ಕಾವೇರಿಯ ‘ಆರ್‌-ಕೆ’ ಜೋಡಿ

''ಬಲು ಅಪರೂಪ ನಮ್‌ ಜೋಡಿ... (ಕಾವೇರಿಗಾಗಿ, ಕನ್ನಡಕ್ಕಾಗಿ) ಎಂಥ ಕೆಲಸಗಳಿಗೂ ನಾವ್‌ ರೆಡಿ..."" ಎನ್ನುತ್ತಾರೆ ಕಾವೇರಿಯ 'ಆರ್‌-ಕೆ" ಜೋಡಿಯೆಂದು ಎಲ್ಲರಿಗೂ ಅಚ್ಚುಮೆಚ್ಚಿನ ರಾಜಶೇಖರ್‌ ಮತ್ತು ಕೃಷ್ಣಮೂರ್ತಿ. ಈ ಕಾವೇರಿ ಹಿರಿಯಣ್ಣಂದಿರು ವಿಶ್ವ ಕನ್ನಡ ಸಮ್ಮೇಳನದ ಸಂಚಾಲನಾಸಮಿತಿ, ಸಲಹಾಸಮಿತಿ, ಆಪತ್ತು ನಿವಾರಣಾಸಮಿತಿ ಹೀಗೆ ಜವಾಬ್ದಾರಿಯುತ ಸ್ಥಾನಗಳಲ್ಲಿ ಇದ್ದಾರೆ. ಅದರಿಂದಾಗಿ ಸಮ್ಮೇಳನ ತಯಾರಿಗಳೆಲ್ಲ ಸುಲಲಿತವಾಗಿ ನಡೆದಿವೆ ಎಂದರೂ ಸರಿಯೇ. ಇವರಿಬ್ಬರ ಹಾಸ್ಯಸ್ವಭಾವ ಎಷ್ಟಿದೆಯೆಂದರೆ ಈ ಬರಹದ ಶೀರ್ಷಿಕೆಯನ್ನು ಒಂದುವೇಳೆ 'ಕಾವೇರಿಯ ಲೌರೆಲ್‌-ಹಾರ್ಡಿ" ಎಂದಿಟ್ಟಿದ್ದರೂ ಮುನಿಸಿಕೊಳ್ಳುವ ಪೈಕಿಯವರಲ್ಲ ಇವರು!

ಪಾದರಸದಂತೆ ಅತ್ತಿಂದಿತ್ತ ಓಡಾಡುತ್ತ ಕೆಲ್ಸಗಳನ್ನು ನಿಭಾಯಿಸುವ ಈ ಜೋಡಿ ಮೊನ್ನೆ ಒಂದು ಮೀಟಿಂಗಲ್ಲಿ ಜತೆಯಾಗಿ ಒಂದೆಡೆ ನಿಂತುಕೊಂಡಿದ್ದು ಕಂಡೊಡನೆ ಚಿತ್ರಚಿತ್ತಾರಕ್ಕಾಗಿ ಕ್ಲಿಕ್ಕಿಸಿದ ಫೊಟೊ ಇಲ್ಲಿದೆ. ಇನ್ನು ಇವರ ನಿಸ್ವಾರ್ಥ ಸೇವೆಸಾಧನೆಗಳನ್ನು ಚುಟುಕುವಿಚಾರದಲ್ಲಿ ಹೇಳುವುದು ಕಷ್ಟವಾದ್ದರಿಂದ ಅದನ್ನು ಸೊಗಸಾಗಿ ಒಂದು ಕವನದ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ಕವನವನ್ನು ಬರೆದುಕೊಟ್ಟ ಇನ್ನೊಬ್ಬ ಹಿರಿಯ ಕಾವೇರಿಗ, 'ಆರ್‌-ಕೆ" ಜೋಡಿಯನ್ನು ದಶಕಗಳಿಂದಲೂ ಬಲ್ಲ ಮೈ.ಶ್ರೀ.ನಟರಾಜ ಅವರಿಗೆ ಸ್ಪೆಷಲ್‌ ಥ್ಯಾಂಕ್ಸ್‌.

***

Krishnamurthy and Rajshekhar - Pillars of Kaveri

ಬಂದೇ ಬರುವೆವು ಇಬ್ಬರೂ
ನೀವ್‌ ಒಬ್ಬರನೇ ಕರೆದಿದ್ದರೂ
ಇದುವೇ ನಮ್ಮಯ ಸ್ಲೋಗನ್ನು
ಜೋಡಿಯು ನಮ್ಮದು ಬಲ್‌ಚೆನ್ನು

ಒಂದನು ಕೊಳ್ಳಿರಿ ಬೆಲೆಕೊಟ್ಟು
ಎರಡನೆಯದರದೂ ಒಗ್ಗಟ್ಟು
ಮುಂದೆ ನಡೆಯೋಕೆ ರಾಜಣ್ಣ
ಲುಕ್‌ಓವರ್‌-ದಿ-ಶೋಲ್ಡರ್‌-ಕಿಟ್ಟಣ್ಣ

ಹೆಸರು ಪದವಿ ಒಂದೂ ಬೇಡ
ಕೆಲ್ಸ ಮಾಡೋದ್‌ ಮುಖ್ಯ ನೋಡ
ಪ್ರಶ್ನೇ-ಗಿಶ್ನೇ ಕೇಳೋದ್‌ಬ್ಯಾಡ
ರಾಜಿಸೂತ್ರದಿ ಡಿಸಿಷನ್‌ ಮಾಡ

ಬಂದ್ರೆ ದುಡ್ಡಿನ್‌ ಮುಗ್ಗಟ್ಟು
ಆದ್ರೆ ಕೆಲ್ಸ್‌ದಲ್‌ ಎಡವಟ್ಟು
ಕರೆದ್ರೆ ಸಾಕು ಬಾಯ್‌ುಬಿಟ್ಟು
ಬಂದ್‌ಬಿಡಿಸ್‌ತಾರಣ್ಣ ಬಿಕ್ಕಟ್ಟು

ಇವರಿಬ್ರನ್‌ಬಿಟ್ಟು ಕಾವೇರೀಲಿ
ಕೆಲಸ ಮಾಡೋಕಾಗಲ್ಲಣ್ಣ
ಮುಂದಿನ್‌ ಆಳು ಇಂಜಿನ್ನಣ್ಣ
ಹಿಂದಿನ್‌ ಆಸಾಮಿ ಡ್ರೈವರ್ರಣ್ಣ

ಒಬ್ರನ್‌ ಬಿಟ್ಟು ಒಬ್ರಿಲ್ಲಣ್ಣ
ಇಬ್ಬರ್ಗೂ ಬಂದಿದೆ ಕೀರ್ತಿ
ರಾಜಣ್ಣ ಸಿಂಪ್ಲಿ ರಾಜಣ್ಣಾನೆ
ಕಿಟ್ಟಣ್ಣ ''ಕಾವೇರಿ-ಮೂರ್ತಿ!""

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+