‘ಅಕ್ಕ’ನ ಚುಕ್ಕಾಣಿ : ಮಹಾಚುನಾವಣೆ ಫಲಿತಾಂಶ ಜಾಹೀರು

ಗೆಲುವು ಸೋಲಿನ ಆಟ!

2006 ನೇ ಸಾಲಿನ ‘ಅಕ್ಕ’ ನಿರ್ದೇಶಕ ಮಂಡಳಿಯ ಮಹಾಚುನಾವಣಾ ಫಲಿತಾಂಶ ಇದೀಗ ಹೊರಬಿದ್ದಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಚುನಾವಣೆಗಳಲ್ಲಿ ಅಕ್ಕ ಸದಸ್ಯರು ಒಟ್ಟು ಹನ್ನೊಂದು ಮಂದಿ ನಿರ್ದೇಶಕರನ್ನು ರಹಸ್ಯ ಮತದಾನದ ಮೂಲಕ ಚುನಾಯಿಸುತ್ತಾರೆ.

ಚುನಾಯಿತ ನಿರ್ದೇಶಕರು ಹಾಗೂ ಕನ್ನಡಕೂಟಗಳ ನಿರ್ದೇಶಕರು ಸಭೆ ಸೇರಿದ ನಂತರ ಅಧ್ಯಕ್ಷ, ಉಪಾಧ್ಯಕ್ಷ, ಕೋಶಾಧಿಕಾರಿ ಮುಂತಾದ ಸ್ಥಾನಗಳನ್ನು ತುಂಬಲಾಗುತ್ತದೆ. ನಿರ್ದೇಶಕರಲ್ಲಿ ಒಮ್ಮತ ಇದ್ದರೆ ನೇಮಕಗಳು ಸುಸೂತ್ರವಾಗುತ್ತವೆ. ಇಲ್ಲದಿದ್ದರೆ ಅಲ್ಲೊಂದು ಮಿನಿ ಚುನಾವಣೆ ನಡೆಯುತ್ತದೆ. 2004ರ ಸಾಲಿನಲ್ಲಿ ಒಮ್ಮತ ಮೂಡದೆ ಚುನಾವಣೆ ನಡೆದಿತ್ತು. ಆಗ ಡಾ.ಕುದೂರು ಮುರಳಿ ಗೆದ್ದು ಬಂದಿದ್ದರು.

ಆಡಳಿತದ ಚುಕ್ಕಾಣಿ ಹಿಡಿದು ಅಕ್ಕ ಬಾವುಟದ ಕೆಳಗೆ ಕನ್ನಡಕ್ಕೆ ಕಿಂಕರ್ತವ್ಯ ಮಾಡುವುದಕ್ಕೆ ಅನೇಕರು ಉತ್ಸಾಹ ತೋರಿಸಿದ್ದರು. ಆದ್ದರಿಂದಲೇ ಚುನಾವಣೆಯ ಕಾವು ಕಂಡುಬಂದಿತ್ತು. ಎಲ್ಲ ಚುನಾವಣೆಗಳಲ್ಲಿ ಏನೇನು ಆಗುತ್ತದೊ ಅದೆಲ್ಲ ಇಲ್ಲೂ ಆಯಿತು. ಹುರಿಯಾಳುಗಳ ಇಮೇಲ್‌ ಪ್ರಚಾರ, ದೂರವಾಣಿಯಲ್ಲಿ ರಾಜಕೀಯ, ಗುಂಪುಗಳ ನಡುವೆ ಸಿಂಡಿಕೇಟು (ಇದಕ್ಕೆ ಅಮೆರಿಕಾದಲ್ಲಿ ಸ್ಲೇಟು ಅನ್ನುತ್ತಾರೆ) ಒಟ್ಟಾರೆ ಚುನಾವಣಾ ಜ್ವರ ಅನ್ನಿ.

ಜುಲೈ 15ರ ಮಧ್ಯಾಹ್ನ ಆರಂಭವಾದ ಮತ ಎಣಿಕೆ ಕಾರ್ಯ 13 ತಾಸುಗಳವರೆಗೂ ಎಳೆಯಿತು. 16ರ ಮುಂಜಾನೆ ವೇಳೆಗೆ ಫಲಿತಾಂಶ ಹೊರಬಿತ್ತು. ಚುನಾವಣೆಯನ್ನು ಅಕ್ಕ ಸಂವಿಧಾನದ ಪ್ರಕಾರ, ತಾಳ್ಮೆಯಿಂದ ಶಾಂತಿಯಿಂದ ನಿಭಾಯಿಸಿದವರು ಚುನಾವಣಾ ಆಯುಕ್ತ ಶಿವಮೂರ್ತಿ ಕೀಲಾರ. ಮತ್ತು ಅವರಿಗೆ ಸಹವರ್ತಿಗಳಾಗಿ ರೇಣು ನಾಗರಾಜ್‌ ಹಾಗೂ ವಿಜಯ ಭಟ್‌.

ಆರಿಸಿ ಬಂದ ನಿರ್ದೇಶಕರು : (ಒಟ್ಟು ಸ್ಪರ್ಧಿಗಳು 26)

  1. ವಾಸಂತಿ ಗೌಡ (ಚಿಕಾಗೊ)
  2. ಅಮರ್‌ನಾಥ್‌ ಗೌಡ (ಡೆಟ್ರಾಯಿಟ್‌)
  3. ಎಂ. ಕೃಷ್ಣಮೂರ್ತಿ (ಲಾಸ್‌ಏಂಜಲಿಸ್‌ : ಈಗ ಬಸವನಗುಡಿ, ಬೆಂಗಳೂರು)
  4. ಹಳೇಕೋಟೆ ವಿಶ್ವಾಮಿತ್ರ (ಟೆಕ್ಸಾಸ್‌)
  5. ಶೇಖರ್‌ ಶಾಸ್ತ್ರಿ (ಕೆಂಟುಕಿ)
  6. ಬೆನ್‌ ಕಾಂತರಾಜು (ನ್ಯೂಜರ್ಸಿ)
  7. ಶಾಂತರಾಜ್‌ ಕೆಂಪಯ್ಯ (ಮಿಚಿಗನ್‌)
  8. ಹರೀಶ್‌ ಹಿರೇಮಠ್‌ (ವಾಷಿಂಗ್‌ಟನ್‌ ಡಿಸಿ)
  9. ರವಿ ಡೆಂಕಣಿಕೋಟೆ (ವಾಷಿಂಗ್‌ಟನ್‌ ಡಿಸಿ)
  10. ಬಸವರಾಜ್‌ ಇಂದುಶೇಖರ್‌ (ಇಲಿನಾಯ್‌)
  11. ಮಧು ರಂಗಯ್ಯ (ನ್ಯೂಜರ್ಸಿ)
ಮತಗಳ ಎಣಿಕೆ ಸಂದರ್ಭದಲ್ಲಿ ಅಕ್ಕದ ಮಾಜಿ ಅಧ್ಯಕ್ಷ ಜಯಸ್ವಾಮಿ (ಚಿಕಾಗೊ) ಹಾಗೂ ನಿರ್ಗಮಿಸುತ್ತಿರುವ ಅಧ್ಯಕ್ಷ ಡಾ.ಕುದೂರು ಮುರಳಿ (ಡೆಟ್ರಾಯಿಟ್‌) ಮತ್ತು ಅಕ್ಕ ಸದ್ಯರಲ್ಲೊಬ್ಬರಾದ ಕುಲ್ಲೇಗೌಡ ಉಪಸ್ಥಿತರಿದ್ದರು.

ಕಳೆದ ಸಾಲಿನ ನಿರ್ದೇಶಕರ ಫೋಟೋ ಗ್ಯಾಲರಿ

ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+