ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ಬಂಗಾರ ಹಬ್ಬಕ್ಕೆ ಬಾಂಗ್ರಾ ನೃತ್ಯ?
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಇಲ್ಲ, ಹಾಗೇನೂ ಇಲ್ಲ. ಕನ್ನಡಮ್ಮನ ಬಂಗಾರಹಬ್ಬದ ಈ ಉತ್ಸವದಲ್ಲಿ ಕಂಸಾಳೆ ಕೋಲಾಟಗಳಿವೆಯೇ ಹೊರತು ಪಂಜಾಬಿ ಬಾಂಗ್ರಾ ಡಾನ್ಸ್‌ ವಗೈರಾ ಏನೂ ಇಲ್ಲ. ಆದರೂ ಪ್ರೋಗ್ರಾಮ್‌ ಕಮಿಟಿ ಚೇರ್‌ ಆಗಿರುವ ಶಶಿಕಲಾ ಚಂದ್ರಶೇಖರ್‌ ಅವರು ಪ್ರೊಗ್ರಾಮ್ಸ್‌ ಬಗ್ಗೆ ವಿವರಿಸುವ ಉತ್ಸಾಹದಲ್ಲಿ ಚೇರ್‌ ಮೇಲೆ ಕುಳಿತಲ್ಲೇ ಬಾಂಗ್ರಾ ಡಾನ್ಸ್‌ ಮಾಡ್ತಿದ್ದಾರೇನೊ ಅನಿಸೋದಿಲ್ವೇ ಈ ಚಿತ್ರವನ್ನು ನೋಡಿದರೆ? ಹೋಗಯೀ ತೂ ಬಲ್ಲೆಬಲ್ಲೆ... ಹೋ ಜಾಯೇಗಿ ಬಲ್ಲೆಬಲ್ಲೆ...!!

ನಿನ್ನೆ (ರವಿವಾರ 13 ಆಗಸ್ಟ್‌) ಸುರೇಶ್‌ ರಾಮಚಂದ್ರ ಅವರ ಮನೆಯಲ್ಲಿ ನೂರಕ್ಕೂ ಹೆಚ್ಚುಜನ ಸ್ವಯಂಸೇವಕರು ಹಾಜರಿದ್ದ ‘ಮಹಾಮೀಟಿಂಗ್‌’ನ ಒಂದು ಕ್ಷಣದಲ್ಲಿ ಈ ಸ್ವಾರಸ್ಯಕರ ಫೋಟೊ ಕೆಮರಾದೊಳಗೆ ಬಿತ್ತು.

Oye suNa, Bhalle bhalle aise karNa

ಅಂದಹಾಗೆ ಶಶಿಕಲಾ ಅವರ ಈ ಬಲ್ಲೆಬಲ್ಲೆ ಬಾಂಗ್ರಾ ಪ್ರೊಗ್ರಾಮಿಗೂ ಸುಂದರವಾದ ಅಚ್ಚಕನ್ನಡದ ಸ್ಪಷ್ಟಧ್ವನಿಯ ಉದ್ಘೋಷಣೆ ಇರಲಿ ಎಂದು ನಿರೂಪಿಸುತ್ತಿರುವವರು ‘ಎಂ.ಸಿ’ ಕಮಿಟಿಯ ಮುಖ್ಯಸ್ಥೆ ಸುಮಾ ಮುರಳೀಧರ್‌.

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 17 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+