ಸಾಹಿತ್ಯ ಸರಸ್ವತಿಗೆ ಮುಖ್ಯ ವೇದಿಕೆ ಸಿಕ್ಕವೇಳೆ...

ಇದೀಗ ಮುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಷ್ಟೊಂದು ವಿಧವಿಧದ ಕಾರ್ಯಕ್ರಮಗಳ ಮಹಾಪೂರದ ನಡುವೆ ಸಾಹಿತ್ಯ ಸರಸ್ವತಿಗೂ ಒಂದು ಗಂಟೆ ಕಾಲವಾದರೂ ಮುಖ್ಯವೇದಿಕೆ ಸಿಕ್ಕಿದ್ದನ್ನು ನೋಡಿ ಅನುಭವಿಸಿ ಸಂತಸಪಟ್ಟವರಲ್ಲಿ ನಾನೊಬ್ಬ.

ಕನ್ನಡ ಸಮ್ಮೇಳನದಲ್ಲಿ ಕನ್ನಡ ಭಾಷೆಗೆ, ಭಾಷೆಯ ಅಂತಃಸತ್ವಕ್ಕೆ ಅತಿ ಸಮಂಜಸ ಗೌರವ ದೊರಕುವುದು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಂದಲೇ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರಸ್ತುತ ನಾನು ವಿವರಿಸಹೊರಟಿರುವ ಕಾರ್ಯಕ್ರಮ ನನಗೆ ಅಷ್ಟು ಮೆಚ್ಚುಗೆಯಾಗುವುದಕ್ಕೆ ಅದೂ ಒಂದು ಕಾರಣವಾದರೆ ಇನ್ನೊಂದು, ಈ ಕಾರ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ, ಸಮಯಕ್ಕೆ ಸರಿಯಾಗಿ ಮುಗಿಸಿ ಅಚ್ಚುಕಟ್ಟಾಗಿ ಮತ್ತು ಸಮರ್ಥವಾಗಿ ನಿರ್ವಹಿಸಿದ ಡಾ.ಮೈ.ಶ್ರೀ.ನಟರಾಜರ ನಿರ್ವಹಣೆ. ಅಂತೂ ಸಮ್ಮೇಳನದ ರಸವೈವಿಧ್ಯವನ್ನು ಮೆಲುಕುಹಾಕುತ್ತಿರುವಾಗ ಮತ್ತೆ ನೆನಪಾಗುತ್ತಿರುವುದು ಈ ಒಂದು ಕಾರ್ಯಕ್ರಮ.

Sampanna Mutalik in World Kannada Conferenceಸಮ್ಮೇಳನದ ಎರಡನೆ ದಿನ ಅಂದರೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಮುಖ್ಯ ವೇದಿಕೆಯಲ್ಲಿ ನಡೆದದ್ದು 'ಸಾಹಿತ್ಯ ಪುರಸ್ಕಾರ ಮತ್ತು ಪುಸ್ತಕ ಬಿಡುಗಡೆ". ಭಾರತದಿಂದ ಆಗಮಿಸಿದ್ದ ಸಾಹಿತ್ಯಕ್ಷೇತ್ರದ ದಿಗ್ಗಜರನ್ನು ಗೌರವಿಸುವ ಕಾರ್ಯಕ್ರಮ, ಜತೆಯಲ್ಲೇ ಸಮ್ಮೇಳನದ ಸ್ಮರಣಸಂಚಿಕೆಗಳೂ ಸೇರಿದಂತೆ ಪುಸ್ತಕಗಳ ಬಿಡುಗಡೆ.

ಸಾಹಿತಿಗಳಾದ ಎಸ್‌.ಎಲ್‌.ಭೈರಪ್ಪ, ಚನ್ನವೀರ ಕಣವಿ, ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ, ಪ್ರೊ।ಅ.ರಾ.ಮಿತ್ರ, ಚಂಪಾ, ಪ್ರೊ।ಬಿ.ಎ ವಿವೇಕ ರೈ, ಪ್ರೊ। ಜಿ. ಅಶ್ವತ್ಥನಾರಾಯಣ, ಎಂ.ಪಿ.ಪ್ರಕಾಶ್‌ ('ಸಚಿವ"ನಾಗಿ ಅಲ್ಲ, ನಾಟಕಕಾರನಾಗಿ) ಮತ್ತು ವಿಮರ್ಶಕ ಜಿ.ಎಸ್‌.ಆಮೂರ - ಇವರೆಲ್ಲರನ್ನೂ ಫಲಕ ನೀಡಿ ಗೌರವಿಸಲಾಯಿತು.

ಬಿಡುಗಡೆಯಾದ ಪುಸ್ತಕಗಳು :

* ಸ್ಮರಣಸಂಚಿಕೆಗಳಾದ ಸುವರ್ಣವಾಹಿನಿ, ಕಥಾವಾಹಿನಿ ಮತ್ತು ತಂತ್ರ-ವಿಜ್ಞಾನವಾಹಿನಿ.
* ಭರದ್ವಾಜ (ಕಾದಂಬರಿ ಸ್ಪರ್ಧೆಯಲ್ಲಿ ವಿಜೇತ ಕೃತಿ, ಲೇ: ಸಂಪನ್ನ ಮುತಾಲಿಕ)
* ಜಾಲತರಂಗ (ಡಾ.ಮೈ.ಶ್ರೀ.ನಟರಾಜ್‌ ಅಂಕಣಬರಹಗಳ ಸಂಗ್ರಹ)
* ಮುದ್ದಣ ಕವಿರಚಿತಂ ಶ್ರೀರಾಮಾಶ್ವಮೇಧಂ (ಟಿಪ್ಪಣಿ - ಸಾರ ಸಮೇತ. ಟಿಪ್ಪಣಿ ಲೇಖಕ: ದಿ. ಪ್ರೊ। ತೆಕ್ಕುಂಜ ಗೋಪಾಲಕೃಷ್ಣ ಭಟ್ಟ; ಸಂಪಾದಕ: ಡಾ. ಪಾದೇಕಲ್ಲು ವಿಷ್ಣು ಭಟ್ಟ, ಪ್ರಕಾಶಕ: ನಂದಳಿಕೆ ಬಾಲಚಂದ್ರ ರಾವ್‌)
* ಒಂಟಿಹುಡುಗನ ಕನಸು (ಕವನ ಸಂಕಲನ - ಸುಕುಮಾರ್‌ ರಘುರಾಮ್‌)
* ಅನುರಾಗ (ಕವನ ಸಂಕಲನ, ರಾಮಚಂದ್ರ ಹೆಗ್ಡೆ, ಸಿಂಗಾಪುರ)
* ಸ್ನೇಹ ಸೌಹಾರ್ದ (ಸರೋಜಾ ನಾರಾಯಣ ರಾವ್‌ ಅವರ ಕೃತಿ)
* ಕವನ ಸಂಕಲನ (ಮಾಯಾ ಹರಪನಹಳ್ಳಿ)
* ಮೈಸೂರಿನ ಲೀಲಾ ಪ್ರಕಾಶ್‌ ಅವರ ನಾಲ್ಕು ಪುಸ್ತಕಗಳು
* ಕೋಮಲ ಗಾಂಧಾರ (ಹಿಂದಿ ನಾಟಕದ ಅನುವಾದ)

ಹೀಗೆ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಸಮ್ಮೇಳನ ಆಯೋಜಕರಿಗೂ, ಅದನ್ನು ಅಚ್ಚುಕಟ್ಟಾಗಿ ನಡೆಸಿದ ನಟರಾಜ್‌ ಅವರಿಗೂ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮಕ್ಕೆ ಗೌರವ-ಘನತೆ ತಂದ ಸಾಹಿತ್ಯ ದಿಗ್ಗಜರೆಲ್ಲರೂ ಅಭಿನಂದನಾರ್ಹರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+