ಚುರುಕಿನ ಗತಿಯಲ್ಲಿ ಸಾಗಿರುವ ನೋಂದಣಿ

ವಿಶ್ವಕನ್ನಡ ಸಮ್ಮೇಳನಕ್ಕಿನ್ನು ಬೆರಳೆಣಿಕೆಯ ತಿಂಗಳುಗಳಷ್ಟೇ ಸಮಯವಿದೆ. ಮಾರ್ಚ್‌ 1ರಿಂದ ಆರಂಭವಾಗಿರುವ ನೋಂದಣಿ (ಸಮ್ಮೇಳನ ಮತ್ತು ಹೋಟೆಲ್‌ ವಸತಿ) ಇದೀಗ ಅತ್ಯಂತ ಚುರುಕುಗೊಂಡಿದ್ದು, ತ್ವರಿತ ಪಕ್ಷಿ ರಿಯಾಯಿತಿ (earlybird discount)ದರಗಳ ಸೌಲಭ್ಯವನ್ನು ಸಮ್ಮೇಳನಾರ್ಥಿಗಳು ಪಡೆಯುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ.

ಈಗಾಗಲೇ ನೋಂದಾಯಿಸಿದ ಕನ್ನಡಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತ, ಉಳಿದವರೂ ಸಾಧ್ಯವಾದಷ್ಟು ಬೇಗ ತಂತಮ್ಮ ನೋಂದಣಿ ಮಾಡಿಕೊಳ್ಳಬೇಕಾಗಿ ಈ ಮೂಲಕ ಕೋರಲಾಗಿದೆ.

ಹೋಟೆಲ್‌ ರೂಮ್‌ ರಿಸರ್ವೇಶನ್‌ : ಸಮ್ಮೇಳನದ ಅಧಿಕೃತ ವಸತಿ ವ್ಯವಸ್ಥೆಯಾದ ಬಾಲ್ಟಿಮೋರ್‌ ಇನ್ನರ್‌ಹಾರ್ಬರ್‌ನ ‘ವಿಂಡ್‌ಹ್ಯಾಮ್‌’ ಹೋಟೆಲ್‌ನಲ್ಲಿ ಈಗಾಗಲೇ 250 ಕೊಠಡಿಗಳ ಕಾಯ್ದಿರಸಲಾಗಿದ್ದು (ದಿನವಹಿ 99 ಡಾಲರ್‌), ಇದೇ ರಿಯಾಯಿತಿ ದರದಲ್ಲಿ ಇನ್ನೂ 100 ಕೊಠಡಿಗಳು ಲಭ್ಯ ಇವೆ.

ಈ ಮಧ್ಯೆ ವಿಂಡ್‌ಹ್ಯಾಮ್‌ನ ಸೆಂಟ್ರಲ್‌ ರಿಸರ್ವೇಷನ್‌ ಕಂಪ್ಯೂಟರ್‌ ಸಿಸ್ಟಂನಲ್ಲಿ ಕಂಡುಬಂದಿದ್ದ ತಾಂತ್ರಿಕ ತೊಂದರೆಯಿಂದಾಗಿ ಕೆಲವು ಸಮ್ಮೇಳನಾರ್ಥಿಗಳಿಗೆ, ರಿಯಾಯಿತಿ ದರದಲ್ಲಿ ಹೋಟೆಲ್‌ ರೂಮ್‌ ಲಭ್ಯವಿಲ್ಲವೆಂಬ ಉತ್ತರ ಸಿಕ್ಕಿರುವುದು ಸಮ್ಮೇಳನ ಸಂಚಾಲಕರ ಗಮನಕ್ಕೆ ಬಂದಿದೆ.

ಸಮ್ಮೇಳನ ಸಮಿತಿಯು ಹೋಟೆಲ್‌ನ ಸಂಪರ್ಕಾಧಿಕಾರಿಯಾಂದಿಗೆ ಈ ಬಗ್ಗೆ ಮಾತುಕತೆ ನಡೆಸಿ ಕಂಪ್ಯೂಟರ್‌ ಸಿಸ್ಟಂನಲ್ಲಿ ಸರಿಯಾದ ಮಾಹಿತಿ ಈಗ ಲಭ್ಯವಿದ್ದು, ಮಾರ್ಚ್‌ 20ರವರೆಗೂ ರಿಯಾಯಿತಿ ದರಗಳ (99$ per night; Doorbuster Code: 083006DBA; Phone: 1-800-WYNDHAM; Web: www.wyndhambaltimore.com)ಲಭ್ಯತೆಯ ಒಪ್ಪಂದವನ್ನು ಪಡೆದುಕೊಳ್ಳಲಾಗಿದೆ. ಒಂದು ವೇಳೆ ಹೋಟೆಲ್‌ ರೂಮ್‌ ಬುಕಿಂಗ್‌ನಲ್ಲಿ ಮತ್ತೆ ಯಾರಿಗಾದರೂ ತೊಂದರೆಗಳು ಕಂಡು ಬಂದರೆ ಸಮ್ಮೇಳನ ನೋಂದಣಿ ಸಮಿತಿಯ ಈ ಕೆಳಗಿನ ಸದಸ್ಯರನ್ನು ಇ-ಮೇಲ್‌/ಫೋನ್‌ ಮೂಲಕ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.

1) ರವಿ ಹರಪ್ಪನಹಳ್ಳಿ (ಸಮ್ಮೇಳನ ನೋಂದಣಿ ನಿರ್ವಾಹಕ)
ಇ-ಮೇಲ್‌ : [email protected]
ದೂರವಾಣಿ: 240-381-2273 (ಮೊಬೈಲ್‌); 301-438-0642 (ಮನೆ)

2) ಜಯಶ್ರೀ ಜಗದೀಶ್‌ (ಸಮ್ಮೇಳನ ನೋಂದಣಿ ಸಹ ನಿರ್ವಾಹಕಿ)
ಇ- ಮೇಲ್‌: [email protected]
ದೂರವಾಣಿ: 202-492-6346 (ಮೊಬೈಲ್‌); 301-208-8260 (ಮನೆ)

4ನೇ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ದ ಸಮಗ್ರ ಮಾಹಿತಿಗೆ ಸಂದರ್ಶಿಸಿ : http://www.akkaonline.org/2006/

ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+