ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
Hi-fi Wi-fi ಸಮ್ಮೇಳನಕೆ ಜೈ ಜೈ!
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

‘ಪ್ರೊಫೆಶನಲಿಸಂ’ ಈಸಲದ ಸಮ್ಮೇಳನದಲ್ಲಿ ಎದ್ದುಕಾಣಲಿರುವ ಅಂಶಗಳಲ್ಲೊಂದು. ಅದಕ್ಕೆ ತಕ್ಕಂತೆ ಉನ್ನತ ತಂತ್ರಜ್ಞಾನದ ಬಳಕೆ. ವಾಷಿಂಗ್ಟನ್‌ ವಲಯದಲ್ಲಿ ಹೈಟೆಕ್‌ ಐಟಿ ಕ್ಷೇತ್ರದ ಕನ್ನಡಿಗರ ಸಂಖ್ಯೆ ಬಹಳಷ್ಟಿದೆ. ಅವರಲ್ಲಿ ಹೆಚ್ಚಿನವರು ಕನ್ನಡಪ್ರೀತಿಯೂ ಉಳ್ಳವರಾದ್ದರಿಂದ ಸಮ್ಮೇಳನ ಕೆಲಸಗಳಲ್ಲಿ ಮನಃಪೂರ್ತಿ ತೊಡಗಿಸಿಕೊಂಡವರಿದ್ದಾರೆ.

ಸಮ್ಮೇಳನ ತಯಾರಿಯ ಮೀಟಿಂಗುಗಳು ಪೇಪರ್‌ಲೆಸ್‌ ಆಗಿ ನಡೆಯುತ್ತವೆ. ಸಮಿತಿಗಳ ಮುಖ್ಯಸ್ಥರೆಲ್ಲ ಲ್ಯಾಪ್‌ಟಾಪ್ಸ್‌ ತಗೊಂಡುಬರ್ತಾರೆ. ಮೀಟಿಂಗ್‌ ನಡೆಯುವ ಸ್ಥಳದಲ್ಲಿನ ವೈರ್‌ಲೆಸ್‌(wi-fi) ಜಾಲವನ್ನುಪಯೋಗಿಸಿ ಆನ್‌ಲೈನ್‌ ಸಂಪರ್ಕ ಕಲ್ಪಿಸಿಕೊಳ್ಳುತ್ತಾರೆ. ಇನ್ನುಕೆಲವರಂತೂ ತಂತಮ್ಮ ಕಮಿಟಿ ಅಪ್‌ಡೇಟ್ಸನ್ನೆಲ್ಲ ಹೆಬ್ಬೆಟ್ಟಿನಗಾತ್ರದ Comp-driveನಲ್ಲಿ ಶೇಖರಿಸಿ ಜೇಬಲ್ಲಿಟ್ಟುಕೊಂಡು ಕೈಬೀಸಿಬರುತ್ತಾರೆ!

ಈ ಚಿತ್ರದಲ್ಲಿನ ‘ಹೈಟೆಕ್‌-ಐಟಿ ಟ್ರಿನಿಟಿ’ಗಳನ್ನೇ ನೋಡಿ. ಲ್ಯಾಪ್‌ಟಾಪ್‌ ಇಟ್ಕೊಂಡಿದ್ದಾರಲ್ಲ ಅವರು ನಾಗಶಂಕರ್‌. ಫೆಸಿಲಿಟಿ ಮೆನೇಜ್‌ಮೆಂಟ್‌ ಕಮಿಟಿ(ಸಮ್ಮೇಳನದ ಸಭಾಂಗಣ ಬಾಲ್ಟಿಮೋರ್‌ ಕನ್ವೆನ್ಷನ್‌ ಸೆಂಟರ್‌ ಜತೆ ಕಂಟ್ರಾಕ್ಟ್‌ಗೆ ಸಂಬಂಧಿಸಿದ ಕೆಲಸಗಳ ಅತಿಜವಾಬ್ದಾರಿಯ ಹೊಣೆ)ಯವರು. ಸಮರ್ಥವಾಗಿ ಅದನ್ನು ನಿಭಾಯಿಸಿದ ನಂತರ ಈಗ ಪ್ರೊಗ್ರಾಮ್‌ ಕಮಿಟಿಯ ನಿರ್ವಹಣೆ ಹೊತ್ತಿದ್ದಾರೆ. ಅವರ ‘ಬಲ’ಕ್ಕಿರುವವರು ಸಮ್ಮೇಳನಸಮಿತಿ ಕಾರ್ಯದರ್ಶಿ ಸಂಜಯ ರಾವ್‌, ಸರಳ ಸ್ನೇಹಮಯಿ ವ್ಯಕ್ತಿ. ‘ತುಂಬಾ ನಾಟಕ ಮಾಡ್ತಾರೆ...’ - ಐ ಮೀನ್‌ ನಾಟಕಗಳಲ್ಲಿ ಅದ್ಭುತವಾಗಿ ನಟಿಸುತ್ತಾರೆ! ಸಮ್ಮೇಳನದಲ್ಲಿ ಪ್ರದರ್ಶನಗೊಳ್ಳಲಿರುವ ‘ಬೆರಳ್‌ಗೆ ಕೊರಳ್‌’ ನಾಟಕದಲ್ಲಿ ಏಕಲವ್ಯನ ಬೆರಳು ಪಡೆವ ದ್ರೋಣ ಇವರೇ.

Three Musketeers in a world Kannada Convention

ಚಿತ್ರದಲ್ಲಿ ಈಬದಿಯಲ್ಲಿರುವವರು ಶಿವಶಂಕರ್‌ ಭಟ್‌. ಪ್ರೊಜೆಕ್ಟ್‌ ಮ್ಯಾನೇಜ್‌ಮೆಂಟ್‌ ಕಾನ್ಸೆಪ್ಟುಗಳನ್ನು ಸಮ್ಮೇಳನ ತಯಾರಿಗಳಲ್ಲಿ ಅಳವಡಿಸಿಕೊಂಡವರು. ಆನ್‌ಲೈನ್‌ ರಿಜಿಸ್ಟ್ರೇಶನ್‌ ಡಿಪಾರ್ಟ್‌ಮೆಂಟ್‌ ಇವರದು. ಜತೆಯಲ್ಲೇ ಸ್ವಯಂಸೇವಕರ ರೋಸ್ಟರ್‌ ತಯಾರಿ, ‘ಹೀಗಾದರೆ ಹೇಗೆ? ವಿಶ್ಲೇಷಣೆ’(What-if analysis) ಇತ್ಯಾದಿಗಳನ್ನೂ ಮಾಡಿದವರು. ಸಮ್ಮೇಳನದಲ್ಲಿ ಮುಖಕ್ಕೆ ಬಣ್ಣಬಳಿದುಕೊಂಡು ಯಕ್ಷಗಾನದಲ್ಲೂ ಕಾಣಿಸಿಕೊಂಡಾರು!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 15 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+