ತಿ. ಈ ಹೆಮ್ಮೆಯ ಕನ್ನಡತಿ ಭಾರತಿ ಸೆಟ್ಟಿ, ಸಮ್ಮೇಳನಕ್ಕಾಗಿ ದೊಡ್ಡಮೊತ್ತವನ್ನು ದೇಣಿಗೆಯಿತ್ತ ಮೊದಲಿಗರಲ್ಲೊಬ್ಬರು. ಬರೀ ಒಂದು ಚೆಕ್‌ ಬರೆದು ಬಿಸಾಕಿ big donor ಎಂದು ಬೀಗುವ ಪೈಕಿಯವರಲ್ಲ ಇವರು. ತಾನು ಮುಂದೆಬಂದು ಸಹಾಯಹಸ್ತ ಒದಗಿಸುವುದಷ್ಟೇ ಅಲ್ಲದೆ ಇತರರನ್ನೂ ಹುರಿದುಂಬಿಸಿ ‘ಹನಿಹನಿಗೂಡಿ ಹಳ್ಳ’ವಾಗಿಸುವವರು. ಪತಿ ಬೊಗ್ಗಾರಂ ಸೆಟ್ಟಿ (ಸಲಹಾ ಸಮಿತಿ) ಮತ್ತು ಪುತ್ರ ರೋಹಿತ್‌ ಸೆಟ್ಟಿ (ಯುವ ಸಮಿತಿ) - ಹೀಗೆ ಮನೆಯವರೆಲ್ಲರೊಂದಿಗೆ ಸಮ್ಮೇಳನದಲ್ಲಿ ಮನಃಪೂರ್ವಕ ತೊಡಗಿಸಿಕೊಂಡವರು.

A group photo of Steering Committee

ಚಿತ್ರದಲ್ಲಿರುವ ನವಶಕ್ತಿ ತಂಡದಲ್ಲಿ ಭಾರತಿಯವರೊಂದಿಗಿರುವವರ ಪರಿಚಯ ಇಂತಿದೆ. ನಿಂತವರು: ಸಂಜಯರಾವ್‌ (ಕಾರ್ಯದರ್ಶಿ), ನಾಗಶಂಕರ್‌ (ಫೆಸಿಲಿಟಿ ಮತ್ತು ಪ್ರೊಗ್ರಾಂ ಕಮಿಟಿ), ಬೆನ್‌ ಚಿಕ್ಕಸ್ವಾಮಿ (ಧನಸಂಗ್ರಹ). ಕುಳಿತವರು: ಹರೀಶ್‌ ಹಿರೇಮಠ್‌ (ಖಜಾಂಚಿ), ರವಿ ಡಂಕಣಿಕೋಟೆ (ಸಂಚಾಲಕ), ಮಾದೇಶ್‌ ಬಸವರಾಜು (ಕಾವೇರಿ ಅಧ್ಯಕ್ಷ), ಸುರೇಶ್‌ ರಾಮಚಂದ್ರ (ಸಂಚಾಲಕ) ಮತ್ತು ರವಿ ಹರಪನಹಳ್ಳಿ (ನೋಂದಣಿ ಸಮಿತಿ).

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 6 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+