ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ತೈತ್ತಧಿನ್ನಕ... ಧೇಂತಧಿನ್ನಕ...!
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

‘‘ಬಲ್ಲಿರೇನಯ್ಯ... ಪರಾಕ್ರಮ ಕಂಠೀರವ... ವಿಶ್ವಕನ್ನಡ ಸಮ್ಮೇಳನ ಸಭಾಂಗಣದಲ್ಲಿ ಅತಿದೊಡ್ಡ ಗರ್ಜನೆಯಿಂದ ಹೂಂಕರಿಸುವವ ಯಾರೆಂದುಕೊಂಡಿದ್ದೀರಿ...?’’ ಎಂದು ಭೂಮಿಬಿರಿಯಿತೋ ಎಂಬಂತೆ ಎದೆನಡುಗುವ ಹಾಗೆ ಅಬ್ಬರಿಸಲಿದ್ದಾನೆ ಯಕ್ಷಗಾನದ ನರಕಾಸುರ! ಅವನ ಅಬ್ಬರಕ್ಕೆ ಸರಿಯಾಗಿ ಅನುರಣಿಸಲಿದೆ ಚಂಡೆ-ಮದ್ದಳೆಗಳ ಠೇಂಕಾರ!

ಭಾನುವಾರ (ಸೆ. 3) ಮಧ್ಯಾಹ್ನ ಭೋಜನಾನಂತರದ ಮನರಂಜನಾ ಕಾರ್ಯಕ್ರಮದಲ್ಲಿ 12 ಪುಟಾಣಿಗಳು (6 ಮಕ್ಕಳು ವೇಷಧಾರಿಗಳು ಮತ್ತು 6 ಮಕ್ಕಳು ಹಿಮ್ಮೇಳದವರು) ಸೇರಿ ತೆಂಕುತಿಟ್ಟಿನ ಶೈಲಿಯಲ್ಲಿ ‘ನರಕಾಸುರ ವಧೆ’ ಯಕ್ಷಗಾನವನ್ನು ಪ್ರಸ್ತುತಪಡಿಸಲಿದ್ದಾರೆ. ಇವರೆಲ್ಲ ಈಗ ಯಕ್ಷಗಾನ ನಿರ್ದೇಶಕಿ ಶಾಂತಿ ತಂತ್ರಿಯವರಿಂದ ತರಬೇತಿ ಪಡೆಯುತ್ತಿದ್ದು ಅವರ ಡ್ರೆಸ್‌ ರಿಹರ್ಸಲ್‌ ಸೆಷನ್‌ ಒಂದರಲ್ಲಿ ತೆಗೆದ ಫೋಟೊ ಇದು. ಪ್ರಾಕ್ಟೀಸ್‌ ಮಾಡುವಾಗಲೇ ಇಷ್ಟೊಂದು ದುರುಗುಟ್ಟಿನೋಡುತ್ತಿರುವ ನರಕಾಸುರನ ಅವತಾರವನ್ನು ಸ್ಟೇಜ್‌ ಮೇಲೆ ನೋಡುವುದನ್ನು ತಪ್ಪಿಸಿಕೊಳ್ಳಬೇಡಿ!

Narakasurana Abbarakke nibberagada Krishna!

ಅಂದಹಾಗೆ ಸಮ್ಮೇಳನದಲ್ಲಿ ಇನ್ನೆರಡು ಯಕ್ಷಗಾನ ಪ್ರದರ್ಶನಗಳೂ ಇದ್ದು ಕರ್ನಾಟಕದಿಂದ ಬರುತ್ತಿರುವ ಹಿರಿಯ ಕಲಾವಿದರಾದ ಶಂಭು ಹೆಗಡೆ ಮತ್ತು ಬಳಗದವರು ‘ಶ್ರೀಕೃಷ್ಣ ಸಂಧಾನ’ ಪ್ರಸಂಗವನ್ನು ಮತ್ತು ಇನ್ನೊಬ್ಬ ಶ್ರೇಷ್ಠ ಕಲಾವಿದ ಚಿಟ್ಟಾಣಿಯವರ ತಂಡ ‘ಗದಾ ಯುದ್ಧ’ ಪ್ರಸಂಗವನ್ನೂ ಆಡಿತೋರಿಸಲಿವೆ.

ಎಂತದು ಮಾರಾಯ್ರೆ, ಇಷ್ಟು ಒಳ್ಳೆಯ ಯಕ್ಷಗಾನ ಆಟ ಎಲ್ಲ ಇರುವಾಗಲೂ ಸಮ್ಮೇಳನಕ್ಕೆ ಬರುವುದೋ ಬೇಡವೋ ಎಂದು ನೀವು ಇನ್ನೂ ಅನುಮಾನ ಮಾಡುವುದು ಉಂಟಾ? ಬನ್ನಿ ನೀವು ಕೂಡ!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 9 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+